ಗಮನ ಸೆಳೆದ ಮಾನ್ವಿತಾ ಸಿನಿಮಾದ ಹೊಸ ಹಾಡು; ಈ ಸಾಂಗ್ನಲ್ಲಿದೆ ಬೆಸ್ಟ್ ಕಾಂಬಿನೇಷನ್
ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಹಲವು ಸೂಪರ್ ಹಿಟ್ ಗೀತೆಗಳನ್ನು ಅವರು ನೀಡಿದ್ದಾರೆ. ಇನ್ನು ಖ್ಯಾತ ಗೀತ ಸಾಹಿತಿ ಕವಿರಾಜ್ ಅವರಿಂದ ಈ ಮೊದಲು ಹಲವು ಅತ್ಯುತ್ತಮ ಹಾಡುಗಳು ಉದಯಿಸಿವೆ. ಇವರಿಬ್ಬರೂ ‘ಮಾತಿಗೂ ಮಾತಿಗೂ..’ ಹಾಡಿಗಾಗಿ ಒಂದಾಗಿದ್ದಾರೆ.
ಅನೇಕ ಸಿನಿಮಾಗಳು ಹಾಡಿನ ಮೂಲಕ ಹಿಟ್ ಆದ ಉದಾಹರಣೆ ಇದೆ. ಸಿನಿಮಾ ರಿಲೀಸ್ಗೂ ಮೊದಲೇ ಸಾಂಗ್ಗಳು ರಿಲೀಸ್ ಆಗಿ ಗಮನ ಸೆಳೆದಿದ್ದೂ ಇದೆ. ಈಗ ಮಾನ್ವಿತಾ ಕಾಮತ್ (Manvita Kamath) ಹಾಗೂ ನಕುಲ್ ಗೌಡ ನಟನೆಯ ‘ಬ್ಯಾಡ್’ ಸಿನಿಮಾದ ‘ಮಾತಿಗೂ ಮಾತಿಗೂ..’ ಹಾಡು ರಿಲೀಸ್ ಆಗಿದೆ. ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿರುವ ಈ ಹಾಡು ಕೇಳುಗರಿಗೆ ಇಷ್ಟ ಆಗುತ್ತಿದೆ. ಈ ಹಾಡಿನಲ್ಲಿ ಬೆಸ್ಟ್ ಕಾಂಬಿನೇಷನ್ ಇದೆ.
ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಹಲವು ಸೂಪರ್ ಹಿಟ್ ಗೀತೆಗಳನ್ನು ಅವರು ನೀಡಿದ್ದಾರೆ. ಇನ್ನು ಖ್ಯಾತ ಗೀತ ಸಾಹಿತಿ ಕವಿರಾಜ್ ಅವರಿಂದ ಈ ಮೊದಲು ಹಲವು ಅತ್ಯುತ್ತಮ ಹಾಡುಗಳು ಉದಯಿಸಿವೆ. ಇವರಿಬ್ಬರೂ ‘ಮಾತಿಗೂ ಮಾತಿಗೂ..’ ಹಾಡಿಗಾಗಿ ಒಂದಾಗಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಹಾಗೂ ಕವಿರಾಜ್ ಸಾಹಿತ್ಯದಿಂದ ಮೂಡಿಬಂದ ‘ಮಾತಿಗೂ ಮಾತಿಗೂ..’ ಹಾಡು ಕೇಳುಗರಿಗೆ ಇಷ್ಟ ಆಗುತ್ತಿದೆ.
‘ಮಾತಿಗೂ ಮಾತಿಗೂ..’ ಹಾಡನ್ನು ಪೃಥ್ವಿ ಭಟ್ ಹಾಗೂ ಸುನೀಲ್ ಗುಜಗೊಂಡ ಹಾಡಿದ್ದಾರೆ. ಇವರ ಧ್ವನಿ ಹಾಡಿನ ತೂಕ ಹೆಚ್ಚಿಸಿದೆ. ‘ಜಂಕಾರ್ ಮ್ಯೂಸಿಕ್’ ಯೂಟ್ಯೂಬ್ ಚಾನೆಲ್ ಮೂಲಕ ಹಾಡು ಬಿಡುಗಡೆಯಾಗಿದೆ. ಹಾಡನ್ನು ಸಾವಿರಾರು ಮಂದಿ ವೀಕ್ಷಣೆ ಮಾಡಿದ್ದಾರೆ. ಈ ಸಿನಿಮಾ ಸದ್ಯದಲ್ಲೇ ರಿಲೀಸ್ ಆಗೋ ಸಾಧ್ಯತೆ ಇದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿರುವ ‘ಬ್ಯಾಡ್’ ಸಿನಿಮಾಗೆ ಪಿ.ಸಿ.ಶೇಖರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಸಂಕಲನ ಕೆಲಸ ಕೂಡ ಅವರದ್ದೇ. ಶಕ್ತಿ ಶೇಖರ್ ಛಾಯಾಗ್ರಹಣ, ಜಿ.ರಾಜಶೇಖರ್ ಕಲಾ ನಿರ್ದೇಶನ ಚಿತ್ರಕ್ಕೆ ಇದೆ. ‘ಬ್ಯಾಡ್’ ಚಿತ್ರಕ್ಕೆ ಸಚಿನ್ ಜಡೇಶ್ವರ ಎಸ್ಬಿ ಸಂಭಾಷಣೆ ಬರೆದಿದ್ದಾರೆ.
ಇದನ್ನೂ ಓದಿ: ತಾಯಿ-ಮಗಳ ಪಾತ್ರದಲ್ಲಿ ಪ್ರಿಯಾಂಕಾ ಉಪೇಂದ್ರ-ಮಾನ್ವಿತಾ ಕಾಮತ್; ಇದು ‘ಕ್ಯಾಪ್ಚರ್’ ಸಿನಿಮಾ ಸ್ಪೆಷಲ್
‘ಪ್ರೀತಿಯ ರಾಯಭಾರಿ’ ಮೂಲಕ ನಕುಲ್ ಗೌಡ ಗಮನ ಸೆಳೆದಿದ್ದಾರೆ. ಅವರು ‘ಬ್ಯಾಡ್’ ಚಿತ್ರದ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಮಾನ್ವಿತಾ ಕಾಮತ್, ಸಾಯಿ ಕೃಷ್ಣ, ಅಪೂರ್ವ ಭಾರದ್ವಾಜ್, ಮಂಜುನಾಥ್, ಅಶ್ವಿನಿ ಮುಂತಾದವರು ಈ ಚಿತ್ರದ ಪಾತ್ರವರ್ಗದಲ್ಲಿ ಇದ್ದಾರೆ. ಕಾಮ, ಕ್ರೋಧ ಮೊದಲಾದ ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಆರು ಪಾತ್ರಗಳಲ್ಲಿ ಆರು ಕಲಾವಿದರು ಬಣ್ಣ ಹಚ್ಚಿರೋದು ಸಿನಿಮಾದ ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ