ತನ್ನ ವಿವಾದಾತ್ಮಕ ಸಿನಿಮಾ ಸಮರ್ಥಿಸಿಕೊಳ್ಳಲು ‘ಕೆಜಿಎಫ್’ ಹೋಲಿಕೆ ನೀಡಿದ ನಟ

Marco Movie: ಕಳೆದ ತಿಂಗಳು ಬಿಡುಗಡೆ ಆದ ಮಲಯಾಳಂ ಸಿನಿಮಾ ‘ಮಾರ್ಕೊ’ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಆದರೆ ಸಿನಿಮಾದಲ್ಲಿ ತೋರಿಸಲಾಗಿರುವ ಹಿಂಸೆಯ ಬಗ್ಗೆ ತೀವ್ರ ಚರ್ಚೆ ಎದ್ದಿದೆ. ಸಿನಿಮಾದಲ್ಲಿ ಅನವಶ್ಯಕ ಹಿಂಸಾತ್ಮಕ ದೃಶ್ಯಗಳ ಬಗ್ಗೆ ವಿರೋಧ ವ್ಯಕ್ತಪಡಿಸಲಾಗುತ್ತಿದೆ. ಆದರೆ ಸಿನಿಮಾದ ನಟ ಉನ್ನಿ ಮುಕುಂದನ್, ತನ್ನ ಸಿನಿಮಾ ಅನ್ನು ಸಮರ್ಥಿಸಿಕೊಳ್ಳಲು ಕನ್ನಡದ ‘ಕೆಜಿಎಫ್’ ಅನ್ನು ಉದಾಹರಣೆಯಾಗಿ ಬಳಸಿದ್ದಾರೆ.

ತನ್ನ ವಿವಾದಾತ್ಮಕ ಸಿನಿಮಾ ಸಮರ್ಥಿಸಿಕೊಳ್ಳಲು ‘ಕೆಜಿಎಫ್’ ಹೋಲಿಕೆ ನೀಡಿದ ನಟ
Kgf Marco
Follow us
ಮಂಜುನಾಥ ಸಿ.
|

Updated on: Jan 09, 2025 | 12:01 PM

ಮಲಯಾಳಂ ಸಿನಿಮಾ ‘ಮಾರ್ಕೊ’ ಹಲವು ಕಾರಣಗಳಿಗೆ ಸುದ್ದಿಯಲ್ಲಿದೆ. ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 100 ಕೋಟಿಗೂ ಹೆಚ್ಚು ಹಣ ಗಳಿಕೆ ಮಾಡಿದೆ. ವಿಶೇಷವಾಗಿ ಉತ್ತರ ಭಾರತದಲ್ಲಿ ಈ ಸಿನಿಮಾ ದೊಡ್ಡ ಮೊತ್ತ ಗಳಿಕೆ ಮಾಡುತ್ತಿದೆ. 100 ಕೋಟಿ ಗಳಿಸಿದ ಮೊದಲ ‘ಎ’ ರೇಟೆಡ್ ಮಲಯಾಳಂ ಸಿನಿಮಾ ಎನಿಸಿಕೊಂಡಿದೆ. ಆದರೆ ಸಿನಿಮಾದ ಬಗ್ಗೆ ಚರ್ಚೆ ಎದ್ದಿರುವುದು ಸಿನಿಮಾದಲ್ಲಿ ತೋರಿಸಲಾಗಿರುವ ಅತಿಯಾದ ಹಿಂಸೆಯ ಕಾರಣಕ್ಕೆ. ಸಾಮಾನ್ಯರು ನೋಡಲು ಸಹ ಆಗದಷ್ಟು ಹಿಂಸೆಯನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಆದರೆ ತನ್ನ ಸಿನಿಮಾವನ್ನು ಡಿಫೆಂಡ್ ಮಾಡಿಕೊಳ್ಳಲು ಸಿನಿಮಾದ ನಟ ಉನ್ನಿ ಮುಕುಂದನ್ ‘ಕೆಜಿಎಫ್’ ಸಿನಿಮಾ ಅನ್ನು ಬಳಸಿಕೊಂಡಿದ್ದಾರೆ.

ನಟ ಉನ್ನಿ ಮುಕುಂದನ್, ‘ಮಾರ್ಕೊ’ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸಿಮಾದಲ್ಲಿ ತೋರಿಸಲಾಗಿರುವ ವಿಪರೀತ ಹಿಂಸೆಯನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಕನ್ನಡದ ‘ಕೆಜಿಎಫ್’ ಸಿನಿಮಾವನ್ನು ಉದಾಹರಣೆಯಾಗಿ ನೀಡಿದ್ದಾರೆ. ಆ ಮೂಲಕ ‘ಕೆಜಿಎಫ್’ ಸಿನಿಮಾವನ್ನು ತನ್ನ ಅರ್ಥವಿಲ್ಲದ ಹಿಂಸಾತ್ಮಕ ಸಿನಿಮಾಕ್ಕೆ ಹೋಲಿಕೆ ಮಾಡಿದ್ದಾರೆ. ‘ಮಾರ್ಕೊ’ ಸಿನಿಮಾದಲ್ಲಿ ತೋರಿಸಲಾಗಿರುವ ವೈಯಲೆನ್ಸ್ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಉನ್ನಿ ಮುಕುಂದನ್, ‘ಕೆಜಿಎಫ್’ ಸಿನಿಮಾ ದೊಡ್ಡ ಹಿಟ್ ಆಯ್ತು. ಆ ಸಿನಿಮಾ ಬಂದ ಮೇಲೆ ಏನಾಯ್ತು? ಏನೂ ಆಗಲಿಲ್ಲ. ‘ಕೆಜಿಎಫ್ 2’ ಸಿನಿಮಾ ಬಂತು. ಆ ಸಿನಿಮಾ ಸಹ ಹಿಟ್ ಆಯ್ತು. ‘ಕೆಜಿಎಫ್’ ಸಿನಿಮಾ ನೋಡಿ ಯಾರೂ ಕೊಲೆಗಾರರಾಗಲಿಲ್ಲ’ ಎಂದಿದ್ದಾರೆ ಉನ್ನಿ ಮುಕುಂದನ್.

ಇದನ್ನೂ ಓದಿ:100 ಕೋಟಿ ಗಳಿಕೆ, ಆದರೂ ಸಿನಿಮಾಕ್ಕೆ ವಿರೋಧ, ಅಂಥದ್ದೇನಿದೆ ‘ಮಾರ್ಕೊ’ನಲ್ಲಿ

ತಮ್ಮ ‘ಮಾರ್ಕೊ’ ಸಿನಿಮಾವನ್ನು ‘ಕೆಜಿಎಫ್’ಗೆ ಹೋಲಿಸಿರುವ ಉನ್ನಿ ಮುಕುಂದನ್, ‘ನಾವೂ ಸಹ ‘ಕೆಜಿಎಫ್’ ರೀತಿ ‘ಮಾರ್ಕೊ 2’ ಮತ್ತು ‘ಮಾರ್ಕೊ 3’ ಸಿನಿಮಾಗಳನ್ನು ಹೊರತರಲಿದ್ದೇವೆ. ಆ ಸಿನಿಮಾಗಳು ಸಹ ಬ್ರೂಟಲ್ ಆಕ್ಷನ್ ಸಿನಿಮಾಗಳೇ ಆಗಿರಲಿವೆ. ಜನ ಅದನ್ನು ಸಿನಿಮಾ ಆಗಿಯೇ ಸ್ವೀಕರಿಸುತ್ತಾರೆ, ಸಿನಿಮಾ ರೀತಿಯಲ್ಲಿಯೇ ನೋಡುತ್ತಾರೆ ಎಂಬ ವಿಶ್ವಾಸ ನನಗೆ ಇದೆ. ಪ್ರೇಕ್ಷಕರಿಗೆ ಸಾಕಷ್ಟು ಬುದ್ಧಿ ಇದೆ. ಸಿನಿಮಾ ನೋಡಿ ಸ್ಪೂರ್ತಿ ಪಡೆದು ಯಾರೂ ಸೀರಿಯಲ್ ಕಿಲ್ಲರ್ ಆಗಿಬಿಡುವುದಿಲ್ಲ. ನಿಮ್ಮ ಸಿನಿಮಾ ನೋಡುವಾಗ ಕಷ್ಟವಾಗುತ್ತದೆ ಎಂದು ಕೆಲವರು ನನಗೆ ಹೇಳಿದ್ದಾರೆ. ನಾವು ಮಾಡಿರುವ ಜಾನರ್​ನ ವಿಶೇಷತೆಯೇ ಅದು’ ಎಂದು ಹೇಳಿದ್ದಾರೆ ಉನ್ನಿ ಮುಕುಂದನ್.

‘ಮಾರ್ಕೊ’ ಸಿನಿಮಾ ಅತ್ಯಂತ ಹಿಂಸಾತ್ಮಕ ಸಿನಿಮಾ ಆಗಿದೆ. ‘ಮಾರ್ಕೊ’ ಸಿನಿಮಾದಲ್ಲಿ ಹಿಂಸೆಯ ಹೊರತಾಗಿ ಇನ್ನೇನೂ ಇಲ್ಲ. ಹೀರೋ, ವಿಲನ್ ಪೈಪೋಟಿಗೆ ಬಿದ್ಧಂತೆ ಕ್ರೂರವಾಗಿ ವರ್ತಿಸುತ್ತಾರೆ. ಸಿನಿಮಾಕ್ಕೆ ಹಲವು ಕಟ್​ಗಳ ಬಳಿಕ ಸಿಬಿಎಫ್​ಸಿ ‘ಎ’ ಸರ್ಟಿಫಿಕೇಟ್ ನೀಡಿದೆ. ಹಾಗಿದ್ದರೂ ಸಹ ಈ ಸಿನಿಮಾದಲ್ಲಿ ಹಿಂಸೆ ತಾಂಡವವಾಡುತ್ತಿದೆ. ಸಿನಿಮಾದಲ್ಲಿ ಸಾಧ್ಯವಾದಷ್ಟು ಕ್ರೂರವಾಗಿಯೇ ಎಲ್ಲ ಫೈಟ್​ಗಳನ್ನು ತೋರಿಸಲಾಗಿದೆ. ನಾಯಿಯನ್ನು ಅದರ ಬಾಯಿ ಹಿಡಿದು ಹರಿದು ಕೊಲ್ಲುವ ದೃಶ್ಯ, ವೃದ್ಧೆಯೊಬ್ಬಳ ಕಣ್ಣನ್ನು ಕೀಳುವ ದೃಶ್ಯ, ಗರ್ಭಿಣಿಯೊಬ್ಬಳನ್ನು ದಾರುಣವಾಗಿ ಹೊಟ್ಟೆಗೆ ಹೊಡೆದು ಕೊಲ್ಲುವ ದೃಶ್ಯ, ಬೃಣವನ್ನು ಕೈಯಲ್ಲಿ ಹಿಡಿದು ಸಂಭ್ರಮಿಸುವುದು ಇಂಥಹಾ ಅತಿಯಾದ ಕ್ರೌರ್ಯ ತುಂಬಿದ ಹಲವಾರು ದೃಶ್ಯಗಳು ‘ಮಾರ್ಕೊ’ ಸಿನಿಮಾದಲ್ಲಿದೆ. ಇದೇ ಕಾರಣಕ್ಕೆ ಈ ಸಿನಿಮಾ ಅನ್ನು ನಿಷೇಧಿಸಬೇಕು ಎಂದು ಕೆಲವರು ದನಿ ಎತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್