AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಗಾ ಅಭಿಮಾನಿಗಳ ಆಕ್ರೋಶ, 13 ವರ್ಷ ಹಳೆಯ ಪೋಸ್ಟ್​ನಿಂದ ಸಮಸ್ಯೆಗೆ ಸಿಲುಕಿದ ನಿರ್ದೇಶಕ

Mega Family fans: ಸಾಮಾಜಿಕ ಜಾಲತಾಣ, ಯಾವುದನ್ನೂ ಮರೆಯುವುದಿಲ್ಲ. ಎಂದೋ, ಯಾವುದೋ ಸಂದರ್ಭದಲ್ಲಿ ಮಾಡಿರುವ ಪೋಸ್ಟ್ ಇಂದು ಬೇರೆಯದೇ ಅರ್ಥ ಪಡೆದುಕೊಂಡು ಸಮಸ್ಯೆಗೆ ಕಾರಣ ಆಗಬಹುದು. ತೆಲುಗು ಸಿನಿಮಾ ನಿರ್ದೇಶಕರೊಬ್ಬರಿಗೆ ಇದೇ ಸಮಸ್ಯೆ ಎದುರಾಗಿದೆ. 13 ವರ್ಷದ ಹಿಂದಿನ ಪೋಸ್ಟ್​ನಿಂದಾಗಿ ಅವರ ಹೊಸ ಸಿನಿಮಾ ಸಂಕಷ್ಟಕ್ಕೆ ಸಿಲುಕಿದೆ.

ಮೆಗಾ ಅಭಿಮಾನಿಗಳ ಆಕ್ರೋಶ, 13 ವರ್ಷ ಹಳೆಯ ಪೋಸ್ಟ್​ನಿಂದ ಸಮಸ್ಯೆಗೆ ಸಿಲುಕಿದ ನಿರ್ದೇಶಕ
Mega Fans
ಮಂಜುನಾಥ ಸಿ.
|

Updated on: May 23, 2025 | 10:38 AM

Share

ಯಾವುದು ಮರೆತರೂ ಸಾಮಾಜಿಕ ಜಾಲತಾಣ (Social Media) ಮರೆಯುವುದಿಲ್ಲ. ಎಂದೋ, ಯಾವುದೋ ಸಂದರ್ಭದಲ್ಲಿ ಯಾರ ಬಗ್ಗೆಯೋ ಆಡಿದ್ದ ಮಾತು ಇನ್ನೆಂದೋ ಹೋಗಿ ಬೇರೆ ರೂಪ ಪಡೆದುಕೊಳ್ಳಬಹುದು, ಮಾತು ಆಡಿದವನಿಗೆ ಮುಳುವಾಗಬಹುದು. ತೆಲುಗು ಚಿತ್ರರಂಗದಲ್ಲಿ ಈಗ ಹಾಗೆಯೇ ಆಗಿದೆ. 13 ವರ್ಷದ ಹಿಂದೆ ಮಾಡಿದ್ದ ಪೋಸ್ಟ್ ಒಂದು ಈಗ ತೆಲುಗು ಸಿನಿಮಾ ನಿರ್ದೇಶಕನಿಗೆ ಮುಳುವಾಗಿ ಪರಿಣಮಿಸಿದ್ದು, ಬಿಡುಗಡೆಗೆ ರೆಡಿಯಾಗಿರುವ ಸಿನಿಮಾಕ್ಕೂ ಸಮಸ್ಯೆ ಎದುರಾಗಿದೆ.

ಮಂಚು ಮನೋಜ್ ನಟನೆಯ ‘ಭೈರವ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಕುಟುಂಬದೊಂದಿಗೆ ಗಲಾಟೆ ಆಗಿ ಸಾಕಷ್ಟು ವಿವಾದ ಮಾಡಿಕೊಂಡ ಬಳಿಕ ‘ಭೈರವ’ ಸಿನಿಮಾ ಮೂಲಕ ಗೆಲುವು ಸಾಧಿಸಿ, ಕಳೆದು ಹೋದ ಗೌರವವನ್ನು ಮರಳಿ ಪಡೆಯಬೇಕು ಎಂಬ ಪ್ರಯತ್ನದಲ್ಲಿ ಮಂಚು ಮನೋಜ್ ಇದ್ದಾರೆ. ಸಿನಿಮಾದ ಪ್ರಚಾರವನ್ನೂ ಸಹ ಬಲು ಜೋರಾಗಿ ಮಾಡುತ್ತಿದ್ದಾರೆ. ಎಲ್ಲವೂ ಸರಿಯಾಗಿ ನಡೆಯುತ್ತಿದೆ ಎಂದುಕೊಳ್ಳುತ್ತಿರುವಾಗಲೇ, ‘ಭೈರವ’ ಸಿನಿಮಾ ನಿರ್ದೇಶಕ 13 ವರ್ಷದ ಹಿಂದೆ ಮಾಡಿದ್ದ ಪೋಸ್ಟ್ ಈಗ ಸಿನಿಮಾಕ್ಕೆ ಮಾಕವಾಗಿ ಪರಿಣಮಿಸಿದೆ.

‘ಭೈರವ’ ಸಿನಿಮಾ ನಿರ್ದೇಶಕ ವಿಜಯ್ ಕನಕಮೆಡಾಲಾ ಅವರು 13 ವರ್ಷದ ಹಿಂದೆ ಫೇಸ್​ಬುಕ್​​ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಆ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪೋಸ್ಟ್​ಗೆ ಮೆಗಾಸ್ಟಾರ್ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ವಿಜಯ್ ಕನಕಮೆಡಾಲಾ ನಿರ್ದೇಶಿಸಿರುವ ‘ಭೈರವ’ ಸಿನಿಮಾವನ್ನು ಮೆಗಾ ಅಭಿಮಾನಿಗಳು ಬಾಯ್​​ಕಾಟ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ‘ಬಾಯ್​ಕಾಟ್ ಭೈರವ’ ಟ್ರೆಂಡ್ ಮಾಡುತ್ತಿದ್ದಾರೆ.

ಇದನ್ನೂ ಓದಿ:ಮೆಗಾಸ್ಟಾರ್ ಚಿರಂಜೀವಿ ನಟನೆಯ ಬ್ಲಾಕ್ ಬಸ್ಟರ್ ಸಿನಿಮಾ ಮರು ಬಿಡುಗಡೆ

2011 ರಲ್ಲಿ ಮೆಗಾಸ್ಟಾರ್ ಚಿರಂಜೀವಿ ಮತ್ತು ಅವರ ಪುತ್ರ ರಾಮ್​ ಚರಣ್ ಬಗ್ಗೆ ಫೇಸ್​ಬುಕ್​​ನಲ್ಲಿ ಟ್ರೋಲ್ ಪೋಸ್ಟ್ ಒಂದನ್ನು ನಿರ್ದೇಶಕ ವಿಜಯ್ ಕನಕಮೆಡಾಲಾ ಹಂಚಿಕೊಂಡಿದ್ದರು. ಮೆಗಾಸ್ಟಾರ್ ಚಿರಂಜೀವಿ ಆಗ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಆದರೆ ಅವರ ಪಕ್ಷ ‘ಪ್ರಜಾರಾಜ್ಯಂ ಪಾರ್ಟಿ’ ದಿನೇ ದಿನೇ ಬಲ ಕಳೆದುಕೊಳ್ಳುತ್ತಿತ್ತು. ‘ಸಾಮಾಜಿಕ ನ್ಯಾಯ’ದ ಅಡಿಯಲ್ಲಿ ತಮ್ಮ ಪಕ್ಷವನ್ನು ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನ ಮಾಡಿದರು ಚಿರಂಜೀವಿ.

ಚಿರಂಜೀವಿ ಅವರ ಈ ನಿರ್ಣಯವನ್ನು ಆಗ ಹಲವರು ಟೀಕೆ ಮಾಡಿದ್ದರು. ಸ್ವತಃ ಚಿರಂಜೀವಿ ಪಕ್ಷದ ಸದಸ್ಯರು ಸಹ ಟೀಕೆ ಮಾಡಿದ್ದರು. ಆದರೆ ಬಲಹೀನ ಪಕ್ಷವನ್ನು ಉಳಿಸಿಕೊಳ್ಳಲು ಚಿರಂಜೀವಿ ಆ ನಿರ್ಣಯ ತೆಗೆದುಕೊಂಡಿದ್ದರು. ಆಗ ಫೇಸ್​ಬುಕ್​​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದ ವಿಜಯ್ ಕನಕಮೆಡಾಲಾ ಹಿಂದಿಯ ‘ಪಾ’ ಸಿನಿಮಾದ ಚಿತ್ರವನ್ನು ಮಾರ್ಫ್​ ಮಾಡಿ ಅಭಿಷೇಕ್-ಅಮಿತಾಬ್ ಬಚ್ಚನ್ ಅವರ ಚಿತ್ರದ ಬದಲಿಗೆ ಮೆಗಾಸ್ಟಾರ್ ಚಿರಂಜೀವಿ ಮತ್ತು ರಾಮ್ ಚರಣ್ ಅವರ ಚಿತ್ರವನ್ನು ಹಾಕಿದ್ದರು. ‘ಸಾಮಾಜಿಕ ನ್ಯಾಯ ಪ್ರೆಸೆಂಟ್ ಮಾಡುವ, ತಂದೆ-ಮಗ, ಮಗ-ತಂದೆಯ ಕತೆ. ಈ ಸಿನಿಮಾದ ರಚನೆ, ನಿರ್ದೇಶಕ ಅಲ್ಲು ಅರವಿಂದ್’ ಎಂದು ಬರೆದಿದ್ದರು.

ಹಳೆಯ ಪೋಸ್ಟ್ ವೈರಲ್ ಆದ ಬೆನ್ನಲ್ಲೆ. ಇದೀಗ ವಿಜಯ್ ಕನಕಮೆಡಾಲಾ, ಮೆಗಾಸ್ಟಾರ್ ಅಭಿಮಾನಿಗಳ ಕ್ಷಮೆ ಕೇಳಿದ್ದಾರೆ. 2011 ರಲ್ಲಿ ನನ್ನ ಖಾತೆಯಿಂದ ಪೋಸ್ಟ್ ಆಗಿರುವ ಮೀಮ್ ನಾನು ಮಾಡಿದ್ದಲ್ಲ. ಅದು ಬೇರೆಯವರದ್ದೇ ಕೆಲಸ. ನಾನು ಹಲವು ಹೀರೋಗಳೊಟ್ಟಿಗೆ ಕೆಲಸ ಮಾಡಿದ್ದೇನೆ. ಅದರಲ್ಲೂ ಹೆಚ್ಚು ಕೆಲಸ ಮಾಡಿರುವುದು ಮೆಗಾ ಹೀರೋಗಳ ಜೊತೆಗೇನೆ. ಚಿರಂಜೀವಿ ಅವರ ಸಿನಿಮಾ ನೋಡಿ ನಾನು ಚಿತ್ರರಂಗಕ್ಕೆ ಬಂದೆ. ಚಿರಂಜೀವಿ, ಪವನ್ ಕಲ್ಯಾಣ್ ಹಾಗೂ ಇಡೀ ಮೆಗಾ ಕುಟುಂಬದ ಮೇಲೆ ನನಗೆ ಅಪಾರ ಗೌರವ ಇದೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ