AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿರಂಜೀವಿ ಹುಟ್ಟುಹಬ್ಬ, ಎರಡು ಸಿನಿಮಾ ಟೀಸರ್ ಬಿಡುಗಡೆ ಯಾವವು?

Megastar Chiranjeevi: ಮೆಗಾಸ್ಟಾರ್ ಚಿರಂಜೀವಿಯ ಹುಟ್ಟುಹಬ್ಬ ಇಂದು. ತಮ್ಮ 70ನೇ ವರ್ಷದ ಹುಟ್ಟುಹಬ್ಬವನ್ನು ಚಿರಂಜೀವಿ ಆಚರಣೆ ಮಾಡಿಕೊಂಡಿದ್ದಾರೆ. ಚಿರಂಜೀವಿ ಹುಟ್ಟುಹಬ್ಬದ ಪ್ರಯುಕ್ತ ಇಂದು ಅವರ ನಟನೆಯ ಎರಡು ಹೊಸ ಸಿನಿಮಾಗಳ ಟೀಸರ್​ಗಳು ಬಿಡುಗಡೆ ಆಗಿವೆ. ಯಾವುವು ಆ ಸಿನಿಮಾಗಳು? ಇನ್ನೂ ಚಿರು ಕೈಯಲ್ಲಿ ಎಷ್ಟು ಸಿನಿಮಾಗಳು ಇವೆ...

ಚಿರಂಜೀವಿ ಹುಟ್ಟುಹಬ್ಬ, ಎರಡು ಸಿನಿಮಾ ಟೀಸರ್ ಬಿಡುಗಡೆ ಯಾವವು?
Vishwambara
ಮಂಜುನಾಥ ಸಿ.
|

Updated on: Aug 22, 2025 | 3:58 PM

Share

ಮೆಗಾಸ್ಟಾರ್ ಚಿರಂಜೀವಿ ಹುಟ್ಟುಹಬ್ಬ ಇಂದು (ಆಗಸ್ಟ್ 22). ಚಿರಂಜೀವಿ ಭಾರತದ ಸೂಪರ್ ಸ್ಟಾರ್ ನಟರುಗಳಲ್ಲಿ ಒಬ್ಬರು. ವಿಶ್ವದಲ್ಲೇ ಅತಿ ಹೆಚ್ಚು ಅಭಿಮಾನಿ ಸಂಘಗಳನ್ನು ಹೊಂದಿದ್ದ ನಟ ಎಂಬ ದಾಖಲೆಯೂ ಸಹ ಅವರ ಹೆಸರಲ್ಲಿತ್ತು. 90ರ ದಶಕದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್​ಗಿಂತಲೂ ಹೆಚ್ಚಿನ ಸಂಭಾವನೆಯನ್ನು ಚಿರಂಜೀವಿ ಪಡೆಯುತ್ತಿದ್ದರು. ಇಂದು ಮೆಗಾಸ್ಟಾರ್ ಚಿರಂಜೀವಿ ತಮ್ಮ 70ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ವಯಸ್ಸಿನಲ್ಲೂ ಅವರ ಅಭಿಮಾನಿಗಳು, ಸಿನಿಮಾ ಅವಕಾಶಗಳು ಕಡಿಮೆ ಆಗಿಲ್ಲ.

ಚಿರಂಜೀವಿ ಹುಟ್ಟುಹಬ್ಬದ ಪ್ರಯುಕ್ತ ಇಂದು ಅವರ ನಟನೆಯ ಎರಡು ಹೊಸ ಸಿನಿಮಾಗಳ ಟೀಸರ್​ಗಳು ಬಿಡುಗಡೆ ಆಗಿವೆ. ಚಿರಂಜೀವಿ ನಟಿಸಿರುವ ‘ವಿಶ್ವಂಭರ’ ಹೆಸರಿನ ಫ್ಯಾಂಟಸಿ ಸಿನಿಮಾದ ಟೀಸರ್ ಇಂದು ಬಿಡುಗಡೆ ಆಗಿದೆ. ಇದೊಂದು ಫ್ಯಾಂಟಸಿ ಕತೆಯನ್ನು ಒಳಗೊಂಡಿದೆ. ಈ ಹಿಂದೆ ಚಿರಂಜೀವಿ ನಟಿಸಿದ್ದ ‘ಅಂಜಿ’ ಸಿನಿಮಾದ ರೀತಿಯ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಶಾಪಗ್ರಸ್ತ ಸಮುದಾಯವೊಂದನ್ನು ಕಾಪಾಡುವ ನಾಯಕನ ಪಾತ್ರ ಚಿರಂಜೀವಿಯದ್ದು ಎಂಬುದು ಟೀಸರ್​ನಿಂದ ತಿಳಿದು ಬರುತ್ತಿದೆ.

ಇದರ ಜೊತೆಗೆ ಚಿರಂಜೀವಿ ನಟಿಸಿ, ಅನಿಲ್ ರವಿಪುಡಿ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾದ ಟೀಸರ್ ಸಹ ಬಿಡುಗಡೆ ಆಗಿದೆ. ಸಿನಿಮಾದ ಹೆಸರು ಸಹ ಘೋಷಣೆ ಮಾಡಲಾಗಿದೆ. ಸಿನಿಮಾದ ಹೆಸರು ‘ಮನ ಶಂಕರವರಪ್ರಸಾದ್ ಗಾರು’ ಎಂದಿದೆ. ಸಿನಿಮಾನಲ್ಲಿ ಚಿರಂಜೀವಿ ಹೆಸರು ಶಂಕರವರಪ್ರಸಾದ್. ಸಿನಿಮಾನಲ್ಲಿ ಭದ್ರತಾ ಅಧಿಕಾರಿಯ ಪಾತ್ರದಲ್ಲಿ ಚಿರಂಜೀವಿ ನಟಿಸಿದ್ದು, ಇದೊಂದು ಆಕ್ಷನ್, ಕಾಮಿಡಿ ಸಿನಿಮಾ ಆಗಿರಲಿದೆ. ಈ ಸಿನಿಮಾನಲ್ಲಿ ನಯನತಾರಾ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದ ಟೀಸರ್​​ನಲ್ಲಿ ಚಿರಂಜೀವಿ ಬಲು ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ.

ಇವೆರಡು ಸಿನಿಮಾಗಳ ಜೊತೆಗೆ ಚಿರಂಜೀವಿ, ನಟ ನಾನಿ ನಿರ್ಮಾಣ ಮಾಡುತ್ತಿರುವ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಚಿರಂಜೀವಿ ನಟಿಸುತ್ತಿರುವ ಈ ಸಿನಿಮಾವನ್ನು ಒದೆಲ ಶ್ರೀಕಾಂತ್ ನಿರ್ದೇಶನ ಮಾಡಲಿದ್ದಾರೆ. ಇದೊಂದು ವೈಯಲೆಂಟ್ ಸಿನಿಮಾ ಆಗಿರಲಿದ್ದು, ಸಿನಿಮಾದ ಪೋಸ್ಟರ್​​ಗಳು ಈಗಾಗಲೇ ಬಿಡುಗಡೆ ಆಗಿವೆ. ಇದರ ಜೊತೆಗೆ ಬಾಬಿ ನಿರ್ದೇಶನ ಮಾಡುತ್ತಿರುವ ಸಿನಿಮಾನಲ್ಲಿ ಚಿರಂಜೀವಿ ನಟಿಸುತ್ತಿದ್ದಾರೆ. ಆ ಸಿನಿಮಾ ಸಹ ಪಕ್ಕಾ ಆಕ್ಷನ್ ಕಾಮಿಡಿ ಸಿನಿಮಾ ಆಗಿರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us