‘ಗಂಡುಮಕ್ಕಳಿಗೂ ಋತುಚಕ್ರದ ನೋವು ಗೊತ್ತಾಗಬೇಕು’; ರಶ್ಮಿಕಾ ಹೇಳಿಕೆಗೆ ತೀವ್ರ ವಿರೋಧ
ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರು ಜೀ ತೆಲುಗಿನ ಶೋನಲ್ಲಿ ಭಾಗಿ ಆದರು. ಈ ಶೋನ ತೆಲುಗಿನಲ್ಲಿ ವಿಲನ್ ಪಾತ್ರಗಳನ್ನು ಮಾಡುವ ಜಗಪತಿ ಬಾಬು ನಡೆಸಿಕೊಟ್ಟಿದ್ದಾರೆ. ಯಾವುದೋ ವಿಷಯ ಮಾತನಾಡುವಾಗ ‘ಗಂಡುಮಕ್ಕಳಿಗೂ ಪೀರಿಯಡ್ಸ್ ಆಗಿದ್ರೆ ಚೆನ್ನಾಗಿರುತ್ತಿತ್ತು ಎಂದು ಅನಿಸಿದೆಯೇ’ ಎಂದು ಜಗಪತಿ ಬಾಬು ಅವರು ರಶ್ಮಿಕಾಗೆ ಕೇಳಿದ್ದಾರೆ.

ರಶ್ಮಿಕಾ ಮಂದಣ್ಣ (Rashmika Mandanna) ಅವರು ‘ದಿ ಗರ್ಲ್ಫ್ರೆಂಡ್’ ಸಿನಿಮಾ ಮೂಲಕ ಸೋಲು ಕಂಡಿದ್ದಾರೆ. ಈ ಚಿತ್ರವು ಅಂದುಕೊಂಡ ಮಟ್ಟದಲ್ಲಿ ಮೂಡಿ ಬಂದಿಲ್ಲ ಎಂದೇ ಹೇಳಬಹುದು. ಹೀಗಿರುವಾಗಲೇ ರಶ್ಮಿಕಾ ಮಂದಣ್ಣ ನೀಡಿದ ಒಂದು ಹೇಳಿಕೆಯೂ ಈಗ ಚರ್ಚೆಯ ಕೇಂದ್ರಬಿಂದು ಆಗಿದೆ. ಇದನ್ನು ಎಲ್ಲರೂ ಟೀಕೆ ಮಾಡುತ್ತಿದ್ದಾರೆ. ‘ಗಂಡುಮಕ್ಕಳಿಗೂ ಪೀರಿಯಡ್ಸ್ ಆಗಬೇಕು’ ಎಂಬುದು ರಶ್ಮಿಕಾ ಮಂದಣ್ಣ ನೀಡಿದ ಹೇಳಿಕೆ ಆಗಿದೆ.
ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರು ಜೀ ತೆಲುಗಿನ ಶೋನಲ್ಲಿ ಭಾಗಿ ಆದರು. ಈ ಶೋನ ತೆಲುಗಿನಲ್ಲಿ ವಿಲನ್ ಪಾತ್ರಗಳನ್ನು ಮಾಡುವ ಜಗಪತಿ ಬಾಬು ನಡೆಸಿಕೊಟ್ಟಿದ್ದಾರೆ. ಯಾವುದೋ ವಿಷಯ ಮಾತನಾಡುವಾಗ ‘ಗಂಡುಮಕ್ಕಳಿಗೂ ಪೀರಿಯಡ್ಸ್ ಆಗಿದ್ರೆ ಚೆನ್ನಾಗಿರುತ್ತಿತ್ತು ಎಂದು ಅನಿಸಿದೆಯೇ’ ಎಂದು ಜಗಪತಿ ಬಾಬು ಅವರು ರಶ್ಮಿಕಾಗೆ ಕೇಳಿದ್ದಾರೆ.
‘ಹೌದು, ಋತುಚಕ್ರದ ನೋವು ಹೇಗೆ ಇರುತ್ತದೆ ಎಂಬುದು ಗೊತ್ತಾಗಬೇಕು ಎಂದರೆ ಗಂಡುಮಕ್ಕಳಿಗೆ ಒಮ್ಮೆ ಋತುಚಕ್ರ ಸಂಭವಿಸಬೇಕು’ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದರು. ಈ ಹೇಳಿಕೆ ನಿಧಾನವಾಗಿ ವೈರಲ್ ಆಗಿದ್ದು, ಅನೇಕರು ರಶ್ಮಿಕಾ ಅವರನ್ನು ಟೀಕಿಸಿದ್ದಾರೆ. ರಶ್ಮಿಕಾ ಮಂದಣ್ಣ ನೀಡಿದ ಹೇಳಿಕೆ ಸರಿ ಅಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
View this post on Instagram
ರಶ್ಮಿಕಾ ನೀಡಿದ ಹೇಳಿಕೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆದಿವೆ. ಕೆಲವರು ರಶ್ಮಿಕಾ ಮಂದಣ್ಣ ಇನ್ನೂ ಸೆನ್ಸಿಬಲ್ ಆಗಿ ನಡೆದುಕೊಳ್ಳಬೇಕಿತ್ತು ಎಂದಿದ್ದಾರೆ. ‘ಗಂಡುಮಕ್ಕಳು ಇಡೀ ಕುಟುಂಬದ ಜವಾಬ್ದಾರಿ ಹೊತ್ತುಕೊಂಡಿರುತ್ತಾರೆ. ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಾ ಇರುತ್ತಾರೆ. ಹೆಣ್ಣುಮಕ್ಕಳಿಗೆ ಹೋಲಿಕೆ ಮಾಡಿದರೆ, ಗಂಡುಮಕ್ಕಳಿಗೆ ಜವಾಬ್ದಾರಿ ಜಾಸ್ತಿ. ಆ ಜವಾಬ್ದಾರಿ ಹೊರುವ ನೋವಿನ ಬಗ್ಗೆ ರಶ್ಮಿಕಾಗೆ ಗೊತ್ತೇ’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ‘ನಾನು ವಿಜಯ್ನ ಮದುವೆ ಆಗ್ತೀನಿ’; ಕೊನೆಗೂ ಒಪ್ಪಿಕೊಂಡ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ನಟನೆಯ ‘ಥಾಮಾ’ ಸಿನಿಮಾ ದೀಪಾವಳಿಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದರೆ, ಅವರ ನಟನೆಯ ‘ದಿ ಗರ್ಲ್ಫ್ರೆಂಡ್’ ಸಿನಿಮಾ ಕಳೆದ ವಾರ ರಿಲೀಸ್ ಆಗಿ ಸಾಧಾರಣ ಎನಿಸಿಕೊಂಡಿದೆ. ರಶ್ಮಿಕಾ ಮಂದಣ್ಣ ಅವರು ಸದ್ಯ ವಿವಾಹದ ವಿಚಾರಕ್ಕೂ ಸುದ್ದಿಯಲ್ಲಿ ಇದ್ದಾರೆ. ಫೆಬ್ರವರಿಯಲ್ಲಿ ಅವರ ಮದುವೆ ನೆರವೇರಲಿದೆಯಂತೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:30 am, Mon, 10 November 25



