ಸೈಲೆಂಟ್ ಆಗಿ ಬಂದು ಬಾಕ್ಸ್ ಆಫೀಸ್ ಡಾಮಿನೇಟ್ ಮಾಡಿದ ‘ಮಿರಾಯಿ’; ಅಬ್ಬರದ ಕಲೆಕ್ಷನ್
ತೇಜ್ ಸಜ್ಜಾ ಅಭಿನಯದ ‘ಮಿರಾಯಿ’ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಅಭೂತಪೂರ್ವ ಯಶಸ್ಸನ್ನು ಕಂಡಿದೆ. ಮೂರು ದಿನಗಳಲ್ಲಿ 44.75 ಕೋಟಿ ರೂಪಾಯಿಗಳನ್ನು ಗಳಿಸಿದೆ. ಕಾರ್ತಿಕ್ ಘಟ್ಟಮನೇನಿ ನಿರ್ದೇಶನದ ಈ ಫ್ಯಾಂಟಸಿ ಆ್ಯಕ್ಷನ್ ಅಡ್ವೆಂಚರ್ ಚಿತ್ರವು ತೆಲುಗು, ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಿದೆ.

2025ರ ಮೊದಲಾರ್ಧ ಸಿನಿಮಾ ರಂಗಕ್ಕೆ ಅಷ್ಟು ಆಶಾದಾಯಕವಾಗಿ ಇರಲಿಲ್ಲ. ಯಾವುದೇ ದೊಡ್ಡ ಸಿನಿಮಾಗಳು ಬಿಡುಗಡೆ ಕಂಡಿರಲಿಲ್ಲ. ಈ ರೀತಿ ರಿಲೀಸ್ ಆದ ಚಿತ್ರಗಳು ಸೋಲು ಕಂಡಿದ್ದವು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಜೂನ್ ಬಳಿಕ ಬರುತ್ತಿರೋ ಸಿನಿಮಾಗಳು ಯಶಸ್ಸು ಕಾಣುತ್ತಿವೆ. ಈಗ ಟಾಲಿವುಡ್ನಲ್ಲಿ ‘ಮಿರಾಯಿ’ ಹೆಸರಿನ (Mirai Movie) ಸಿನಿಮಾ ಬಂದಿದೆ. ಈ ಚಿತ್ರ ಬಾಕ್ಸ್ ಆಫೀಸ್ ಡಾಮಿನೇಟ್ ಮಾಡಿದೆ. ಕೇವಲ ಮೂರು ದಿನಕ್ಕೆ ಭರ್ಜರಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.
‘ಹನುಮಾನ್’ ಹೆಸರಿನ ಸಿನಿಮಾ ಮಾಡಿ ಫೇಮಸ್ ಆದವರು ತೇಜ್ ಸಜ್ಜ. ಆ ಬಳಿಕ ಅವರನ್ನು ಅದೇ ರೀತಿಯ ಪಾತ್ರಗಳು ಅರಸಿ ಬರುತ್ತಿವೆ. ಈಗ ಅವರು ‘ಮಿರಾಯಿ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಇದು ಫ್ಯಾಂಟಸಿ ಆ್ಯಕ್ಷನ್ ಅಡ್ವೆಂಚರ್ ಸಿನಿಮಾ. ಈ ಚಿತ್ರ 60 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾಗಿದ್ದು, ಮೂರೇ ದಿನಕ್ಕೆ ಉತ್ತಮ ಗಳಿಕೆ ಮಾಡಿದೆ.
‘ಮಿರಾಯಿ’ ಚಿತ್ರ ಮೂರು ದಿನದಲ್ಲಿ ಬಾಚಿಕೊಂಡಿದ್ದು ಬರೋಬ್ಬರಿ 44.75 ಕೋಟಿ ರೂಪಾಯಿ. ಶುಕ್ರವಾರ 13 ಕೋಟಿ ರೂಪಾಯಿ, ಶನಿವಾರ 15 ಕೋಟಿ ರೂಪಾಯಿ ಹಾಗೂ ಭಾನುವಾರ 16 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದು ಕೇವಲ ಭಾರತದ ಬಾಕ್ಸ್ ಆಫೀಸ್ ಕಲೆಕ್ಷನ್. ವಿಶ್ವ ಬಾಕ್ಸ್ ಆಫೀಸ್ ಲೆಕ್ಕಾಚಾರವೂ ಸೇರಿದರೆ ಕಲೆಕ್ಷನ್ ಮತ್ತಷ್ಟು ಹೆಚ್ಚಲಿದೆ.
‘ಮಿರಾಯಿ’ ಸಿನಿಮಾನ ಕಾರ್ತಿಕ್ ಘಟ್ಟಮನೇನಿ ನಿರ್ದೇಶನ ಮಾಡಿದ್ದರು. ಈ ಮೊದಲು ಅವರು ‘ಕಾರ್ತಿಕೇಯ’, ‘ಕಾರ್ತಿಕೇಯ 2’ ಅಂತಹ ಅಡ್ವೆಂಚರ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾ ಮೂಲಕ ಅವರು ಗೆದ್ದು ಬೀಗಿದ್ದಾರೆ. ಅವರ ಐಡಿಯಾ ಪ್ರೇಕ್ಷಕರಿಗೆ ಇಷ್ಟ ಆಗಿದೆ. ‘ಮಿರಾಯಿ’ ಚಿತ್ರ ತೆಲುಗು ಜೊತೆಗೆ, ಕನ್ನಡ, ತಮಿಳು ಮೊದಲಾದ ಭಾಷೆಗಳಲ್ಲಿ ರಿಲೀಸ್ ಆಗಿದೆ. ಬೆಂಗಳೂರಿನಲ್ಲೂ ಸಿನಿಮಾಗೆ ಒಳ್ಳೆಯ ಬುಕಿಂಗ್ ಆಗುತ್ತಿದೆ.
ಇದನ್ನೂ ಓದಿ: ತಿಂಗಳಿಗೊಂದು ಪ್ಯಾನ್ ಇಂಡಿಯಾ ಸಿನಿಮಾ; 2025ರ ಇನ್ನರ್ಧ ಧಮಾಕ
‘ಮಿರಾಯಿ’ ಚಿತ್ರದ ಮೂಲಕ ತೇಜ್ ಸಜ್ಜಾ ಅವರು ಭೇಷ್ ಎನಿಸಿಕೊಂಡಿದ್ದಾರೆ. ಅವರು ‘ಹನುಮಾನ್’ ಚಿತ್ರದ ಸೀಕ್ವೆಲ್ನಲ್ಲೂ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಕನ್ನಡದ ರಿಷಬ್ ಶೆಟ್ಟಿ ಕೂಡ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:50 pm, Mon, 15 September 25








