AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿಂಗಳಿಗೊಂದು ಪ್ಯಾನ್ ಇಂಡಿಯಾ ಸಿನಿಮಾ; 2025ರ ಇನ್ನರ್ಧ ಧಮಾಕ

2025ರ ಮಧ್ಯಭಾಗದ ವೇಳೆಗೆ ಕಡಿಮೆ ಮನರಂಜನೆ ಸಿಕ್ಕಿದ್ದರೂ, ಮುಂಬರುವ ಆರು ತಿಂಗಳು ಅದ್ಭುತ ಸಿನಿಮಾಗಳಿಂದ ತುಂಬಿವೆ. ಪ್ರತಿ ತಿಂಗಳು ಒಂದು ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆಯಾಗಲಿದೆ.ಇದರಲ್ಲಿ ಕನ್ನಡದ ಕೆಲವು ಸಿನಿಮಾಗಳು ಕೂಡ ಸೇರಿವೆ. ಹೀಗಾಗಿ, ಮಸ್ತ್ ಮನರಂಜನೆಗೆ ನೀವು ರೆಡಿ ಆಗಿ.

ತಿಂಗಳಿಗೊಂದು ಪ್ಯಾನ್ ಇಂಡಿಯಾ ಸಿನಿಮಾ; 2025ರ ಇನ್ನರ್ಧ ಧಮಾಕ
2025ರ ಸಿನಿಮಾಗಳು
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Jul 17, 2025 | 10:56 AM

Share

2025ರ ಅರ್ಧ ಭಾಗವು ಪೂರ್ಣಗೊಂಡಿದೆ. ಈ ಅವಧಿಯಲ್ಲಿ ಸಿನಿಮಾ ಪ್ರಿಯರಿಗೆ ಹೆಚ್ಚಿನ ಮನರಂಜನೆ ಸಿಕ್ಕಿಲ್ಲ ಎಂದೇ ಹೇಳಬಹುದು. ಆದರೆ, ಮುಂದಿನ ಆರು ತಿಂಗಳು ಸಾಕಷ್ಟು ಅದ್ದೂರಿಯಾಗಿ ಇರುತ್ತದೆ. ಪ್ರತಿ ತಿಂಗಳು ಒಂದು ಪ್ಯಾನ್ ಇಂಡಿಯಾ ಸಿನಿಮಾನ ನೀವು ನಿರೀಕ್ಷಿಸಬಹುದು.  ಹಾಗಾದರೆ ಯಾವುದು ಆ ಸಿನಿಮಾಗಳು? ಆ ಬಗ್ಗೆ ಇಲ್ಲಿದೆ ವಿವರ.

ಜುಲೈ

ಜುಲೈ ತಿಂಗಳಲ್ಲಿ ಪವನ್ ಕಲ್ಯಾಣ್ ಅವರು ನಟಿಸಿರುವ ‘ಹರಿ ಹರ ವೀರ ಮಲ್ಲು’ ಸಿನಿಮಾ ಇದೆ. ಈ ಚಿತ್ರವು ಡಿಸೆಂಬರ್ 24ರಂದು ರಿಲೀಸ್ ಆಗಲಿದೆ. ಜ್ಯೋತಿ ಕೃಷ್ಣ ಹಾಗೂ ಕ್ರಿಶ್ ಅವರು ಇದನ್ನು ನಿರ್ದೇಶಿಸಿದ್ದಾರೆ. ಈ ಸಿನಿಮಾ ಕನ್ನಡದಲ್ಲೂ ರಿಲೀಸ್ ಆಗಲಿದೆ.

ಇದನ್ನೂ ಓದಿ
Image
ನಯನತಾರ ಜೊತೆ ಚಿರಂಜೀವಿ ರೊಮ್ಯಾನ್ಸ್ ; 29 ವರ್ಷ ವಯಸ್ಸಿನ ಅಂತರ
Image
ವೀಕ್ಷಕರು ಹಿಂದೆಂದೂ ಕೇಳಿರದ ರಿಯಾಲಿಟಿ ಶೋನ ತಂದ ಜೀ ಕನ್ನಡ 
Image
ಪವನ್ ಕಲ್ಯಾಣ್ ಚಿತ್ರ ‘ಹರಿ ಹರ ವೀರ ಮಲ್ಲು’ಗೆ ಶುರುವಾಗಿದೆ ಕರ್ನಾಟಕದ ಭಯ
Image
ಮುಂದಿನ ಮೂರು ವರ್ಷ ರಜನಿಕಾಂತ್ ಬ್ಯುಸಿ; ಮತ್ತೆ ಮೂರು ಸಿನಿಮಾ ಫೈನಲ್

ಆಗಸ್ಟ್

ಆಗಸ್ಟ್ ತಿಂಗಳಂದು ಸಾಕಷ್ಟು ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಶಿವರಾಜ್​ಕುಮಾರ್ ನಟನೆಯ ‘45’ ಆಗಸ್ಟ್ 14ರಂದು ರಿಲೀಸ್ ಆಗಲಿದೆ. ಆಗಸ್ಟ್ 14ರಂದು ‘ಕೂಲಿ’ ಹಾಗೂ ‘ವಾರ್ 2’ ಸಿನಿಮಾಗಳಲ್ಲಿ ಈ ತಿಂಗಳಲ್ಲಿ ನೀವು ನಿರೀಕ್ಷಿಸಬಹುದು. ‘ಕೂಲಿ’ ಚಿತ್ರದಲ್ಲಿ  ರಜನಿಕಾಂತ್ ಹೀರೋ ಆದರೆ, ‘ವಾರ್ 2’ ಚಿತ್ರದಲ್ಲಿ ಹೃತಿಕ್ ರೋಶನ್ ಹಾಗೂ ಜೂನಿಯರ್ ಎನ್​ಟಿಆರ್ ಇದ್ದಾರೆ.

ಸೆಪ್ಟೆಂಬರ್

ಸೆಪ್ಟೆಂಬರ್​ನಲ್ಲಿ ‘ಭಾಗಿ 4’ ಚಿತ್ರವು ರಿಲೀಸ್ ಆಗಲಿದೆ. ಇದಲ್ಲದೆ ತೇಜ್ ಸಜ್ಜಾ ನಟನೆಯ ‘ಮಿರಾಯಿ’ ಬರುತ್ತಿದೆ. ಬಾಲಯ್ಯ ಅಭಿನಯದ ‘ಅಖಂಡ್ 2’ ಹಾಗೂ ‘ಒಜಿ’ ಚಿತ್ರಗಳು ಈ ಸಂದರ್ಭದಲ್ಲಿ ತೆರೆ ಕಾಣಲಿವೆ.

ಅಕ್ಟೋಬರ್

ರಿಷಬ್ ಶೆಟ್ಟಿ ನಟನೆಯ ‘ಕಾಂತಾರ’ ಸೂಪರ್ ಹಿಟ್ ಆಯಿತು. ಇದಕ್ಕೆ ಅವರದ್ದೇ ನಿರ್ದೇಶನ ಇತ್ತು. ಈಗ ‘ಕಾಂತಾರ: ಚಾಪ್ಟರ್ 1’ ಅಕ್ಟೋಬರ್ 2ರಂದು ತೆರೆಗೆ ಬರಲಿದೆ. ಇದನ್ನು ಖಚಿತಪಡಿಸಲಾಗಿದೆ. ಈ ಸಿನಿಮಾಗಾಗಿ ಕನ್ನಡಿಗರು ಮಾತ್ರವಲ್ಲ ಇಡೀ ಭಾರತ ಕಾದಿದೆ.

ನವೆಂಬರ್

ಸದ್ಯದ ಮಟ್ಟಿಗೆ ನವೆಂಬರ್​ನಲ್ಲಿ ಯಾವುದೇ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಆಗುತ್ತಿಲ್ಲ. ಇದನ್ನು ಕೆಲ ಸ್ಟಾರ್ ಹೀರೋಗಳು ಬಳಸಿಕೊಳ್ಳಬಹುದು. ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ ‘ಕೆಡಿ’, ದರ್ಶನ್ ಅಭಿನಯದ ‘ಡೆವಿಲ್’ ಈ ತಿಂಗಳ ಮೇಲೆ ಕಣ್ಣಿಡಬಹುದು.

ಇದನ್ನೂ ಓದಿ: ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾಗೆ ಶುರುವಾಗಿದೆ ಕರ್ನಾಟಕದ ಭಯ

ಡಿಸೆಂಬರ್

ಡಿಸೆಂಬರ್ ಯಾವಾಗಲೂ ವಿಶೇಷ. ಈ ಸಂದರ್ಭದಲ್ಲಿ ದೊಡ್ಡ ಚಿತ್ರಗಳು ಮೂಡಿ ಬರುತ್ತವೆ. ರಣವೀರ್ ಸಿಂಗ್ ಅಭಿನಯದ ‘ಧುರಂಧರ್’, ಪ್ರಭಾಸ್ ಅವರ ‘ದಿ ರಾಜಾ ಸಾಬ್’ ಹಾಗೂ ಶಾಹಿದ್ ಕಪೂರ್ ಅವರ ಇನ್ನೂ ಹೆಸರಿಡದ ಸಿನಿಮಾಗಳನ್ನು ಈ ಸಂದರ್ಭದಲ್ಲಿ ನಿರೀಕ್ಷಿಸಬಹುದಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.