‘ಮಿಸಸ್ ಕರ್ನಾಟಕ 2022’ ಕಿರೀಟ ಮುಡಿಗೇರಿಸಿಕೊಂಡ ಡಾ. ಮೇಘನಾ ರೆಡ್ಡಿ

‘ಮಿಸಸ್ ಕರ್ನಾಟಕ 2022’ರ ಸ್ಪರ್ಧೆಯಲ್ಲಿ 70ಕ್ಕೂ ಹೆಚ್ಚು ಮಹಿಳಾ ಸ್ಪರ್ಧಿಗಳು ಭಾಗವಹಿಸಿದ್ದರು. ಅಂತಿಮ ಸುತ್ತಿಗೆ 10ಮಹಿಳೆಯರು ಆಯ್ಕೆಯಾದರು. ಮಿಸಸ್ ಕರ್ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಶ್ರೀಮತಿ ಡಾ. ಮೇಘನಾ ರೆಡ್ಡಿ ಗೆದ್ದರು.

‘ಮಿಸಸ್ ಕರ್ನಾಟಕ 2022’ ಕಿರೀಟ ಮುಡಿಗೇರಿಸಿಕೊಂಡ ಡಾ. ಮೇಘನಾ ರೆಡ್ಡಿ
Edited By:

Updated on: Oct 03, 2022 | 4:27 PM

ವಿವಾಹಿತ ಭಾರತೀಯ ಮಹಿಳೆಯರನ್ನು ಸಶಕ್ತಗೊಳಿಸಲು ಹಾಗೂ ಅವರ ಕಲ್ಯಾಣಕ್ಕಾಗಿ ‘ಮಿಸಸ್ ಕರ್ನಾಟಕ 2022’ (Misses Karnataka 2022) ಸೌಂದರ್ಯ ಸ್ಪರ್ಧೆ ಏರ್ಪಡಿಸಲಾಗಿತ್ತು. ಬಿಗ್ ಬಾಸ್ ಖ್ಯಾತಿಯ ನಟ ಶೈನ್ ಶೆಟ್ಟಿ ಹಾಗೂ ಫೆಮಿನಾ ಮಿಸ್ ಇಂಡಿಯಾದ ಪ್ರಾಚಿ ಮಿಶ್ರ ಅವರು, Lafenixನ ಸ್ಥಾಪಕರು, ಸಿಇಒ ಹಾಗೂ ನಿರ್ದೇಶಕರಾದ ಡಾ. ಮಂಜುಶ ಪಾಟೀಲ್ ಹಾಗೂ ಲೀನಾ ಸವೂರ್, ಸೌತ್ ಇಂಡಿಯಾ ಗಾರ್ಮೆಂಟ್ ಉತ್ಪಾದಕರ ಸಂಘದ ಅಧ್ಯಕ್ಷ ಅನುರಾಗ್ ಸಿಂಗ್ಲಾ ಅವರು ಈ ಸ್ಪರ್ಧೆಗೆ ಚಾಲನೆ ನೀಡಿದರು.

‘ಮಿಸಸ್ ಕರ್ನಾಟಕ 2022’ರ ಸ್ಪರ್ಧೆಯಲ್ಲಿ 70ಕ್ಕೂ ಹೆಚ್ಚು ಮಹಿಳಾ ಸ್ಪರ್ಧಿಗಳು ಭಾಗವಹಿಸಿದ್ದರು. ಅಂತಿಮ ಸುತ್ತಿಗೆ 10 ಮಹಿಳೆಯರು ಆಯ್ಕೆಯಾದರು. ಮಿಸಸ್ ಕರ್ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಶ್ರೀಮತಿ ಡಾ. ಮೇಘನಾ ರೆಡ್ಡಿ, ದ್ವಿತೀಯ ಸ್ಥಾನ ಬಿಂದಿ ರಮೇಶ್, ತೃತೀಯ ಸ್ಥಾನ ನೌಶೀನ್ ಶರೀಫ್ ಅವರು ಪಡೆದರು.

ಮಹಿಳೆ ಅಬಲೆ ಅಲ್ಲ, ಸಬಲೆ. ಸಮಾಜದ ಅಭಿವೃದ್ಧಿಗೆ ಮತ್ತು ಕುಟುಂಬದ ನಿರ್ವಹಣೆಯಲ್ಲಿ ಸಶಕ್ತಳಾಗಿ ದುಡಿಯಬಲ್ಲಳು. ಇಂದು ಮಹಿಳೆಯರು ರಾಜಕೀಯ, ಸಾಹಿತ್ಯ, ಶಿಕ್ಷಣ ಮತ್ತು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ. ತಾಯಿಯಾಗಿ ಮಕ್ಕಳ ಲಾಲನೆ, ಪಾಲನೆ ಜೊತೆಯಲ್ಲಿ ತನ್ನ ಸೌಂದರ್ಯ ಮತ್ತು ಆರೋಗ್ಯದ ಮೇಲೆ ಗಮನಹರಿಸಬೇಕಿದೆ.

ಮಹಿಳೆ ಆರೋಗ್ಯವಾಗಿದ್ದರೆ ಇಡೀ ಕುಟುಂಬ ಮತ್ತು ಸಮಾಜ ಆರೋಗ್ಯಯುತವಾಗಿ ಕಾಣಬಹುದು. ಈ ಕಾರ್ಯಕ್ರಮದಲ್ಲಿ ತಾಯಿಯ ಎದೆ ಹಾಲಿನ ಮಹತ್ವ ಮತ್ತು ಅದರಿಂದ ಆಗುವ ಪ್ರಯೋಜನ, ಮಕ್ಕಳ ಬೆಳವಣಿಗೆಗೆ ಎದೆ ಹಾಲಿನ ಅವಶ್ಯಕತೆ ಮತ್ತು ತಾಯಿಯಾಗುವ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಸುರಕ್ಷತೆ ಬಗ್ಗೆ ಆರೋಗ್ಯ ಮಾಹಿತಿ ನೀಡಲಾಯಿತು.

Published On - 4:21 pm, Mon, 3 October 22