AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mohanlal: ‘ಪೊಗರು’ ಡೈರೆಕ್ಟರ್​ ನಂದಕಿಶೋರ್​ ಜತೆ ಮೋಹನ್​ ಲಾಲ್​ ಸಿನಿಮಾ; ಹೊರಬಿತ್ತು ಬಿಗ್​ ನ್ಯೂಸ್​

Nanda Kishore: ಮೋಹನ್​ ಲಾಲ್​ ಮತ್ತು ನಂದ ಕಿಶೋರ್ ಕಾಂಬಿನೇಷನ್​ನಲ್ಲಿ ಹೊಸ ಸಿನಿಮಾ ಮೂಡಿಬರಲಿದೆ. ಇದು ಪಕ್ಕಾ ಕಮರ್ಷಿಯಲ್​ ಚಿತ್ರ ಆಗಿರಲಿದ್ದು, ಹೀರೋ ಪಾತ್ರಕ್ಕೆ ಹಲವು ಶೇಡ್​ ಇರಲಿದೆ.

Mohanlal: ‘ಪೊಗರು’ ಡೈರೆಕ್ಟರ್​ ನಂದಕಿಶೋರ್​ ಜತೆ ಮೋಹನ್​ ಲಾಲ್​ ಸಿನಿಮಾ; ಹೊರಬಿತ್ತು ಬಿಗ್​ ನ್ಯೂಸ್​
ಮೋಹನ್ ಲಾಲ್, ನಂದ ಕಿಶೋರ್
TV9 Web
| Edited By: |

Updated on: Sep 01, 2022 | 1:03 PM

Share

ಮಲಯಾಳಂ ಚಿತ್ರರಂಗದ (Mollywood) ಲೆಜೆಂಡರಿ ನಟ ಮೋಹನ್​ ಲಾಲ್​ ಅವರು ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನು ಮಾಡುತ್ತಿದ್ದಾರೆ. ‘ದೃಶ್ಯಂ’, ‘ಲೂಸಿಫರ್​’, ‘ದೃಶ್ಯಂ 2’, ‘ಪುಲಿ ಮುರುಗನ್​’ ರೀತಿಯ ಹಲವಾರು ಸೂಪರ್​ ಹಿಟ್​ ಚಿತ್ರಗಳನ್ನು ನೀಡಿದ ಅವರಿಗೆ ಭರ್ಜರಿ ಡಿಮ್ಯಾಂಡ್​ ಇದೆ. ಮೋಹನ್​ ಲಾಲ್​ ಜೊತೆ ಸಿನಿಮಾ ಮಾಡಲು ಹಲವಾರು ನಿರ್ದೇಶಕರು ಹಂಬಲಿಸುತ್ತಾರೆ. ಆದರೆ ಅವಕಾಶ ಸಿಗುವುದು ಕೆಲವೇ ಕೆಲವು ಅದೃಷ್ಟವಂತರಿಗೆ ಮಾತ್ರ. ಈಗ ಕನ್ನಡದ ನಿರ್ದೇಶಕ ನಂದ ಕಿಶೋರ್​ (Nanda Kishore) ಅವರು ಬಿಗ್​ ಚಾನ್ಸ್​ ಪಡೆದುಕೊಂಡಿದ್ದಾರೆ. ಕನ್ನಡದಲ್ಲಿ ಹಲವು ಸಿನಿಮಾಗಳನ್ನು ಮಾಡಿ ಅನುಭವ ಹೊಂದಿರುವ ಅವರು ಈಗ ಮಾಲಿವುಡ್​ನತ್ತ ಮುಖ ಮಾಡಿದ್ದಾರೆ. ಮೋಹನ್​ ಲಾಲ್​ (Mohanlal) ಜೊತೆ ಅವರು ಸಿನಿಮಾ ಮಾಡುವುದು ಖಚಿತವಾಗಿದೆ. ಸ್ವತಃ ಮೋಹನ್​ ಲಾಲ್​ ಅವರೇ ಈ ಮಾಹಿತಿಯನ್ನು ಅಧಿಕೃತಗೊಳಿಸಿದ್ದಾರೆ. ಈ ಚಿತ್ರಕ್ಕೆ ‘ವೃಷಭ’ ಎಂದು ಹೆಸರು ಇಡಲಾಗಿದೆ.

ಎಲ್ಲ ಬಗೆಯ ಪಾತ್ರಗಳಿಗೂ ಸೈ ಎಂಬಂತಹ ನಟ ಮೋಹನ್​ ಲಾಲ್​ ಅವರ ಚಿತ್ರಕ್ಕೆ ನಿರ್ದೇಶನ ಮಾಡುವ ಚಾನ್ಸ್​ ಸಿಕ್ಕಿರುವುದು ನಂದ ಕಿಶೋರ್​ಗೆ ಖುಷಿ ನೀಡಿದೆ. ಇದು ಪಕ್ಕಾ ಕಮರ್ಷಿಯಲ್​ ಸಿನಿಮಾ ಆಗಿರಲಿದ್ದು, ಮೋಹನ್​ ಲಾಲ್​ ಅವರಿಗೆ ಹಲವು ಶೇಡ್​ನ ಪಾತ್ರ ಇರಲಿದೆ ಎಂದು ಹೇಳಲಾಗಿದೆ. ವಿಶೇಷ ಏನೆಂದರೆ, ‘ವೃಷಭ’ ಸಿನಿಮಾದಲ್ಲಿ ತೆಲುಗು ಚಿತ್ರರಂಗದ ಕೆಲವು ಸ್ಟಾರ್​ ಕಲಾವಿದರು ಕೂಡ ಬಣ್ಣ ಹಚ್ಚುವ ಸಾಧ್ಯತೆ ಇದೆ. ಆ ಬಗ್ಗೆ ಮಾತುಕಥೆ ನಡೆಯುತ್ತಿದೆ.

ಇದನ್ನೂ ಓದಿ
Image
Mohanlal: ‘ದೃಶ್ಯಂ 3’ ಬರೋದು ಖಚಿತ; ನಿರ್ಮಾಪಕರಿಂದಲೇ ಹೊರಬಿತ್ತು ಅಧಿಕೃತ ಮಾಹಿತಿ
Image
Mohanlal Birthday: ಕುಸ್ತಿಯಲ್ಲಿ ಸ್ಟೇಟ್​ ಚಾಂಪಿಯನ್​ ಆಗಿದ್ದ ಮೋಹನ್​ಲಾಲ್​ ನಂತರ ನಟನಾಗಿದ್ದು ಹೇಗೆ?
Image
Mohanlal: ಡೈರೆಕ್ಷನ್‌ ಕ್ಯಾಪ್ ತೊಟ್ಟ ಮೊದಲ ಸಿನಿಮಾದಲ್ಲೇ‌ ಗುರುತು ಸಿಗದಷ್ಟು ಬದಲಾದ ಮೋಹನ್‌ಲಾಲ್; ಏನಿದರ ವಿಶೇಷ?
Image
ಹೊರ ಜಗತ್ತಿಗೆ ತಿಳಿಯಲೇ ಇಲ್ಲ ಮೋಹನ್​ಲಾಲ್​-ಪವನ್​ ಕಲ್ಯಾಣ್​ ಭೇಟಿ; ಏನಿದರ ಉದ್ದೇಶ?

ನಂದ ಕಿಶೋರ್ ಮತ್ತು ಮೋಹನ್​ ಲಾಲ್​ ಕಾಂಬಿನೇಷನ್​ನ ಸಿನಿಮಾ ಸೆಟ್ಟೇರಲು ಒಂದಷ್ಟು ಸಮಯ ಹಿಡಿಯಲಿದೆ. 2023ರ ಜುಲೈ ತಿಂಗಳಲ್ಲಿ ಈ ಸಿನಿಮಾದ ಶೂಟಿಂಗ್ ಆರಂಭ ಆಗುವ ನಿರೀಕ್ಷೆ ಇದೆ. ಚಿತ್ರದ ಬಗ್ಗೆ ಹೆಚ್ಚಿನ ಅಪ್​ಡೇಟ್​ ತಿಳಿಯಲು ಅಭಿಮಾನಿಗಳು ಕಾಯುತ್ತಿದ್ದಾರೆ. ಕನ್ನಡದ ನಿರ್ದೇಶಕ ಮತ್ತು ಮಲಯಾಳಂ ಸ್ಟಾರ್​ ನಟ ಕೈ ಜೋಡಿಸುತ್ತಿರುವುದರಿಂದ ಸಿನಿಪ್ರಿಯರ ವಲಯದಲ್ಲಿ ಕೌತುಕ ಮೂಡುವಂತಾಗಿದೆ.

‘ಎವಿಸ್​ ಸ್ಟುಡಿಯೋಸ್​ ನಿರ್ಮಾಣದ ‘ವೃಷಭ’ ಚಿತ್ರಕ್ಕೆ ಸಹಿ ಮಾಡಿದ್ದೇನೆ. ನಂದಕಿಶೋರ್​ ನಿರ್ದೇಶಿಸಲಿರುವ ಈ ಸಿನಿಮಾವನ್ನು ಅಭಿಷೇಕ್​ ವ್ಯಾಸ್​, ಪ್ರವೀರ್​​ ಸಿಂಗ್​ ಮತ್ತು ಶ್ಯಾಮ್​ ಸುಂದರ್​ ನಿರ್ಮಾಣ ಮಾಡಲಿದ್ದಾರೆ. ಈ ಬಹುಭಾಷಾ ಸಿನಿಮಾದಲ್ಲಿ ಎಮೋಷನ್​ ಮತ್ತು ಆ್ಯಕ್ಷನ್​ ತುಂಬಿರಲಿದೆ. ನಿಮ್ಮೆಲ್ಲರ ಬೆಂಬಲ ಮತ್ತು ಆಶೀರ್ವಾದ ಬಯಸುತ್ತೇನೆ’ ಎಂದು ಮೋಹನ್​ ಲಾಲ್​ ಟ್ವೀಟ್​ ಮಾಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ನಂದ ಕಿಶೋರ್​ ಅವರು ಸಕ್ರಿಯರಾಗಿದ್ದಾರೆ. ‘ವಿಕ್ಟರಿ’, ‘ಅಧ್ಯಕ್ಷ’, ‘ರನ್ನ’, ‘ಮುಕುಂದ ಮುರಾರಿ’, ‘ಪೊಗರು’ ಮುಂತಾದ ಸಿನಿಮಾಗಳನ್ನು ನಿರ್ದೇಶಿಸುವ ಮೂಲಕ ಅವರು ಗುರುತಿಸಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.