‘ಎಂಪುರಾನ್’ ಗೆಲ್ಲುತ್ತಿದ್ದಂತೆ ಮತ್ತೊಂದು ಚಿತ್ರದ ರಿಲೀಸ್ ದಿನಾಂಕ ಘೋಷಿಸಿದ ಮೋಹನ್​ಲಾಲ್

ಮೋಹನ್​ಲಾಲ್ ಅವರ ‘ಎಂಪುರಾನ್’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭಾರಿ ಯಶಸ್ಸು ಕಂಡಿದೆ. 250 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿ ಮಲಯಾಳಂ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಈ ಯಶಸ್ಸಿನ ನಂತರ, ಮೋಹನ್​ಲಾಲ್ ಅವರ ಮುಂದಿನ ಚಿತ್ರ ‘ತುಡರುಮ್’ನ ಬಿಡುಗಡೆ ದಿನಾಂಕವನ್ನು ಏಪ್ರಿಲ್ 25 ಎಂದು ಘೋಷಿಸಲಾಗಿದೆ.

‘ಎಂಪುರಾನ್’ ಗೆಲ್ಲುತ್ತಿದ್ದಂತೆ ಮತ್ತೊಂದು ಚಿತ್ರದ ರಿಲೀಸ್ ದಿನಾಂಕ ಘೋಷಿಸಿದ ಮೋಹನ್​ಲಾಲ್
ಮೋಹನ್​ಲಾಲ್

Updated on: Apr 08, 2025 | 9:00 AM

‘ಎಲ್​2: ಎಂಪುರಾನ್’ (L2: Empuraan) ಸಿನಿಮಾದಲ್ಲಿ ಮೋಹನ್​ಲಾಲ್ ಹಾಗೂ ಪೃಥ್ವಿರಾಜ್ ಸುಕುಮಾರನ್ ನಟಿಸಿದ್ದಾರೆ. ಈ ಸಿನಿಮಾ ಯಶಸ್ಸು ಕಂಡಿದೆ. ಈ ಚಿತ್ರ ವಿಶ್ವ ಬಾಕ್ಸ್ ಆಫೀಸ್​ನಲ್ಲಿ 250 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮಲಯಾಳಂ ಚಿತ್ರ ಒಂದು ಗಲ್ಲಾ ಪೆಟ್ಟಿಗೆಯಲ್ಲಿ ಇಷ್ಟು ಗಳಿಕೆ ಮಾಡಿದ್ದು ಇದೇ ಮೊದಲು. ಈ ಚಿತ್ರ ಗೆಲ್ಲುತ್ತಿದ್ದಂತೆ ಮೋಹನ್​ಲಾಲ್ ಸುಮ್ಮನೆ ಕುಳಿತಿಲ್ಲ. ಅವರ ನಟನೆಯ ಮತ್ತೊಂದು ಚಿತ್ರದ ರಿಲೀಸ್ ದಿನಾಂಕ ಘೋಷಿಸಿದ್ದಾರೆ. ಇದೇ ತಿಂಗಳು ಸಿನಿಮಾ ರಿಲೀಸ್ ಆಗಲಿದೆ ಅನ್ನೋದು ವಿಶೇಷ.

ಮೋಹನ್​ಲಾಲ್ ಅವರಿಗೆ ಈಗ 64 ವರ್ಷ. ಈ ವಯಸ್ಸಿನಲ್ಲೂ ಅವರು ದಣಿವರಿಯದೆ ಕೆಲಸ ಮಾಡುತ್ತಿದ್ದಾರೆ. ಅವರ ‘ಎಂಪುರಾನ್’ ಹಿಟ್ ಆಗುತ್ತಿದ್ದಂತೆ, ‘ತುಡರುಮ್’ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಈ ಸಿನಿಮಾ ಏಪ್ರಿಲ್ 25ರಂದು ತೆರೆಗೆ ಬರಲಿದೆ. ಟ್ವಿಟರ್ ಮೂಲಕ ಮೋಹನ್​ಲಾಲ್ ಈ ಮಾಹಿತಿ ನೀಡಿದ್ದಾರೆ. ‘ನಾವು ಆಗಸ್ಟ್ 25ರಂದು ಬರುತ್ತಿದ್ದೇವೆ’ ಎಂದು ಹೇಳಿರೋ ಮೋಹನ್​ಲಾಲ್ ಅವರು, ‘ತುಡರುಮ್’ ರಿಲೀಸ್ ದಿನಾಂಕ ರಿವೀಲ್ ಮಾಡಿದ್ದಾರೆ.

ಇದನ್ನೂ ಓದಿ
ಸಾಯಿ ಪಲ್ಲವಿ ಧ್ವನಿ ಅದೆಷ್ಟು ಕ್ಯೂಟ್; ಅವರ ಹಾಡು ಕೇಳಿ
ಐಪಿಎಲ್ ಬೆಟ್ಟಿಂಗ್ ಪ್ರಮೋಷನ್ ಮಾಡೋ ಇನ್​ಫ್ಲ್ಯುಯೆನ್ಸ್​ರಗಳಿಗೆ ನೋಟಿಸ್
‘ಕೊಳಕು ಅಂಟದ ಬಿಳಿ ಹಾಳೆ’; ಧನುಗೆ ಪತ್ರ ಬರೆದು ವಿಶ್ ತಿಳಿಸಿದ ತ್ರಿವಿಕ್ರಂ
ರಚಿತಾ ರಾಮ್ ಹಾಡೋದನ್ನ ನೋಡಿದ್ದೀರಾ? ಇಲ್ಲಿದೆ ಅಪರೂಪದ ವಿಡಿಯೋ

ಈ ಚಿತ್ರವನ್ನು ತರುಣ್ ಮೂರ್ತಿ ಅವರು ನಿರ್ದೇಶನ ಮಾಡಿದ್ದಾರೆ. ‘ಆಪರೇಷನ್ ಜಾವ’, ‘ಸೌದಿ ವೆಲ್ಲಕ್ಕ’ ರೀತಿಯ ಚಿತ್ರಗಳನ್ನು ಅವರು ನೀಡಿದ್ದಾರೆ. ಮೋಹನ್​ಲಾಲ್ ಅವರು ಟ್ಯಾಕ್ಸಿ ಡ್ರೈವರ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಶಣ್ಮುಗನ್ ಅನ್ನೋದು ಪಾತ್ರದ ಹೆಸರು. ಶೋಭನಾ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಚಿತ್ರಕ್ಕಾಗಿ ಅಭಿಮಾನಿಗಳು ಕಾದಿದ್ದಾರೆ.

ಇದನ್ನೂ ಓದಿ: ‘ಮುಸ್ಲಿಮರ ಬಳಿ ಮೋಹನ್​ಲಾಲ್ ಕ್ಷಮೆ ಕೇಳಬೇಕು’; ಮಾಡಿದ ತಪ್ಪೇನು?

ದಾಖಲೆ ಹಾಗೂ ವಿವಾದ ಮಾಡಿದ ‘ಎಂಪುರಾನ್’

ಮೋಹನ್​ಲಾಲ್ ನಟನೆಯ ‘ಎಂಪುರಾನ್’ನಲ್ಲಿ ಹಿಂದೂ ವಿರೋಧಿ ವಿಚಾರಗಳು ಇವೆ ಎಂಬ ಆರೋಪದ ಮೇಲೆ ವಿರೋಧ ಹೊರಹಾಕಲಾಯಿತು. ಇದಕ್ಕೆ ಮಣಿದ ತಂಡದವರು 24 ಕಡೆಗಳಲ್ಲಿ ಕತ್ತರಿ ಹಾಕಿದರು. ಅಲ್ಲದೆ, ಸಿನಿಮಾ ನಿರ್ಮಾಪಕನ ಮನೆ ಮೇಲೆ ಇಡಿ ದಾಳಿ ಕೂಡ ಆಗಿದೆ. ಇವೆಲ್ಲ ಅಡೆತಡೆಗಳ ಮಧ್ಯೆ ಸಿನಿಮಾ ಗೆದ್ದು ಬೀಗಿದೆ. ಈ ಮೊದಲು ಮಲಯಾಳಂ ಚಿತ್ರರಂಗದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ್ದ ‘ಮಂಜುಮ್ಮೇಲ್ ಬಾಯ್ಸ್’ (230 ಕೋಟಿ ರೂಪಾಯಿ) ಗಳಿಕೆಯನ್ನೂ ಹಿಂದಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.