AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಚ್ಛೇದನದ ಬಳಿಕ ಮೌನಿ ರಾಯ್​​​ಗೆ ಸಿಕ್ಕ ಜೀವನಾಂಶ ಎಷ್ಟು? ಮಾಜಿ ಪತಿ ಹೇಳಿದ್ದಿಷ್ಟು

ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ವಿಚ್ಛೇದನ ದೃಢಪಟ್ಟಿದೆ. ಜೀವನಾಂಶ ಹಾಗೂ ಮೂರನೇ ವ್ಯಕ್ತಿಯ ಬಗ್ಗೆ ಹಬ್ಬಿದ್ದ ವದಂತಿಗಳು ಸಂಪೂರ್ಣ ಸುಳ್ಳು ಎಂದು ಸೂರಜ್ ಸ್ಪಷ್ಟಪಡಿಸಿದ್ದಾರೆ. ಇದು ಪರಸ್ಪರ ಗೌರವ ಹಾಗೂ ಸಮ್ಮತಿಯಿಂದ ತೆಗೆದುಕೊಂಡ ನಿರ್ಧಾರ. ಮಾಧ್ಯಮಗಳು ಖಾಸಗಿತನಕ್ಕೆ ಗೌರವ ನೀಡಬೇಕು ಎಂದು ದಂಪತಿ ಮನವಿ ಮಾಡಿದ್ದಾರೆ.

ವಿಚ್ಛೇದನದ ಬಳಿಕ ಮೌನಿ ರಾಯ್​​​ಗೆ ಸಿಕ್ಕ ಜೀವನಾಂಶ ಎಷ್ಟು? ಮಾಜಿ ಪತಿ ಹೇಳಿದ್ದಿಷ್ಟು
ಮೌನಿ ರಾಯ್
ರಾಜೇಶ್ ದುಗ್ಗುಮನೆ
|

Updated on: May 18, 2026 | 3:11 PM

Share

ಭಾರತ ಮೂಲದ ದುಬೈ ಉದ್ಯಮಿ ಸೂರಜ್ ನಂಬಿಯಾರ್ ಹಾಗೂ ಬಾಲಿವುಡ್ ನಟಿ ಮೌನಿ ರಾಯ್ ಇಬ್ಬರೂ ಡಿವೋರ್ಸ್ ಪಡೆದಿದ್ದಾರೆ. ಇಬ್ಬರ ಮಧ್ಯೆ ಮೂರನೇ ವ್ಯಕ್ತಿ ಎಂಟ್ರಿ ಆಗಿರುವುದೇ ಡಿವೋರ್ಸ್​​ಗೆ ಕಾರಣ ಎಂಬ ವದಂತಿ ಸೃಷ್ಟಿ ಆಗಿತ್ತು. ಅಲ್ಲದೆ, ನಟಿಗೆ ಸಾಕಷ್ಟು ಜೀವನಾಂಶ ಸಿಕ್ಕಿದೆ ಎಂದು ಕೂಡ ಹೇಳಲಾಗಿತ್ತು. ಈ ಎಲ್ಲಾ ವದಂತಿಗೆ ಸೂರಜ್ ನಂಬಿಯಾರ್ ಸ್ಪಷ್ಟನೆ ನೀಡಿದ್ದಾರೆ. ತಮ್ಮಿಬ್ಬರ ವಿಚ್ಛೇದನದ ಕುರಿತು ವರದಿಯಾಗುತ್ತಿರುವ ಸುದ್ದಿಗಳು ಸಂಪೂರ್ಣ ಸುಳ್ಳು, ಆಧಾರರಹಿತ ಮತ್ತು ದುರುದ್ದೇಶಪೂರಿತ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪರಸ್ಪರ ಗೌರವ ಮತ್ತು ಒಮ್ಮತದ ನಿರ್ಧಾರದಿಂದಲೇ ತಾವಿಬ್ಬರು ಬೇರೆಯಾಗುತ್ತಿರುವುದಾಗಿ ಸೂರಜ್ ತಿಳಿಸಿದ್ದಾರೆ. ಈ ನಿರ್ಧಾರದ ಹಿಂದೆ ಯಾವುದೇ ಮೂರನೇ ವ್ಯಕ್ತಿಯ ಹಸ್ತಕ್ಷೇಪವಿಲ್ಲ ಎಂದು ಹೇಳಿದ್ದಾರೆ. ಜೀವನಾಂಶ ಅಥವಾ ಇನ್ಯಾವುದೇ ವಿಷಯದ ಬಗ್ಗೆ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವ ಕಟ್ಟುಕಥೆಗಳು ಕೇವಲ ಇಬ್ಬರು ವ್ಯಕ್ತಿಗಳ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನವಷ್ಟೇ ಎಂದು ಅವರು ಬೇಸರ ಹೊರಹಾಕಿದ್ದಾರೆ. ಈ ಮೂಲಕ ಮೌನಿ ರಾಯ್ ಅವರು ಯಾವುದೇ ಜೀವನಾಂಶ ಕೇಳಿಲ್ಲ ಎಂಬುದು ಸ್ಪಷ್ಟವಾಗಿದೆ.

ಸಂಬಂಧವಿಲ್ಲದವರನ್ನು ಈ ವಿವಾದಕ್ಕೆ ಎಳೆದು ತರುತ್ತಿರುವುದರ ಬಗ್ಗೆ ಸೂರಜ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಾವಿಬ್ಬರೂ ಈ ಕಠಿಣ ಸಮಯದಲ್ಲಿ ಗೌರವಯುತವಾಗಿ ನಡೆದುಕೊಂಡಿದ್ದು, ಮಾಧ್ಯಮಗಳು ಮತ್ತು ಸಾರ್ವಜನಿಕರು ಕೂಡ ಜವಾಬ್ದಾರಿಯಿಂದ ವರ್ತಿಸಿ ತಮ್ಮ ಖಾಸಗಿತನಕ್ಕೆ ಗೌರವ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ:  ದಿಶಾ ಪಟಾನಿ-ಮೌನಿ ರಾಯ್​ ಈ ರೀತಿ ಸ್ನೇಹ; ಇದೇ ಕಾರಣಕ್ಕೆ ವಿಚ್ಛೇದನ ನೀಡಿದ್ರಾ ಸೂರಜ್?

ಈ ವದಂತಿಗಳಿಗೆ ನಟಿ ಮೌನಿ ರಾಯ್ ಕೂಡ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿದ್ದು, ಪತಿ ಸೂರಜ್ ನಂಬಿಯಾರ್ ಅವರಿಂದ ದೂರವಾಗುತ್ತಿರುವುದನ್ನು ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಈ ಸೂಕ್ಷ್ಮ ವಿಷಯವನ್ನು ಅತ್ಯಂತ ಗೌರವಯುತವಾಗಿ ಮತ್ತು ಖಾಸಗಿಯಾಗಿ ನಿಭಾಯಿಸಲು ಇಬ್ಬರೂ ಒಟ್ಟಾಗಿ ನಿರ್ಧರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More