The Kerala Story First Half Review: ‘ದಿ ಕೇರಳ ಸ್ಟೋರಿ’ ಸಿನಿಮಾ ದೇಶಾದ್ಯಂತ ತೆರೆಕಂಡಿದೆ. ಸುದೀಪ್ತೋ ಸೇನ್ ಅವರು ನಿರ್ದೇಶನ ಮಾಡಿರುವ ಈ ಚಿತ್ರವು ಪ್ರೇಕ್ಷಕರ ವಲಯದಲ್ಲಿ ಸಾಕಷ್ಟು ಹೈಪ್ ಸೃಷ್ಟಿ ಮಾಡಿದೆ.
Ad
ಅದಾ ಶರ್ಮಾ
Follow us on
ನಟಿ ಅದಾ ಶರ್ಮಾ (Adah Sharma) ಅವರು ಮುಖ್ಯಭೂಮಿಕೆ ನಿಭಾಯಿಸಿರುವ ‘ದಿ ಕೇರಳ ಸ್ಟೋರಿ’ ಸಿನಿಮಾ ಇಂದು (ಮೇ 5) ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ಸೂಕ್ಷ್ಮ ವಿಷಯ ಇರುವುದರಿಂದ ಎಲ್ಲ ವಲಯದ ಜನರು ಇದರ ಮೇಲೆ ಕಣ್ಣಿಟ್ಟಿದ್ದಾರೆ. ನಿರ್ದೇಶಕ ಸುದೀಪ್ತೋ ಸೇನ್ (Sudipto Sen) ಅವರು ಈ ಸಿನಿಮಾದಲ್ಲಿ ಹೇಳಿರುವ ಸಂಗತಿಗಳು ಸತ್ಯವೋ ಅಲ್ಲವೋ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಟೀಸರ್ ಬಿಡುಗಡೆ ಆದಾಗಲೇ ಈ ಸಿನಿಮಾದ ಬಗ್ಗೆ ಕೌತುಕ ಮೂಡಿತ್ತು. ಟ್ರೇಲರ್ನಿಂದ ಇನ್ನಷ್ಟು ಹೈಪ್ ಸೃಷ್ಟಿ ಆಯಿತು. ಈಗ ದೇಶಾದ್ಯಂತ ‘ದಿ ಕೇರಳ ಸ್ಟೋರಿ’ (The Kerala Story) ರಿಲೀಸ್ ಆಗಿದೆ. ವಿಪುಲ್ ಅಮೃತ್ಲಾಲ್ ಶಾ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಹಿಂದಿ ಮಾತ್ರವಲ್ಲದೇ ತೆಲುಗು, ಮಲಯಾಳಂ ಮತ್ತು ತಮಿಳಿನಲ್ಲೂ ಈ ಚಿತ್ರ ತೆರೆಕಂಡಿದೆ. ಹಾಗಾದರೆ, ‘ದಿ ಕೇರಳ ಸ್ಟೋರಿ’ ಸಿನಿಮಾದ ಮೊದಲಾರ್ಧ ಹೇಗಿದೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ..
ಶಾಲಿನಿ ಉನ್ನಿಕೃಷ್ಣನ್ ಎಂಬ ನರ್ಸಿಂಗ್ ವಿದ್ಯಾರ್ಥಿನಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅದಾ ಶರ್ಮಾ.
ಮಿಲಿಟರಿ ವಿಚಾರಣೆ ದೃಶ್ಯದ ಮೂಲಕ ಆರಂಭ ಆಗುವ ಕಥೆ. ಫ್ಲ್ಯಾಶ್‌ಬ್ಯಾಕ್ ವಿವರಿಸುವ ಕಥಾನಾಯಕಿ ಪಾತ್ರ.
ಇದನ್ನೂ ಓದಿ
Triple Riding Movie Review: ‘ತ್ರಿಬಲ್ ರೈಡಿಂಗ್’ ರೇಸ್ನಲ್ಲಿ ಓವರ್ಟೇಕ್ ಮಾಡಿದ ಸಾಧುಕೋಕಿಲ, ರಂಗಾಯಣ ರಘು
Shubhamangala: ‘ಶುಭಮಂಗಳ’ ಸಿನಿಮಾ ವಿಮರ್ಶೆ; ಇದು ಆರು ಪ್ರೇಮಕಥೆಗಳ ಸುಂದರ ಸಂಕಲನ
Kantara Review: ಹಲವು ಸಂಘರ್ಷಗಳ ‘ಕಾಂತಾರ’; ರಿಷಬ್ ಶೆಟ್ಟಿಯ ಹೊಸ ಅವತಾರ
Guru Shishyaru Review: ರೋಚಕ ಖೊಖೊ ಪಂದ್ಯದ ಜೊತೆ ಹಿತ-ಮಿತವಾದ ಕಾಮಿಡಿ
ಪ್ರೆಸೆಂಟ್ ಮತ್ತು ಫ್ಲ್ಯಾಶ್‌ಬ್ಯಾಕ್ ದೃಶ್ಯಗಳ ಮೂಲಕ ಕಥೆ ವಿವರಿಸಿದ ನಿರ್ದೇಶಕ ಸುದೀಪ್ತೋ ಸೇನ್.
ಫಸ್ಟ್ ಹಾಫ್‌ನಲ್ಲಿ ಮೂರು ಡಿಫರೆಂಟ್ ಶೇಡ್‌ನ ಪಾತ್ರಕ್ಕೆ ಬಣ್ಣ ಹಚ್ಚಿರುವ ಅದಾ ಶರ್ಮಾ.
ಶಾಲಿನಿ ಎಂಬ ಹಿಂದೂ ಹುಡುಗಿ ನಂತರ ಫಾತೀಮಾ ಆಗಿ ಬದಲಾಗಿದ್ದು ಹೇಗೆ ಎಂಬ ಕಹಾನಿ ವಿವರಿಸುವ ‘ದಿ ಕೇರಳ ಸ್ಟೋರಿ’