AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mr Bachelor Movie Review:ಫಜೀತಿಗೆ ಸಿಲುಕುವ ವರ್ಜಿನ್ ‘ಬ್ಯಾಚುಲರ್’ನ ಕಥೆಯಲ್ಲಿ ಒಂದಷ್ಟು ಹಾಸ್ಯ, ಸ್ವಲ್ಪ ಸೆಂಟಿಮೆಂಟ್

ಡಾರ್ಲಿಂಗ್​ ಕೃಷ್ಣ-ಮಿಲನಾ ನಾಗರಾಜ್​ ಕಾಂಬಿನೇಷನ್ ಪ್ರೇಕ್ಷಕರಿಗೆ ಇಷ್ಟವಾಗಿದೆ. ಇವರ ಜತೆ ಈಗ ನಿಮಿಕಾ ರತ್ನಾಕರ್ ಕೂಡ ಸೇರಿಕೊಂಡಿದ್ದಾರೆ. ಈ ಮೂವರ ‘ಮಿಸ್ಟರ್ ಬ್ಯಾಚುಲರ್’ ರಿಲೀಸ್ ಆಗಿದೆ. ಅದರ ವಿಮರ್ಶೆ ಇಲ್ಲಿದೆ.

Mr Bachelor Movie Review:ಫಜೀತಿಗೆ ಸಿಲುಕುವ ವರ್ಜಿನ್ ‘ಬ್ಯಾಚುಲರ್’ನ ಕಥೆಯಲ್ಲಿ ಒಂದಷ್ಟು ಹಾಸ್ಯ, ಸ್ವಲ್ಪ ಸೆಂಟಿಮೆಂಟ್
Mr Bachelor Kannada Movie Review
TV9 Web
| Edited By: |

Updated on: Jan 06, 2023 | 6:48 AM

Share

ಸಿನಿಮಾ: ಮಿಸ್ಟರ್ ಬ್ಯಾಚುಲರ್

ನಿರ್ಮಾಣ: ಶ್ರೀನಿವಾಸ್ ಎಲ್​., ಹನುಮಂತ ರಾವ್ ಹಾಗೂ ಸ್ವರ್ಣಲತಾ

ನಿರ್ದೇಶನ: ನಾಯ್ಡು ಬಂಡಾರು

ಸಂಗೀತ: ಮಣಿಕಾಂತ್ ಕದ್ರಿ

ಪಾತ್ರವರ್ಗ: ಡಾರ್ಲಿಂಗ್​ ಕೃಷ್ಣ, ಮಿಲನಾ ನಾಗರಾಜ್, ನಿಮಿಕಾ ರತ್ನಾಕರ್, ಸಾಧು ಕೋಕಿಲ, ಚಿಕ್ಕಣ್ಣ, ಅಯ್ಯಪ್ಪ ಮೊದಲಾದವರು.

ಸ್ಟಾರ್: 3/5

ಚಿಕ್ಕ ವಯಸ್ಸಿನಲ್ಲಿ ಏನಾಗಬೇಕು ಎಂದು ಕೇಳಿದರೆ ಸಾಮಾನ್ಯವಾಗಿ ಎಲ್ಲರೂ ಇಂಜಿನಿಯರ್, ಡಾಕ್ಟರ್ ಆಗಬೇಕೆಂದು ಹೇಳುತ್ತಾರೆ. ಆದರೆ, ಈ ಚಿತ್ರದ ಕಥಾ ನಾಯಕ ಕಾರ್ತಿಕ್​ (ಡಾರ್ಲಿಂಗ್ ಕೃಷ್ಣ) ಕಂಡ ಕನಸು ಮದುವೆ ಆಗಬೇಕು ಎಂದು. ಮದುವೆ ಎಂದರೆ ಹಬ್ಬ, ವಿವಾಹ ಆದಮೇಲೆ ಹಾಯಾಗಿ ಇರಬಹುದು ಎಂಬ ಆಲೋಚನೆ ಆತನದ್ದು. ಇದನ್ನು ನನಸು ಮಾಡಿಕೊಳ್ಳಬೇಕು ಎಂದು ಹೊರಡುವ ಈ ಬ್ಯಾಚುಲರ್ ಫಜೀತಿಗೆ ಸಿಲುಕುತ್ತಾನೆ. ಕೆಲವೇ ದಿನಗಳ ಅಂತರದಲ್ಲಿ ಇಬ್ಬರು ನಾಯಕಿಯರ (ಮಿಲನಾ ನಾಗರಾಜ್​, ನಿಮಿಕಾ ರತ್ನಾಕರ್) ಭೇಟಿ ಆಗುತ್ತದೆ. ವರ್ಜಿನ್ ಎಂಬುದೇ ಆತನಿಗೆ ಮುಳುವಾಗುತ್ತದೆ. ಅಲ್ಲಿಂದ ಏರಿಳಿತ ಶುರು. ಈ ನಾಯಕಿಯರಲ್ಲಿ ಅಂತಿಮವಾಗಿ ಕಾರ್ತಿಕ್ ಯಾರನ್ನು ಮದುವೆ ಆಗುತ್ತಾನೆ? ವಿಲನ್​​ಗಳು ಈತನ ವಿರುದ್ಧ ದ್ವೇಷ ಕಾರೋದು ಯಾಕೆ ಎಂಬುದು ಸಿನಿಮಾದ ಕಥೆ.

ಮಾಸ್ ಆ್ಯಂಡ್ ಕ್ಲಾಸ್

ಡಾರ್ಲಿಂಗ್ ಕೃಷ್ಣ ಅವರು ‘ಲವ್ ಮಾಕ್ಟೇಲ್​’, ‘ಲವ್ ಮಾಕ್ಟೇಲ್ 2’ ಸಿನಿಮಾದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದರು. ಆ ಸಿನಿಮಾಗಳಲ್ಲಿ ಲವ್, ಮದುವೆ ವಿಚಾರ ಪ್ರಮುಖವಾಗಿ ಹೈಲೈಟ್ ಆಗಿತ್ತು. ಈ ಚಿತ್ರದಲ್ಲೂ ಮದುವೆ ವಿಚಾರ ಇದೆ. ಆದರೆ, ಕಥೆಯ ಸ್ವರೂಪ ಬೇರೆ. ಅದೇನು ಎಂಬುದನ್ನು ಸಿನಿಮಾದಲ್ಲೇ ಕಣ್ತುಂಬಿಕೊಳ್ಳಬೇಕು. ಡಾರ್ಲಿಂಗ್ ಕೃಷ್ಣ ಈ ಬಾರಿ ಮಾಸ್ ಅವತಾರ ತಾಳಿದ್ದಾರೆ. ಸಖತ್ ಆಗಿ ಅವರು ಫೈಟ್ ಮಾಡಿದ್ದಾರೆ. ಈ ರೀತಿಯಲ್ಲೂ ಅವರು ಇಷ್ಟವಾಗುತ್ತಾರೆ. ಮೊದಲಾರ್ಧದಲ್ಲಿ ನಗಿಸುವ ಅವರು, ಎರಡನೇ ಭಾಗದಲ್ಲಿ ಮಾಸ್ ಅವತಾರ ತಾಳುತ್ತಾರೆ.

ಭರಪೂರ ಹಾಸ್ಯ

ಡಾರ್ಲಿಂಗ್ ಕೃಷ್ಣ ಅವರ ಸಿನಿಮಾದಲ್ಲಿ ನಗು ಇದ್ದೇ ಇರುತ್ತದೆ. ಈ ಸಿನಿಮಾದಲ್ಲೂ ಅದು ಮುಂದುವರಿದಿದೆ. ಗಿರಿ, ಚಿಕ್ಕಣ್ಣ ಅವರು ಈ ಸಿನಿಮಾದಲ್ಲಿ ಸಖತ್ ನಗುವಿನ ಕಿಕ್ ನೀಡಿದ್ದಾರೆ. ಸಾಧು ಕೋಕಿಲ ಕೆಲವೇ ದೃಶ್ಯಗಳಿಗೆ ಸೀಮಿತವಾಗಿದ್ದಾರೆ. ಮಿಲನಾ ನಾಗರಾಜ್​ಗಿಂತ ನಿಮಿಕಾ ರತ್ನಾಕರ್ ಅವರ ಪಾತ್ರ ಹೆಚ್ಚು ಹೈಲೈಟ್ ಆಗಿದೆ. ಯಶ್ ಶೆಟ್ಟಿ ಅವರು ಕೆಲವೇ ನಿಮಿಷ ತೆರೆಮೇಲೆ ಬರುತ್ತಾರೆ. ಅಯ್ಯಪ್ಪ ಅವರು ವಿಲನ್ ಆಗಿ ಅಬ್ಬರಿಸಿದ್ದಾರೆ. ಪವಿತ್ರಾ ಲೋಕೇಶ್ ಅವರು ತಾಯಿ ಸೆಂಟಿಮೆಂಟ್​​ ಮೂಲಕ ಇಷ್ಟವಾಗುತ್ತಾರೆ.

ಸಿನಿಮಾ ಪರಿಪೂರ್ಣವೇ?

‘ಮಿಸ್ಟರ್ ಬ್ಯಾಚುಲರ್’ ಸಿನಿಮಾಗೆ ನಿರ್ದೇಶನ ಮಾಡಿರುವ ನಾಯ್ಡು ಬಂಡಾರು ಅವರು ಒಂದು ಹಂತಕ್ಕೆ ಗೆದ್ದಿದ್ದಾರೆ. ಆದರೆ, ಸಿನಿಮಾ ಪರಿಪೂರ್ಣ ಅಲ್ಲ. ಸಣ್ಣಪುಟ್ಟ ಲೋಪದೋಷಗಳಿವೆ. ವರ್ಜಿನಿಟಿ ವಿಚಾರ ಪದೇಪದೇ ಕಿವಿಮೇಲೆ ಬೀಳುವುದರಿಂದ ಫ್ಯಾಮಿಲಿ ಆಡಿಯನ್ಸ್​ಗೆ ಮುಜುಗರ ತರಬಹುದು. ಹಾಡುಗಳು ಪ್ರೇಕ್ಷಕರ ಕಿವಿಯಲ್ಲಿ ಗುನುಗುವುದಿಲ್ಲ. ಫೈಟ್ ನೋಡಿ ನಾಯಕನ ಮೇಲೆ ನಾಯಕಿಗೆ ಲವ್ ಆಗೋದು, ಓಪನ್​ ಸೀನ್​​ನಲ್ಲಿ ನಾಯಕ ಬಾರ್​ಗೆ ಬಂದು ಕೂತು ಕಂಟಪೂರ್ತಿ ಕುಡಿಯುವುದು ಸೇರಿ ಅನೇಕ ವಿಚಾರಗಳು ಈ ಮೊದಲಿನ ಸಿನಿಮಾಗಳಲ್ಲಿ ಬಂದು ಹೋದ ದೃಶ್ಯಗಳನ್ನು ನೆನಪಿಸುತ್ತವೆ.  ಕಥೆ ಹಾಗೂ ನಿರೂಪಣೆ ವಿಚಾರದಲ್ಲಿ ನಿರ್ದೇಶಕರು ಹೊಸತನ ಪ್ರಯತ್ನಿಸಬಹುದಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ