Dooradarshana Review: ‘ದೂರದರ್ಶನ’ ಪರದೆಯಲ್ಲಿ ಬಿತ್ತರಗೊಂಡ ಆ ದಿನಗಳ ನೆನಪು; ಬೇಕಿತ್ತು ಇನ್ನಷ್ಟು ಹೊಳಪು

Dooradarshana Kannada Movie: ‘ದೂರದರ್ಶನ’ ಎಂದರೆ ಇದು ಕೇವಲ ಟಿವಿ ಸುತ್ತಮುತ್ತ ಹೆಣೆದ ಕಥೆ ಎಂದು ಪ್ರೇಕ್ಷಕರು ಊಹಿಸುವುದು ಸಹಜ. ಆದರೆ ಇದು ಬರೀ ಟಿವಿ ವಿಷಯಕ್ಕೆ ಸೀಮಿತವಾದ ಕಥೆಯಲ್ಲ.

Dooradarshana Review: ‘ದೂರದರ್ಶನ’ ಪರದೆಯಲ್ಲಿ ಬಿತ್ತರಗೊಂಡ ಆ ದಿನಗಳ ನೆನಪು; ಬೇಕಿತ್ತು ಇನ್ನಷ್ಟು ಹೊಳಪು
‘ದೂರದರ್ಶನ’ ಸಿನಿಮಾ ಪೋಸ್ಟರ್​
Follow us
ಮದನ್​ ಕುಮಾರ್​
|

Updated on:Mar 03, 2023 | 3:35 PM

ಚಿತ್ರ: ದೂರದರ್ಶನ

ನಿರ್ಮಾಣ: ರಾಜೇಶ್​ ಭಟ್​

ನಿರ್ದೇಶನ: ಸುಕೇಶ್​ ಶೆಟ್ಟಿ

ಇದನ್ನೂ ಓದಿ
Image
Triple Riding Movie Review: ‘ತ್ರಿಬಲ್​ ರೈಡಿಂಗ್​’ ರೇಸ್​ನಲ್ಲಿ ಓವರ್​ಟೇಕ್​ ಮಾಡಿದ ಸಾಧುಕೋಕಿಲ, ರಂಗಾಯಣ ರಘು
Image
Shubhamangala: ‘ಶುಭಮಂಗಳ’ ಸಿನಿಮಾ ವಿಮರ್ಶೆ; ಇದು ಆರು ಪ್ರೇಮಕಥೆಗಳ ಸುಂದರ ಸಂಕಲನ
Image
Kantara Review: ಹಲವು ಸಂಘರ್ಷಗಳ ‘ಕಾಂತಾರ’; ರಿಷಬ್​ ಶೆಟ್ಟಿಯ ಹೊಸ ಅವತಾರ
Image
Guru Shishyaru Review: ರೋಚಕ ಖೊಖೊ ಪಂದ್ಯದ ಜೊತೆ ಹಿತ-ಮಿತವಾದ ಕಾಮಿಡಿ

ಪಾತ್ರವರ್ಗ: ಪೃಥ್ವಿ ಅಂಬಾರ್​, ಉಗ್ರಂ ಮಂಜು, ಅಯಾನಾ, ಸುಂದರ್​ ವೀಣಾ, ಹುಲಿ ಕಾರ್ತಿಕ್​ ಮುಂತಾದವರು.

ಸ್ಟಾರ್​: 3/5

‘ದೂರದರ್ಶನ’ ಎಂಬ ಶೀರ್ಷಿಕೆ ಕೇಳಿದರೆ ಥಟ್​ ಅಂತ ನೆನಪಾಗೋದು 80-90ರ ದಶಕ. ಭಾರತಕ್ಕೆ ಟಿವಿ ಕಾಲಿಟ್ಟ ಸಮಯದಲ್ಲಿ ಒಂದು ಸಂಚಲನವೇ ಸೃಷ್ಟಿ ಆಗಿತ್ತು. ಪ್ರತಿ ಊರಿನಲ್ಲಿ ಸಾಕಷ್ಟು ಬದಲಾವಣೆಗಳು ಆದವು. ಜಗತ್ತಿನ ಅನೇಕ ವಿಚಾರಗಳು ಮನೆ-ಮನೆಗೆ ತಲುಪುವಂತಾಯಿತು. ಮನರಂಜನೆಗೆ ಹೊಸ ಆಯಾಮ ಸಿಕ್ಕಿತು. ಅದರ ಜೊತೆಗೆ ಜನರ ನಡುವಿನ ಸಂಬಂಧಗಳು ಕೂಡ ಬದಲಾಗತೊಡಗಿದವು. ಈ ಎಲ್ಲ ಘಟನೆಗಳನ್ನು ಕೇಂದ್ರವಾಗಿ ಇಟ್ಟುಕೊಂಡು ‘ದೂರದರ್ಶನ’ ಸಿನಿಮಾ ಮಾಡಲಾಗಿದೆ. ಈ ಚಿತ್ರದಲ್ಲಿ ಪೃಥ್ವಿ ಅಂಬಾರ್​ ಮತ್ತು ಉಗ್ರಂ ಮಂಜು ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಸುಕೇಶ್​ ಶೆಟ್ಟಿ ನಿರ್ದೇಶನದ ಈ ಚಿತ್ರ ಒಟ್ಟಾರೆಯಾಗಿ ಹೇಗಿದೆ ತಿಳಿಯಲು ಈ ವಿಮರ್ಶೆ ಓದಿ..

ನೆನಪಿನ ಪುಟ ತೆರೆದಿಡುವ ಸಿನಿಮಾ:

ಮೊದಲ ಬಾರಿಗೆ ಟಿವಿ ಬಂದಾಗ ಆ ಫೀಲ್​ ಹೇಗಿತ್ತು ಎಂಬುದು ಇಂದಿನ ಹೊಸ ತಲೆಮಾರಿನ ಮಕ್ಕಳಿಗೆ ಅರ್ಥವಾಗೋದು ಕಷ್ಟ. ಆ ದಿನಗಳ ಅನುಭವವೇ ಭಿನ್ನ. ವಾರಕ್ಕೊಂದು ಸಿನಿಮಾ, ಪ್ರತಿ ವಾರ ಚಿತ್ರಮಂಜರಿ ನೋಡಿಕೊಂಡು ಬೆಳೆದವರಿಗೆ ಮಾತ್ರ ಅದರ ಮಜಾ ಏನೆಂಬುದು ಗೊತ್ತು. ಆ ನೆನಪುಗಳ ಪುಟ ತೆರೆಯುವ ರೀತಿಯಲ್ಲಿ ‘ದೂರದರ್ಶನ’ ಸಿನಿಮಾ ಮೂಡಿಬಂದಿದೆ.

ಇದು ಬರೀ ಟಿವಿಯ ಕಥೆಯಲ್ಲ:

ನಿರ್ದೇಶಕ ಸುಕೇಶ್​ ಶೆಟ್ಟಿ ಅವರು ‘ದೂರದರ್ಶನ’ ಎಂಬ ಶೀರ್ಷಿಕೆಯಲ್ಲಿ ಸಿನಿಮಾ ಮಾಡಿದಾಗ ಇದು ಕೇವಲ ಟಿವಿ ಸುತ್ತಮುತ್ತ ಹೆಣೆದ ಕಥೆ ಎಂದು ಪ್ರೇಕ್ಷಕರು ಊಹಿಸುವುದು ಸಹಜ. ಆದರೆ ಇದು ಕೇವಲ ಟಿವಿ ವಿಷಯಕ್ಕೆ ಸೀಮಿತವಾದ ಕಥೆಯಲ್ಲ. ಇದರಲ್ಲಿ ಒಂದು ಲವ್​ ಸ್ಟೋರಿ ಇದೆ. ದ್ವೇಷದ ಕಹಾನಿ ಇದೆ. ಪ್ರತಿಷ್ಠೆ ಮತ್ತು ದುರಾಸೆಗೆ ಒಳಗಾದ ವ್ಯಕ್ತಿಯ ಕಥೆಯೂ ಇದೆ. ಮನ ಪರಿವರ್ತನೆ ಆಗುವಂತಹ ಕ್ಷಣಗಳಿವೆ. ಹೀಗೆ ಹಲವು ಆಯಾಮದಲ್ಲಿ ಚಿತ್ರವನ್ನು ಕಟ್ಟಿಕೊಡಲಾಗಿದೆ.

ಇದನ್ನೂ ಓದಿ: ‘ವೀರ ಸಿಂಹ ರೆಡ್ಡಿ’ ಚಿತ್ರ ನೋಡಿ ವಿಮರ್ಶೆ ತಿಳಿಸಿದ ರಜನಿಕಾಂತ್​; ಬಾಲಯ್ಯನ ಚಿತ್ರ ಇಷ್ಟ ಆಯ್ತಾ?

ಉಗ್ರಂ ಮಂಜುಗೆ ಡಿಫರೆಂಟ್​ ಪಾತ್ರ:

ನಟ ಉಗ್ರಂ ಮಂಜು ಅವರು ವಿಲನ್​ ಪಾತ್ರಗಳ ಮೂಲಕ ಈಗಾಗಲೇ ಗಮನ ಸೆಳೆದಿದ್ದಾರೆ. ‘ದೂರದರ್ಶನ’ ಚಿತ್ರದಲ್ಲೂ ಅದು ಮುಂದುವರಿದಿದೆ. ಹಾಗಂತ ಇದು ಪ್ರೇಕ್ಷಕರು ಸುಲಭವಾಗಿ ಊಹಿಸಿ ಬಿಡುವಂತಹ ಕೆಟ್ಟ ಗುಣಗಳಿರುವ ವಿಲನ್​ ಪಾತ್ರ ಅಲ್ಲ. ಆತ ಕೆಟ್ಟವನಾಗಲು ಒಂದು ಕಾರಣ ಕೂಡ ಇದೆ. ಆತನ ಒಳಗೂ ಒಳ್ಳೆಯತನದ ಸಣ್ಣ ಒರತೆ ಇದೆ. ಇಂಥ ಒಂದು ಸಂಕೀರ್ಣವಾದ ಪಾತ್ರವನ್ನು ಅವರು ನಿಭಾಯಿಸಿದ್ದಾರೆ.

ಲವರ್​ ಬಾಯ್​ ಪೃಥ್ವಿ ಅಂಬಾರ್​:

‘ದಿಯಾ’ ಸಿನಿಮಾ ಸೂಪರ್ ಹಿಟ್​ ಆದ ಬಳಿಕ ಪೃಥ್ವಿ ಅಂಬಾರ್​ ಅವರ ಖ್ಯಾತಿ ಹೆಚ್ಚಿತು. ಲವರ್​ ಬಾಯ್​ ರೀತಿಯ ಪಾತ್ರಗಳಲ್ಲಿ ಅವರನ್ನು ನೋಡಲು ಪ್ರೇಕ್ಷಕರು ಇಷ್ಟಪಡುತ್ತಾರೆ. ಅಂತವರಿಗೆ ‘ದೂರದರ್ಶನ’ ಸಿನಿಮಾ ಇಷ್ಟ ಆಗುತ್ತದೆ. ಆದರೆ ಕೇವಲ ಪ್ರೀತಿ-ಪ್ರೇಮಕ್ಕೆ ಅವರ ಈ ಪಾತ್ರ ಸೀಮಿತವಾಗಿಲ್ಲ. ಅದರಾಚೆಗೂ ಹಲವು ಭಾವಗಳನ್ನು ವ್ಯಕ್ತಪಡಿಸಲು ಅವಕಾಶ ಇರುವಂತಹ ಪಾತ್ರ ಅವರಿಗೆ ಈ ಸಿನಿಮಾದಲ್ಲಿದೆ. ಅದನ್ನು ಅವರು ಚೆನ್ನಾಗಿ ನಿಭಾಯಿಸಿದ್ದಾರೆ. ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿರುವ ಅಯಾನಾ ಅವರ ನಟನೆ ಮೆಚ್ಚುವಂತಿದೆ. ದೀಪಕ್​ ರೈ ಪಣಾಜೆ, ಹುಲಿ ಕಾರ್ತಿಕ್​, ಹರಿಣಿ ಶ್ರೀಕಾಂತ್​, ರಘು ರಾಮನಕೊಪ್ಪ ಮುಂತಾದವರು ಕೂಡ ಸಹಜಾಭಿನಯ ನೀಡಿದ್ದಾರೆ.

ಇದನ್ನೂ ಓದಿ: 19 20 21 Movie Review: ನಾಡಿನ ಜನ ನೋಡಲೇಬೇಕಾದ ಕಾಡಿನ ಮಕ್ಕಳ ಕಥೆ ಮತ್ತು ಘನತೆ

ರೆಟ್ರೋ ಕಾಲದ ಸನ್ನಿವೇಶಗಳನ್ನು ಕಟ್ಟಿಕೊಡಲು ಮಲೆನಾಡಿನ ಪರಿಸರವನ್ನು ನಿರ್ದೇಶಕರು ಆಯ್ದುಕೊಂಡಿದ್ದಾರೆ. ಆ ವಿಚಾರದಲ್ಲಿ ಅವರು ಬಹುಪಾಲು ಯಶಸ್ವಿ ಆಗಿದ್ದಾರೆ. ಆದರೆ ತಾಂತ್ರಿಕವಾಗಿ ಈ ಚಿತ್ರಕ್ಕೆ ಇನ್ನಷ್ಟು ಗುಣಮಟ್ಟ ಬೇಕಿತ್ತು. ಛಾಯಾಗ್ರಹಣವನ್ನು ಸ್ವಲ್ಪ ಉತ್ತಮಗೊಳಿಸಿದ್ದರೆ ಚಿತ್ರದ ಹೊಳಪು ಹೆಚ್ಚುತ್ತಿತ್ತು. ಹಾಡುಗಳಲ್ಲಿ ವಾಸುಕಿ ವೈಭವ್​ ಅವರು ಎಂದಿನಂತೆ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಟಿ.ಜಿ. ನಂದೀಶ್​ ಬರೆದಿರುವ ಪಂಚಿಂಗ್​ ಸಂಭಾಷಣೆಗಳು ಕಾಮಿಡಿ ಕಚಗುಳಿ ಇಡುತ್ತವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:32 pm, Fri, 3 March 23

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ