‘ಖುಷಿ’ ಸಿನಿಮಾ ವಿಮರ್ಶೆ: ಹೊಸ ಲೇಪನದಲ್ಲಿ ಪ್ರೇಕ್ಷಕರ ಎದುರು ಬಂದ ಹಳೇ ಮಾದರಿಯ ಕಥೆ

ಈ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ‘ಖುಷಿ’ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಅವರು ಸ್ವಲ್ಪ ಬೇರೆ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಂದಿನಂತೆ ನಟನೆಗೆ ಮಹತ್ವ ಇರುವ ಪಾತ್ರವನ್ನು ಸಮಂತಾ ಆರಿಸಿಕೊಂಡಿದ್ದಾರೆ. ಫ್ಯಾಮಿಲಿ ಪ್ರೇಕ್ಷಕರು ನೋಡಬಹುದಾದ ಸಿನಿಮಾ ಇದಾಗಿದೆ. ದೊಡ್ಡ ಟ್ವಿಸ್ಟ್​ ಬಯಸುವವರಿಗೆ ನಿರಾಸೆ ಆಗಬಹುದು.

‘ಖುಷಿ’ ಸಿನಿಮಾ ವಿಮರ್ಶೆ: ಹೊಸ ಲೇಪನದಲ್ಲಿ ಪ್ರೇಕ್ಷಕರ ಎದುರು ಬಂದ ಹಳೇ ಮಾದರಿಯ ಕಥೆ
ವಿಜಯ್​ ದೇವರಕೊಂಡ, ಸಮಂತಾ ರುತ್​ ಪ್ರಭು
Follow us
TV9 Web
| Updated By: ಮದನ್​ ಕುಮಾರ್​

Updated on: Sep 01, 2023 | 6:13 PM

ಚಿತ್ರ: ಖುಷಿ. ನಿರ್ಮಾಣ: ಮೈತ್ರಿ ಮೂವೀ ಮೇಕರ್ಸ್. ನಿರ್ದೇಶನ: ಶಿವ ನಿರ್ವಾಣ. ಪಾತ್ರವರ್ಗ: ವಿಜಯ್ ದೇವರಕೊಂಡ, ಸಮಂತಾ ರುತ್ ಪ್ರಭು, ರಾಹುಲ್ ಶರ್ಮಾ, ಮುರಳಿ ರಾಮಕೃಷ್ಣ, ಲಕ್ಷ್ಮೀ, ಸಚಿನ್ ಖೇಡೆಕರ್, ಶರಣ್ಯ ಪೊನ್ವಣ್ಣನ್​, ವೆನ್ನೆಲ ಕಿಶೋರ್, ಅಲಿ ಮುಂತಾದವರು. ಸ್ಟಾರ್​: 2.5/5

‘ಅರ್ಜುನ್ ರೆಡ್ಡಿ’ ಸಿನಿಮಾದ ಮೂಲಕ ಸ್ಟಾರ್​ಗಿರಿ ಪಡೆದುಕೊಂಡ ವಿಜಯ್ ದೇವರಕೊಂಡ, ‘ಮಜಿಲಿ’ ಸಿನಿಮಾದ ನಟನೆಗೆ ಮೆಚ್ಚುಗೆ ಗಳಿಸಿಕೊಂಡ ಸಮಂತಾ ರುತ್ ಪ್ರಭು (Samantha Ruth Prabhu) ಈ ಬಾರಿ ಜೋಡಿಯಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ವಿಭಿನ್ನ ಪ್ರೇಮಕಥೆಗಳ ಮೂಲಕ ತೆರೆ ಮೇಲೆ ಬಂದ ನಟರು ಈ ಬಾರಿ ಜೋಡಿಯಾಗಿ ಕ್ಯಾಮೆರಾ ಎದುರಿಸಿದ್ದಾರೆ. ಇವರ ನಟನೆಯ ‘ಖುಷಿ’ ಸಿನಿಮಾ ಇಂದು (ಸೆಪ್ಟೆಂಬರ್1) ತೆರೆಕಂಡಿದೆ. ಪ್ರೇಮಕಥೆಗಳ ಮೂಲಕವೇ ಗುರುತಿಸಿಕೊಂಡ ಶಿವ ನಿರ್ವಾಣ ಈ ಬಾರಿಯೂ ಅದೇ ಸೂತ್ರವನ್ನು ಉಪಯೋಗಿಸಿದ್ದಾರೆ. ಈ ಸಿನಿಮಾದಲ್ಲಿ ಹಳೆಯ ಕಥೆಗೆ ಹೊಸ ಮಸಾಲಾ ಹಚ್ಚಿದ್ದಾರಾ? ‘ಖುಷಿ’ ಸಿನಿಮಾ (Kushi Movie) ಪ್ರೇಕ್ಷಕರಿಗೆ ಖುಷಿ ನೀಡುತ್ತಾ? ಕೊಟ್ಟ ಕಾಸಿಗೆ ಮೋಸವಾಗುತ್ತಾ? ಈ ಕುರಿತು ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ‘ಖುಷಿ’. ಎರಡು ವೈರುಧ್ಯ ಕುಟುಂಬಗಳ ಯುವಕ-ಯುವತಿ ನಡುವಿನ ಪ್ರೇಮಕಥೆಯಿದು. ಆ ಪ್ರೇಮಿಗಳು ತಮ್ಮ ವೈರುಧ್ಯಗಳ ನಡುವೆ ಪ್ರೀತಿಯನ್ನು ಹೇಗೆ ಕಾಪಾಡಿಕೊಂಡರು ಎಂಬುವುದೇ ಚಿತ್ರದ ಒಂದೆಳೆ ಕಥೆ. ಹಳೆಯ ದಾರದಲ್ಲಿಯೇ ಹೊಸ ಸಿನಿಮಾವನ್ನು ಹಣೆಯುವ ಕೆಲಸವನ್ನು ನಿರ್ದೇಶಕರು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಕಂಡು ಕೇಳಿರದ ಪ್ರೇಮ ಕಥೆಯನ್ನು ಹೇಳುವ ಸಾಹಸದ ಬದಲು ಗೊತ್ತಿರುವ ಕಥೆಯನ್ನು ಬೇರೆ ರೀತಿಯಲ್ಲಿ ಪ್ರೇಕ್ಷಕರಿಗೆ ತಿಳಿಸುವ ವಿಧಾನವನ್ನು ಶಿವ ಆರಿಸಿಕೊಂಡಿದ್ದಾರೆ. ವೈರುಧ್ಯಗಳ ಕಥೆ ಸಾಮಾನ್ಯವಾದರೂ, ನಾಸ್ತಿಕ ವರ್ಸಸ್​ ಆಸ್ತಿಕ ಎಂಬ ವಿಷಯವನ್ನು ತಂದಿರುವುದು ಹೊಸತಾಗಿದೆ. ಇದರಿಂದ ಸಿಂಪಲ್ ಕಥೆಗೆ ಬಣ್ಣ ಸೇರಿಸಿ ಕಾಮನಬಿಲ್ಲಾಗಿಸುವ ಪ್ರಯತ್ನ ಈ ಸಿನಿಮಾದಲ್ಲಿ ಕಾಣುತ್ತದೆ.

ಈ ಕಥೆಯಲ್ಲಿ ಅಂತಿಮವಾಗಿ ನಾಸ್ತಿಕತೆ ಗೆಲ್ಲುತ್ತದೆಯೋ, ಆಸ್ತಿಕತೆ ಗೆಲ್ಲುತ್ತದೆಯೋ ಎಂಬುದನ್ನು ನೀವು ಸಿನಿಮಾ ನೋಡಿದ ಬಳಿಕವೇ ತಿಳಿದುಕೊಳ್ಳಬೇಕು. ಕಥೆಯ ಸ್ವಾದವನ್ನೂ ಹಾಳುಗೆಡದಂತಹ ಜಾಣ್ಮೆಯೂ ಸಿನಿಮಾದಲ್ಲಿ ಕಾಣುತ್ತದೆ. ಸವಕಲು ಕಾಲೇಜ್ ಲವ್​ಸ್ಟೋರಿ ಹೇಳುವ ದಾರಿಯನ್ನು ಬದಿಗೊತ್ತಿ ಮದುವೆಯ ನಂತರದ ಪ್ರೀತಿಯನ್ನು ಹೇಳುವ ಬಗೆಯನ್ನು ಇಲ್ಲೂ ನಿರ್ದೇಶಕ ಶಿವ ನಿರ್ವಾಣ ಆರಿಸಿಕೊಂಡಿದ್ದಾರೆ. ಸಮಂತಾ ಹಾಗೂ ವಿಜಯ್ ನಡುವಿನ ಕೆಮಿಸ್ಟ್ರಿ ಚಿತ್ರದ ತೂಕವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ವಿಜಯ್ ದೇವರಕೊಂಡ ಹಿಡಿದುಕೊಂಡಿರೋ ಕೈ ಯಾರದ್ದು? ರಶ್ಮಿಕಾ ಮಂದಣ್ಣ ಬಗ್ಗೆ ಮೂಡಿದೆ ಅನುಮಾನ

ಸಿನಿಮಾದ ಕಥೆ ಆರಂಭವಾಗುವ ಕಾಶ್ಮೀರವನ್ನು ಚಿತ್ರದಲ್ಲಿ ಚೆನ್ನಾಗಿ ತೋರಿಸಿದ್ದಾರೆ. ವೆನ್ನೆಲ ಕಿಶೋರ್, ಅಲಿ ಅವರು ಪ್ರೇಕ್ಷಕರ ನಗುವಿಗೆ ಕೊರತೆ ಮಾಡಿಲ್ಲ. ರಾಹುಲ್ ಶರ್ಮಾ, ಮುರಳಿ ರಾಮಕೃಷ್ಣ, ಲಕ್ಷ್ಮೀ, ಸಚಿನ್ ಖೇಡೆಕರ್, ಶರನ್ಯ ಪೊನ್ವನ್ನನ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಈ ಬಾರಿ ಮೊದಲಿಗಿಂತ ಸ್ವಲ್ಪ ಬೇರೆ ರೀತಿಯ ಪಾತ್ರದಲ್ಲಿ ವಿಜಯ್ ದೇವರಕೊಂಡ ಕಾಣಿಸಿಕೊಂಡಿದ್ದಾರೆ. ಎಂದಿನಂತೆ ತೂಕದ ಪಾತ್ರವನ್ನು ಆರಿಸಿಕೊಳ್ಳುವಲ್ಲಿ ಸಮಂತಾ ಯಶಸ್ವಿಯಾಗಿದ್ದಾರೆ.

ಸಂಗೀತ ನಿರ್ದೇಶಕ ಹೆಶಮ್ ಅಬ್ದುಲ್ ವಹಾಬ್ ಸಂಗೀತ ಇಂಪಾಗಿದೆ. ಈ ಹಿಂದೆ ಅವರು ಪಡೆದಿದ್ದ ‘ಹೃದಯಂ’ ಚಿತ್ರದ ಯಶಸ್ಸು ಬೈ ಚಾನ್ಸ್ ಅಲ್ಲ ಎಂಬುದನ್ನು ‘ಖುಷಿ’ ಸಿನಿಮಾದ ಸಂಗೀತ ನಿರ್ದೇಶನದಿಂದ ಅವರು ಸಾಬೀತುಪಡಿಸಿದ್ದಾರೆ. ಇರುವ ಕಥೆಯನ್ನು ಅಚ್ಚುಕಟ್ಟಾಗಿ ತೋರಿಸುವುದರಲ್ಲಿ ನಿರ್ದೇಶಕ ಶಿವ ನಿರ್ವಾಣ ಅವರ ಅನುಭವ ಕಾಣುತ್ತದೆ. ಇನ್ನು, ಕನ್ನಡ ಡಬ್ಬಿಂಗ್ ವಿಚಾರಕ್ಕೆ ಬಂದರೆ ಸಾಕಷ್ಟು ಉತ್ತಮ ಬೆಳವಣಿಗೆ ಆಗಿದ್ದನ್ನು ಗುರುತಿಸಬಹುದು. ಆದರೆ ಹಾಡುಗಳ ಭಾಷಾಂತರದಲ್ಲಿ ಇನ್ನೂ ಸ್ವಲ್ಪ ಸುಧಾರಿಸುವ ಅವಶ್ಯಕತೆ ಇದೆ ಎಂದೆನಿಸುತ್ತದೆ.

ಇದನ್ನೂ ಓದಿ: ‘ಸಪ್ತ ಸಾಗರದಾಚೆ ಎಲ್ಲೋ – ಸೈಡ್​ ಎ’ ವಿಮರ್ಶೆ: ಪಾತ್ರ ಪರಿಚಯವೇ ಸುದೀರ್ಘ; ಭಾವ ತೀವ್ರತೆ ಅಮೋಘ

ಕಮರ್ಷಿಯಲ್ ಸಿನಿಮಾದ ಅಲಿಖಿತ ಸೂತ್ರಗಳಾದ ಹುಡುಗಿಯನ್ನು ಚುಡಾಯಿಸಿ ಫೈಟಿಂಗ್ ಸೀನ್ ತರುವುದು, ಕುಡಿದು ಹಾಡುವುದು ಮುಂತಾದ ದೃಶ್ಯವನ್ನು ಶಿವ ನಿರ್ವಾಣ ಮುಂದುವರಿಸಿದ್ದಾರೆ. ಹಾಸ್ಯದ ಹೆಸರಿನಲ್ಲಿ ತೀರಾ ಡಬಲ್ ಮೀನಿಂಗ್ ಮೊರೆ ಹೋಗದ ಕಾರಣ ಫ್ಯಾಮಿಲಿ ಪ್ರೇಕ್ಷಕರು ನೋಡಬಹುದಾದ ಸಿನಿಮಾ ಇದಾಗಿದೆ. ಲವ್ ಸ್ಟೋರಿ ಇಷ್ಟಪಡುವ ಜನರು ಈ ಸಿನಿಮಾ ನೋಡಬಹುದು. ಕೊಟ್ಟ ಕಾಸಿಗೆ ಮೋಸವಿಲ್ಲವಾದರೂ, ಕಥೆಯಲ್ಲಿ ದೊಡ್ಡ ದೊಡ್ಡ ಟ್ವಿಸ್ಟ್​ ಬಯಸುವ ಪ್ರೇಕ್ಷಕವರ್ಗಕ್ಕೆ ಸ್ವಲ್ಪ ನಿರಾಸೆ ಆಗಬಹುದು. ತೀರಾ ಭಿನ್ನವಾದ ಕಥೆಯಲ್ಲದೇ ಹೋದದೂ ಸಿನಿಮಾದಲ್ಲಿ ಅಚ್ಚುಕಟ್ಟುತನ ಇರುವುದರಿಂದ ಒಮ್ಮೆ ನೋಡಬಹುದು.

ವಿಮರ್ಶೆ: ಸುಚೇತಾ ಹೆಗಡೆ

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ