Pushpa Movie First Half Review: ಮಾಸ್​ ಅಲ್ಲು ಅರ್ಜುನ್​; ಇಲ್ಲಿದೆ ‘ಪುಷ್ಪ’ ಚಿತ್ರದ ಫಸ್ಟ್​ ಹಾಫ್​ ವಿಮರ್ಶೆ

Pushpa Movie: ‘ಪುಷ್ಪ’ ಸಿನಿಮಾ ದೊಡ್ಡ ಬಜೆಟ್​ನಲ್ಲಿ ನಿರ್ಮಾಣ ಆಗಿರುವುದರಿಂದ ಅದ್ದೂರಿಯಾಗಿ ಬರುವ ನಿರೀಕ್ಷೆ ಇತ್ತು. ಹಾಗಾದರೆ, ಈ ಸಿನಿಮಾ ಹೇಗಿದೆ? ಅಲ್ಲು ಅರ್ಜುನ್​-ರಶ್ಮಿಕಾ ಕಾಂಬಿನೇಷನ್​ ಹೇಗೆ ವರ್ಕ್​ ಆಗಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

Pushpa Movie First Half Review: ಮಾಸ್​ ಅಲ್ಲು ಅರ್ಜುನ್​; ಇಲ್ಲಿದೆ ‘ಪುಷ್ಪ’ ಚಿತ್ರದ ಫಸ್ಟ್​ ಹಾಫ್​ ವಿಮರ್ಶೆ
ಅಲ್ಲು ಅರ್ಜುನ್​-ರಶ್ಮಿಕಾ
Follow us
| Updated By: ಮದನ್​ ಕುಮಾರ್​

Updated on: Dec 17, 2021 | 8:09 AM

ಅಲ್ಲು ಅರ್ಜುನ್​ (Allu Arjun) ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ’  (Pushpa Movie) ಇಂದು​ (ಡಿಸೆಂಬರ್​ 17)  ರಿಲೀಸ್ಆಗಿದೆ. ಈ ಸಿನಿಮಾಗೆ ಖ್ಯಾತ ನಿರ್ದೇಶಕ ಸುಕುಮಾರ್​ ಅವರು ಆ್ಯಕ್ಷನ್ ಕಟ್​ ಹೇಳಿದ್ದಾರೆ. ರಕ್ತ ಚಂದನ ಕಳ್ಳಸಾಗಣೆ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ರಶ್ಮಿಕಾ ಅವರು ಡಿಗ್ಲಾಮ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ  ‘ಪುಷ್ಪ’ ಮೊದಲ ದಿನ 700ಕ್ಕೂ ಅಧಿಕ ಶೋಗಳು ಪ್ರದರ್ಶನ ಕಾಣುತ್ತಿವೆ. ಕನ್ನಡದ ನಟ ಧನಂಜಯ​ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ದೊಡ್ಡ ಬಜೆಟ್​ನಲ್ಲಿ ನಿರ್ಮಾಣ ಆಗಿರುವುದರಿಂದ  ಅದ್ದೂರಿಯಾಗಿ ಬರುವ ನಿರೀಕ್ಷೆ ಇತ್ತು. ಹಾಗಾದರೆ, ಈ ಸಿನಿಮಾದ ಮೊದಲಾರ್ಧ (Pushpa Movie First Half Review) ಹೇಗಿದೆ? ಅಲ್ಲು ಅರ್ಜುನ್​-ರಶ್ಮಿಕಾ ಕಾಂಬಿನೇಷನ್​ ಹೇಗೆ ವರ್ಕ್​ ಆಗಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

  1. ಮೊದಲಾರ್ಧ ಪೂರ್ತಿ ರೆಟ್ರೋ ಶೈಲಿಯಲ್ಲಿ ಮೂಡಿಬಂದಿದೆ. ಅದು ಪ್ರೇಕ್ಷಕರಿಗೆ ಬೇರೆ ರೀತಿಯ ಅನುಭವ ನೀಡುತ್ತದೆ.
  2. ಅಲ್ಲು ಅರ್ಜುನ್​ ಅವರು ತಮ್ಮ ವೃತ್ತಿಜೀವನದಲ್ಲಿ ಈವರೆಗೂ ಮಾಡಿರದ ಒಂದು ಡಿಫರೆಂಟ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
  3. ಅಭಿಮಾನಿಗಳು ರೋಮಾಂಚನಗೊಳ್ಳುವಂತಹ ಅನೇಕ ದೃಶ್ಯಗಳು ‘ಪುಷ್ಪ’ ಚಿತ್ರದ ಫಸ್ಟ್​ ಹಾಫ್​ನಲ್ಲಿ ಇವೆ. ಚೇಸಿಂಗ್​ ದೃಶ್ಯಗಳು ಅಭಿಮಾನಿಗಳಿಗೆ ಥ್ರಿಲ್​ ನೀಡಲಿವೆ.
  4. ರಶ್ಮಿಕಾ ಅವರ ‘ಶ್ರೀವಲ್ಲಿ’ ಹಾಡು ಮತ್ತು ಸಮಂತಾ ಕಾಣಿಸಿಕೊಂಡಿರುವ ‘ಹು ಅಂತಿಯಾ ಮಾವ.. ಊಹು ಅಂತಿಯಾ ಮಾವ’ ಹಾಡುಗಳು ಮೊದಲಾರ್ಧದಲ್ಲೇ ಇವೆ. ಇವುಗಳಿಂದ ಚಿತ್ರದ ತೂಕ ಹೆಚ್ಚಿದೆ.
  5. ಡಾಲಿ ಧನಂಜಯ್​ ಅವರಿಗೆ ವಿಭಿನ್ನವಾದ ಪಾತ್ರ ಇದೆ. ಮೊದಲಾರ್ಧದಲ್ಲಿ ಅವರ ಪಾತ್ರ ತುಂಬ ಪ್ರಾಮುಖ್ಯತೆ ಪಡೆದುಕೊಂಡಿದೆ. ಅವರು ತೆರೆಮೇಲೆ ಬಂದಾಗೆಲ್ಲ ಅಭಿಮಾನಿಗಳಿಂದ ಶಿಳ್ಳೆ ಚಪ್ಪಾಳೆ ಗ್ಯಾರಂಟಿ.
  6. ಮೊದಲಾರ್ಧದಲ್ಲಿ ರಶ್ಮಿಕಾ ಮಂದಣ್ಣ ಅವರ ಎಂಟ್ರಿ ಸ್ವಲ್ಪ ತಡವಾಗಿದೆ. ಡಿಗ್ಲಾಮ್​ ಲುಕ್​ನಲ್ಲಿ ಅವರು ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.
  7. ಆ್ಯಕ್ಷನ್​ ದೃಶ್ಯಗಳನ್ನು ಬಯಸುವ ಪ್ರೇಕ್ಷಕರಿಗೆ ‘ಪುಷ್ಪ’ ಚಿತ್ರದ ಮೊದಲಾರ್ಧದಲ್ಲಿ ಸಖತ್​ ಮನರಂಜನೆ ಸಿಗಲಿದೆ.
  8. ಮೊದಲಾರ್ಧದ ಅವಧಿ ಒಂದೂವರೆ ಗಂಟೆ ಇದೆ. ಈ ಅವಧಿ ಕೊಂಚ ದೀರ್ಘ ಎನಿಸುತ್ತದೆ. ಚಿತ್ರದ ಒಟ್ಟು ಅವಧಿ 2 ಗಂಟೆ 59 ನಿಮಿಷ!
  9. ಇಂಟರ್​ವಲ್​ನಲ್ಲಿ ಅಲ್ಲು ಅರ್ಜುನ್​ ಅವರ ಪಾತ್ರದ ಪ್ರಾಬಲ್ಯ ಶುರುವಾಗುತ್ತದೆ. ಆ ಮೂಲಕ ಸೆಕೆಂಡ್​​ ಹಾಫ್​ ಕಥೆ ಬಗ್ಗೆ ಕೌತುಕ ಹೆಚ್ಚುವಂತೆ ಮಾಡುತ್ತದೆ.

ಇದನ್ನೂ ಓದಿ: Rashmika Mandanna: ರಶ್ಮಿಕಾ ಮಂದಣ್ಣ ಫೋಟೋ ನೋಡಿ ಫ್ಯಾನ್ಸ್ ಫಿದಾ; ಇಲ್ಲಿವೆ ಕ್ಯೂಟ್​ ಚಿತ್ರಗಳು

ಕರ್ನಾಟಕದಲ್ಲಿ ‘ಪುಷ್ಪ’ ಚಿತ್ರ ಬಹಿಷ್ಕರಿಸುವಂತೆ ಒತ್ತಾಯ; ಕಾರಣ ಏನು?