Shivaji Surathkal 2 Review: ಸಸ್ಪೆನ್ಸ್​ ದಾರಿಯಲ್ಲಿ ಸಾಗುತ್ತ ಸೆಂಟಿಮೆಂಟ್​ ಸುಳಿಗೆ ಸಿಕ್ಕ ಶಿವಾಜಿ

Ramesh Aravind: ನಟ ರಮೇಶ್​ ಅರವಿಂದ್​ ಅವರು ಮತ್ತೆ ಶಿವಾಜಿಯಾಗಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ನೋಡುಗರ ಎದುರು ಹೊಸದೊಂದು ಕುತೂಹಲ ಭರಿತ ಪ್ರಕರಣವನ್ನು ತೆರೆದಿಡುವ ‘ಶಿವಾಜಿ ಸುರತ್ಕಲ್​ 2’ ಸಿನಿಮಾ ವಿಮರ್ಶೆ ಇಲ್ಲಿದೆ..

Shivaji Surathkal 2 Review: ಸಸ್ಪೆನ್ಸ್​ ದಾರಿಯಲ್ಲಿ ಸಾಗುತ್ತ ಸೆಂಟಿಮೆಂಟ್​ ಸುಳಿಗೆ ಸಿಕ್ಕ ಶಿವಾಜಿ
ರಮೇಶ್ ಅರವಿಂದ್
Follow us
ಮದನ್​ ಕುಮಾರ್​
|

Updated on:Apr 14, 2023 | 12:04 PM

ಚಿತ್ರ: ಶಿವಾಜಿ ಸುರತ್ಕಲ್​ 2

ನಿರ್ಮಾಣ: ರೇಖಾ ಕೆ.ಎನ್​., ಅನೂಪ್​ ಗೌಡ

ನಿರ್ದೇಶನ: ಆಕಾಶ್​ ಶ್ರೀವತ್ಸ

ಇದನ್ನೂ ಓದಿ
Image
Triple Riding Movie Review: ‘ತ್ರಿಬಲ್​ ರೈಡಿಂಗ್​’ ರೇಸ್​ನಲ್ಲಿ ಓವರ್​ಟೇಕ್​ ಮಾಡಿದ ಸಾಧುಕೋಕಿಲ, ರಂಗಾಯಣ ರಘು
Image
Shubhamangala: ‘ಶುಭಮಂಗಳ’ ಸಿನಿಮಾ ವಿಮರ್ಶೆ; ಇದು ಆರು ಪ್ರೇಮಕಥೆಗಳ ಸುಂದರ ಸಂಕಲನ
Image
Kantara Review: ಹಲವು ಸಂಘರ್ಷಗಳ ‘ಕಾಂತಾರ’; ರಿಷಬ್​ ಶೆಟ್ಟಿಯ ಹೊಸ ಅವತಾರ
Image
Guru Shishyaru Review: ರೋಚಕ ಖೊಖೊ ಪಂದ್ಯದ ಜೊತೆ ಹಿತ-ಮಿತವಾದ ಕಾಮಿಡಿ

ಪಾತ್ರವರ್ಗ: ರಮೇಶ್​ ಅರವಿಂದ್​, ರಾಧಿಕಾ ನಾರಾಯಣ್​, ಪೂರ್ಣ ಮೈಸೂರು, ನಾಸರ್​, ರಘು ರಾಮನಕೊಪ್ಪ, ಮೇಘನಾ ಗಾಂವ್ಕರ್​, ಆರಾಧ್ಯಾ ಮುಂತಾದವರು.

ಸ್ಟಾರ್​: 3/5

ಆಕಾಶ್​ ಶ್ರೀವತ್ಸ ನಿರ್ದೇಶನದ ‘ಶಿವಾಜಿ ಸುರತ್ಕಲ್​’ ಸಿನಿಮಾ 2020ರ ಫೆಬ್ರವರಿಯಲ್ಲಿ ಬಿಡುಗಡೆ ಆಗಿತ್ತು. ಸಸ್ಪೆನ್ಸ್​ ಕಹಾನಿ ಹೊಂದಿದ್ದ ಆ ಚಿತ್ರಕ್ಕೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದರು. ರಮೇಶ್​ ಅರವಿಂದ್​ ಅವರ ನಟನೆಗೆ ಅಭಿಮಾನಿಗಳು ಫುಲ್​ ಮಾರ್ಕ್ಸ್​ ನೀಡಿದ್ದರು. ಬಾಕ್ಸ್​ ಆಫೀಸ್​ನಲ್ಲಿ ಆ ಸಿನಿಮಾ ಗೆದ್ದಿದ್ದರಿಂದ ನಿರ್ಮಾಪಕರು ಅದಕ್ಕೆ ಸೀಕ್ವೆಲ್​ ಘೋಷಿಸಿದರು. ಇಂದು (ಏಪ್ರಿಲ್​ 14) ‘ಶಿವಾಜಿ ಸುರತ್ಕಲ್​ 2’ ಚಿತ್ರ ಬಿಡುಗಡೆ ಆಗಿದೆ. ಇದು ಮೊದಲ ಚಿತ್ರದ ಮುಂದುವರಿದ ಕಥೆ. ಆದರೆ ಇಲ್ಲಿ ಪೊಲೀಸ್​ ಅಧಿಕಾರಿಯಾಗಿ ಶಿವಾಜಿ ಸುರತ್ಕಲ್​ ಭೇದಿಸುವ ಕೇಸ್​ ಬೇರೆ. ಒಂದಲ್ಲ ಎರಡಲ್ಲ.. ನಾಲ್ಕೈದು ಕೊಲೆಗಳ ಹಿಂದಿರುವ ರಾಕ್ಷಸನನ್ನು ಕಂಡು ಹಿಡಿಯುವ ಕಾರ್ಯದಲ್ಲಿ ಶಿವಾಜಿ ಹೇಗೆ ಯಶಸ್ವಿ ಆಗುತ್ತಾನೆ ಎಂಬುದನ್ನು ನಿರ್ದೇಶಕ ಆಕಾಶ್​ ಶ್ರೀವತ್ಸ ಅವರು ಕೌತುಕಮಯವಾಗಿ ವಿವರಿಸಿದ್ದಾರೆ.

‘ಶಿವಾಜಿ ಸುರತ್ಕಲ್​ 2’ ಚಿತ್ರದ ಟ್ರೇಲರ್​ ನೋಡಿದವರಿಗೆ ಹಲವು ಕಲ್ಪನೆಗಳು ಮೂಡಿದ್ದವು. ಕಥಾನಾಯಕನೇ ಕೊಲೆಗಾರ ಆಗಿರಬಹುದೇ ಎಂಬ ಪ್ರಶ್ನೆ ಉದ್ಘವ ಆಗಿತ್ತು. ಅದೇ ರೀತಿಯ ಫೀಲ್​ನೊಂದಿಗೆ ಈ ಸಿನಿಮಾದ ಕಥೆ ಆರಂಭ ಆಗುತ್ತದೆ. ತಾನೇ ಕೊಲೆ ಮಾಡುತ್ತಿರುವ ರೀತಿಯಲ್ಲಿ ಸ್ವತಃ ಶಿವಾಜಿಗೆ ಕನಸು ಬೀಳುತ್ತದೆ. ಪ್ರೇಕ್ಷಕರ ಗಮನವನ್ನು ಬೇರೆಡೆಗೆ ಸೆಳೆಯಲು ಈ ರೀತಿಯ ಅನೇಕ ತಂತ್ರಗಳನ್ನು ಬಳಸಿಕೊಂಡಿದ್ದಾರೆ ನಿರ್ದೇಶಕರು. ಆದರೆ ಅಸಲಿ ಕಥೆ ಬೇರೆಯೇ ಇರುತ್ತದೆ.

ಮೊದಲ ಪಾರ್ಟ್​ನಲ್ಲಿ ಪತ್ನಿಯನ್ನು ಕಳೆದುಕೊಂಡಿದ್ದ ಶಿವಾಜಿ ಎರಡನೇ ಪಾರ್ಟ್​ನಲ್ಲಿ ಆಕೆಯ ನೆನಪಿನಲ್ಲೇ ಕಳೆದುಹೋಗುತ್ತಾನೆ. ಅದೊಂದು ರೀತಿಯ ಮಾನಸಿಕ ಕಾಯಿಲೆಯಾಗಿ ಪರಿಣಮಿಸುತ್ತದೆ. ಇದನ್ನು ಕಥಾನಾಯಕನ ವೀಕ್​ನೆಸ್​ ರೀತಿ ತೋರಿಸಲಾಗಿದೆ. ಅದರ ಜೊತೆಗೆ ಮಗಳ ಪಾತ್ರದ ಎಂಟ್ರಿ ಕೂಡ ಆಗುತ್ತದೆ. ಅಲ್ಲದೇ, ತಂದೆ-ಮಗನ ಫ್ಲ್ಯಾಶ್​ಬ್ಯಾಕ್​ ಸಹ ನುಸುಳುತ್ತದೆ. ಅದರಿಂದ ಫ್ಯಾಮಿಲಿ ಸೆಂಟಿಮೆಂಟ್​ನ ಭಾರ ಸೇರಿಕೊಳ್ಳುತ್ತದೆ. ಹಾಗಾಗಿ ನೋಡುಗರಿಗೆ ಶಿವಾಜಿ ಮೇಲೆ ಒಂದು ಬಗೆಯ ಮರುಕ ಹುಟ್ಟುತ್ತದೆ. ಈ ಸೆಂಟಿಮೆಂಟ್​ನ ಸೆಳೆತಕ್ಕೆ ಸಿಕ್ಕಿಬಿಟ್ಟರೆ ಶಿವಾಜಿಯ ಸಣ್ಣಪುಟ್ಟ ಲೋಪಗಳನ್ನು ಅಡ್ಜೆಸ್ಟ್​ ಮಾಡಿಕೊಂಡು ಪ್ರೇಕ್ಷಕ ಮುಂದೆ ಸಾಗುತ್ತಾನೆ.

ಇದನ್ನೂ ಓದಿ: Hoysala Review: ಹೆಚ್ಚಿಗೆ ಸುತ್ತಾಡಿದರೂ ಮೆಚ್ಚುಗೆ ಗಳಿಸುವ ಹೊಯ್ಸಳ; ಆ್ಯಕ್ಷನ್​ ಜೊತೆ ಜಾತಿ, ಪ್ರೀತಿ, ನೀತಿ ಇತ್ಯಾದಿ..

ಪತ್ತೇದಾರಿ ಕಥೆಗಳಲ್ಲಿ ಸಾಮಾನ್ಯವಾಗಿ ಎಲ್ಲ ಪಾತ್ರಗಳ ಮೇಲೆ ಅನುಮಾನ ಮೂಡುವಂತೆ ಮಾಡಲಾಗುತ್ತದೆ. ಆ ಸೂತ್ರವನ್ನು ‘ಶಿವಾಜಿ ಸುರತ್ಕಲ್​ 2’ ಚಿತ್ರದಲ್ಲೂ ಬಳಸಿಕೊಳ್ಳಲಾಗಿದೆ. ಶಿವಾಜಿಯ ಸುತ್ತಮುತ್ತ ಇರುವ ಎಲ್ಲ ಪಾತ್ರಗಳ ಮೇಲೂ ಪ್ರೇಕ್ಷಕರಿಗೆ ಒಮ್ಮೆಯಾದರೂ ಅನುಮಾನ ಮೂಡುತ್ತದೆ. ಆದರೆ ಅಸಲಿ ಕೊಲೆಗಾರ ಯಾರು ಎಂಬುದು ತಿಳಿಯಬೇಕಾದರೆ ಕ್ಲೈಮ್ಯಾಕ್ಸ್​ ತನಕ ಕಾಯಲೇಬೇಕು.

ಶಿವಾಜಿ ಮದುವೆ ಆಗಿದ್ದು ಹೇಗೆ ಎಂಬ ಫ್ಲ್ಯಾಶ್​ ಬ್ಯಾಕ್​ ಕಹಾನಿಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಪ್ರಸ್ತುತ ಕಾಲಘಟದ ಕಥೆಯ ನಡುನಡುವೆ ಫ್ಲ್ಯಾಶ್​ಬ್ಯಾಕ್​ ದೃಶ್ಯಗಳು ಆಗಾಗ ಬರುತ್ತವೆ. ಆದಷ್ಟು ಬೇಗ ಕೊಲೆಗಾರ ಸಿಗಲಿ ಎಂದು ಕಾಯುತ್ತಿರುವ ಪ್ರೇಕ್ಷಕರಿಗೆ ಈ ಫ್ಲ್ಯಾಶ್​ಬ್ಯಾಕ್​ನಿಂದ ಸ್ವಲ್ಪ ಕಿರಿಕಿರಿ ಎನಿಸಬಹುದು. ಹಾಗಿದ್ದರೂ ಕೂಡ ಆ ದೃಶ್ಯಗಳು ಕಥೆಗೆ ಪೂರಕವಾಗಿಯೇ ಇವೆ.

ಇದನ್ನೂ ಓದಿ: Kabzaa Movie Review: 1970ರ ಕಾಲಕ್ಕೆ ಕರೆದೊಯ್ಯುವ ‘ಕಬ್ಜ’; ತೆರೆ ಹಿಂದಿನ ಹೀರೋಗಳ ಅದ್ದೂರಿ ಸಿನಿಮಾ

ಎಂದಿನಂತೆ ರಮೇಶ್​ ಅರವಿಂದ್​ ಅವರು ಲವಲವಿಕೆಯಿಂದ ನಟಿಸಿದ್ದಾರೆ. ರಾಧಿಕಾ ನಾರಾಯಣ್​ ಅವರ ಪಾತ್ರಕ್ಕೆ ಹೆಚ್ಚಿನ ಸ್ಕ್ರೀನ್​ ಸ್ಪೇಸ್​ ಸಿಕ್ಕಿಲ್ಲ. ಇರುವ ಅವಕಾಶದಲ್ಲೇ ಅವರು ಗಮನ ಸೆಳೆಯಲು ಪ್ರಯತ್ನಿಸಿ​ದ್ದಾರೆ. ಮೇಘನಾ ಗಾಂವ್ಕರ್​ ಮಾಡಿರುವ ಪಾತ್ರಕ್ಕೂ ಈ ಮಾತು ಅನ್ವಯ. ಒಂದು ಹಾಡಿಗೆ ಮಾತ್ರ ಸೀಮಿತವಾಗಿದ್ದಾರೆ ಸಂಗೀತಾ ಶೃಂಗೇರಿ. ಬಾಲ ನಟಿ ಆರಾಧ್ಯ ಮುದ್ದುಮುದ್ದಾಗಿ ಕಾಣಿಸಿಕೊಂಡಿದ್ದಾಳೆ.

ಇದನ್ನೂ ಓದಿ: 19 20 21 Movie Review: ನಾಡಿನ ಜನ ನೋಡಲೇಬೇಕಾದ ಕಾಡಿನ ಮಕ್ಕಳ ಕಥೆ ಮತ್ತು ಘನತೆ

ಜ್ಯೂಡಾ ಸ್ಯಾಂಡಿ ಅವರಿಗೆ ಸಂಗೀತದ ಮೂಲಕ ಸೆಳೆಯುವ ಅವಕಾಶ ಇತ್ತು. ಹಾಡುಗಳಲ್ಲಿ ಹಾಗೂ ಹಿನ್ನೆಲೆ ಸಂಗೀತದಲ್ಲಿ  ಅವರು ಹೊಸತನ ಪ್ರಯತ್ನಿಸಿದ್ದರೆ ಚೆನ್ನಾಗಿರುತ್ತಿತ್ತು. ನಿರ್ದೇಶಕರೇ ಸಂಕಲನದ ಜವಾಬ್ದಾರಿ ಹೊತ್ತುಕೊಂಡಿರುವುದರಿಂದ ಹೆಚ್ಚೇನೂ ಎಳೆದಾಡದೇ 2 ಗಂಟೆ 3 ನಿಮಿಷ ಅವಧಿಯಲ್ಲಿ ಕಥೆ ವಿವರಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:04 pm, Fri, 14 April 23

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ