AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧನುಶ್ ಜೊತೆ ಮದುವೆ: ಕೊನೆಗೂ ಬಾಯ್ಬಿಟ್ಟ ನಟಿ ಮೃಣಾಲ್ ಠಾಕೂರ್

Mrunal Thakur marriage: ತಮಿಳಿನ ಸ್ಟಾರ್ ನಟ ಧನುಶ್ ಜೊತೆಗೆ ನಟಿ ಮೃಣಾಲ್ ಠಾಕೂರ್ ಹೆಸರು ಇತ್ತೀಚೆಗೆ ಕೇಳಿ ಬರುತ್ತಿದೆ. ಈ ಇಬ್ಬರೂ ಫೆಬ್ರವರಿ 14 ರಂದು ಗುಟ್ಟಾಗಿ ವಿವಾಹ ಆಗಲಿದ್ದಾರೆ ಎಂಬ ಸುದ್ದಿಯೂ ಸಹ ಜೋರಾಗಿಯೇ ಹರಿದಾಡಿತ್ತು. ಈ ಬಗ್ಗೆ ನೆಟ್ಟಿಗರಂತೂ ಹಲವು ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಇದೀಗ ಸ್ವತಃ ಮೃಣಾಲ್ ಠಾಕೂರ್ ಈ ಬಗ್ಗೆ ಮಾತನಾಡಿದ್ದಾರೆ.

ಧನುಶ್ ಜೊತೆ ಮದುವೆ: ಕೊನೆಗೂ ಬಾಯ್ಬಿಟ್ಟ ನಟಿ ಮೃಣಾಲ್ ಠಾಕೂರ್
Dhanush Mrunal
ಮಂಜುನಾಥ ಸಿ.
|

Updated on:Feb 15, 2026 | 6:08 PM

Share

ಮೃಣಾಲ್ ಠಾಕೂರ್ (Mrunal Thakur), ಸ್ಟಾರ್ ಪ್ಯಾನ್ ಇಂಡಿಯಾ ನಟಿಯರಲ್ಲಿ ಒಬ್ಬರು. ಮರಾಠಿ ಮೂಲದ ಈ ನಟಿ ಮಿಂಚಿದ್ದು ಮಾತ್ರ ದಕ್ಷಿಣ ಭಾರತ ಚಿತ್ರರಂಗದಲ್ಲಿ. ಅದರಲ್ಲೂ ತೆಲುಗಿನ ‘ಸೀತಾ-ರಾಮಂ’ ಸಿನಿಮಾ ಮೃಣಾಲ್ ಠಾಕೂರ್​​ಗೆ ದಕ್ಷಿಣದಲ್ಲಿ ದೊಡ್ಡ ಅಭಿಮಾನಿ ವರ್ಗವನ್ನೇ ಸೃಷ್ಟಿಸಿ ಕೊಟ್ಟಿದೆ. ಈಗಲೂ ಸಹ ದಕ್ಷಿಣದ ಕೆಲವಾರು ಸಿನಿಮಾಗಳಲ್ಲಿ ಜೊತೆಗೆ ಕೆಲ ಬಾಲಿವುಡ್​​ ಸಿನಿಮಾಗಳಲ್ಲಿಯೂ ಮೃಣಾಲ್ ಠಾಕೂರ್ ಬ್ಯುಸಿಯಾಗಿದ್ದಾರೆ. ಆದರೆ ಇತ್ತೀಚೆಗೆ ಮೃಣಾಲ್ ಠಾಕೂರ್ ಬಗ್ಗೆ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭವಾಗಿತ್ತು. ಅದುವೇ ಸ್ಟಾರ್ ನಟ ಧನುಶ್ ಜೊತೆಗೆ ಅವರ ಮದುವೆ ಸುದ್ದಿ.

ತಮಿಳಿನ ಸ್ಟಾರ್ ನಟ ಧನುಶ್ ಜೊತೆಗೆ ಮೃಣಾಲ್ ಠಾಕೂರ್ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಇತ್ತೀಚೆಗಷ್ಟೆ ಕಾಳ್ಗಿಚ್ಚಿನಂತೆ ಹಬ್ಬಿತ್ತು. ಧನುಶ್ ಅವರ 22 ವರ್ಷಗಳ ದಾಂಪತ್ಯ ಇತ್ತೀಚೆಗಷ್ಟೆ ಅಂತ್ಯವಾಗಿದ್ದು, ಪತ್ನಿ ಸೌಂದರ್ಯ ಅವರಿಂದ ವಿಚ್ಛೇದನ ಪಡೆದಿದ್ದಾರೆ. ರಜನೀಕಾಂತ್ ಪುತ್ರಿ ಸೌಂದರ್ಯ ಅವರನ್ನು ಧನುಶ್ 2004 ರಲ್ಲಿ ವಿವಾಹವಾಗಿದ್ದರು. ಅವರಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಆದರೆ ಈ ಜೋಡಿ ಇತ್ತೀಚೆಗಷ್ಟೆ ವಿಚ್ಛೇದನ ಪಡೆದುಕೊಂಡಿದೆ.

ವಿಚ್ಛೇದನ ಪಡೆದುಕೊಂಡ ಬೆನ್ನಲ್ಲೆ ಧನುಶ್ ಹೆಸರು ಮೃಣಾಲ್ ಠಾಕೂರ್ ಜೊತೆಗೆ ಕೇಳಿ ಬಂದಿತ್ತು. ಈ ಇಬ್ಬರ ಕೆಲವು ಚಿತ್ರಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಈ ಜೋಡಿ ಫೆಬ್ರವರಿ 14 ರಂದು ವಿವಾಹವಾಗಲಿದ್ದಾರೆ ಎಂಬ ಸುದ್ದಿಯೂ ಸಹ ಜೋರಾಗಿಯೇ ಹರಿದಾಡಿತ್ತು. ಆದರೆ ಮೃಣಾಲ್ ಆಗಲಿ, ಧನುಶ್ ಆಗಲಿ ಈ ಬಗ್ಗೆ ಮಾತನಾಡಿರಲಿಲ್ಲ. ಇತ್ತೀಚೆಗೆ ನಟಿ ಮೃಣಾಲ್ ಅವರಿಗೆ ಧನುಶ್ ಅವರ ಬಗ್ಗೆ ಪರೋಕ್ಷವಾಗಿ ಪ್ರಶ್ನೆಗಳನ್ನು ಕೇಳಲಾಗಿತ್ತು ಆದರೆ ಅದಕ್ಕೂ ಸಹ ಅವರು ನಗುತ್ತಲೇ ಉತ್ತರಿಸಿದ್ದರು. ಅದು ಮೃಣಾಲ್ ಹಾಗೂ ಧನುಶ್ ಅವರ ಸಂಬಂಧದ ಸುದ್ದಿಗೆ ಇನ್ನಷ್ಟು ತುಪ್ಪ ಸುರಿದಿತ್ತು.

ಇದನ್ನೂ ಓದಿ:‘ನನ್ನ ಮದುವೆ ಏಪ್ರಿಲ್ 1ಕ್ಕೆ’; ದಿನಾಂಕ ರಿವೀಲ್ ಮಾಡಿದ ಮೃಣಾಲ್ ಠಾಕೂರ್

ಆದರೆ ಇದೀಗ ಮೃಣಾಲ್ ಠಾಕೂರ್ ಪರೋಕ್ಷವಾಗಿ ಮದುವೆ ಸುದ್ದಿಯನ್ನು ನಕಾರಿಸಿದ್ದಾರೆ. ಮೃಣಾಲ್ ಅವರ ಹೊಸ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಅವರನ್ನು ಮದುವೆ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಮದುವೆಗೆ ಎಸ್ ಎಂದಿರುವ ನಟಿ ಮೃಣಾಲ್, ಖಂಡಿತ ಮದುವೆ ಆಗುವ ಆಸೆ, ಯೋಜನೆ ಇದೆ. ಆದರೆ ಅದಕ್ಕೆ ಸರಿಯಾದ ಸಮಯ ಕೂಡಿಬರಬೇಕು ಅದಕ್ಕಿಂತಲೂ ಮುಖ್ಯವಾಗಿ ಸರಿಯಾದ ವ್ಯಕ್ತಿಯೊಬ್ಬ ನನ್ನ ಜೀವನಕ್ಕೆ ಬಂದಾಗ ಮಾತ್ರ ಅದು ಸಾಧ್ಯ ಎಂದಿದ್ದಾರೆ. ಆ ಮೂಲಕ ಇನ್ನೂ ಯಾವ ಸರಿಯಾದ ವ್ಯಕ್ತಿಯೂ ತಮ್ಮ ಜೀವನಕ್ಕೆ ಬಂದಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:07 pm, Sun, 15 February 26

ಕರಾವಳಿ ಯುವತಿಯರೇ ಟಾರ್ಗೆಟ್: ಇದು ಮಂಗಳೂರು ಮನ್ಮಥನ ಭಯಾನಕ ಸ್ಟೋರಿ
ಕರಾವಳಿ ಯುವತಿಯರೇ ಟಾರ್ಗೆಟ್: ಇದು ಮಂಗಳೂರು ಮನ್ಮಥನ ಭಯಾನಕ ಸ್ಟೋರಿ
ಮಹಾಶಿವರಾತ್ರಿ ಸಂಭ್ರಮದ ಮಧ್ಯೆ ಶಿವಲಿಂಗ ಮೂರ್ತಿ ಭಗ್ನ: ರೊಚ್ಚಿಗೆದ್ದ ಜನ
ಮಹಾಶಿವರಾತ್ರಿ ಸಂಭ್ರಮದ ಮಧ್ಯೆ ಶಿವಲಿಂಗ ಮೂರ್ತಿ ಭಗ್ನ: ರೊಚ್ಚಿಗೆದ್ದ ಜನ
ದೇವದತ್ ಪಡಿಕ್ಕಲ್ ಶತಕ; ಬಲಿಷ್ಠ ಸ್ಥಿತಿಯಲ್ಲಿ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಬಲಿಷ್ಠ ಸ್ಥಿತಿಯಲ್ಲಿ ಕರ್ನಾಟಕ
ರಣಜಿ ಟ್ರೋಫಿ ಸೆಮಿಫೈನಲ್; ಸತತ 2ನೇ ಶತಕ ಸಿಡಿಸಿದ ರಾಹುಲ್
ರಣಜಿ ಟ್ರೋಫಿ ಸೆಮಿಫೈನಲ್; ಸತತ 2ನೇ ಶತಕ ಸಿಡಿಸಿದ ರಾಹುಲ್
ಗಂಡನ ಸ್ನೇಹಿತನ ಮನೇಲಿ ಸಿಕ್ಕಿಬಿದ್ದ ಆಂಟಿ: ಶಾಕಿಂಗ್ ಕಾರಣ ಬಿಚ್ಚಿಟ್ಟ SP
ಗಂಡನ ಸ್ನೇಹಿತನ ಮನೇಲಿ ಸಿಕ್ಕಿಬಿದ್ದ ಆಂಟಿ: ಶಾಕಿಂಗ್ ಕಾರಣ ಬಿಚ್ಚಿಟ್ಟ SP
ಏಕಪತ್ನಿ ವ್ರತಸ್ಥನಂತೆ ಪೋಸ್​​ ಕೊಟ್ಟವ ಸಿಕ್ಕಿಬಿದ್ದಿದ್ದು ಮತ್ತೊಬ್ಬಳ ಜೊತೆ
ಏಕಪತ್ನಿ ವ್ರತಸ್ಥನಂತೆ ಪೋಸ್​​ ಕೊಟ್ಟವ ಸಿಕ್ಕಿಬಿದ್ದಿದ್ದು ಮತ್ತೊಬ್ಬಳ ಜೊತೆ
ಮೀನ ರಾಶಿಯವರ ಮೇಲೆ ವರ್ಷದ ಮೊದಲ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮೀನ ರಾಶಿಯವರ ಮೇಲೆ ವರ್ಷದ ಮೊದಲ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಕುಂಭ ರಾಶಿಯ ಮೇಲೆ ಹೇಗಿರಲಿದೆ?
ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಕುಂಭ ರಾಶಿಯ ಮೇಲೆ ಹೇಗಿರಲಿದೆ?
ಮಕರ ರಾಶಿಯ ಮೇಲೆ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಕರ ರಾಶಿಯ ಮೇಲೆ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಪಾಕ್ ಸೇನಾ ಮುಖ್ಯಸ್ಥರ ಬಳಿ ಐಡಿ ಕೇಳಿದ ಮ್ಯೂನಿಕ್ ಭದ್ರತಾ ಸಿಬ್ಬಂದಿ
ಪಾಕ್ ಸೇನಾ ಮುಖ್ಯಸ್ಥರ ಬಳಿ ಐಡಿ ಕೇಳಿದ ಮ್ಯೂನಿಕ್ ಭದ್ರತಾ ಸಿಬ್ಬಂದಿ