ಹಿಂದಿ ಬಿಗ್ ಬಾಸ್ ವಿನ್ ಆದ ಮುನಾವರ್; ಸಲ್ಮಾನ್ ಖಾನ್​ನ ಟ್ರೋಲ್ ಮಾಡಿಯೂ ಗೆದ್ದ ಕಾಮಿಡಿಯನ್

ನಟ, ಬಿಗ್ ಬಾಸ್ ನಿರೂಪಕ ಸಲ್ಮಾನ್ ಖಾನ್ ಅಕ್ಕ-ಪಕ್ಕದಲ್ಲಿ ಅಭಿಷೇಕ್ ಕುಮಾರ್ ಹಾಗೂ ಮುನಾವರ್ ನಿಂತಿದ್ದರು. ಸಲ್ಮಾನ್ ಖಾನ್ ಅವರು ಮುನಾವರ್​​ ಕೈ ಎತ್ತಿದರು. ಈ ಮೂಲಕ ಅವರನ್ನು ವಿನ್ನರ್ ಎಂದು ಘೋಷಣೆ ಮಾಡಿದರು.

ಹಿಂದಿ ಬಿಗ್ ಬಾಸ್ ವಿನ್ ಆದ ಮುನಾವರ್; ಸಲ್ಮಾನ್ ಖಾನ್​ನ ಟ್ರೋಲ್ ಮಾಡಿಯೂ ಗೆದ್ದ ಕಾಮಿಡಿಯನ್
ಮುನಾವರ್
Edited By:

Updated on: Jan 29, 2024 | 6:57 AM

‘ಬಿಗ್ ಬಾಸ್ ಕನ್ನಡ ಸೀಸನ್ 10’ರ (BBK 10) ವಿನ್ನರ್ ಆಗಿ ಕಾರ್ತಿಕ್ ಮಹೇಶ್ (Karthik Mahesh) ಹೊರಹೊಮ್ಮಿದ್ದಾರೆ. ಇದರ ಜೊತೆ ಹಿಂದಿಯಲ್ಲೂ ಬಿಗ್ ಬಾಸ್ ಫಿನಾಲೆ ನಡೆದಿದೆ. ಸ್ಟ್ಯಾಂಡಪ್​ ಕಾಮಿಡಿಯನ್ ಮುನಾವರ್ ಫಾರುಕಿ ಅವರು ‘ಬಿಗ್ ಬಾಸ್ ಹಿಂದಿ ಸೀಸನ್ 17’ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ. ಅವರಿಗೆ 50 ಲಕ್ಷ ರೂಪಾಯಿ ಪ್ರೈಜ್ ಹಣ ಸಿಕ್ಕಿದೆ. ಇದರ ಜೊತೆ ಒಂದಷ್ಟು ಉಡುಗೊರೆಗಳು ಕೂಡ ಅವರಿಗೆ ಸಿಕ್ಕಿವೆ.

ಮುನಾವರ್ ಅವರು ಸಾಕಷ್ಟು ಸ್ಟ್ಯಾಂಡಪ್​ ಕಾಮಿಡಿ ಶೋಗಳನ್ನು ಮಾಡಿದ್ದಾರೆ. ‘ಲಾಕಪ್​’ ಶೋನಲ್ಲೂ ಅವರು ಭಾಗಿ ಆಗಿದ್ದರು. ಈಗ ಅವರು ಬಿಗ್ ಬಾಸ್​ಗೆ ಬಂದು ವಿನ್ ಆಗಿದ್ದಾರೆ. ಮುನಾವರ್ ಅವರು ಸಾಕಷ್ಟು ಮನರಂಜನೆ ನೀಡಿದ್ದಾರೆ. ಶಾಯರಿಗಳನ್ನು ಬರೆದು ಗಮನ ಸೆಳೆದಿದ್ದಾರೆ. ಸಹ ಸ್ಪರ್ಧಿಗಳನ್ನೇ ಟ್ರೋಲ್ ಮಾಡಿದ್ದಾರೆ. ಈ ಕಾರಣಕ್ಕೆ ಮುನಾವರ್ ಅನೇಕರಿಗೆ ಇಷ್ಟ ಆದರು.

ಬಿಗ್ ಬಾಸ್ ನಿರೂಪಕ ಸಲ್ಮಾನ್ ಖಾನ್ ಅಕ್ಕ-ಪಕ್ಕದಲ್ಲಿ ಮುನಾವರ್ ಹಾಗೂ ಅಭಿಷೇಕ್ ಕುಮಾರ್ ನಿಂತಿದ್ದರು. ಸಲ್ಮಾನ್ ಖಾನ್ ಅವರು ಮುನಾವರ್​​ ಕೈ ಎತ್ತಿದರು. ಈ ಮೂಲಕ ಅವರನ್ನು ವಿನ್ನರ್ ಎಂದು ಘೋಷಿಸಿದರು. ಈ ಮೊದಲು ಸಲ್ಮಾನ್ ಖಾನ್ ಅವರನ್ನು ಮುನಾವರ್ ಟ್ರೋಲ್ ಮಾಡಿದ್ದರು. ಈ ಬಗ್ಗೆ ಸಲ್ಮಾನ್ ಖಾನ್ ಕ್ಲಾಸ್ ತೆಗೆದುಕೊಂಡಿದ್ದರು. ಈಗ ಮುನಾವರ್ ಅವರೇ ಗೆಲುವು ಕಂಡಿದ್ದಾರೆ. ಅವರಿಗೆ ಹುಂಡೈ ಕ್ರೆಟಾ ಕಾರು ಕೂಡ ಉಡುಗೊರೆಯಾಗಿ ಸಿಕ್ಕಿದೆ.

ಟಾಪ್ ಐದರಲ್ಲಿ ಮುನಾವರ್, ಅಭಿಷೇಕ್, ಮನಾರಾ ಚೋಪ್ರಾ, ಅಂಕಿತಾ ಲೋಖಂಡೆ ಹಾಗೂ ಅರುಣ್ ಮಾಶೆಟ್ಟಿ ಇದ್ದರು. ಇವರೆಲ್ಲರನ್ನೂ ಹಿಂದಿಕ್ಕಿ ಮುನಾವರ್ ಅವರು ಕಪ್ ಎತ್ತಿದ್ದಾರೆ. ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ಈ ಗೆಲುವಿನಿಂದ ಮುನಾವರ್ ಅವರ ಜನಪ್ರಿಯತೆ ಹೆಚ್ಚಿದೆ.

ಇದನ್ನೂ ಓದಿ: ಬಿಗ್​ಬಾಸ್ ಕನ್ನಡ ಸೀಸನ್ 10 ಗೆದ್ದ ಕಾರ್ತಿಕ್ ಮಹೇಶ್, ಡ್ರೋನ್ ಪ್ರತಾಪ್​ ರನ್ನರ್ ಅಪ್

ಸ್ಟ್ಯಾಂಡಪ್ ಕಾಮಿಡಿ ಮಾಡುವಾಗ ಮುನಾವರ್ ಅವರು ಸಲ್ಮಾನ್ ಖಾನ್ ಅವರನ್ನು ಟ್ರೋಲ್ ಮಾಡಿದ್ದರು. ಇದನ್ನು ಸಲ್ಲು ಅವರು ನೆನಪಿನಲ್ಲಿ ಇಟ್ಟುಕೊಂಡಿದ್ದರು. ಒಂದು ಎಪಿಸೋಡ್​ನಲ್ಲಿ ಈ ಬಗ್ಗೆ ಚರ್ಚೆ ಕೂಡ ಮಾಡಿದ್ದರು. ಈಗ ಸಲ್ಲು ಬಳಿಯೇ ಅವರು ಕಪ್ ಪಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

TV9 Web

TV9 Kannada

Read More
Follow Us