ಸಮಂತಾ ಹೆಸರು ಹಾಳುಮಾಡಲು ಇಷ್ಟೊಂದು ಕೀಳುಮಟ್ಟಕ್ಕೆ ಇಳಿದರಾ ನಾಗ ಚೈತನ್ಯ ಫ್ಯಾನ್ಸ್?
ಸಮಂತಾ ಅವರು ಈಗಾಗಲೇ ಸಾಕಷ್ಟು ನೋವು ತಿಂದಿದ್ದಾರೆ. ಈ ಸಂದರ್ಭದಲ್ಲಿ ರಾಜ್ ಅವರು ಬೆಂಬಲಕ್ಕೆ ನಿಂತರು ಎನ್ನಲಾಗಿದೆ. ನಿಜಕ್ಕೂ ರಾಜ್ ಹಾಗೂ ಸಮಂತಾ ಡೇಟಿಂಗ್ ಮಾಡುತ್ತಿದ್ದಾರಾ? ಇವರ ವಿವಾಹ ನೆರವೇರಲಿದೆಯೇ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.
ನಟಿ ಸಮಂತಾ ಅವರ ಬಾಳಲ್ಲಿ ನಡೆದ ಘಟನೆಗಳ ಬಗ್ಗೆ ಮತ್ತೆ ಹೊಸದಾಗಿ ಹೇಳಬೇಕಿಲ್ಲ. ಅವರು ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದರು. ಶಾಕಿಂಗ್ ವಿಚಾರ ಎಂದರೆ ನಾಗ ಚೈತನ್ಯ ಅವರು ಇತ್ತೀಚೆಗೆ ನಟಿ ಶೋಭಿತಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳಿಂದ ಸಮಂತಾ ನೋವಿಗೆ ಒಳಗಾಗಿದ್ದಾರೆ. ಅವರು ಕೂಡ ಈಗ ಡೇಟಿಂಗ್ ಶುರುಹಚ್ಚಿಕೊಂಡಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಆದರೆ, ಇದು ಸಮಂತಾ ಹೆಸರು ಹಾಳು ಮಾಡಲು ನಾಗ ಚೈತನ್ಯ ಫ್ಯಾನ್ಸ್ ಮಾಡಿದ ಪ್ರಯತ್ನ ಎಂಬುದು ಕೆಲವರ ಅಭಿಪ್ರಾಯ.
ಕೆಲವು ವರದಿಗಳ ಪ್ರಕಾರ ಖ್ಯಾತ ನಿರ್ದೇಶಕ ರಾಜ್ ನಿಡಿಮೋರು ಜೊತೆ ಸಮಂತಾ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿ ಆಗಿದೆ. ‘ದಿ ಫ್ಯಾಮಿಲಿ ಮ್ಯಾನ್ 2’ ಸೀರಿಸ್ನ ರಾಜ್ ಹಾಗೂ ಡಿಕೆ ಒಟ್ಟಾಗಿ ನಿರ್ದೇಶನ ಮಾಡಿದ್ದರು. ರಿಲೀಸ್ಗೆ ರೆಡಿ ಇರುವ ‘ಸಿಟಾಡೆಲ್ ಹನಿ ಬನಿ’ ವೆಬ್ ಸೀರಿಸ್ ಕೂಡ ರಾಜ್ ಹಾಗೂ ಡಿಕೆ ಸಾರಥ್ಯದಲ್ಲಿ ಬರುತ್ತಿದ್ದು, ಸಮಂತಾ ಇದರಲ್ಲಿ ನಟಿಸಿದ್ದಾರೆ.
ಸಮಂತಾ ಅವರು ಈಗಾಗಲೇ ಸಾಕಷ್ಟು ನೋವು ತಿಂದಿದ್ದಾರೆ. ಈ ಸಂದರ್ಭದಲ್ಲಿ ರಾಜ್ ಅವರು ಬೆಂಬಲಕ್ಕೆ ನಿಂತರು ಎನ್ನಲಾಗಿದೆ. ನಿಜಕ್ಕೂ ರಾಜ್ ಹಾಗೂ ಸಮಂತಾ ಡೇಟಿಂಗ್ ಮಾಡುತ್ತಿದ್ದಾರಾ? ಇವರ ವಿವಾಹ ನೆರವೇರಲಿದೆಯೇ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಈ ಬಗ್ಗೆ ಅವರ ಕಡೆಯಿಂದ ಸ್ಪಷ್ಟನೆ ಸಿಗಬೇಕಿದೆ.
ಸಮಂತಾ ಹಾಗೂ ರಾಜ್ ಎರಡನೇ ವೆಬ್ ಸೀರಿಸ್ಗಾಗಿ ಒಂದಾಗಿದ್ದಾರೆ. ಪದೇ ಪದೇ ಒಂದೇ ನಿರ್ದೇಶಕನ ಜೊತೆ ಸಮಂತಾ ಕಾಣಿಸಿಕೊಂಡಿರೋದು ಸಹಜವಾಗಿಯೇ ಕೆಲವರಿಗೆ ಕುತೂಹಲ ಮೂಡಿಸಿದೆ. ಇದು ಸಮಂತಾ ಹೆಸರನ್ನು ಹಾಳು ಮಾಡಲು ನಾಗ ಚೈತನ್ಯ ಫ್ಯಾನ್ಸ್ ಮಾಡಿದ ಪ್ರಯತ್ನವೂ ಇರಬಹುದು ಎಂಬುದು ಕೆಲವು ಅಭಿಮಾನಿಗಳ ಅಭಿಪ್ರಾಯ.
ಇದನ್ನೂ ಓದಿ: ಮತ್ತೆ ಮದುವೆ ಆಗಲಿದ್ದಾರೆ ಸಮಂತಾ? ವಿವಾಹ ಕೋರಿಕೆ ಒಪ್ಪಿದ್ರಾ ನಟಿ?
ರಾಜ್ ಅವರು ಈಗಾಗಲೇ ಶ್ಯಾಮಲಿ ಡೆ ಅವರನ್ನು ಮದುವೆ ಆಗಿದ್ದಾರೆ. ಹೀಗಿರುವಾಗ ಸಮಂತಾ ಜೊತೆ ಅವರು ಡೇಟಿಂಗ್ ಮಾಡಲು ಹೇಗೆ ಸಾಧ್ಯ ಎಂಬುದು ಕೆಲವರ ಅಭಿಪ್ರಾಯ. ರಾಜ್ ಹಾಗೂ ಡಿಕೆ ಮಧ್ಯೆ ಒಳ್ಳೆಯ ಗೆಳೆತನ ಇದೆ. ಇಬ್ಬರೂ ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ. ಯಾವುದೇ ಸಿನಿಮಾ ಅಥವಾ ಸಿರೀಸ್ ಮಾಡಿದರೂ ಒಟ್ಟಾಗಿಯೇ ನಿರ್ದೇಶನ ಮಾಡುತ್ತಾರೆ. ಸದ್ಯ ಇವರು ಸಖತ್ ಟ್ರೆಂಡ್ನಲ್ಲಿ ಇರೋ ನಿರ್ದೇಶಕರಲ್ಲಿ ಒಬ್ಬರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.