AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಾರ್ಮ್​ಹೌಸ್​ನಲ್ಲಿ ಅಕ್ರಮ ಚಟುವಟಿಕೆ; ಸ್ಟಾರ್​ ನಟನ ತಂದೆ ಅರೆಸ್ಟ್

ಪ್ರಕರಣದ ಪ್ರಮುಖ ಆರೋಪಿಯಾಗಿರುವ ಗುಥಾ ಸುಮನ್​ ಅವರನ್ನು 10 ದಿನಗಳ ಹಿಂದೆ ಬಂಧಿಸಲಾಗಿತ್ತು. ಅವರನ್ನು ನಿರಂತರವಾಗಿ ವಿಚಾರಣೆ ನಡೆಸಲಾಗಿತ್ತು. ಪ್ರಾಥಮಿಕ ಮಾಹಿತಿ ಪ್ರಕಾರ ಸುಮನ್​ ಹಾಗೂ ಶಿವಲಿಂಗ್ ನಡುವೆ ಪರಸ್ಪರ ಪರಿಚಯ ಇತ್ತು.

ಫಾರ್ಮ್​ಹೌಸ್​ನಲ್ಲಿ ಅಕ್ರಮ ಚಟುವಟಿಕೆ; ಸ್ಟಾರ್​ ನಟನ ತಂದೆ ಅರೆಸ್ಟ್
ತಂದೆ ಜತೆ ನಾಗ ಶೌರ್ಯ
TV9 Web
| Edited By: |

Updated on: Nov 10, 2021 | 8:11 PM

Share

ಹತ್ತು ದಿನಗಳ ಹಿಂದೆ ಹೈದರಾಬಾದ್​ನ (Hyderabad City) ಹೊರ ವಲಯದಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿರುವ ಬಗ್ಗೆ ವರದಿ ಆಗಿತ್ತು. ಪೊಲೀಸರು (Hyderabad Police) ಸ್ಥಳಕ್ಕೆ ತೆರಳಿ ಕೆಲವರನ್ನು ಅರೆಸ್ಟ್​ ಮಾಡಿದ್ದರು. ಈ ಪ್ರಕರಣದ ತನಿಖೆ ನಡೆಸಿದಾಗ ಈ ಫಾರ್ಮ್​ ಹೌಸ್​ ತೆಲುಗು ನಟ ನಾಗ ಶೌರ್ಯ (Naga Shaurya) ತಂದೆ ಶಿವಲಿಂಗ ಪ್ರಸಾದ್​ಗೆ ಸೇರಿದ್ದು ಎಂಬುದು ತಿಳಿದು ಬಂದಿದೆ. ಈ ಪ್ರಕರಣದಲ್ಲಿ ಶಿವಲಿಂಗ​ ಪಾತ್ರ ಕೂಡ ಇರುವ ಬಗ್ಗೆ ಅನುಮಾನ ಬಂದ ನಂತರದಲ್ಲಿ ಅವರನ್ನು ಕರೆಸಿ ಪೊಲೀಸರು ವಿಚಾರಣೆಗೆ ನಡೆಸಿದ್ದರು. ಪ್ರಾಥಮಿಕ ಮಾಹಿತಿ ಪ್ರಕಾರ ಶಿವಲಿಂಗ ಅವರು ಕೂಡ ಇದರಲ್ಲಿ ಭಾಗಿಯಾಗಿರೋದು ತಿಳಿದು ಬಂದಿದೆ. ಹೀಗಾಗಿ, ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿಯಾಗಿರುವ ಗುಥಾ ಸುಮನ್​ ಅವರನ್ನು 10 ದಿನಗಳ ಹಿಂದೆ ಬಂಧಿಸಲಾಗಿತ್ತು. ಅವರನ್ನು ನಿರಂತರವಾಗಿ ವಿಚಾರಣೆ ನಡೆಸಲಾಗಿತ್ತು. ಪ್ರಾಥಮಿಕ ಮಾಹಿತಿ ಪ್ರಕಾರ ಸುಮನ್​ ಹಾಗೂ ಶಿವಲಿಂಗ್ ನಡುವೆ ಪರಸ್ಪರ ಪರಿಚಯ ಇತ್ತು. ಇಬ್ಬರೂ ಫಾರ್ಮ್​ಹೌಸ್​ನಲ್ಲಿ ಪೋಕರ್​ ಗೇಮ್​ ನಡೆಸುತ್ತಿದ್ದರು. ಹೀಗಾಗಿ, ಶಿವಲಿಂಗ ​ ಪ್ರಸಾದ್​ ಅವರನ್ನು ಬಂಧಿಸಿ, ಸ್ಥಳೀಯ ಕೋರ್ಟ್​ ಎದುರು ಹಾಜರುಪಡಿಸಲಾಗಿದೆ. ಶಿವಲಿಂಗ ಪ್ರಸಾದ್​ ಅವರು ಜಾಮೀನಿಗೆ ಕೋರಿದ್ದಾರೆ. ಶೀಘ್ರದಲ್ಲೇ ಅರ್ಜಿ ವಿಚಾರಣೆಗೆ ಬರಲಿದೆ ಎನ್ನಲಾಗಿದೆ. ನಾಗ ಶೌರ್ಯ ಅವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ತಂದೆ ಬಂಧನದ ಬಗ್ಗೆ ಅವರು ತುಂಬಾನೇ ಅಪ್ಸೆಟ್​ ಆಗಿದ್ದಾರೆ. ತಂದೆಗೆ ಜಾಮೀನು ಕೊಡಿಸೋಕೆ ಅವರು ಸಾಕಷ್ಟು ಪ್ರಯತ್ನಪಡುತ್ತಿದ್ದಾರೆ.

‘ಕ್ರಿಕೆಟ್​ ಗರ್ಲ್ಸ್​ ಆ್ಯಂಡ್​ ಬೀರ್​’ ಚಿತ್ರದ ಮೂಲಕ ನಾಗ ಶೌರ್ಯ ಅವರು ಚಿತ್ರರಂಗಕ್ಕೆ ಕಾಲಿಟ್ಟರು. 2011ರಲ್ಲಿ ಈ ಸಿನಿಮಾ ತೆರೆಗೆ ಬಂದಿತ್ತು. ನಂತರ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ಸದ್ಯ ಅವರ ಕೈಯಲ್ಲಿ ಐದು ಪ್ರಾಜೆಕ್ಟ್​ಗಳಿವೆ. ಕೊವಿಡ್ ಕಾರಣದಿಂದ ಸಿನಿಮಾ ರಿಲೀಸ್​ ವಿಳಂಬವಾಗುತ್ತಿದೆ. ಈ ವರ್ಷ ಅವರ ನಟನೆಯ ಒಂದು ಚಿತ್ರ ಮಾತ್ರ ತೆರೆಗೆ ಬಂದಿದೆ.

ಇದನ್ನೂ ಓದಿ: ‘ಫಸ್ಟ್​ ನೈಟ್​ನಲ್ಲಿ ಎಲ್ಲರೂ ಏನ್​ ಮಾಡ್ತಾರೋ ನಾವು ಅದನ್ನೇ ಮಾಡಿದ್ದು’; ರಚಿತಾ ರಾಮ್​

ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?