Natu Natu Song: ಯುದ್ಧ ಶುರು ಆಗೋದಕ್ಕೂ ಮುನ್ನ ಉಕ್ರೇನ್​ನಲ್ಲಿ ‘ನಾಟು ನಾಟು..’ ಸಾಂಗ್​ ಶೂಟಿಂಗ್​ ಮಾಡಿದ್ದ ರಾಜಮೌಳಿ

| Updated By: ಮದನ್​ ಕುಮಾರ್​

Updated on: Jan 11, 2023 | 4:23 PM

Natu Natu | Golden Globe Awards: ಉಕ್ರೇನ್​ನಲ್ಲಿ ಶೂಟಿಂಗ್​ ಮಾಡಿದ ಘಟನೆಯನ್ನು ರಾಮ್​ ಚರಣ್​ ಪತ್ನಿ ಉಪಾಸನಾ ಅವರು ನೆನಪಿಸಿಕೊಂಡಿದ್ದಾರೆ. ಈಗ ‘ಗೋಲ್ಡನ್​ ಗ್ಲೋಬ್​’ ಪ್ರಶಸ್ತಿ ಪಡೆದ ಖುಷಿಯಲ್ಲಿ ಇಡೀ ತಂಡ ತೇಲುತ್ತಿದೆ.

Natu Natu Song: ಯುದ್ಧ ಶುರು ಆಗೋದಕ್ಕೂ ಮುನ್ನ ಉಕ್ರೇನ್​ನಲ್ಲಿ ‘ನಾಟು ನಾಟು..’ ಸಾಂಗ್​ ಶೂಟಿಂಗ್​ ಮಾಡಿದ್ದ ರಾಜಮೌಳಿ
‘ನಾಟು ನಾಟು’ ಹಾಡಿನಲ್ಲಿ ಜೂನಿಯರ್​ ಎನ್​ಟಿಆರ್​ ಮತ್ತು ರಾಮ್​ ಚರಣ್​
Follow us on

ಭಾರತೀಯ ಚಿತ್ರರಂಗಕ್ಕೆ ‘ಆರ್​ಆರ್​ಆರ್​’ ಸಿನಿಮಾದಿಂದ ಹೆಮ್ಮೆ ಮೂಡುವಂತಾಗಿದೆ. ಈ ಸಿನಿಮಾದ ‘ನಾಟು ನಾಟು..’ (Natu Natu Song) ಹಾಡಿಗೆ ಪ್ರತಿಷ್ಠಿತ ಗೋಲ್ಡನ್​ ಗ್ಲೋಬ್​ ಪ್ರಶಸ್ತಿ (Golden Globe Awards) ಸಿಕ್ಕಿದೆ. ಲಾಸ್​ ಏಂಜಲಿಸ್​ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ. ಅವರಿಗೆ ಇಡೀ ತಂಡ ಸಾಥ್​ ನೀಡಿದೆ. ನಿರ್ದೇಶಕ ಎಸ್​ಎಸ್​ ರಾಜಮೌಳಿ, ನಟರಾದ ರಾಮ್​ ಚರಣ್​, ಜೂನಿಯರ್​ ಎನ್​ಟಿಆರ್​, ರಾಮ್​ ಚರಣ್​ ಪತ್ನಿ ಉಪಾಸನಾ ಸೇರಿದಂತೆ ಅನೇಕರು ಈ ಸಂಭ್ರಮಕ್ಕೆ ಸಾಕ್ಷಿ ಆಗಿದ್ದಾರೆ. ಈಗ ಎಲ್ಲರೂ ‘ನಾಟು ನಾಟು..’ ಹಾಡಿನ ಬಗ್ಗೆಯೇ ಮಾತನಾಡುತ್ತಿದ್ದಾರೆ. ಅಚ್ಚರಿ ಎಂದರೆ ಈ ಹಾಡಿನ ಶೂಟಿಂಗ್ ಆಗಿದ್ದು ಉಕ್ರೇನ್​ನಲ್ಲಿ. ರಷ್ಯಾ-ಉಕ್ರೇನ್​ (Ukraine) ಯುದ್ಧ ಶುರು ಆಗುವುದಕ್ಕೂ ಮುನ್ನ ‘ಆರ್​ಆರ್​ಆರ್​’ ಚಿತ್ರತಂಡ ಅಲ್ಲಿ ಹಾಡಿನ ಚಿತ್ರೀಕರಣ ಮಾಡಿತ್ತು.

ಉಕ್ರೇನ್​-ರಷ್ಯಾ ಯುದ್ಧ ಶುರುವಾದ ನಂತರ ಅಲ್ಲಿನ ವಾತಾವರಣ ತುಂಬ ಭೀಕರವಾಯಿತು. ಜನರು ಪ್ರಾಣ ಉಳಿಸಿಕೊಳ್ಳಲು ಸಖತ್​ ಕಷ್ಟಪಟ್ಟರು. ಉಕ್ರೇನ್​ನ ಬೃಹತ್​ ಕಟ್ಟಡಗಳ ಮೇಲೆ ಬಾಂಬ್​ ದಾಳಿ ಮಾಡಲಾಯಿತು. ನಗರಗಳು ನೆಲಸಮವಾದವು. ಅಂಥ ಪರಿಸ್ಥಿತಿ ನಿರ್ಮಾಣ ಆಗುವುದಕ್ಕೂ ಮುನ್ನ ‘ಆರ್​ಆರ್​ಆರ್​’ ಚಿತ್ರತಂಡ ಅಲ್ಲಿ ಶೂಟಿಂಗ್​ ಮಾಡಿತ್ತು.
ಉಕ್ರೇನ್​ನಲ್ಲಿ ಶೂಟಿಂಗ್​ ಮಾಡಿದ ಘಟನೆಯನ್ನು ರಾಮ್​ ಚರಣ್​ ಪತ್ನಿ ಉಪಾಸನಾ ಅವರು ನೆನಪಿಸಿಕೊಂಡಿದ್ದಾರೆ. ಈಗ ‘ಗೋಲ್ಡನ್​ ಗ್ಲೋಬ್​’ ಪ್ರಶಸ್ತಿ ಪಡೆದ ಖುಷಿಯಲ್ಲಿ ಇಡೀ ತಂಡ ತೇಲುತ್ತಿದೆ. ಎಂಎಂ ಕೀರವಾಣಿ ಹಾಗೂ ‘ಆರ್​ಆರ್​ಆರ್​’ ಟೀಮ್​ಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ: MM Keeravani: ಕನ್ನಡದ ಚಿತ್ರಗಳಿಗೂ ಸಂಗೀತ ನೀಡಿರುವ ಗೋಲ್ಡನ್​ ಗ್ಲೋಬ್​ ವಿನ್ನರ್​ ಎಂಎಂ ಕೀರವಾಣಿ ಸಂಭಾವನೆ ಬಹುಕೋಟಿ

ಇದನ್ನೂ ಓದಿ
MM Keeravani: ಕನ್ನಡದ ಚಿತ್ರಗಳಿಗೂ ಸಂಗೀತ ನೀಡಿರುವ ಗೋಲ್ಡನ್​ ಗ್ಲೋಬ್​ ವಿನ್ನರ್​ ಎಂಎಂ ಕೀರವಾಣಿ ಸಂಭಾವನೆ ಬಹುಕೋಟಿ
Golden Globe Awards: ‘RRR​’ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಜತೆ ‘ಗೋಲ್ಡನ್​ ಗ್ಲೋಬ್​’ ಪಡೆದವರ ಪೂರ್ತಿ ಲಿಸ್ಟ್​ ಇಲ್ಲಿದೆ
MM Keeravani: ಗೋಲ್ಡನ್​ ಗ್ಲೋಬ್ ಪ್ರಶಸ್ತಿ ಪಡೆದ ‘ಆ​ರ್​ಆರ್​ಆರ್​’ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ
Golden Globes 2023: ಅತ್ಯುತ್ತಮ ಒರಿಜಿನಲ್ ಸಾಂಗ್ ಪ್ರಶಸ್ತಿ ಬಾಚಿಕೊಂಡ ಆರ್​ಆರ್​ಆರ್​ನ ನಾಟು ನಾಟು ಹಾಡು

‘ಆರ್​ಆರ್​ಆರ್​’ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ:

‘ಇದೊಂದು ವಿಶೇಷವಾದ ಸಾಧನೆ. ಎಂಎಂ ಕೀರವಾಣಿ, ಪ್ರೇಮ್​ ರಕ್ಷಿತ್​, ಕಾಲ ಭೈರವ, ಚಂದ್ರಬೋಸ್​, ರಾಹುಲ್​ ಸಿಪ್ಲಿಗಂಜ್​, ಎಸ್​ಎಸ್​ ರಾಜಮೌಳಿ, ಜೂನಿಯರ್​ ಎನ್​ಟಿಆರ್​, ರಾಮ್​ ಚರಣ್​ ಮತ್ತು ಇಡೀ ಆರ್​ಆರ್​ಆರ್​ ಸಿನಿಮಾ ತಂಡಕ್ಕೆ ಅಭಿನಂದನೆಗಳು. ಈ ಪ್ರತಿಷ್ಠಿತ ಪ್ರಶಸ್ತಿಯಿಂದಾಗಿ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಭಾವ ಮೂಡಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: Golden Globes 2023: ‘ಗೋಲ್ಡನ್​ ಗ್ಲೋಬ್​’ ಪ್ರಶಸ್ತಿ ಪಡೆದ ಸಂಭ್ರಮದಲ್ಲಿ ‘ಆರ್​ಆರ್​ಆರ್​’ ತಂಡ; ಇಲ್ಲಿದೆ ಫೋಟೋ ಗ್ಯಾಲರಿ

ಆಸ್ಕರ್​ ಪ್ರಶಸ್ತಿ ಮೇಲೆ ‘ಆರ್​ಆರ್​ಆರ್​’ ಕಣ್ಣು:

ಪ್ರತಿಷ್ಠಿತ ಆಸ್ಕರ್​ ಪ್ರಶಸ್ತಿ ಪಡೆಯಬೇಕು ಎಂದು ‘ಆರ್​ಆರ್​ಆರ್​’ ಚಿತ್ರತಂಡ ಪ್ರಯತ್ನಿಸುತ್ತಿದೆ. ‘ಫಾರ್​ ಯುವರ್​ ಕನ್ಸಿಡರೇಷನ್​’ ಕ್ಯಾಂಪೇನ್​ ಮೂಲಕ ನಾಮನಿರ್ದೇಶನಗೊಳ್ಳಲು ಪ್ರಯತ್ನಗಳು ನಡೆದಿವೆ. ಅಂತಿಮವಾಗಿ ಏನಾಗಲಿದೆ ಎಂಬುದನ್ನು ತಿಳಿಯುವ ಕೌತುಕ ಅಭಿಮಾನಿಗಳಲ್ಲಿ ಮೂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.