ಮದುವೆಗೂ ಮೊದಲೇ ಸ್ಟಾರ್ ನಟಿಯ ತಂದೆ ಆಸ್ಪತ್ರೆಗೆ ದಾಖಲು
ಕುರಿಯನ್ ಅವರಿಗೆ ಕಳೆದ ಕೆಲ ತಿಂಗಳಿಂದ ಅನಾರೋಗ್ಯ ಕಾಡುತ್ತಲೇ ಇದೆ. ಈಗ ಅವರ ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಟ್ಟಿರುವುದರಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
ಲೇಡಿ ಸೂಪರ್ಸ್ಟಾರ್ ಖ್ಯಾತಿಯ ನಯನತಾರಾ ಶೀಘ್ರವೇ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ. ಹೀಗಿರುವಾಗಲೇ ಅವರ ತಂದೆ ಕುರಿಯನ್ ಕೊಡಿಯಾಟ್ಟು ಕೇರಳದ ಕೊಚ್ಚಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಂದೆ ಜತೆ ನಯನತಾರಾ ಕೂಡ ಆಸ್ಪತ್ರೆಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ಕುರಿಯನ್ ಅವರಿಗೆ ಕಳೆದ ಕೆಲ ತಿಂಗಳಿಂದ ಅನಾರೋಗ್ಯ ಕಾಡುತ್ತಲೇ ಇದೆ. ಈಗ ಅವರ ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಟ್ಟಿರುವುದರಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ಸದ್ಯ, ಅವರನ್ನು ಐಸಿಯುಗೆ ದಾಖಲು ಮಾಡಲಾಗಿದೆ.
ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿರುವ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಇಬ್ಬರೂ ಇದನ್ನು ಒಪ್ಪಿಕೊಂಡಿದ್ದು ಮಾತ್ರವಲ್ಲ ಬೇರೆ ಬೇರೆ ಕಡೆಗಳಿಗೆ ಸುತ್ತಾಡಲು ತೆರಳಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಈವರೆಗೆ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿರಲಿಲ್ಲ. ಇತ್ತೀಚೆ ಇಬ್ಬರೂ ಗುಟ್ಟಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 2015 ರಲ್ಲಿ ತೆರೆಗೆ ಬಂದ ವಿಘ್ನೇಶ್ ನಿರ್ದೇಶನದ ನಾನಮ್ ರೌಡಿಧಾನ್ ಚಿತ್ರದಲ್ಲಿ ನಯನತಾರಾ ಮುಖ್ಯ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಇವರಿಗೆ ಉಂಟಾದ ಪರಿಚಯ ಪ್ರೀತಿಗೆ ತಿರುಗಿತ್ತು.
ದೇಶಾದ್ಯಂತ ಕೊರೊನಾ ವೈರಸ್ ಎರಡನೇ ಅಲೆ ಮಿತಿ ಮೀರಿ ಹಬ್ಬುತ್ತಿದೆ. ಸೆಲೆಬ್ರಿಟಿಗಳ ವಲಯದಲ್ಲೂ ಅನೇಕರು ಈ ಮಹಾಮಾರಿಗೆ ಬಲಿ ಆಗಿದ್ದಾರೆ. ಇಂಥ ಸಂದರ್ಭದಲ್ಲಿ ಎಲ್ಲರೂ ವ್ಯಾಕ್ಸಿನ್ಗಾಗಿ ಮುಗಿಬೀಳುತ್ತಿದ್ದಾರೆ. ಕೊವಿಡ್ನಿಂದ ರಕ್ಷಿಸಿಕೊಳ್ಳಲು ಲಸಿಕೆ ಪಡೆಯುವುದು ಸೂಕ್ತ ಮಾರ್ಗ ಎಂಬುದು ಎಲ್ಲರಿಗೂ ಅರ್ಥವಾಗಿದೆ. ಸೆಲೆಬ್ರಿಟಿಗಳು ಕೂಡ ಹರಿಬರಿಯಲ್ಲಿ ಲಸಿಕೆ ಪಡೆಯುತ್ತಿದ್ದಾರೆ. ಬಹುಭಾಷಾ ನಟಿ ನಯನತಾರಾ ಕೂಡ ಇತ್ತೀಚೆಗೆ ಲಸಿಕೆ ಪಡೆದುಕೊಂಡರು.
ಇದನ್ನೂ ಓದಿ: ಕೊವಿಡ್ ಲಸಿಕೆ ವಿಚಾರದಲ್ಲಿ ಗೋಲ್ಮಾಲ್ ಮಾಡಿದ್ರಾ ನಯನತಾರಾ? ಫೋಟೋ ತೆರೆದಿಟ್ಟ ಅಸಲಿ ಕಥೆ ಇಲ್ಲಿದೆ
Published On - 10:31 pm, Fri, 9 July 21