ರಿವೀಲ್ ಆಯ್ತು ನಯನತಾರಾ-ವಿಘ್ನೇಶ್​ ಶಿವನ್ ಮದುವೆ ಫೋಟೋ; ಇಲ್ಲಿದೆ ನವ ಜೋಡಿಯ ಬ್ಯೂಟಿಫುಲ್ ಚಿತ್ರ

ಈ ಮೊದಲೇ ವಿಘ್ನೇಶ್ ಹಾಗೂ ನಯನತಾರಾ ಮದುವೆ ಆಗಬೇಕಿತ್ತು. ಇದಕ್ಕೆ ಈ ಜೋಡಿ ಸಿದ್ಧತೆ ಕೂಡ ಮಾಡಿಕೊಂಡಿತ್ತು. ಆದರೆ, ಸಮಯ ಕೂಡಿ ಬರಲಿಲ್ಲ. ಕೊವಿಡ್ ಮೂರು ಅಲೆಗಳು ಇವರ ಮದುವೆಗೆ ಅಡ್ಡಿ ಆಯಿತು.

ರಿವೀಲ್ ಆಯ್ತು ನಯನತಾರಾ-ವಿಘ್ನೇಶ್​ ಶಿವನ್ ಮದುವೆ ಫೋಟೋ; ಇಲ್ಲಿದೆ ನವ ಜೋಡಿಯ ಬ್ಯೂಟಿಫುಲ್ ಚಿತ್ರ
ನಯನಾ-ವಿಘ್ನೇಶ್
TV9kannada Web Team

| Edited By: Rajesh Duggumane

Jun 09, 2022 | 3:01 PM

ನಟಿ ನಯನತಾರಾ (Nayanthara) ಹಾಗೂ ನಿರ್ದೇಶಕ ವಿಘ್ನೇಶ್​ ಶಿವನ್​ ಹೊಸ ಬಾಳನ್ನು ಆರಂಭಿಸಿದ್ದಾರೆ. ಏಳು ವರ್ಷಗಳ ಕಾಲ ಪ್ರೀತಿಯಲ್ಲಿದ್ದ ಈ ಜೋಡಿ ಈಗ ಮದುವೆ ಆಗುವ ಮೂಲಕ ಬಾಳ ಬಂಧನಕ್ಕೆ ಒಳಗಾಗಿದೆ. ಇಂದು (ಜೂನ್​ 9) ತಮಿಳುನಾಡಿನ ಮಹಾಬಲಿಪುರಂನಲ್ಲಿ ಇವರ ವಿವಾಹವಾಗಿದೆ. ಸೆಲೆಬ್ರಿಟಿಗಳ ಮದುವೆ ಬಳಿಕ ಫ್ಯಾನ್ಸ್ ಫೋಟೋಗಾಗಿ ಕಾಯೋದು ಸಾಮಾನ್ಯ. ಅದೇ ರೀತಿ, ನಯನತಾರಾ-ವಿಘ್ನೇಶ್ (Vignesh Shivan) ಮದುವೆಯ ಫೋಟೋಗಾಗಿ ಅಭಿಮಾನಿಗಳು ಕಾದು ಕೂತಿದ್ದರು. ಕೊನೆಗೂ ಇವರ ಮದುವೆ ಫೋಟೋ ರಿವೀಲ್ ಆಗಿದೆ. ನವ ದಂಪತಿಯನ್ನು ಕಂಡು ಫ್ಯಾನ್ಸ್ ಸಖತ್ ಖಷಿಪಟ್ಟಿದ್ದಾರೆ. ಈ ಫೋಟೋಗೆ ಸಾಕಷ್ಟು ಲೈಕ್ಸ್ ಸಿಗುತ್ತಿದೆ. ಅನೇಕ ಸೆಲೆಬ್ರಿಟಿಗಳು ಹಾಗೂ ಫ್ಯಾನ್ಸ್​ ಶುಭಾಶಯ ತಿಳಿಸುತ್ತಿದ್ದಾರೆ.

‘ನಾನುಂ ರೌಡಿ ದಾನ್​’ ಚಿತ್ರಕ್ಕೆ ವಿಘ್ನೇಶ್ ಆ್ಯಕ್ಷನ್ ಕಟ್​ ಹೇಳಿದ್ದರು. ಈ ಚಿತ್ರ 2015ರಲ್ಲಿ ತೆರೆಗೆ ಬಂತು. ವಿಜಯ್ ಸೇತುಪತಿ ಹಾಗೂ ನಯನತಾರಾ ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದ ಸೆಟ್​ನಲ್ಲಿ ನಯನತಾರಾ ಹಾಗೂ ವಿಘ್ನೇಶ್​ಗೆ ಪ್ರೀತಿ ಮೊಳೆಯಿತು. ಅನೇಕ ಕಡೆಗಳಲ್ಲಿ ಇಬ್ಬರೂ ಸುತ್ತಾಟ ನಡೆಸಿದರು. ಆ ಬಳಿಕ ಪ್ರೀತಿ ವಿಚಾರವನ್ನು ಖಚಿತಪಡಿಸಿದರು. ಈಗ ಇವರು ಹಸೆಮಣೆ ಏರಿದ್ದಾರೆ.

ಈ ಮೊದಲೇ ವಿಘ್ನೇಶ್ ಹಾಗೂ ನಯನತಾರಾ ಮದುವೆ ಆಗಬೇಕಿತ್ತು. ಇದಕ್ಕೆ ಈ ಜೋಡಿ ಸಿದ್ಧತೆ ಕೂಡ ಮಾಡಿಕೊಂಡಿತ್ತು. ಆದರೆ, ಸಮಯ ಕೂಡಿ ಬರಲಿಲ್ಲ. ಕೊವಿಡ್ ಮೂರು ಅಲೆಗಳು ಇವರ ಮದುವೆಗೆ ಅಡ್ಡಿ ಆಯಿತು. ಕೊವಿಡ್ ಸಂದರ್ಭದಲ್ಲಿ ಸಾಕಷ್ಟು ನಿರ್ಬಂಧಗಳು ಇದ್ದವು. ಈ ಕಿರಿಕಿರಿ ಮಧ್ಯೆ ಮದುವೆ ಆದರೆ ಎಲ್ಲರಿಗೂ ಆಮಂತ್ರಣ ನೀಡೋಕೆ ಸಾಧ್ಯವಾಗುವುದಿಲ್ಲ. ಹೀಗಾಗಿ, ಕೊವಿಡ್ ಸಂಪೂರ್ಣ ಕಡಿಮೆ ಆದ ಬಳಿಕವೇ ಈ ಜೋಡಿ ಮದುವೆ ಆಗಿದೆ.

ಇದನ್ನೂ ಓದಿ:  ನಯನತಾರಾ-ವಿಘ್ನೇಶ್​ ಮದುವೆಗೆ ಬಂದ ಶಾರುಖ್​ ಖಾನ್​, ರಜನಿಕಾಂತ್​; ಇಲ್ಲಿವೆ ಫೋಟೋಗಳು

ಅಟ್ಲೀ ನಿರ್ದೇಶನದ ‘ಜವಾನ್​’ ಸಿನಿಮಾದಲ್ಲಿ ಶಾರುಖ್​ಗೆ ಜತೆಯಾಗಿ ನಯನತಾರಾ ನಟಿಸುತ್ತಿದ್ದಾರೆ. ಹೀಗಾಗಿ, ಮದುವೆಗೆ ಶಾರುಖ್​ಗೆ ಆಮಂತ್ರಣ ಸಿಕ್ಕಿದೆ. ಅವರು ಮದುವೆಯಲ್ಲಿ ಮಿಂಚಿದ್ದಾರೆ. ಇನ್ನು, ಬೋನಿ ಕಪೂರ್ ಸೇರಿ ಚಿತ್ರರಂಗದ ಅನೇಕರು ಈ ನವ ಜೋಡಿಗೆ ಶುಭ ಹಾರೈಸಿದ್ದಾರೆ. ಸಂಜೆಯವರೆಗೆ ಮದುವೆ ಕಾರ್ಯಗಳು ನಡೆಯಲಿದೆ. ಹೀಗಾಗಿ, ಇನ್ನೂ ಕೆಲ ಸೆಲೆಬ್ರಿಟಿಗಳು ಮದುವೆಗೆ ಆಗಮಿಸುವ ನಿರೀಕ್ಷೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada