AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಫೌಜಿ’ ವಿರುದ್ಧ ಸರ್ಕಾರಕ್ಕೆ ಪತ್ರ ಬರೆದ ಸುಭಾಷ್ ಚಂದ್ರ ಭೋಸ್ ಮೊಮ್ಮಗ

‘ಫೌಜಿ’ ಸಿನಿಮಾ ಟೀಸರ್​ನಲ್ಲಿ ಭೋಸ್ ಅವರ ಪಾತ್ರವನ್ನು ಸರಿಯಾಗಿ ತೋರಿಸಿಲ್ಲ ಎಂಬುದು ಒಂದಾದರೆ, ಜೊತೆಗೆ ಇತಿಹಾಸವನ್ನು ತಿರುಚಲಾಗಿದೆ ಎಂದು ಸಹ ಆರೋಪಗಳು ಕೇಳಿ ಬಂದಿದೆ. ಇದೀಗ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗ, ಸಾಮಾಜಿಕ-ರಾಜಕೀಯ ಕಾರ್ಯಕರ್ತ ಹಾಗೂ ಪಶ್ಚಿಮ ಬಂಗಾಳದ ಮಾಜಿ ಬಿಜೆಪಿ ಉಪಾಧ್ಯಕ್ಷ ಚಂದ್ರ ಕುಮಾರ್ ಬೋಸ್ ಅವರು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ಪತ್ರ ಬರೆದಿದ್ದು, ‘ಫೌಜಿ’ ಸಿನಿಮಾ ಬಿಡುಗಡೆಯನ್ನು ತಡೆಯಬೇಕೆಂದು ಒತ್ತಾಯಿಸಿದ್ದಾರೆ.

‘ಫೌಜಿ’ ವಿರುದ್ಧ ಸರ್ಕಾರಕ್ಕೆ ಪತ್ರ ಬರೆದ ಸುಭಾಷ್ ಚಂದ್ರ ಭೋಸ್ ಮೊಮ್ಮಗ
Fauji Movie
ಮಂಜುನಾಥ ಸಿ.
|

Updated on: Oct 28, 2026 | 6:06 PM

Share

ಪ್ರಭಾಸ್ ನಟನೆಯ‘ಫೌಜಿ’ ಸಿನಿಮಾದ ಟೀಸರ್ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದ್ದು, ಟೀಸರ್​​ನ ಬಗ್ಗೆ ವಿಶೇಷವಾಗಿ ಟೀಸರ್​​ನಲ್ಲಿ ತೋರಿಸಲಾಗಿರುವ ಸುಭಾಷ್ ಚಂದ್ರ ಭೋಸ್ ಅವರ ಪಾತ್ರದ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದೆ. ಭೋಸ್ ಅವರ ಪಾತ್ರವನ್ನು ಸರಿಯಾಗಿ ತೋರಿಸಿಲ್ಲ ಎಂಬುದು ಒಂದಾದರೆ, ಜೊತೆಗೆ ಇತಿಹಾಸವನ್ನು ತಿರುಚಲಾಗಿದೆ ಎಂದು ಸಹ ಆರೋಪಗಳು ಕೇಳಿ ಬಂದಿದೆ. ಇದೀಗ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗ, ಸಾಮಾಜಿಕ-ರಾಜಕೀಯ ಕಾರ್ಯಕರ್ತ ಹಾಗೂ ಪಶ್ಚಿಮ ಬಂಗಾಳದ ಮಾಜಿ ಬಿಜೆಪಿ ಉಪಾಧ್ಯಕ್ಷ ಚಂದ್ರ ಕುಮಾರ್ ಬೋಸ್ ಅವರು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ಪತ್ರ ಬರೆದಿದ್ದು, ‘ಫೌಜಿ’ ಸಿನಿಮಾ ಬಿಡುಗಡೆಯನ್ನು ತಡೆಯಬೇಕೆಂದು ಒತ್ತಾಯಿಸಿದ್ದಾರೆ.

ಭೋಸ್ ಅವರ ಮೊಮ್ಮಗ ಚಂದ್ರ ಕುಮಾರ್ ಬೋಸ್ ಅವರು ಮಾಹಿತಿ ಮತ್ತು ಪ್ರಸಾರ ಸಚಿವರಿಗೆ ಬರೆದ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ‘ನೇತಾಜಿಯವರನ್ನು ಹಗುರವಾಗಿ ಪರಿಗಣಿಸಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಇಂತಹ ಆಕ್ಷೇಪಾರ್ಹ ವಿಷಯಕ್ಕೆ ಸೆನ್ಸಾರ್ ಮೋರ್ಡ್ ಹೇಗೆ ಅನುಮತಿ ನೀಡಿತು ಎಂಬುದು ನಮಗೆ ಅರ್ಥವಾಗುತ್ತಿಲ್ಲ. ಈ ಅತ್ಯಂತ ಗಂಭೀರ ವಿಷಯದ ಬಗ್ಗೆ ಗಮನ ಹರಿಸಿ ತನಿಖೆ ನಡೆಸುವಂತೆ ನಿಮ್ಮನ್ನು ವಿನಂತಿಸುತ್ತೇವೆ. ಈ ಟೀಸರ್ ಅನ್ನು ತಕ್ಷಣವೇ ತೆಗೆದುಹಾಕಬೇಕು ಹಾಗೂ ಇದಕ್ಕೆ ಹೊಣೆಗಾರರಾದ ಸೆನ್ಸಾರ್ ಬೋರ್ಡ್ ಅಧಿಕಾರಿಗಳಿಗೆ ಶಿಕ್ಷೆಯನ್ನು ನೀಡುವುದು ದೇಶಕ್ಕೆ ನೀವು ಸಲ್ಲಿಸುವ ಸರಿಯಾದ ಸೇವೆಯಾಗುತ್ತದೆ’ ಎಂದು ಕಠಿಣ ಶಬ್ದಗಳನ್ನು ಬಳಸಿದ್ದಾರೆ.

ಇದನ್ನೂ ಓದಿ:ಪ್ರಭಾಸ್​​ಗೆ ಪ್ರಶಾಂತ್ ನೀಲ್ ಪಂಚ್, ‘ಸಲಾರ್ 2’ ಬಗ್ಗೆಯೂ ಮಾತು

ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಹ ಟ್ವೀಟ್​​ನಲ್ಲಿ ಟ್ಯಾಗ್ ಮಾಡಿರುವ ಚಂದ್ರ ಕುಮಾರ್ ಬೋಸ್, ‘ಫೌಜಿ’ ಟೀಸರ್ ಅನ್ನು ತೆಗೆದುಹಾಕಬೇಕು, ತಿದ್ದುಪಡಿ ಮಾಡಿ ಮರುಬಿಡುಗಡೆ ಮಾಡಬೇಕು. ನೇತಾಜಿಯವರ ಕುರಿತಾದ ನಮ್ಮ ಆತಂಕವನನು ಅರ್ಥಮಾಡಿಕೊಂಡು ಅದಕ್ಕೆ ಸೂಕ್ತವಾಗಿ ಸ್ಪಂದಿಸಿದರೆ (ಟೀಸರ್ ಹಾಗೂ ಚಲನಚಿತ್ರ ಎರಡಕ್ಕೂ ಸಂಬಂಧಿಸಿದಂತೆ), ಪ್ರಭಾಸ್ ಮತ್ತು ಸಂಪೂರ್ಣ ‘ಫೌಜಿ’ ಚಿತ್ರತಂಡಕ್ಕೆ ನನ್ನ ಶುಭ ಹಾರೈಕೆಗಳು. ಸಿನಿಮಾದ ನಿರ್ದೇಶಕ ರಘು ಹನುಪುಡಿ ಅವರು ಇದರ ಗಂಭೀರತೆಯನ್ನು ಅರಿತುಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ’ ಎಂದು ಬರೆದಿದ್ದಾರೆ.

ಈಗ ಬಿಡುಗಡೆ ಆಗಿರುವ ಟೀಸರ್​​ನಲ್ಲಿ ಸುಭಾಷ್ ಚಂದ್ರ ಭೋಸ್ ಅವರು ಜರ್ಮನ್​​ನ ಹಿಟ್ಲರ್ ಅನ್ನು ಭೇಟಿ ಆಗಿ. ಹಿಟ್ಲರ ಬಳಿ ಪ್ರಭಾಸ್​ ಅನ್ನು ಕೊಂಡಾಡುವ ದೃಶ್ಯ ಇದೆ. ಆದರೆ ಸುಭಾಷ್ ಅವರ ಮೊಮ್ಮಗ ಇದನ್ನು ವಿರೋಧಿಸಿದ್ದು, ನೇತಾಜಿ ಅವರ ಕುರಿತಾದ ತಪ್ಪು ಮಾಹಿತಿಯನ್ನು ಟೀಸರ್ ಒಳಗೊಂಡಿದೆ ಎಂದು ಹೇಳಿರುವುದಲ್ಲದೆ, ನೇತಾಜಿ ಅವರನ್ನು ಪಾತ್ರ ಪರಿಚಯಕ್ಕಾಗಿ ಬಳಸಿರುವುದು ಅವರಿಗೆ ಅಗೌರವ ನೀಡಿದಂತಾಗಿದೆ ಎಂದು ಟೀಕೆ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More