ಇನ್ಸ್ಟಾಗ್ರಾಮ್ಗೆ ಏಕಾಏಕಿ ಗುಡ್ಬೈ ಹೇಳಿದ ಚಿರಂಜೀವಿ ತಮ್ಮನ ಮಗಳು; ಅಂಥದ್ದೇನಾಯ್ತು?
ನಿಹಾರಿಕಾಗೆ ಇನ್ಸ್ಟಾಗ್ರಾಮ್ನಲ್ಲಿ ಲಕ್ಷಾಂತರ ಅಭಿಮಾನಿಗಳು ಇದ್ದರು. ಇತ್ತೀಚಿನವರೆಗೂ ಅವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಾಗೂ ಸ್ಟೇಟಸ್ಗಳು ಹಾಕುತ್ತಲೇ ಇದ್ದರು. ಆದರೆ, ಈಗ ಏಕಾಏಕಿ ಅವರು ಇನ್ಸ್ಟಾಗ್ರಾಮ್ನಿಂದ ಕಾಣೆ ಆಗಿದ್ದಾರೆ.

ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿರೋಕೆ ಬಯಸುತ್ತಾರೆ. ಅಭಿಮಾನಿಗಳ ಜತೆ ಸಂಪರ್ಕದಲ್ಲಿರೋಕೆ ಎಲ್ಲಾ ರೀತಿಯ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳನ್ನು ಬಳಕೆ ಮಾಡುತ್ತಾರೆ. ಆದರೆ, ಕೆಲವರು ಇದಕ್ಕೆ ಭಿನ್ನ. ಕೆಲ ನಟ/ನಟಿಯರು ಸೋಶಿಯಲ್ ಮೀಡಿಯಾದಲ್ಲಿ (Social Media) ಆ್ಯಕ್ಟೀವ್ ಆಗಿಲ್ಲ. ಇನ್ನೂ ಕೆಲವರು ಸ್ವಲ್ಪ ವರ್ಷ ಸಾಮಾಜಿಕ ಜಾಲತಾಣ ಬಳಸಿ ನಂತರ ಅದರಿಂದ ಹೊರ ಬರುತ್ತಾರೆ. ಈಗ ಚಿರಂಜೀವಿ (Chiranjeevi) ತಮ್ಮನ ಮಗಳು, ನಟಿ-ನಿರ್ಮಾಪಕಿ ನಿಹಾರಿಕಾ ಕೊನಿಡೆಲಾ (Niharika Konidela ) ಅವರು ಇನ್ಸ್ಟಾಗ್ರಾಮ್ಗೆ ಗುಡ್ಬೈ ಹೇಳಿದ್ದಾರೆ. ಇದಕ್ಕೆ ಕಾರಣವಾಗಿದ್ದು, ಅಭಿಮಾನಿಗಳು ಮಾಡಿದ ಆ ಒಂದು ತಪ್ಪು. ಹಾಗಾದರೆ, ಫ್ಯಾನ್ಸ್ ಮಾಡಿದ ತಪ್ಪೇನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
ನಿಹಾರಿಕಾಗೆ ಇನ್ಸ್ಟಾಗ್ರಾಮ್ನಲ್ಲಿ ಲಕ್ಷಾಂತರ ಅಭಿಮಾನಿಗಳು ಇದ್ದರು. ಇತ್ತೀಚಿನವರೆಗೂ ಅವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಾಗೂ ಸ್ಟೇಟಸ್ಗಳು ಹಾಕುತ್ತಲೇ ಇದ್ದರು. ಆದರೆ, ಈಗ ಏಕಾಏಕಿ ಅವರು ಇನ್ಸ್ಟಾಗ್ರಾಮ್ನಿಂದ ಕಾಣೆ ಆಗಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಿಂದ ಅಂತರ ಕಾಯ್ದುಕೊಳ್ಳುವಾಗ ಸೂಚನೆ ನೀಡಿ ತೆರಳುತ್ತಾರೆ. ಆದರೆ, ನಿಹಾರಿಕಾ ಆ ರೀತಿ ಏನನ್ನೂ ಮಾಡಿಲ್ಲ.
ಇತ್ತೀಚೆಗೆ ಅವರು ಯಾವುದೇ ಪೋಸ್ಟ್ ಹಾಕಿದರೂ ಅದನ್ನು ಕೆಟ್ಟ ರೀತಿಯಲ್ಲಿ ಟ್ರೋಲ್ ಮಾಡಲಾಗುತ್ತಿತ್ತು. ಅಲ್ಲದೆ, ಕೆಲವರು ಕೆಟ್ಟ ರೀತಿಯಲ್ಲಿ ಕಮೆಂಟ್ ಹಾಕುತ್ತಿದ್ದರು. ಈ ಕಾರಣಕ್ಕೆ ಅವರು ಇನ್ಸ್ಟಾಗ್ರಾಮ್ ಡಿಲೀಟ್ ಮಾಡಿದ್ದಾರೆ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನೂ ಕೆಲವರು ಹೇಳುವ ಪ್ರಕಾರ, ನಿಹಾರಿಕಾ ಅವರ ಖಾತೆಯನ್ನು ಹ್ಯಾಕ್ ಮಾಡೋಕೆ ಕೆಲವರು ಪ್ರಯತ್ನಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅವರು ತಮ್ಮ ಖಾತೆಯನ್ನು ಕ್ಲೋಸ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಅವರ ಕಡೆಯಿಂದಲೇ ಸ್ಪಷ್ಟನೆ ಸಿಗಬೇಕಿದೆ.
ಚಿರು ಸಹೋದರ ನಾಗಬಾಬು ಪುತ್ರಿಯೇ ನಿಹಾರಿಕಾ ಕೊನಿಡೆಲಾ. ರಾಜಸ್ಥಾನದ ಉದಯ್ ಪುರದಲ್ಲಿರುವ ಐಷಾರಾಮಿ ಹೋಟೆಲ್ನಲ್ಲಿ 2020ರಂದು ನಿಹಾರಿಕಾ ಮದುವೆ ನೆರವೇರಿತ್ತು. ಗುಂಟೂರಿನ ಐಜಿಪಿ ಆಗಿದ್ದ ಜೆ.ಪ್ರಭಾಕರ್ ರಾವ್ ಪುತ್ರ ಚೈತನ್ಯ ಅವರನ್ನು ನಿಹಾರಿಕಾ ವರಿಸಿದ್ದರು. ನಿಹಾರಿಕಾ ಸಿನಿಮಾ ನಿರ್ಮಾಣ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ‘ಒಕ ಚಿನ್ನ ಫ್ಯಾಮಿಲಿ ಸ್ಟೋರಿ’ ವೆಬ್ ಸರಣಿಯನ್ನು ಅವರು ನಿರ್ಮಾಣ ಮಾಡಿದ್ದರು. ಜೀ5ನಲ್ಲಿ ರಿಲೀಸ್ ಆದ ಈ ಸರಣಿ ಮೆಚ್ಚುಗೆ ಪಡೆದುಕೊಂಡಿದೆ.
ಇದನ್ನೂ ಓದಿ: ವಿಚ್ಛೇದನದ ಬಳಿಕ ಅಕ್ಕಿನೇನಿ ಕುಟುಂಬಕ್ಕೆ ಸಮಂತಾ ಹಿಂದಿರುಗಿಸಿದರು ಒಂದು ಪ್ರಮುಖ ವಸ್ತು; ಏನದು?
ವಿದೇಶದಲ್ಲಿ ಹಣ ಉಳಿಸಲು ಇಂಥ ಕೆಲಸ ಮಾಡಿದ್ರಾ ನಾಗ ಚೈತನ್ಯ-ರಾಶಿ ಖನ್ನಾ? ಇದು ಟಾಲಿವುಡ್ ಗಾಸಿಪ್




