
ಸ್ಯಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿ (Sanjjanaa Galrani) ಸಹೋದರಿ ನಿಕ್ಕಿ ಗಲ್ರಾನಿ (Nikki Galrani ) 2014ರಲ್ಲಿ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟರು. ಕನ್ನಡ, ತಮಿಳು, ಮಲಯಾಳಂ ಭಾಷೆಯ ಸಿನಿಮಾ ಸೇರಿ 30ಕ್ಕೂ ಅಧಿಕ ಚಿತ್ರಗಳಲ್ಲಿ ನಿಕ್ಕಿ ನಟಿಸಿದ್ದಾರೆ. ಈಗ ಖ್ಯಾತ ನಟ ಆದಿ ಪಿನಿಸೆಟ್ಟಿ (Aadhi Pinisetty) ಜೊತೆಗೆ ಹೊಸ ಬಾಳು ಆರಂಭಿಸಿದ್ದಾರೆ. ಇಂದು (ಮೇ 19) ಅವರ ವಿವಾಹ ನೆರವೇರಿದೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನವ ದಂಪತಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳು ಹರಿದು ಬಂದಿವೆ.
ನಿಕ್ಕಿ ಮತ್ತು ಆದಿ ಈ ಮೊದಲಿನಿಂದಲೂ ಡೇಟಿಂಗ್ ಮಾಡುತ್ತಿದ್ದರು. ಆದರೆ, ಈ ವಿಚಾರವನ್ನು ಒಪ್ಪಿಕೊಂಡಿರಲಿಲ್ಲ. ಅವರು ಆಗಾಗ ಒಟ್ಟಾಗಿ ಸುತ್ತಾಡುತ್ತಿದ್ದರು. ಈ ಫೋಟೋಗಳು ವೈರಲ್ ಆಗಿದ್ದವು. ಮಾರ್ಚ್ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಹೊಸ ಜೀವನ ಆರಂಭಿಸಲು ಮುನ್ನುಡಿ ಬರೆದಿದ್ದರು. ಇದು ಅನೇಕರಿಗೆ ಅಚ್ಚರಿ ಮೂಡಿಸಿತ್ತು. ಈಗ ಸದ್ದಿಲ್ಲದೆ ಇಬ್ಬರೂ ಹಸೆಮಣೆ ಏರಿದ್ದಾರೆ. ಈ ಮದುವೆಗೆ ಕುಟುಂಬ ಸದಸ್ಯರು ಹಾಗೂ ಆಪ್ತರು ಮಾತ್ರ ಭಾಗಿ ಆಗಿದ್ದಾರೆ. ನಟ ನಾನಿ ಮೊದಲಾದವರು ಮದುವೆ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ.
One with the gang ❤️?@NameisNani with friends
at @AadhiOfficial & @nikkigalrani ‘s wedding ?#AnteSundaraniki #Dasara #Nani pic.twitter.com/RFjFV0dytc— Nani Fans Association (@nfa_hyd) May 19, 2022
ಇದನ್ನೂ ಓದಿ: ಖ್ಯಾತ ಹೀರೋ ಜತೆ ನಿಶ್ಚಿತಾರ್ಥ ಮಾಡಿಕೊಂಡ ಸಂಜನಾ ಗಲ್ರಾನಿ ಸಹೋದರಿ ನಿಕ್ಕಿ
ಆದಿ ಹಾಗೂ ನಿಕ್ಕಿ ಮದುವೆ ಆಗಿರುವ ಫೋಟೋಗಳನ್ನು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನವ ಜೋಡಿಗೆ ಶುಭಾಶಯ ತಿಳಿಸಿದ್ದಾರೆ. ಫ್ಯಾನ್ಸ್ ವಲಯದಲ್ಲೂ ಈ ಚಿತ್ರಗಳು ವೈರಲ್ ಆಗುತ್ತಿವೆ. ಮೇ 18ರಂದು ಅರಿಶಿಣ ಶಾಸ್ತ್ರ ನೆರವೇರಿತ್ತು.
Wow!! #Aadhi and #NikkiGalrani tied the knot.. ❤️
Congratulations to the newly married couple ?@AadhiOfficial @nikkigalrani #Wedding #AadhiNikkiWedding #ThamizhPadam pic.twitter.com/Or6d6scFWb— Thamizh Padam (@ThamizhPadam) May 19, 2022
ಇದನ್ನೂ ಓದಿ: ಪ್ರೆಗ್ನೆಂಟ್ ಸಂಜನಾ ಗಲ್ರಾನಿ ರೀಲ್ಸ್ ವೈರಲ್; ಮಗುವಿನ ಆಗಮನ ಯಾವಾಗ ಎಂದು ತಿಳಿಸಿದ ನಟಿ
‘1983’ ಹೆಸರಿನ ಮಲಯಾಳಂ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದರು ನಿಕ್ಕಿ. ಕನ್ನಡದ ಕೆಲ ಚಿತ್ರಗಳಲ್ಲೂ ಅವರು ನಟಿಸಿದ್ದಾರೆ. ತಮಿಳು, ಮಲಯಾಳಂ ಚಿತ್ರರಂಗದಲ್ಲಿ ನಿಕ್ಕಿ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಸಂಜನಾ ಗಲ್ರಾನಿ ಪ್ರೆಗ್ನೆಂಟ್. ಅವರ ಕುಟುಂಬಕ್ಕೆ ಶೀಘ್ರವೇ ಹೊಸ ಸದಸ್ಯನ ಆಗಮನ ಆಗಲಿದೆ. ಈ ಕಾರಣಕ್ಕೆ ಗಲ್ರಾನಿ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಆದಿ ಅವರು ಟಾಲಿವುಡ್ ಹಾಗೂ ತಮಿಳು ಚಿತ್ರರಂಗದಲ್ಲಿ ಬೇಡಿಕೆ ಹೊಂದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.