
ಹಲವು ಚಾಲೆಂಜಿಂಗ್ ಪಾತ್ರಗಳನ್ನು ಮಾಡಿ ಗಮನ ಸೆಳೆದಿರುವ ತಮಿಳುಜ ನಟ ವಿಕ್ರಮ್ (Vikram) ಅವರಿಗೆ ಹಾರ್ಟ್ ಅಟ್ಯಾಕ್ ಆಗಿದೆ ಎಂಬ ಸುದ್ದಿ ಇಂದು (ಜುಲೈ 8) ಮಧ್ಯಾಹ್ನ ಹರಿದಾಡಿತ್ತು. ಇದು ಅವರ ಫ್ಯಾನ್ಸ್ ವಲಯದಲ್ಲಿ ಆತಂಕ ಮೂಡಿಸಿತ್ತು. ಇದು ಸುಳ್ಳು ಸುದ್ದಿ ಆಗಿರಲಿ ಎಂದು ಅನೇಕರು ಬೇಡಿಕೊಂಡಿದ್ದರು. ಫ್ಯಾನ್ಸ್ ಪ್ರಾರ್ಥನೆ ಫಲಿಸಿದೆ. ವಿಕ್ರಮ್ಗೆ ಹೃದಯಾಘಾತ (Heart Attack) ಆಗಿದೆ ಎಂಬುದು ಸುಳ್ಳು ಸುದ್ದಿ ಎಂದು ವಿಕ್ರಮ್ ಅವರ ಮ್ಯಾನೇಜರ್ ಸ್ಪಷ್ಟನೆ ನೀಡಿದ್ದಾರೆ.
ಇಂದು ಮಧ್ಯಾಹ್ನ ವಿಕ್ರಮ್ ಅವರಿಗೆ ಏಕಾಏಕಿ ಅನಾರೋಗ್ಯ ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ಬೆನ್ನಲ್ಲೇ ಅವರಿಗೆ ಹೃದಯಾಘಾತವಾಗಿದೆ ಎಂಬ ಸುದ್ದಿ ಹರಿದಾಡಿತು. ಇದರಿಂದ ಫ್ಯಾನ್ಸ್ ವಲಯದಲ್ಲಿ ಆತಂಕ ಹೆಚ್ಚಿತು. ಈಗ ಮ್ಯಾನೇಜರ್ ಕಡೆಯಿಂದ ಸ್ಪಷ್ಟನೆ ಸಿಕ್ಕಿರುವುದರಿಂದ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ವಿಕ್ರಮ್ ಮ್ಯಾನೇಜರ್ ಸೂರ್ಯ ನಾರಾಯಣ ಅವರು ಟ್ವಿಟರ್ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ‘ವಿಕ್ರಮ್ ಅವರಿಗೆ ಚೆಸ್ಟ್ ಡಿಸ್ಕಂಫರ್ಟ್ ಆಗಿತ್ತು ಅಷ್ಟೇ. ಹಾರ್ಟ್ಅಟ್ಯಾಕ್ ಆಗಿದೆ ಅನ್ನೋದು ಸುಳ್ಳು ಸುದ್ದಿ. ಸದ್ಯ ವಿಕ್ರಮ್ ಆರೋಗ್ಯ ಸ್ಥಿರವಾಗಿದೆ. ಒಂದು ದಿನದಲ್ಲಿ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ’ ಎಂದು ಸೂರ್ಯ ನಾರಾಯಣ ಅವರು ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಹಲವು ಪ್ರಾಜೆಕ್ಟ್ಗಳಲ್ಲಿ ವಿಕ್ರಮ್ ಅವರು ಬ್ಯುಸಿ ಆಗಿದ್ದಾರೆ. ಅವರು ನಟಿಸಿರುವ ‘ಪೊನ್ನಿಯಿನ್ ಸೆಲ್ವನ್’ ಮತ್ತು ‘ಕೋಬ್ರಾ’ ಸಿನಿಮಾಗಳು ಹೆಚ್ಚು ನಿರೀಕ್ಷೆ ಮೂಡಿಸಿವೆ. ಈಗಾಗಲೇ ‘ಪೊನ್ನಿಯಿನ್ ಸೆಲ್ವನ್’ ಚಿತ್ರದಲ್ಲಿನ ಅವರ ಕೆಲವು ಪೋಸ್ಟರ್ಗಳು ಸಖತ್ ಹೈಪ್ ಸೃಷ್ಟಿ ಮಾಡಿವೆ. ಇಂದು (ಜುಲೈ 8) ಸಂಜೆ 6 ಗಂಟೆಗೆ ಈ ಸಿನಿಮಾದ ಟೀಸರ್ ಲಾಂಚ್ಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಚೆನ್ನೈನಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ವಿಕ್ರಮ್ ಭಾಗಿ ಆಗಬೇಕಿತ್ತು. ಆದರೆ ಅಷ್ಟರಲ್ಲೇ ಅವರಿಗೆ ಅನಾರೋಗ್ಯ ಸಮಸ್ಯೆ ಎದುರಾಗಿದೆ.
Published On - 4:57 pm, Fri, 8 July 22