ಪೂನಂ ಪಾಂಡೆ ಮಾತ್ರವಲ್ಲ ಬಾಲಿವುಡ್‌ನ ಈ ಸೆಲೆಬ್ರಿಟಿಗಳು ಪ್ರಚಾರಕ್ಕಾಗಿ ಹೀಗೆಲ್ಲ ಮಾಡಿದ್ದರು..

ಪೂನಂ ಪಾಂಡೆ ಇವತ್ತು ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ತಾವು ಗರ್ಭಕಂಠ ಕ್ಯಾನ್ಸರ್​ನಿಂದ ಸತ್ತಿಲ್ಲ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿ ವಿಡಿಯೋ ಹಂಚಿಕೊಂಡಿದ್ದಾರೆ. ಬಾಲಿವುಡ್ ತಾರೆಯರು ಪಬ್ಲಿಸಿಟಿ ಸ್ಟಂಟ್ ಹೆಸರಿನಲ್ಲಿ ಜನರನ್ನು ಮರುಳು ಮಾಡುತ್ತಿರುವುದು ಇದೇ ಮೊದಲಲ್ಲ.

ಪೂನಂ ಪಾಂಡೆ ಮಾತ್ರವಲ್ಲ ಬಾಲಿವುಡ್‌ನ ಈ ಸೆಲೆಬ್ರಿಟಿಗಳು ಪ್ರಚಾರಕ್ಕಾಗಿ ಹೀಗೆಲ್ಲ ಮಾಡಿದ್ದರು..
ಪೂನಂ ಪಾಂಡೆ ಮಾತ್ರವಲ್ಲ ಬಾಲಿವುಡ್‌ನ ಈ ಸೆಲೆಬ್ರಿಟಿಗಳು ಪ್ರಚಾರಕ್ಕಾಗಿ ಹೀಗೆಲ್ಲ ಮಾಡಿದ್ದರು..
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Feb 03, 2024 | 2:17 PM

ನಟಿ- ಮಾಡೆಲ್ ಪೂನಂ ಪಾಂಡೆ (Poonam Pandey) ಅವರ ಹಠಾತ್ ಸಾವಿನ ಸುದ್ದಿ ಸಂಚಲನ ಮೂಡಿಸಿತ್ತು. ಅವರ ಸಾವಿನ ಸುದ್ದಿ ಹೊರ ಬಿದ್ದ ನಂತರ ಅನೇಕ ಪ್ರತಿಕ್ರಿಯೆಗಳು ಬಂದವು. ಗರ್ಭಕಂಠದ ಕ್ಯಾನ್ಸರ್​ನಿಂದ ಪೂನಂ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿ ಜನರನ್ನು ಬೆಚ್ಚಿ ಬೀಳಿಸಿತ್ತು. ಹಲವರು ಇದನ್ನು ನಂಬಲಿಲ್ಲ. ಪೂನಂ ಸಾವಿನ ಸುದ್ದಿ ಸುಳ್ಳು ಎಂದು ಹಲವರು ಅನುಮಾನಿಸಿದ್ದರು. ಹಾಗೆಯೇ ಆಗಿದೆ. ಪೂನಂ ಬದುಕಿದ್ದಾರೆ. ಅನೇಕ ಸೆಲೆಬ್ರಿಟಿಗಳು ಈ ಮೊದಲು ಪ್ರಚಾರಕ್ಕಾಗಿ ಸಾಕಷ್ಟು ಗಿಮಿಕ್ ಮಾಡಿದ್ದರು.

ಪೂನಂ ಪಾಂಡೆ ಇವತ್ತು ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ತಾವು ಗರ್ಭಕಂಠ ಕ್ಯಾನ್ಸರ್​ನಿಂದ ಸತ್ತಿಲ್ಲ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿ ವಿಡಿಯೋ ಹಂಚಿಕೊಂಡಿದ್ದಾರೆ. ಬಾಲಿವುಡ್ ತಾರೆಯರು ಪಬ್ಲಿಸಿಟಿ ಸ್ಟಂಟ್ ಹೆಸರಿನಲ್ಲಿ ಜನರನ್ನು ಮರುಳು ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇಂಡಸ್ಟ್ರಿಯಲ್ಲಿ ಹಲವು ಬಾರಿ ಈ ರೀತಿ ನಡೆದಿದೆ. ಇದರಲ್ಲಿ ಹಲವು ದೊಡ್ಡ ತಾರೆಯರ ಹೆಸರುಗಳಿವೆ. ಬಾಲಿವುಡ್ ತಾರೆಯರು ತಮ್ಮ ಚಿತ್ರಗಳನ್ನು ಪ್ರಚಾರ ಮಾಡಲು ಭಾವನೆಗಳ ಜೊತೆ ಆಟ ಆಡಿದ್ದರು. ಅಂತಹ ಅನೇಕ ಕಥೆಗಳಿವೆ.

‘ಗುಲಾಮ್‌’ ಚಿತ್ರಕ್ಕಾಗಾಗಿ ಅಮೀರ್ ಮಾಡಿದ ಸಾಹಸ ಸುದ್ದಿಯಲ್ಲಿತ್ತು

ಆಮಿರ್ ಖಾನ್ ನಟನೆಯ ‘ಗುಲಾಮ್’ ಚಿತ್ರ 1998ರಲ್ಲಿ ಬಿಡುಗಡೆಯಾಯಿತು. ಈ ಸಿನಿಮಾದಲ್ಲಿ ಆಮಿರ್ ಖಾನ್ ಮುಖ್ಯ ಭೂಮಿಕೆಯಲ್ಲಿದ್ದರು. ಶೂಟಿಂಗ್ ವೇಳೆ ಅಮೀರ್ ಖಾನ್ ಆ್ಯಕ್ಷನ್ ಸ್ಟಂಟ್ ಮಾಡುವಾಗ ಸಾವಿನ ದವಡೆಯಿಂದ ಹೊರಬಂದಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಸುದ್ದಿ ಪ್ರೇಕ್ಷಕರಿಗೆ ತಲುಪಿದಾಗ, ಜನರು ತುಂಬಾ ಆತಂಕಕ್ಕೊಳಗಾಗಿದ್ದರು. ಆದರೆ, ಚಿತ್ರ ಬಿಡುಗಡೆಯಾದ ನಂತರ ಇದು ವದಂತಿ ಎಂದು ಸಾಬೀತಾಯಿತು. ಇದು ಕೇವಲ ಪ್ರಚಾರದ ಸ್ಟಂಟ್ ಆಗಿತ್ತು.

ಮಲೈಕಾ ಅರೋರಾ ಕೂಡ ಫೇಕ್ ನ್ಯೂಸ್​ನಿಂದಾಗಿ ಸುದ್ದಿಯಲ್ಲಿದ್ದರು

ಕೆಲ ಸಮಯದ ಹಿಂದೆ ನಟಿ ಮಲೈಕಾ ಅರೋರಾ ಗರ್ಭಿಣಿ ಎಂಬ ಸುದ್ದಿ ಹರಿದಾಡಿತ್ತು. ಈ ಸುದ್ದಿಯಿಂದ ಎಲ್ಲರೂ ಶಾಕ್ ಆಗಿದ್ದರು. ಆದರೆ ನಂತರ, ಮಲೈಕಾ ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡಿದ್ದರು. ಪ್ರೆಗ್ನೆಂಟ್ ಸುದ್ದಿಯು ಅವರ ಕಾರ್ಯಕ್ರಮವನ್ನು ಪ್ರಚಾರ ಮಾಡಲು ಬಳಸಿಕೊಂಡಿದ್ದರು. ಆದರೆ ಇದಕ್ಕೆ ಸಾಕಷ್ಟು ಟೀಕೆಗಳೂ ವ್ಯಕ್ತವಾಗಿದ್ದವು.

ಇದನ್ನೂ ಓದಿ: ‘ನಾನು ಬದುಕಿದ್ದೇನೆ’ ಎಂದು ಹೊಸ ವಿಡಿಯೋ ಹಂಚಿಕೊಂಡ ಪೂನಂ; ಹಿಗ್ಗಾಮುಗ್ಗಾ ಬೈದ ಫ್ಯಾನ್ಸ್

ವಿದ್ಯಾ ಬಾಲನ್ ಬೀದಿಯಲ್ಲಿ ಭಿಕ್ಷೆ ಬೇಡಿದಾಗ

‘ಬಾಬಿ ಜಾಸೂಸ್’ ಚಿತ್ರದ ಪ್ರಚಾರದ ಸಮಯದಲ್ಲಿ ನಟಿ ವಿದ್ಯಾ ಬಾಲನ್ ತಮ್ಮ ಚಿತ್ರದ ಪ್ರಚಾರಕ್ಕಾಗಿ ವಿಭಿನ್ನ ಮಾರ್ಗವನ್ನು ಕಂಡುಕೊಂಡರು. ಆಗ ನಟಿ ಹೈದರಾಬಾದ್‌ನ ರಸ್ತೆಬದಿಯಲ್ಲಿ ಭಿಕ್ಷೆ ಬೇಡುತ್ತಿದ್ದರು. ಇದು ಪಬ್ಲಿಸಿಟಿ ಸ್ಟಂಟ್ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ