‘ಆಸ್ಕರ್​ಗೆ ಭಾರತದಿಂದ ಕಳಿಸುವ ಸಿನಿಮಾ ಆಯ್ಕೆ ಸರಿ ಇಲ್ಲ’; ಚರ್ಚೆ ಹುಟ್ಟುಹಾಕಿದ ಎ.ಆರ್​. ರೆಹಮಾನ್ ಹೇಳಿಕೆ

Rajesh Duggumane

|

Updated on:Mar 16, 2023 | 7:21 AM

ಪ್ರತಿ ವರ್ಷ ಆಸ್ಕರ್​ಗೆ ಭಾರತದಿಂದ ಒಂದು ಸಿನಿಮಾನ ಆಯ್ಕೆ ಮಾಡಿ ಕಳುಹಿಸಲಾಗುತ್ತದೆ. ಈ ವರ್ಷ ಭಾರತದಿಂದ ‘ಆರ್​ಆರ್​ಆರ್​’ ಸಿನಿಮಾ ಆಯ್ಕೆ ಆಗಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಆ ಊಹೆ ತಪ್ಪಾಗಿತ್ತು.

‘ಆಸ್ಕರ್​ಗೆ ಭಾರತದಿಂದ ಕಳಿಸುವ ಸಿನಿಮಾ ಆಯ್ಕೆ ಸರಿ ಇಲ್ಲ’; ಚರ್ಚೆ ಹುಟ್ಟುಹಾಕಿದ ಎ.ಆರ್​. ರೆಹಮಾನ್ ಹೇಳಿಕೆ
ರೆಹಮಾನ್​-ಚೆಲ್ಲೋ ಶೋ

Follow us on

ಖ್ಯಾತ ಸಂಗೀತ ನಿರ್ದೇಶಕ ಎ.ಆರ್​. ರೆಹಮಾನ್ (AR Rahman) ಅವರು ಎರಡು ಬಾರಿ ಆಸ್ಕರ್ ಗೆದ್ದಿದ್ದಾರೆ. ಭಾರತದಲ್ಲಿ ಅವರಿಗೆ ಸಿಕ್ಕ ಪ್ರಶಸ್ತಿಗಳ ಸಂಖ್ಯೆ ತುಂಬಾನೇ ದೊಡ್ಡದಿದೆ. ರೆಹಮಾನ್ ಅವರ ಸಂಗೀತ ಸಂಯೋಜನೆಗೆ ಅನೇಕರು ಫಿದಾ ಆಗಿದ್ದಾರೆ. ರೆಹಮಾನ್ ಅವರು ಹಂಚಿಕೊಂಡಿರುವ ವಿಡಿಯೋ ಒಂದು ಈಗ ವೈರಲ್ ಆಗಿದೆ. ‘ಆಸ್ಕರ್​ಗೆ ತಪ್ಪಾದ ಸಿನಿಮಾಗಳನ್ನು ಆಯ್ಕೆ ಮಾಡಿ ಕಳುಹಿಸಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ. ಇದರಿಂದ ಸಾಕಷ್ಟು ಚರ್ಚೆ ಹುಟ್ಟಿಕೊಂಡಿದೆ.

ಪ್ರತಿ ವರ್ಷ ಆಸ್ಕರ್​ಗೆ ಭಾರತದಿಂದ ಒಂದು ಸಿನಿಮಾನ ಆಯ್ಕೆ ಮಾಡಿ ಕಳುಹಿಸಲಾಗುತ್ತದೆ. ಈ ವರ್ಷ ಭಾರತದಿಂದ ‘ಆರ್​ಆರ್​ಆರ್​’ ಸಿನಿಮಾ ಆಯ್ಕೆ ಆಗಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಆ ಊಹೆ ತಪ್ಪಾಗಿತ್ತು. ಗುಜರಾತಿ ಭಾಷೆಯ ‘ಚೆಲ್ಲೋ ಶೋ’ ಸಿನಿಮಾನ ಆಯ್ಕೆ ಮಾಡಿ ಆಸ್ಕರ್​ಗೆ ಕಳುಹಿಸಲಾಯಿತು. ಈ ಬಗ್ಗೆ ಪರ-ವಿರೋಧ ಚರ್ಚೆ ಇದ್ದೇ ಇದೆ. ಈಗ ರೆಹಮಾನ್ ಅವರು ಹಂಚಿಕೊಂಡಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ.

ಸಂಗೀತ ಲೋಕದ ಲೆಜೆಂಡ್ ಎಲ್​. ಸುಬ್ರಮಣಿಯನ್ ಅವರ ಜೊತೆ ರೆಹಮಾನ್ ಸಂವಾದ ನಡೆಸಿದ್ದಾರೆ. ಇದರ ವಿಡಿಯೋನ ರೆಹಮಾನ್ ಅವರು ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಹಂಚಿಕೊಂಡಿದ್ದಾರೆ. ‘ನಮ್ಮ ಸಿನಿಮಾಗಳು ಆಸ್ಕರ್‌ವರೆಗೆ ಹೋಗುತ್ತವೆ. ಆದರೆ, ಅಲ್ಲಿ ಅವಾರ್ಡ್ ಗೆಲ್ಲುವುದಿಲ್ಲ. ಆಸ್ಕರ್ ಪ್ರಶಸ್ತಿಗೆ ತಪ್ಪು ಸಿನಿಮಾಗಳನ್ನು ಆಯ್ಕೆ ಮಾಡಿ ಕಳುಹಿಸಲಾಗುತ್ತಿದೆ. ನಾವು ಮತ್ತೊಬ್ಬರ ರೀತಿಯಲ್ಲಿ ಯೋಚಿಸಬೇಕು. ಇಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿಯಲು ಪಾಶ್ಚಾತ್ಯರ ರೀತಿಯಲ್ಲಿ ಯೋಚಿಸಬೇಕು. ಅಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ನನ್ನ ರೀತಿಯಲ್ಲಿ ಆಲೋಚಿಸಬೇಕು’ ಎಂದಿದ್ದಾರೆ ಅವರು.

ಇದನ್ನೂ ಓದಿ

ಇದನ್ನೂ ಓದಿ: ಈ ಸಾರ್ವಕಾಲಿಕ ಶ್ರೇಷ್ಠ ಸಿನಿಮಾಗಳಿಗೆ ಒಂದು ಆಸ್ಕರ್ ಸಹ ಬಂದಿಲ್ಲ: ಚಕಿತಗೊಳಿಸುವ ಪಟ್ಟಿ ಇಲ್ಲಿದೆ

ಅಂದಹಾಗೆ ರೆಹಮಾನ್ ಹಂಚಿಕೊಂಡಿರುವ ಈ ಸಂದರ್ಶನ ಜನವರಿ 6ರಂದು ಚಿತ್ರೀಕರಿಸಲಾಗಿತ್ತು. ಸುಬ್ರಮಣಿಯನ್ ಅವರು ವಿಡಿಯೋ ಕೊನೆಯಲ್ಲಿ ರೆಹಮಾನ್​ಗೆ ಬರ್ತ್​ಡೇ ವಿಶ್ ತಿಳಿಸುತ್ತಾರೆ. ಹೀಗಾಗಿ, ಇದು ಆ ಸಂದರ್ಭದಲ್ಲಿ ಶೂಟ್ ಮಾಡಿದ್ದು ಎನ್ನಲಾಗಿದೆ.

ಇದನ್ನೂ ಓದಿ: ಆಸ್ಕರ್ ಟ್ರೋಫಿಯನ್ನು ಕಳೆದು ಹಾಕಿದ್ದ ಎ.ಆರ್​. ರೆಹಮಾನ್; ನಂತರ ಅದು ಸಿಕ್ಕಿದ್ದೆಲ್ಲಿ?

ರೆಹಮಾನ್ ಸಂಗೀತ ಸಂಯೋಜನೆ ಮಾಡಿದ ‘ಸ್ಲಮ್​ಡಾಗ್​ ಮಿಲಿಯನೇರ್’​ ಚಿತ್ರ 2008ರಲ್ಲಿ ರಿಲೀಸ್ ಆಯಿತು. ಇದು ರೆಹಮಾನ್ ವೃತ್ತಿಜೀವನದಲ್ಲಿ ಮಹತ್ವದ ಸಿನಿಮಾ ಎನಿಸಿಕೊಂಡಿದೆ. ಈ ಚಿತ್ರಕ್ಕೆ ರೆಹಮಾನ್ ಅವರಿಗೆ ಎರಡು ಆಸ್ಕರ್ ಅವಾರ್ಡ್​ಗಳು ಲಭಿಸಿದ್ದವು. ಎರಡು ಆಸ್ಕರ್ ಅವಾರ್ಡ್ ಗೆದ್ದ ಏಕೈಕ ಭಾರತೀಯ ಎನ್ನುವ ಖ್ಯಾತಿ ಇವರಿಗೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada