ಒಟಿಟಿಯಲ್ಲೂ ಸ್ಟಾರ್​ ವಾರ್​; ಅಕ್ಷಯ್​ ಕುಮಾರ್​ ಮತ್ತು ಸಲ್ಮಾನ್​ ಖಾನ್​ ಚಿತ್ರಗಳ ಮುಖಾಮುಖಿ​

ಒಟಿಟಿಯಲ್ಲೂ ಸ್ಟಾರ್​ ವಾರ್​; ಅಕ್ಷಯ್​ ಕುಮಾರ್​ ಮತ್ತು ಸಲ್ಮಾನ್​ ಖಾನ್​ ಚಿತ್ರಗಳ ಮುಖಾಮುಖಿ​
ಅತರಂಗಿ ರೇ, ಅಂತಿಮ್​: ದಿ ಫೈನಲ್​ ಟ್ರುತ್

‘ಅತರಂಗಿ ರೇ’ ಚಿತ್ರ ಈಗಾಗಲೇ ಟ್ರೇಲರ್​ ಮೂಲಕ ಭಾರಿ ನಿರೀಕ್ಷೆ ಮೂಡಿಸಿದೆ. ಈ ಚಿತ್ರಕ್ಕೆ ಆನಂದ್​ ಎಲ್​. ರಾಯ್​ ನಿರ್ದೇಶನ ಮಾಡಿದ್ದಾರೆ.

TV9kannada Web Team

| Edited By: Madan Kumar

Dec 19, 2021 | 8:51 AM

ಸ್ಟಾರ್​ ನಟರ ಸಿನಿಮಾಗಳು ಒಂದೇ ದಿನ ತೆರೆಕಂಡರೆ ಹಲವು ವಿಚಾರಗಳಲ್ಲಿ ಪೈಪೋಟಿ ಏರ್ಪಡುತ್ತದೆ. ಥಿಯೇಟರ್​ ಹಂಚಿಕೆ, ಬಾಕ್ಸ್​ ಆಫೀಸ್​ ಕಲೆಕ್ಷನ್​ ಎಲ್ಲದರಲ್ಲೂ ಸ್ಪರ್ಧೆ ಇರುತ್ತದೆ. ಒಟಿಟಿ ಪ್ಲಾಟ್​ಫಾರ್ಮ್​ನಲ್ಲೂ (OTT platform) ಸ್ಟಾರ್​ ವಾರ್​ ನಡೆಯುತ್ತಿದೆ. ಒಂದೇ ದಿನ ಇಬ್ಬರು ಸ್ಟಾರ್​ ಹೀರೋಗಳ ಚಿತ್ರಗಳು ಒಟಿಟಿಯಲ್ಲಿ ಪ್ರಸಾರ ಆರಂಭಿಸಿದರೆ ಪ್ರೇಕ್ಷಕರು ಯಾವ ಚಿತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ ಎಂಬ ಪ್ರಶ್ನೆ ಮೂಡುತ್ತದೆ. ಬಾಲಿವುಡ್​ನಲ್ಲಿ ಈಗ ಅಕ್ಷಯ್​ ಕುಮಾರ್​ ಮತ್ತು ಸಲ್ಮಾನ್​ ಖಾನ್​ ನಡುವೆ ಅಂಥದ್ದೊಂದು ಕ್ಲ್ಯಾಶ್​ ಆಗಲಿದೆ. ಸಲ್ಮಾನ್​ ಖಾನ್​  (Salman Khan) ಅಭಿನಯದ ‘ಅಂತಿಮ್​: ದಿ ಫೈನಲ್​ ಟ್ರುತ್​’ (Antim The Final Truth) ಸಿನಿಮಾ ಮತ್ತು ಅಕ್ಷಯ್​ ಕುಮಾರ್​ (Akshay Kumar) ನಟನೆಯ ಬಹುನಿರೀಕ್ಷಿತ ‘ಅತರಂಗೀ ರೇ’ (Atrangi Re) ಸಿನಿಮಾ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗುತ್ತಿವೆ.

ಹಲವು ಕಾರಣಗಳಿಂದಾಗಿ ‘ಅತರಂಗಿ ರೇ’ ಚಿತ್ರದ ಮೇಲೆ ನಿರೀಕ್ಷೆ ಮೂಡಿದೆ. ಅಕ್ಷಯ್​ ಕುಮಾರ್​ ಜತೆ ಕಾಲಿವುಡ್​ ನಟ ಧನುಷ್​, ಸಾರಾ ಅಲಿ ಖಾನ್​ ಅವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಡಿ.24ರಂದು ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​ ಮೂಲಕ ಈ ಚಿತ್ರ ನೇರವಾಗಿ ಆನ್​ಲೈನ್​ನಲ್ಲಿ ರಿಲೀಸ್​ ಆಗಲಿದೆ. ಅದೇ ದಿನ ಸಲ್ಮಾನ್​ ಖಾನ್​ ನಟನೆಯ ‘ಅಂತಿಮ್: ದಿ ಫೈನಲ್​ ಟ್ರುತ್​’ ಕೂಡ ಜೀ5 ಮೂಲಕ ವೀಕ್ಷಣೆಗೆ ಲಭ್ಯವಾಗಲಿದೆ ಎಂಬ ಮಾಹಿತಿ ಕೇಳಿಬಂದಿದೆ.

ಸಲ್ಮಾನ್​ ಖಾನ್​ ಬಾಮೈದ ಆಯುಷ್​ ಶರ್ಮಾ ಮುಖ್ಯ ಭೂಮಿಕೆ ನಿಭಾಯಿಸಿರುವ ‘ಅಂತಿಮ್​: ದಿ ಫೈನಲ್​ ಟ್ರುತ್​’ ಚಿತ್ರದಲ್ಲಿ ಸಲ್ಲು ಒಂದು ಅತಿಥಿ ಪಾತ್ರ ಮಾಡಿದ್ದಾರೆ. ಥಿಯೇಟರ್​ನಲ್ಲಿ ನ.26ರಂದು ಈ ಸಿನಿಮಾ ತೆರೆಕಂಡಿತ್ತು. ಈಗ ಒಟಿಟಿಗೆ ಲಗ್ಗೆ ಇಡುತ್ತಿದೆ. ಚಿತ್ರಮಂದಿರದಲ್ಲಿ ಈಗಾಗಲೇ ಅನೇಕರು ಈ ಸಿನಿಮಾವನ್ನು ನೋಡಿರುವುದರಿಂದ ಒಟಿಟಿಯಲ್ಲಿ ‘ಅತರಂಗಿ ರೇ’ ಜತೆ ಕ್ಲ್ಯಾಶ್​ ಆಗುವುದಿಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ‘ಅತರಂಗಿ ರೇ’ ಚಿತ್ರ ಈಗಾಗಲೇ ಟ್ರೇಲರ್​ ಮೂಲಕ ಭಾರಿ ನಿರೀಕ್ಷೆ ಮೂಡಿಸಿದೆ. ಈ ಚಿತ್ರಕ್ಕೆ ಆನಂದ್​ ಎಲ್.​ ರಾಯ್​ ನಿರ್ದೇಶನ ಮಾಡಿದ್ದಾರೆ.

ಮೊದಲ ಲಾಕ್​ಡೌನ್​ ಬಳಿಕ ಮನರಂಜನಾ ಕ್ಷೇತ್ರದಲ್ಲಿ ಭಾರಿ ಬದಲಾವಣೆಗಳಾದವು. ಚಿತ್ರಮಂದಿರಗಳಿಗಿಂತಲೂ ಹೆಚ್ಚಾಗಿ ಓಟಿಟಿ ಪ್ಲಾಟ್​ಫಾರ್ಮ್ ಮೂಲಕ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಿತು. ನೆಟ್​ಫ್ಲಿಕ್ಸ್​, ಅಮೇಜಾನ್​ ಪ್ರೈಂ ವಿಡಿಯೋ, ಜೀ5, ಡಿಸ್ನಿ ಪ್ಲಸ್​ ಹಾಟ್ ಸ್ಟಾರ್​ ಮುಂತಾದ ಓಟಿಟಿ ವೇದಿಕೆಗಳ ವ್ಯವಹಾರ ವೃದ್ಧಿಸಿತು. ಹಲವು ಸ್ಟಾರ್​ ನಟರ ಸಿನಿಮಾಗಳು ಕೂಡ ನೇರವಾಗಿ ಓಟಿಟಿ ಮೂಲಕ ಬಿಡುಗಡೆಯಾಗಿ ಒಳ್ಳೆಯ ಲಾಭ ಮಾಡಿಕೊಂಡ ಉದಾಹರಣೆ ಇದೆ. ಆ ಸಾಲಿಗೆ ಈಗ ‘ಅತರಂಗಿ ರೇ’ ಕೂಡ ಸೇರುತ್ತಿದೆ.

ಇದನ್ನೂ ಓದಿ:

ವೂಟ್​ ಸೆಲೆಕ್ಟ್​ನಲ್ಲಿ ಬರಲಿದೆ ‘ಹಂಬಲ್ ಪೊಲಿಟಿಷಿಯನ್ ನಾಗರಾಜ್​’ ವೆಬ್​ ಸಿರೀಸ್​; ಗಮನ ಸೆಳೆದ ಟೀಸರ್​

ಓಟಿಟಿಯಲ್ಲಿ ರಿಲೀಸ್​ ಆಗತ್ತೆ ರವಿಚಂದ್ರನ್​ ಹೊಸ ಚಿತ್ರ ‘ಕನ್ನಡಿಗ’; ‘ಕ್ರೇಜಿ ಸ್ಟಾರ್’ ಅಭಿಮಾನಿಗಳಿಗೆ ಗುಡ್​ ನ್ಯೂಸ್​

Follow us on

Related Stories

Most Read Stories

Click on your DTH Provider to Add TV9 Kannada