ವೂಟ್​ ಸೆಲೆಕ್ಟ್​ನಲ್ಲಿ ಬರಲಿದೆ ‘ಹಂಬಲ್ ಪೊಲಿಟಿಷಿಯನ್ ನಾಗರಾಜ್​’ ವೆಬ್​ ಸಿರೀಸ್​; ಗಮನ ಸೆಳೆದ ಟೀಸರ್​

Danish Sait: ದಾನಿಶ್​ ಸೇಠ್ ಜೊತೆಗೆ ಪ್ರಕಾಶ್​ ಬೆಳವಾಡಿ, ವಿಜಯ್​ ಚೆಂಡೂರ್​, ದಿಶಾ ಮದನ್​ ಮುಂತಾದವರು ‘ಹಂಬಲ್ ಪೊಲಿಟಿಷಿಯನ್ ನಾಗರಾಜ್​’ ವೆಬ್​ ಸಿರೀಸ್​ನಲ್ಲಿ ನಟಿಸಿದ್ದಾರೆ. ಸಾದ್​​ ಖಾನ್​ ನಿರ್ದೇಶನ ಮಾಡಿದ್ದಾರೆ.

ವೂಟ್​ ಸೆಲೆಕ್ಟ್​ನಲ್ಲಿ ಬರಲಿದೆ ‘ಹಂಬಲ್ ಪೊಲಿಟಿಷಿಯನ್ ನಾಗರಾಜ್​’ ವೆಬ್​ ಸಿರೀಸ್​; ಗಮನ ಸೆಳೆದ ಟೀಸರ್​
ದಾನಿಶ್​ ಸೇಠ್
TV9kannada Web Team

| Edited By: Madan Kumar

Dec 18, 2021 | 9:04 AM

ದಾನಿಶ್​ ಸೇಠ್​ (Danish Sait) ಅವರ ಪ್ರತಿಭೆ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ನಟ, ನಿರೂಪಕನಾಗಿ ಅವರು ಈಗಾಗಲೇ ಗಮನ ಸೆಳೆದಿದ್ದಾರೆ. ಆರ್​ಸಿಬಿ ಇನ್​ಸೈಡರ್​ ಆಗಿಯೂ ಅವರು ವಿಶ್ವಾದ್ಯಂತ ಫೇಮಸ್​ ಆಗಿದ್ದಾರೆ. ಅವರು ಅಭಿನಯಿಸಿರುವ ‘ಫ್ರೆಂಚ್​​ ಬಿರಿಯಾನಿ’, ‘ಹಂಬಲ್ ಪೊಲಿಟಿಷಿಯನ್ ನಾಗರಾಜ್’ (Humble Politician Nograj) ಚಿತ್ರಗಳನ್ನು ಜನರು ಮೆಚ್ಚಿಕೊಂಡಿದ್ದಾರೆ. ಈಗ ಅವರ ‘ಹಂಬಲ್ ಪೊಲಿಟಿಷಿಯನ್ ನಾಗರಾಜ್​’ ಕಥೆ ವೆಬ್​ ಸಿರೀಸ್​ (Web Series) ರೂಪದಲ್ಲಿ ಬರುತ್ತಿದೆ. ವೂಟ್​ ಸೆಲೆಕ್ಟ್​ (Voot Select) ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿರುವ ಈ ವೆಬ್​ ಸರಣಿಯ ಟೀಸರ್​ ಈಗ ಬಿಡುಗಡೆ ಆಗಿದೆ. ಓಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಮನರಂಜನೆ ಬಯಸುವ ಪ್ರೇಕ್ಷಕರ ವಲಯದಲ್ಲಿ ಈ ಟೀಸರ್​ ಹೊಸ ಹೈಪ್​ ಸೃಷ್ಟಿ ಮಾಡಿದೆ.

ದಾನಿಶ್ ಸೇಠ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಸೋಶಿಯಲ್​ ಮೀಡಿಯಾದಲ್ಲಿ ಅವರು ಸಖತ್​ ಫೇಮಸ್​. ಕಾಮಿಡಿ ವಿಡಿಯೋಗಳ ಮೂಲಕ ಅವರು ಆಗಾಗ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಾರೆ. ಅವರ ಹಾಸ್ಯಪ್ರಜ್ಞೆಗೆ ಎಲ್ಲರೂ ಫಿದಾ ಆಗುತ್ತಾರೆ. ಈಗ ‘ಹಂಬಲ್ ಪೊಲಿಟಿಷಿಯನ್ ನಾಗರಾಜ್​’ ವೆಬ್​ ಸಿರೀಸ್​ ವೀಕ್ಷಣೆಗೆ ಲಭ್ಯವಾಗುತ್ತಿರುವ ಕುರಿತು ದಾನಿಶ್​ ಅವರು ಸಂತಸ ಹಂಚಿಕೊಂಡಿದ್ದಾರೆ.

‘ನಮಸ್ಕಾರ ಸ್ನೇಹಿತರೆ. ಇಂದು ನಾನು ತುಂಬ ಭಾವುಕನಾಗಿದ್ದೇನೆ. ರೇಡಿಯೋದಲ್ಲಿ ಒಂದು ಧ್ವನಿಯಾಗಿ ನೋಗರಾಜ್​ ಪಾತ್ರ ಮೂಡಿಬಂದಿತ್ತು. ನಂತರ ಅದು ಸಿನಿಮಾ ಆಯಿತು. ಈಗ ಅದು ಒಂದು ವೆಬ್​ ಸಿರೀಸ್​ ಆಗಿದೆ’ ಎಂದು ಪೋಸ್ಟ್​ ಮಾಡುವ ಮೂಲಕ ದಾನಿಶ್​ ಸೇಠ್​ ಅವರು ಟೀಸರ್ ಹಂಚಿಕೊಂಡಿದ್ದಾರೆ.

ದಾನಿಶ್​ ಸೇಠ್ ಜೊತೆಗೆ ಪ್ರಕಾಶ್​ ಬೆಳವಾಡಿ, ವಿಜಯ್​ ಚೆಂಡೂರ್​, ದಿಶಾ ಮದನ್​ ಮುಂತಾದವರು ಈ ವೆಬ್​ ಸರಣಿಯಲ್ಲಿ ನಟಿಸಿದ್ದಾರೆ. ಸಾದ್​​ ಖಾನ್​ ನಿರ್ದೇಶನ ಮಾಡಿದ್ದಾರೆ. ನಕುಲ್​ ಅಭ್ಯಂಕರ್​ ಸಂಗೀತ ನಿರ್ದೇಶನ ಮಾಡಿದ್ದಾರೆ. ವೂಟ್​ ಸೆಲೆಕ್ಟ್​ ಮೂಲಕ 2022ರ ಜ.6ರಂದು ಈ ವೆಬ್​ ಸರಣಿ ಬಿಡುಗಡೆ ಆಗಲಿದೆ.

View this post on Instagram

A post shared by Danish sait (@danishsait)

‘ಹಂಬಲ್ ಪೊಲಿಟಿಷಿಯನ್ ನಾಗರಾಜ್’​ ಕಥೆ ಏನು?

ಇದು ಒಟ್ಟು 10 ಎಪಿಸೋಡ್ ಹೊಂದಿರುವ ಕಾಮಿಡಿ ಆಧಾರಿತ ವೆಬ್‌ ಸೀರಿಸ್. ನಾಗರಾಜ್​ ಒಬ್ಬ ಸ್ವಯಂ ಸೇವಕನಾಗಿ ಸೇವೆ ಸಲ್ಲಿಸುತ್ತಾ ರಾಜಕೀಯ ಕ್ಷೇತ್ರಕ್ಕೆ ಕಾಲಿಡುತ್ತಾನೆ. ನಂತರ ಮುಖ್ಯಮಂತ್ರಿ ಸ್ಥಾನಕ್ಕೇರಲು ಏನೆಲ್ಲಾ ಸರ್ಕಸ್ ಮಾಡಲಿದ್ದಾನೆ ಎಂಬುದು ಇಲ್ಲಿನ ಹೈಲೈಟ್​. ಅಧಿಕಾರದ ದುರಾಸೆ ಮತ್ತು ಭ್ರಷ್ಟಾಚಾರವನ್ನು ವಿಡಂಬನಾತ್ಮಕವಾಗಿ ನಿರೂಪಿಸುವ ಮೂಲಕ ಪ್ರೇಕ್ಷಕರನ್ನು ನಗಿಸುವ ಭರವಸೆ ಮೂಡಿಸಿದೆ ಈ ಟೀಸರ್​. ದಾನಿಶ್​ ಸೇಠ್​ ಅವರ ಈ ಪ್ರಯತ್ನಕ್ಕೆ ಎಲ್ಲರೂ ಶುಭ ಕೋರುತ್ತಿದ್ದಾರೆ. ಅವರ ಅಭಿಮಾನಿ ಬಳಗಕ್ಕೆ ಈ ವೆಬ್​ ಸರಣಿ ಖುಷಿ ನೀಡಲಿದೆ.

ಇದನ್ನೂ ಓದಿ:

ದಾನಿಶ್​ ಸೇಠ್​ ಸಹೋದರಿ ಕುಬ್ರಾ ಸೇಠ್​ಗೆ ‘ಫೌಂಡೇಶನ್​’ ಅವಕಾಶ; ಹಾಲಿವುಡ್​ ಕಲಾವಿದರ ಜತೆ ನಟನೆ

ದಾನಿಶ್​ ಸೇಠ್​ಗೆ ಕರೆ ಮಾಡಿ ಹೊಗಳಿದ ರಣಬೀರ್​ ಕಪೂರ್​; ಈ ವಿಡಿಯೋ ಅಪ್​ಲೋಡ್​ ಮಾಡಿದ್ದಕ್ಕೆ ಬೈದ ಬಾಲಿವುಡ್​ ನಟ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada