‘ಬಿಗ್ ಬಾಸ್ ಕನ್ನಡ ಒಟಿಟಿ’ (Bigg Boss OTT) ದಿನಕಳೆದಂತೆ ಕುತೂಹಲ ಹೆಚ್ಚಿಸಿಕೊಳ್ಳುತ್ತಿದೆ. ಇದರ ಜತೆಗೆ ಸ್ಪರ್ಧೆ ಕೂಡ ಹೆಚ್ಚುತ್ತಿದೆ. ಈಗ ಮನೆಯಲ್ಲಿ ಐದನೇ ವಿಕೆಟ್ ಬಿದ್ದಿದೆ. ಈ ವಾರ ಮನೆಯಿಂದ ಉದಯ್ ಸೂರ್ಯ (Uday Surya) ಔಟ್ ಆಗಿದ್ದಾರೆ. ಈ ಮೂಲಕ ದೊಡ್ಮನೆ ಸೇರಿದ್ದ 16 ಮಂದಿಯಲ್ಲಿ ಈಗ 11 ಮಂದಿ ಮಾತ್ರ ಉಳಿದುಕೊಂಡಿದ್ದಾರೆ. ಇನ್ನು ಕೇವಲ ಮೂರು ವಾರಗಳ ಕಾಲ ‘ಬಿಗ್ ಬಾಸ್ ಒಟಿಟಿ’ ನಡೆಯುವುದರಿಂದ ಕಾಂಪಿಟೇಷನ್ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.
ಕಿಚ್ಚ ಸುದೀಪ್ ಅವರು ಪ್ರತಿ ವಾರ ನಿರೂಪಣೆ ಮಾಡುತ್ತಾರೆ. ಟಿವಿ ಸೀಸನ್ಗಳಲ್ಲಿ ಭಾನುವಾರ ಎಲಿಮಿನೇಷನ್ ಪ್ರಕ್ರಿಯೆ ನಡೆಯುತ್ತಿತ್ತು. ಆದರೆ, ಒಟಿಟಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳಲಾಗಿದೆ. ಶನಿವಾರವೇ ಎಲಿಮಿನೇಷನ್ ಪ್ರಕ್ರಿಯೆ ನಡೆಯುತ್ತಿದೆ. ಈ ವಾರ ಬಿಗ್ ಬಾಸ್ ಮನೆಯಿಂದ ಉದಯ್ ಹೊರ ಹೋಗುತ್ತಿರುವ ಬಗ್ಗೆ ಸುದೀಪ್ ಘೋಷಣೆ ಮಾಡಿದರು. ಈ ಮೂಲಕ ಮೂರನೇ ವಾರಕ್ಕೆ ಉದಯ್ ಪ್ರಯಾಣ ಮುಗಿಸಿದ್ದಾರೆ.
ಉದಯ್ ಸೂರ್ಯ, ರೂಪೇಶ್ ಶೆಟ್ಟಿ, ಅಕ್ಷತಾ, ಆರ್ಯವರ್ಧನ್, ಚೈತ್ರಾ, ಜಯಶ್ರೀ, ಸೊಮಣ್ಣ ಮೇಲೆ ಈ ವಾರದ ನಾಮಿನೇಷನ್ ತೂಗುಗತ್ತಿ ಇತ್ತು. ಆ ಪೈಕಿ ಆರ್ಯವರ್ಧನ್ ಗುರೂಜಿ ಮೊದಲು ಸೇವ್ ಆದರು. ಆ ಬಳಿಕ ರೂಪೇಶ್ ಶೆಟ್ಟಿ, ಸೋಮಣ್ಣ, ಅಕ್ಷತಾ, ಚೈತ್ರಾ, ಜಯಶ್ರೀ ಉಳಿದುಕೊಂಡರು. ಕೊನೆಯಲ್ಲಿ ಉದಯ್ ಎಲಿಮಿನೇಟ್ ಆಗಿದ್ದಾರೆ.
ಇದನ್ನೂ ಓದಿ: ‘ಬಿಗ್ ಬಾಸ್’ ಮನೆಯಲ್ಲಿ ಸುದೀಪ್ ಹೇಳಿದ ಮಾತನ್ನು ನಡೆಸಿಕೊಡಲೇ ಇಲ್ಲ ಸಾನ್ಯಾ ಅಯ್ಯರ್
‘ಬಿಗ್ ಬಾಸ್’ ಮನೆಯಲ್ಲಿ ಉದಯ್ ಸೂರ್ಯ ಅವರು ಒಂದು ಎಡವಟ್ಟು ಮಾಡಿಕೊಂಡಿದ್ದರು. ಕೆಲವರ ಬಗ್ಗೆ ಅವರು ಕೆಟ್ಟ ರೀತಿಯಲ್ಲಿ ಮಾತನಾಡಿದ್ದಾರೆ, ಹೆಣ್ಣು ಮಕ್ಕಳನ್ನು ಕೀಳಾಗಿ ನೋಡಿದ್ದಾರೆ ಎಂಬ ಆರೋಪ ಬಂತು. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಇಡೀ ಮನೆಯವರು ಉದಯ್ ವಿರುದ್ಧ ತಿರುಗಿ ಬಿದ್ದರು. ಇನ್ನು, ಮನೆಯಲ್ಲಿ ಅವರು ಡಬಲ್ಗೇಮ್ ಆಡುತ್ತಿದ್ದರು ಎಂಬ ಆರೋಪ ಕೂಡ ಇದೆ. ಇದರಿಂದ ಕೂಡ ಅವರಿಗೆ ಹಿನ್ನಡೆ ಆಗಿದೆ.
Published On - 8:32 pm, Sat, 27 August 22