Ananya Panday: ‘ಕಾಫಿ ವಿತ್​ ಕರಣ್​’ ಶೋನಲ್ಲಿ ಪುತ್ರಿ ಅನನ್ಯಾ ಪಾಂಡೆ ಬೋಲ್ಡ್​ ಮಾತುಗಳಿಗೆ ತಂದೆ ಚಂಕಿ ಪಾಂಡೆ ಬೆಂಬಲ

| Updated By: ಮದನ್​ ಕುಮಾರ್​

Updated on: Aug 01, 2022 | 8:06 AM

Chunky Pandey | Koffee With Karan: ಅನನ್ಯಾ ಪಾಂಡೆ ಮಾತುಗಳಿಗೆ ಚಂಕಿ ಪಾಂಡೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಕಾಫಿ ವಿತ್​ ಕರಣ್ 7​’ ಶೋನಲ್ಲಿ ಒಟ್ಟಾರೆಯಾಗಿ ಪುತ್ರಿ ನಡೆದುಕೊಂಡ ರೀತಿಗೆ ಅವರು ಭೇಷ್​ ಎಂದಿದ್ದಾರೆ.

Ananya Panday: ‘ಕಾಫಿ ವಿತ್​ ಕರಣ್​’ ಶೋನಲ್ಲಿ ಪುತ್ರಿ ಅನನ್ಯಾ ಪಾಂಡೆ ಬೋಲ್ಡ್​ ಮಾತುಗಳಿಗೆ ತಂದೆ ಚಂಕಿ ಪಾಂಡೆ ಬೆಂಬಲ
ಅನನ್ಯಾ ಪಾಂಡೆ, ಚಂಕಿ ಪಾಂಡೆ, ವಿಜಯ್ ದೇವರಕೊಂಡ
Follow us on

ಕರಣ್​ ಜೋಹರ್​ ನಡೆಸಿಕೊಡುವ ‘ಕಾಫಿ ವಿತ್​ ಕರಣ್​’ ಶೋ (Koffee With Karan) ತುಂಬ ಫೇಮಸ್ ಆಗಿದೆ. ಅದರ 7ನೇ ಸೀಸನ್​ ಈಗ ನಡೆಯುತ್ತಿದೆ. ಪ್ರತಿ ಗುರುವಾರ ಜನಪ್ರಿಯ ತಾರೆಯರ ಎಪಿಸೋಡ್​ಗಳು ಪ್ರಸಾರ ಆಗುತ್ತವೆ. ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್ ಮೂಲಕ ಇದೇ ಮೊದಲ ಬಾರಿಗೆ ಒಟಿಟಿಯಲ್ಲಿ ಈ ಶೋ ಬಿತ್ತರ ಆಗುತ್ತಿದೆ. ಎಂದಿನಂತೆ ಈ ಬಾರಿ ಕೂಡ ಇಲ್ಲಿ ಸೆಲೆಬ್ರಿಟಿಗಳು ಓಪನ್​ ಆಗಿಯೇ ಮಾತನಾಡುತ್ತಿದ್ದಾರೆ. ಲವ್​, ಡೇಟಿಂಗ್​, ಲೈಂಗಿಕತೆ, ಬ್ರೇಕಪ್​, ವಿಚ್ಛೇದನ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಕರಣ್​ ಜೋಹರ್​ ಪ್ರಶ್ನೆ ಕೇಳುತ್ತಾರೆ. ಇಂಥ ಪ್ರಶ್ನೆಗಳಿಗೆ ಉತ್ತರಿಸಿದಾಗ ಕಿರಿಕ್​ ಆಗುವುದು ಸಹಜ. ಇತ್ತೀಚಿನ ಎಪಿಸೋಡ್​ನಲ್ಲಿ ನಟಿ ಅನನ್ಯಾ ಪಾಂಡೆ (Ananya Panday) ಅವರು ಅತಿಥಿಯಾಗಿ ಬಂದಿದ್ದರು. ಅವರ ಮಾತುಗಳಿಗೆ ತಂದೆ ಚಂಕಿ ಪಾಂಡೆ (Chunky Pandey) ಭೇಷ್​ ಎಂದಿದ್ದಾರೆ.

ಬಾಲಿವುಡ್​ನಲ್ಲಿ ಚಂಕಿ ಪಾಂಡೆ ಅನೇಕ ಬಗೆಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಅವರ ಪುತ್ರಿ ಅನನ್ಯಾ ಪಾಂಡೆ ಕೂಡ ಈಗ ಬ್ಯುಸಿ ಆಗಿದ್ದಾರೆ. ‘ಲೈಗರ್​’ ಸಿನಿಮಾದಲ್ಲಿ ಅವರು ವಿಜಯ್​ ದೇವರಕೊಂಡ ಜೊತೆ ನಟಿಸಿದ್ದಾರೆ. ಹಾಗಾಗಿ ‘ಕಾಫಿ ವಿತ್​ ಕರಣ್​ ಶೋ’ಗೆ ಅವರಿಬ್ಬರು ಜೋಡಿಯಾಗಿ ಬಂದಿದ್ದರು. ಈ ಎಪಿಸೋಡ್​ ನೋಡಿ ಚಂಕಿ ಪಾಂಡೆ ಖುಷಿಪಟ್ಟಿದ್ದಾರೆ.

ಕೊನೆಯ ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದು ಯಾವಾಗ ಎಂದು ವಿಜಯ್​ ದೇವರಕೊಂಡಗೆ ಕರಣ್​ ಜೋಹರ್​ ಪ್ರಶ್ನೆ ಮಾಡಿದ್ದರು. ಅದಕ್ಕೆ ಉತ್ತರ ಊಹಿಸಲು ಅನನ್ಯಾ ಪಾಂಡೆ ಮುಂದಾಗಿದ್ದರು. ಈ ವಿಚಾರಕ್ಕಾಗಿ ಅವರನ್ನು ಕೆಲವರು ಟ್ರೋಲ್​ ಮಾಡಿದ್ದರು. ಆದರೆ ಮಗಳ ಮಾತುಗಳಿಗೆ ಚಂಕಿ ಪಾಂಡೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಶೋನಲ್ಲಿ ಒಟ್ಟಾರೆಯಾಗಿ ಪುತ್ರಿ ನಡೆದುಕೊಂಡ ರೀತಿಗೆ ಅವರು ಭೇಷ್​ ಎಂದಿದ್ದಾರೆ.

ಇದನ್ನೂ ಓದಿ
ಹಳೆಯ ವಿಚಾರ ಇಟ್ಟುಕೊಂಡು ವಿಜಯ್ ದೇವರಕೊಂಡ ಬಗ್ಗೆ ಅಸಮಾಧಾನ ಹೊರಹಾಕಿದ ಅನನ್ಯಾ ಪಾಂಡೆ
‘ಕೊನೆಯದಾಗಿ ಲೈಂಗಿಕ ಕ್ರಿಯೆ ನಡೆಸಿದ್ದು ಯಾವಾಗ?’; ದೇವರಕೊಂಡಗೆ ಕೇಳಿದ ಪ್ರಶ್ನೆಗೆ ಅನನ್ಯಾ ಪಾಂಡೆ ಕೊಟ್ರು ಉತ್ತರ
ಬ್ರೇಕಪ್​ ಬೆನ್ನಲ್ಲೇ ಅನನ್ಯಾ ಪಾಂಡೆಗೆ ಮತ್ತೆ ಲವ್​? ಸ್ಟಾರ್ ಹೀರೋ ಜತೆ ರಿಲೇಶನ್​ಶಿಪ್​
‘ಅಕ್ಡಿ ಪಕ್ಡಿ’ ಸಾಂಗ್ ಮೂಲಕ ಗಮನ ಸೆಳೆದ ವಿಜಯ್ ದೇವರಕೊಂಡ-ಅನನ್ಯಾ ಪಾಂಡೆ

‘ನನಗೆ ತುಂಬ ಖುಷಿ ಆಗುತ್ತಿದೆ. ಕಾಫಿ ವಿತ್​ ಕರಣ್​ ಶೋನಲ್ಲಿ ಆಕೆ ತುಂಬ ಚೆನ್ನಾಗಿ ನಡೆದುಕೊಂಡಳು. ಆಕೆಯ ಬಗ್ಗೆ ನನಗೆ ಸಖತ್​ ಹೆಮ್ಮೆ ಇದೆ. ಈ ಪ್ರಾಮಾಣಿಕತೆಯನ್ನು ಅವಳು ಎಂದಿಗೂ ಕಳೆದುಕೊಳ್ಳಬಾರದು’ ಎಂದು ಚಂಕಿ ಪಾಂಡೆ ಹೇಳಿದ್ದಾರೆ. ಈ ಹಿಂದೆ ಅನನ್ಯಾ ಪಾಂಡೆ ಅವರ ಡ್ರೆಸ್​ ಬಗ್ಗೆ ಕೆಟ್ಟ ಕಮೆಂಟ್​ಗಳನ್ನು ಮಾಡಲಾಗಿತ್ತು. ಆಗಲೂ ಅವರು ಮಗಳ ಪರವಾಗಿ ಬ್ಯಾಟ್​ ಬೀಸಿದ್ದರು.

Published On - 8:06 am, Mon, 1 August 22