ಹಳೆಯ ವಿಚಾರ ಇಟ್ಟುಕೊಂಡು ವಿಜಯ್ ದೇವರಕೊಂಡ ಬಗ್ಗೆ ಅಸಮಾಧಾನ ಹೊರಹಾಕಿದ ಅನನ್ಯಾ ಪಾಂಡೆ

‘ಅರ್ಜುನ್​ ರೆಡ್ಡಿ’ ಸಿನಿಮಾದಲ್ಲಿ ಹೀರೋಯಿನ್ ಕಪಾಳಕ್ಕೆ  ಹೀರೋ ಹೊಡೆಯುವ ದೃಶ್ಯವೊಂದು ಬರುತ್ತದೆ. ಇದನ್ನು ವಿಜಯ್ ದೇವರಕೊಂಡ ಮಾಡಬಾರದಿತ್ತು ಎನ್ನುವ ಮಾತು ಕೇಳಿ ಬಂದಿತ್ತು. ಅನನ್ಯಾ ಕೂಡ ಇದೇ ಮಾತನ್ನು ಹೇಳಿದ್ದಾರೆ.

ಹಳೆಯ ವಿಚಾರ ಇಟ್ಟುಕೊಂಡು ವಿಜಯ್ ದೇವರಕೊಂಡ ಬಗ್ಗೆ ಅಸಮಾಧಾನ ಹೊರಹಾಕಿದ ಅನನ್ಯಾ ಪಾಂಡೆ
ವಿಜಯ್​-ಅನನ್ಯಾ
TV9kannada Web Team

| Edited By: Rajesh Duggumane

Jul 30, 2022 | 1:31 PM

ನಟಿ ಅನನ್ಯಾ ಪಾಂಡೆ (Ananya Panday) ಹಾಗೂ ವಿಜಯ್ ದೇವರಕೊಂಡ (Vijay Devarakonda) ಅವರು ‘ಲೈಗರ್’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈ ಸಿನಿಮಾ ಆಗಸ್ಟ್ 25ರಂದು ತೆರೆಗೆ ಬರುತ್ತಿದೆ. ಇಬ್ಬರೂ ನಾನಾ ಕಡೆ ತೆರಳಿ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಜೋಡಿ ‘ಕಾಫಿ ವಿತ್ ಕರಣ್​’ ಶೋಗೆ ಬಂದಿತ್ತು. ಈ ವೇಳೆ ವಿಜಯ್ ದೇವರಕೊಂಡ ನಟನೆಯ ‘ಅರ್ಜುನ್ ರೆಡ್ಡಿ’ ಸಿನಿಮಾ ಬಗ್ಗೆ ಅನನ್ಯಾ ಪಾಂಡೆ ಅಸಮಾಧಾನ ಹೊರಹಾಕಿದ್ದಾರೆ. ಈ ರೀತಿಯ ಚಿತ್ರಗಳು ಸಮಾಜವನ್ನು ಹಾಳು ಮಾಡುತ್ತವೆ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಅವರ ನೇರನುಡಿಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

‘ಅರ್ಜುನ್​ ರೆಡ್ಡಿ’ ಸಿನಿಮಾದಲ್ಲಿ ಹೀರೋಯಿನ್ ಕಪಾಳಕ್ಕೆ  ಹೀರೋ ಹೊಡೆಯುವ ದೃಶ್ಯವೊಂದು ಬರುತ್ತದೆ. ಇದನ್ನು ವಿಜಯ್ ದೇವರಕೊಂಡ ಮಾಡಬಾರದಿತ್ತು ಎನ್ನುವ ಮಾತು ಕೇಳಿ ಬಂದಿತ್ತು. ಅನೇಕ ಮಹಿಳಾ ಸಂಘಟನೆಗಳು ಈ ದೃಶ್ಯದ ವಿರುದ್ಧ ಅಪಸ್ವರ ಎತ್ತಿದ್ದರು. ಈ ಬಗ್ಗೆ ವಿಜಯ್ ದೇವರಕೊಂಡ ಅವರಿಗೆ ‘ಕಾಫಿ ವಿತ್ ಕರಣ್​ 7’ನಲ್ಲಿ ಪ್ರಶ್ನೆ ಮಾಡಲಾಯಿತು.

‘ನಾನು ಮಾಡುವ ಪಾತ್ರದಲ್ಲಿ ನಾನು ತನ್ಮಯನಾಗಿಲ್ಲ ಎಂದರೆ ನಾನು ಆ ಪಾತ್ರವನ್ನು ಮಾಡಲು ಸಾಧ್ಯವಿಲ್ಲ. ಅರ್ಜುನ್ ರೆಡ್ಡಿ ಸಿನಿಮಾದಲ್ಲಿ ನಾನು ಮಾಡಿದ ಎಲ್ಲಾ ದೃಶ್ಯಗಳನ್ನೂ ನಾನು ಒಪ್ಪುತ್ತೇನೆ’ ಎಂದರು ವಿಜಯ್ ದೇವರಕೊಂಡ. ಇದಕ್ಕೆ ಅನನ್ಯಾ ಪಾಂಡೆ ಅಪಸ್ವರ ಎತ್ತಿದ್ದಾರೆ. ವಿಜಯ್ ಹೇಳಿದ ಮಾತಿಗೆ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.

‘ಅರ್ಜುನ್ ರೆಡ್ಡಿ ಸಿನಿಮಾ ಇಡೀ ಸಮಾಜವನ್ನು ತಪ್ಪು ದಾರಿಗೆ ಎಳೆಯಬಹುದು. ಆ ಸಾಮರ್ಥ್ಯ ಚಿತ್ರಕ್ಕಿದೆ. ಗರ್ಲ್​​ಫ್ರೆಂಡ್​ಗೆ ಬಾಯ್​ಫ್ರೆಂಡ್​ ಹೊಡೆಯಬಹುದು ಎಂಬುದನ್ನು ಈ ಸಿನಿಮಾ ಹೇಳುತ್ತದೆ. ನಾನು ಅರ್ಜುನ್ ರೆಡ್ಡಿ ಸಿನಿಮಾವನ್ನು ಒಪ್ಪುವುದಿಲ್ಲ. ಇದು ಯುವಕರ ಹಾಗೂ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಿದೆ’ ಎಂದರು ಅನನ್ಯಾ ಪಾಂಡೆ.

ಇದನ್ನೂ ಓದಿ: ‘ಕೊನೆಯದಾಗಿ ಲೈಂಗಿಕ ಕ್ರಿಯೆ ನಡೆಸಿದ್ದು ಯಾವಾಗ?’; ದೇವರಕೊಂಡಗೆ ಕೇಳಿದ ಪ್ರಶ್ನೆಗೆ ಅನನ್ಯಾ ಪಾಂಡೆ ಕೊಟ್ರು ಉತ್ತರ

ಇದನ್ನೂ ಓದಿ

ಅನನ್ಯಾ ಪಾಂಡೆ ಅವರ ಹೇಳಿಕೆಗೆ ಅನೇಕ ಕಡೆಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಸಾಮಾನ್ಯವಾಗಿ ಸಹ ಕಲಾವಿದರು ಹೇಳಿದ್ದನ್ನು ಹೌದು ಎಂದು ಒಪ್ಪುವವರೇ ಜಾಸ್ತಿ. ಆದರೆ ಅನನ್ಯಾ ಪಾಂಡೆ ಈ ರೀತಿ ಮಾಡಿಲ್ಲ. ಅವರು ವಿಜಯ್ ದೇವರಕೊಂಡ ಹೇಳಿದ ಮಾತಿಗೆ ಶೋನಲ್ಲೇ ಅಸಮಾಧಾನ ಹೊರಹಾಕಿದರು. ಅನನ್ಯಾ ಮಾತು ಮೆಚ್ಚುವಂತಹದ್ದು ಎಂದು ಅನೇಕರು ಹೇಳಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada