Hansika Motwani: ‘ಪತಿಯ ಮೊದಲ ಮದುವೆ ಮುರಿಯಲು ಕಾರಣ ನಾನಲ್ಲ’; ನೇರವಾಗಿ ಹೇಳಿದ ಹನ್ಸಿಕಾ

Hansika Motwani | Sohael Khaturiya: ‘ಆ ಸಮಯದಲ್ಲಿ ಈ ವ್ಯಕ್ತಿಯ ಪರಿಚಯ ನನಗಿತ್ತು ಎಂದ ಮಾತ್ರಕ್ಕೆ ತಪ್ಪು ನನ್ನದೇ ಎಂದು ಹೇಳಲು ಸಾಧ್ಯವಿಲ್ಲ. ನನಗೂ ಇದಕ್ಕೂ ಸಂಬಂಧವಿಲ್ಲ’ ಎಂದು ಹನ್ಸಿಕಾ ಮೋಟ್ವಾನಿ ಹೇಳಿದ್ದಾರೆ.

Hansika Motwani: ‘ಪತಿಯ ಮೊದಲ ಮದುವೆ ಮುರಿಯಲು ಕಾರಣ ನಾನಲ್ಲ’; ನೇರವಾಗಿ ಹೇಳಿದ ಹನ್ಸಿಕಾ
ಹನ್ಸಿಕಾ ಮೋಟ್ವಾನಿ, ಸೊಹೈಲ್ ಕತುರಿಯಾ
Follow us
ಮದನ್​ ಕುಮಾರ್​
|

Updated on: Feb 10, 2023 | 10:31 PM

ಪುನೀತ್ ರಾಜ್​ಕುಮಾರ್ ನಟನೆಯ ‘ಬಿಂದಾಸ್’ ಚಿತ್ರದಲ್ಲಿ ನಟಿಸಿದ್ದ ಹನ್ಸಿಕಾ ಮೋಟ್ವಾನಿ (Hansika Motwani) ಅವರು ಉದ್ಯಮಿ ಸೊಹೈಲ್ ಕತುರಿಯಾ ಜತೆ ಮದುವೆ ಆಗಿದ್ದಾರೆ. ಕಳೆದ ವರ್ಷಾಂತ್ಯಕ್ಕೆ ಸಾಕಷ್ಟು ಅದ್ದೂರಿಯಾಗಿ ಈ ಮದುವೆ (Hansika Motwani Marriage) ಕಾರ್ಯ ನಡೆದಿತ್ತು. ಇತ್ತೀಚೆಗೆ ಸೆಲೆಬ್ರಿಟಿಗಳ ಮದುವೆ ವಿಡಿಯೋವನ್ನು ಒಟಿಟಿಯಲ್ಲಿ ಪ್ರಸಾರ ಮಾಡುವ ಟ್ರೆಂಡ್ ಜೋರಾಗಿದೆ. ಅದೇ ರೀತಿ ಈ ದಂಪತಿಯ ಮದುವೆ ಸಮಾರಂಭದ ವಿಡಿಯೋ ಡಿಸ್ನಿ ಪ್ಲಸ್ ಹಾಟ್​ಸ್ಟಾರ್​ನಲ್ಲಿ (Disney Plus Hotstar) ಪ್ರಸಾರ ಆಗುತ್ತಿದೆ. ಇದಕ್ಕೆ ‘ಲವ್ ಶಾದಿ ಡ್ರಾಮಾ’ ಎಂಬ ಶೀರ್ಷಿಕೆ ನೀಡಲಾಗಿದೆ. ಇತ್ತೀಚೆಗೆ ಇದರ ಪ್ರೋಮೋ ರಿಲೀಸ್ ಮಾಡಲಾಗಿತ್ತು. ಈಗ ಇದರ ಮೊದಲ ಎಪಿಸೋಡ್ ಪ್ರಸಾರ ಕಂಡಿದೆ.

ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಬಗ್ಗೆ ಫ್ಯಾನ್ಸ್​ಗೆ ಆಸಕ್ತಿ ಇರುತ್ತದೆ. ಇದರ ಲಾಭ ಪಡೆಯೋಕೆ ಒಟಿಟಿ ಪ್ಲಾಟ್​ಫಾರ್ಮ್​ಗಳು ಮುಂದಾಗಿವೆ. ಹೀಗಾಗಿ, ಒಟಿಟಿ ಮಂದಿ ಸೆಲೆಬ್ರಿಟಿಗಳ ಮದುವೆ ಕಾರ್ಯಕ್ರಮದ ಪ್ರಸಾರ ಹಕ್ಕನ್ನು ಪಡೆದುಕೊಳ್ಳುತ್ತಿದ್ದಾರೆ. ಸೆಲೆಬ್ರಿಟಿ ಜೋಡಿಗಳ ಲವ್ ಲೈಫ್ ಬಗ್ಗೆ ಒಂದಷ್ಟು ರಹಸ್ಯಗಳನ್ನು ಜನರ ಮುಂದೆ ತೆರೆದಿಟ್ಟು, ಮದುವೆಯ ಝಲಕ್ ತೋರಿಸಲಾಗುತ್ತಿದೆ. ಅದೇ ರೀತಿ ಈಗ ಹನ್ಸಿಕಾ ಮೋಟ್ವಾನಿ ಹಾಗೂ ಸೋಹೈಲ್ ಮದುವೆ ವಿಡಿಯೋ ಪ್ರಸಾರ ಆಗುತ್ತಿದೆ. ಇದರ ಮೊದಲ ಎಪಿಸೋಡ್​ನಲ್ಲಿ ಒಂದಷ್ಟು ವಿಚಾರಗಳನ್ನು ಹನ್ಸಿಕಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ
Image
ಖ್ಯಾತ ನಿರ್ಮಾಪಕನ ಜತೆ ಮದುವೆ ಆದ ಕಿರುತೆರೆ ನಟಿ ಮಹಾಲಕ್ಷ್ಮೀ; ‘ನಿಜವಾದ ವಿವಾಹವೇ?’ ಎಂದ ಫ್ಯಾನ್ಸ್
Image
ಯಾಕೆ ನೀನಿನ್ನೂ ಮದುವೆ ಆಗಿಲ್ಲ…ವಿಡಿಯೋ ಮೂಲಕ ಉತ್ತರ ಕೊಟ್ಟ ನಟಿ ರಮ್ಯಾ
Image
Priya Anand: ನಿತ್ಯಾನಂದ ಜತೆ ಮದುವೆ ಆಗ್ತೀನಿ ಅಂತ ‘ಜೇಮ್ಸ್​’ ನಟಿ ಪ್ರಿಯಾ ಆನಂದ್​ ಹೇಳಿದ್ದೇಕೆ?
Image
Pavitra Lokesh: ‘ಸುಚೇಂದ್ರ ಪ್ರಸಾದ್​ ಜತೆ ನನ್ನ ಮದುವೆ ಆಗಿಲ್ಲ, 11 ವರ್ಷ ಒಟ್ಟಿಗೆ ಇದ್ದೆ ಅಷ್ಟೇ’: ನಟಿ ಪವಿತ್ರಾ ಲೋಕೇಶ್​

ಸೋಹೈಲ್ ಈ ಮೊದಲು ಮದುವೆ ಆಗಿದ್ದರು. ಅವರ ಮಾಜಿ ಪತ್ನಿಯ ಹೆಸರು ರಿಂಕಿ. ರಿಂಕಿ ಮತ್ತು ಹನ್ಸಿಕಾ ಫ್ರೆಂಡ್ಸ್ ಆಗಿದ್ದರು. ಸೋಹೈಲ್ ಹಾಗೂ ರಿಂಕಿ ಮದುವೆಯಲ್ಲಿ ಹನ್ಸಿಕಾ ಕೂಡ ಭಾಗಿ ಆಗಿದ್ದರು. ಸೋಹೈಲ್ ಜತೆ ಹನ್ಸಿಕಾ ಮದುವೆ ಘೋಷಣೆ ಮಾಡಿಕೊಳ್ಳುತ್ತಿದ್ದಂತೆಯೇ ಒಂದಷ್ಟು ಮಂದಿ ‘ಬೆಸ್ಟ್​ ಫ್ರೆಂಡ್​ನ ಗಂಡನನ್ನೇ ಕದ್ದಳು’ ಎಂದು ಹನ್ಸಿಕಾ ಅವರನ್ನು ಟೀಕೆ ಮಾಡಿದರು. ‘ಲವ್ ಶಾದಿ ಡ್ರಾಮಾ’ದಲ್ಲಿ ಹನ್ಸಿಕಾ ಈ ಬಗ್ಗೆ ಮಾತನಾಡಿದ್ದಾರೆ.

View this post on Instagram

A post shared by Hansika Motwani (@ihansika)

‘ಆ ಸಮಯದಲ್ಲಿ ಈ ವ್ಯಕ್ತಿಯ ಪರಿಚಯ ನನಗಿತ್ತು ಎಂದ ಮಾತ್ರಕ್ಕೆ ತಪ್ಪು ನನ್ನದೇ ಎಂದು ಹೇಳಲು ಸಾಧ್ಯವಿಲ್ಲ. ನನಗೂ ಇದಕ್ಕೂ ಸಂಬಂಧವಿಲ್ಲ. ನಾನು ಪಬ್ಲಿಕ್ ಫಿಗರ್ ಆಗಿರುವುದರಿಂದ ಜನರಿಗೆ ನನ್ನ ಕಡೆ ಬೆರಳು ಮಾಡಿ, ನನ್ನನ್ನು ವಿಲನ್ ಮಾಡೋದು ಸುಲಭ. ಸೆಲೆಬ್ರಿಟಿ ಆಗಿರುವುದರಿಂದ ನಾನು ತೆರುತ್ತಿರುವ ಬೆಲೆ ಇದು’ ಎಂದು ಹನ್ಸಿಕಾ ಹೇಳಿದ್ದಾರೆ.

ಇದನ್ನೂ ಓದಿ: Hansika Motwani: ಹನ್ಸಿಕಾ ಮೋಟ್ವಾನಿ; ‘ಬಿಂದಾಸ್’ ಬೆಡಗಿಯ ಕ್ಯೂಟ್ ಫೋಟೋಗಳು

‘ನಾನು ಈ ಮೊದಲು ಮದುವೆ ಆಗಿದ್ದೆ. ಅದು ಮುರಿದು ಬಿತ್ತು. ಈ ವಿಚಾರ ಹೊರಜಗತ್ತಿಗೆ ಗೊತ್ತಾಯಿತು. ಆದರೆ, ತಪ್ಪಾದ ರೀತಿಯಲ್ಲಿ ಈ ಮಾಹಿತಿ ಹೊರಬಿತ್ತು. ಹನ್ಸಿಕಾ ಅವರಿಂದ ನನ್ನ ಹಾಗೂ ರಿಂಕಿ ಸಂಬಂಧ ಹಾಳಾಯಿತು ಎಂದು ಹೇಳಲಾಯಿತು. ಇದು ಸುಳ್ಳು ಹಾಗೂ ಆಧಾರ ರಹಿತವಾದುದ್ದು. ನಾವಿಬ್ಬರೂ ಸ್ನೇಹಿತರು. ಹನ್ಸಿಕಾ ನನ್ನ ಮದುವೆಗೆ ಹಾಜರಾದ ಫೋಟೋ ನೋಡಿದ್ದರಿಂದ ಈ ಊಹಾಪೋಹ ಪ್ರಾರಂಭವಾಯಿತು’ ಎಂದು ಸೋಹೈಲ್ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: Hansika Motwani: ಸ್ವಿಮ್ ಸ್ಯೂಟ್​ನಲ್ಲಿ ಮಿಂಚಿದ ‘ಬಿಂದಾಸ್​’ ಬೆಡಗಿ ಹನ್ಸಿಕಾ ಮೋಟ್ವಾನಿ

ಹನ್ಸಿಕಾ ಹಾಗೂ ಸೋಹೈಲ್ ಅವರು ನವೆಂಬರ್​ನಲ್ಲಿ ಎಂಗೇಜ್​ಮೆಂಟ್ ಮಾಡಿಕೊಂಡರು. ಡಿಸೆಂಬರ್ 4ರಂದು ಜೈಪುರದಲ್ಲಿ ಮದುವೆ ಆದರು. ಇವರ ಮದುವೆಯ ವಿಡಿಯೋ ನೋಡಲು ಫ್ಯಾನ್ಸ್ ಕಾದಿದ್ದಾರೆ. ಈ ಮೊದಲು ನಯನತಾರಾ ಹಾಗೂ ವಿಘ್ನೇಶ್ ಶಿವನ್ ಮದುವೆ ವಿಡಿಯೋ ಕೂಡ ರಿಲೀಸ್ ಆಗಲಿದೆ ಎಂದು ನೆಟ್​​ಫ್ಲಿಕ್ಸ್ ಘೋಷಣೆ ಮಾಡಿತ್ತು. ಆದರೆ, ಈವರೆಗೆ ಮದುವೆ ವಿಡಿಯೋ ರಿಲೀಸ್ ಆಗಿಲ್ಲ.

ಶ್ರೀಲಕ್ಷ್ಮಿ ಎಚ್​.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.