ಈ ವಾರ ಒಟಿಟಿ ಮಂದಿಗೆ ಹಬ್ಬ: ಇಲ್ಲಿದೆ ಸಿನಿಮಾ ಪಟ್ಟಿ
OTT Movie: ಈ ವಾರ ಸಿನಿಮಾ ಪ್ರೇಮಿಗಳಿಗೆ ಹಬ್ಬ. ಹಲವು ಅತ್ಯುತ್ತಮ ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆ ಆಗಲಿವೆ. ಇಲ್ಲಿದೆ ಬಿಡುಗಡೆ ಆಗಲಿರುವ ಒಟಿಟಿ ಸಿನಿಮಾಗಳ ಪಟ್ಟಿ.
ಆಗಸ್ಟ್ 15 ಸಮೀಪಿಸಿದೆ.ಈ ಸಂದರ್ಭದಲ್ಲಿ ಥಿಯೇಟರ್ನಲ್ಲಿ ಹಲವು ಸಿನಿಮಾಗಳು ರಿಲೀಸ್ಗೆ ರೆಡಿ ಆಗಿವೆ. ಈ ವಾರ ಕನ್ನಡದಲ್ಲಿ ‘ಭೀಮ’ ಸಿನಿಮಾ ಬಿಡುಗಡೆ ಕಂಡಿದೆ. ಅದೇ ರೀತಿ ಈ ವಾರ ಒಟಿಟಿಯಲ್ಲಿ ಹಲವು ಸಿನಿಮಾಗಳು ಬಿಡುಗಡೆ ಕಂಡಿವೆ. ಈ ಮೂಲಕ ವೀಕೆಂಡ್ನಲ್ಲಿ ಯಾವ ಸಿನಿಮಾ ನೋಡಬೇಕು ಎಂದು ಕಾಡುತ್ತಿದ್ದ ಪ್ರಶ್ನೆಗೆ ಉತ್ತರ ಸಿಕ್ಕಂತೆ ಆಗಿದೆ.
ಇಂಡಿಯನ್ 2
ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡೋಕೆ ವಿಫಲ ಆಯಿತು. ಈಗ ಸಿನಿಮಾ ರಿಲೀಸ್ ಆದ ಒಂದೇ ತಿಂಗಳ ಒಳಗೆ ಒಟಿಟಿಗೆ ಬಂದಿದೆ. ಈ ಚಿತ್ರವನ್ನು ಫ್ಯಾನ್ಸ್ ಕಣ್ತುಂಬಿಕೊಳ್ಳಲು ಕಾದಿದ್ದಾರೆ. ಥಿಯೇಟರ್ನಲ್ಲಿ ಸಿನಿಮಾ ಮಿಸ್ ಮಾಡಿಕೊಂಡವರು ಒಟಿಟಿಯಲ್ಲಿ ವೀಕ್ಷಿಸಬಹುದು. ಈ ಚಿತ್ರ ನೆಟ್ಫ್ಲಿಕ್ಸ್ ಮೂಲಕ ರಿಲೀಸ್ ಆಗಲಿದೆ. ಖ್ಯಾತ ನಿರ್ದೇಶಕ ಶಂಕರ್ ಅವರು ಇದನ್ನು ನಿರ್ದೇಶನ ಮಾಡಿದ್ದಾರೆ.
ಬರ್ತ್ಮಾರ್ಕ್
ತಮಿಳಿನ ‘ಬರ್ತ್ಮಾರ್ಕ್’ ಸಿನಿಮಾ ಆಹಾ ವಿಡಿಯೋ ಒಟಿಟಿ ಮೂಲಕ ಪ್ರಸಾರ ಕಂಡಿದೆ. ಶಬೀರ್ ಕಳ್ಳರಕ್ಕಲ್, ಮಿರ್ನಾ ಮೆನನ್ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇದು ಥ್ರಿಲ್ಲರ್ ಡ್ರಾಮಾ. ವಿಕ್ರಮ್ ಶ್ರೀಧರನ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಡಿ ಬ್ಲಾಕ್
ತಮಿಳಿನ ‘ಡಿ ಬ್ಲಾಕ್’ ಸಿನಿಮಾ ಕೂಡ ರಿಲೀಸ್ ಆಗಿದೆ. ಇಟಿವಿ ವಿನ್ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಈ ಸಿನಿಮಾ ಲಭ್ಯ ಇದೆ.
ಒನ್ ಫಾಸ್ಟ್ ಮೂ
ಇಂಗ್ಲಿಷ್ನ ಒನ್ ಫಾಸ್ ಮೂ ಹೆಸರಿನ ಆ್ಯಕ್ಷನ್ ಥ್ರಿಲ್ಲರ್ ಡ್ರಾಮಾ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರ ಕಂಡಿದೆ.
ದಿ ಹಂಗರ್ ಗೇಮ್ಸ್
ಹಂಗರ್ ಗೇಮ್ಸ್ ಸೀರಿಸ್ ಬಗ್ಗೆ ನಿರೀಕ್ಷೆ ಇದೆ. ಇದು ಮೂಲತಃ ಇಂಗ್ಲಿಷ್ ಸೀರಿಸ್. ಇದು ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯ ಇದೆ.
ಚಂದು ಚಾಪಿಯನ್
ಕಾರ್ತಿಕ್ ಆರ್ಯನ್ ಅವರ ಸ್ಪೋರ್ಟ್ಸ್ ಡ್ರಾಮಾ ‘ಚಂದು ಚಾಂಪಿಯನ್’ ಸಿನಿಮಾ ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಪ್ರಸಾರ ಕಂಡಿದೆ. ಈ ಚಿತ್ರವನ್ನು ಫ್ಯಾನ್ಸ್ ಥಿಯೇಟರ್ನಲ್ಲಿ ಅಷ್ಟಾಗಿ ಇಷ್ಟಪಟ್ಟಿಲ್ಲ. ಈ ಚಿತ್ರಕ್ಕಾಗಿ ಅವರು ಸಾಕಷ್ಟು ಟ್ರಾನ್ಸ್ಫಾರ್ಮೇಷನ್ ಮಾಡಿಕೊಂಡಿದ್ದಾರೆ.
ಫಿರ್ ಆಯಿ ಹಸೀನಾ ದಿಲ್ರುಬಾ
ತಾಪ್ಸೀ ಪನ್ನು ನಟನೆಯ ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ ‘ಫಿರ್ ಆಯಿ ಹಸೀನ್ ದಿಲ್ರುಬಾ’ ಸಿನಿಮಾ ನೆಟ್ಫ್ಲಿಕ್ಸ್ ಮೂಲಕ ಪ್ರಸಾರ ಕಂಡಿದೆ.
ಟರ್ಬೋ
ಮಮ್ಮೂಟಿ ಹಾಗೂ ರಾಜ್ ಬಿ ಶೆಟ್ಟಿ ನಟನೆಯ ‘ಟರ್ಬೋ’ ಸಿನಿಮಾ ಸೊನಿ ಲಿವ್ ಮೂಲಕ ಪ್ರಸಾರ ಕಾಣುತ್ತಿದೆ.
ಡೆರಿಕ್ ಅಬ್ರಹಾಂ
ಮಲಯಾಳಂ ಸಿನಿಮಾ ‘ಡೆರಿಕ್ ಅಬ್ರಹಾಂ’ ಆಗಸ್ಟ್ 10ರಂದು ಆಹಾ ಒಟಿಟಿ ಮೂಲಕ ಪ್ರಸಾರ ಕಾಣುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ