ರಿಯಾಲಿಟಿ ಶೋನಲ್ಲಿ ಲೈಂಗಿಕ ಭಂಗಿಗಳ ಪ್ರದರ್ಶನ; ಬ್ಯಾನ್ ಮಾಡಲು ಒತ್ತಾಯ

‘ಹೌಸ್ ಅರೆಸ್ಟ್’ ರಿಯಾಲಿಟಿ ಶೋನ ಒಂದು ದೃಶ್ಯ ವೈರಲ್ ಆಗಿದೆ. ಅಶ್ಲೀಲವಾಗಿರುವ ಈ ಶೋ ವಿರುದ್ಧ ಹಲವರು ತಕರಾರು ತೆಗೆದಿದ್ದಾರೆ. ಉಲ್ಲು ಆ್ಯಪ್​ ಮೂಲಕ ಪ್ರಸಾರ ಆಗುತ್ತಿರುವ ಈ ರಿಯಾಲಿಟಿ ಶೋ ಕೂಡಲೇ ಬ್ಯಾನ್ ಆಗಬೇಕು ಎಂದು ಜನರು ಒತ್ತಾಯಿಸಿದ್ದಾರೆ. ಇದರಿಂದ ದೇಶದ ಸಂಸ್ಕೃತಿ ಹಾಳಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ.

ರಿಯಾಲಿಟಿ ಶೋನಲ್ಲಿ ಲೈಂಗಿಕ ಭಂಗಿಗಳ ಪ್ರದರ್ಶನ; ಬ್ಯಾನ್ ಮಾಡಲು ಒತ್ತಾಯ
House Arrest

Updated on: May 01, 2025 | 7:24 PM

ಒಟಿಟಿಯಲ್ಲಿ ಬರುವ ಕೆಲವು ಕಂಟೆಂಟ್​​ಗಳ ಬಗ್ಗೆ ಜನರು ಮೊದಲಿನಿಂದಲೂ ತಕರಾರು ತೆಗೆಯುತ್ತಿದ್ದಾರೆ. ಈಗ ಉಲ್ಲು ಆ್ಯಪ್​ (Ullu App) ಬಗ್ಗೆ ತೀವ್ರ ವಿರೋದ ವ್ಯಕ್ತವಾಗುತ್ತಿದೆ. ಈ ಆ್ಯಪ್​​ನಲ್ಲಿ ಪ್ರಸಾರ ಆಗುತ್ತಿರುವ ಕೆಲವು ಕಾರ್ಯಕ್ರಮಗಳು ಅಶ್ಲೀಲವಾಗಿವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ಈ ಆ್ಯಪ್ ಬ್ಯಾನ್ ಆಗಬೇಕು ಎಂಬ ಒತ್ತಾಯ ಕೇಳಿಬಂದಿದೆ. ನಟ ಏಜಾಜ್ ಖಾನ್ (Ajaz Khan) ಅವರು ನಡೆಸಿಕೊಡುವ ‘ಹೌಸ್ ಅರೆಸ್ಟ್’ ರಿಯಾಲಿಟಿ ಶೋನಲ್ಲಿ ಲೈಂಗಿಕ ಭಂಗಿಗಳ ಪ್ರದರ್ಶನ ಮಾಡಲಾಗುತ್ತಿದೆ. ಆದ್ದರಿಂದ ‘ಹೌಸ್ ಅರೆಸ್ಟ್’ (House Arrest) ಶೋ ಬ್ಯಾನ್ ಆಗಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಒತ್ತಾಯಿಸಲಾಗುತ್ತಿದೆ.

ಬಿಗ್ ಬಾಸ್ ರೀತಿಯೇ ‘ಹೌಸ್ ಅರೆಸ್ಟ್’ ಶೋ ನಡೆಸಲಾಗುತ್ತಿದೆ. ಇದರಲ್ಲಿ ಅನೇಕ ಯುವಕ-ಯುವತಿಯರು ಭಾಗವಹಿಸಿದ್ದಾರೆ. ಸಭ್ಯತೆಯ ಗಡಿ ಮೀರಿದ ಟಾಸ್ಕ್​ಗಳನ್ನೇ ಈ ಶೋನಲ್ಲಿ ನೀಡಲಾಗುತ್ತಿದೆ. ಎಲ್ಲರ ಎದುರು ಬಟ್ಟೆ ಬಿಚ್ಚಿಸುವುದು, ಲೈಂಗಿಕ ಭಂಗಿಗಳನ್ನು ಪ್ರದರ್ಶಿಸುವುದು ಸೇರಿದಂತೆ ಅನೇಕ ಅಶ್ಲೀಲ ಟಾಸ್ಕ್​ಗಳನ್ನು ನೀಡಲಾಗುತ್ತಿದೆ. ಇದರ ವಿರುದ್ಧ ಹಲವರು ತಕರಾರು ತೆಗೆದಿದ್ದಾರೆ.

ಇದನ್ನೂ ಓದಿ
ಪ್ರಸಾರಭಾರತಿಯಿಂದ ವೇವ್ಸ್ ಒಟಿಟಿ; ಕೇಬಲ್ ಆಪರೇಟರ್ಸ್​ಗೆ ಆತಂಕ
ಕನ್ನಡ ಸಿನಿಮಾಗಳಿಗೆ ಕಡಿಮೆ ದರದ ಹೊಸ ಒಟಿಟಿ ವೇದಿಕೆ
ಅಸಭ್ಯ ಮತ್ತು ಅಶ್ಲೀಲ ವಿಷಯಗಳಿರುವ 18 OTT ಪ್ಲಾಟ್‌ಫಾರ್ಮ್​​ಗೆ ನಿರ್ಬಂಧ
ಸರ್ಕಾರದಿಂದಲೇ ಶುರುವಾಗಲಿದೆ ಹೊಸ ಒಟಿಟಿ; ಭಾರತದಲ್ಲಿ ಇದು ಮೊದಲ ಪ್ರಯತ್ನ

‘ಮಾಹಿತಿ ಮತ್ತು ಪ್ರಸಾರ ಖಾತೆಯ ಬ್ಯಾನ್​ನಿಂದ ಉಲ್ಲು ಆ್ಯಪ್, ಆಲ್ಟ್ ಬಾಲಾಜಿ ರೀತಿಯ ಒಟಿಟಿಗಳು ತಪ್ಪಿಸಿಕೊಂಡಿವೆ. ಈ ವಿಷಯವನ್ನು ಸಮಿತಿಯ ಗಮನಕ್ಕೆ ತಂದಿದ್ದೇನೆ. ಪ್ರತಿಕ್ರಿಯೆಯಾಗಿ ಕಾದಿದ್ದೇನೆ’ ಎಂದು ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ‘ಇಂಥದ್ದೆಲ್ಲ ನಡೆಯೋದಿಲ್ಲ. ಇದರ ವಿರುದ್ಧ ನಮ್ಮ ಸಮಿತಿ ಕ್ರಮ ಕೈಗೊಳ್ಳಲಿದೆ’ ಎಂದು ಸಂಸದ ನಿಶಿಕಾಂತ್ ದುಬೆ ಕೂಡ ಪೋಸ್ಟ್ ಮಾಡಿದ್ದಾರೆ.

‘ಇಂಥ ಕಾರ್ಯಕ್ರಮಗಳಿಂದ ನಮ್ಮ ಸಂಸ್ಕೃತಿಗೆ ಧಕ್ಕೆ ಆಗುತ್ತಿದೆ. ಹೌಸ್ ಅರೆಸ್ಟ್ ಶೋನಲ್ಲಿ ಅಶ್ಲೀಲತೆಯ ಪ್ರಚಾರ ಮಾಡುತ್ತಿರುವ ಏಜಾಜ್ ಖಾನ್​ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಕೂಡಲೇ ಈ ಶೋ ಬ್ಯಾನ್ ಮಾಡಿ’ ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ. ಇಂಥ ಶೋಗಳು ಪ್ರಸಾರ ಆಗುತ್ತಿರವಾಗ ಮಾಹಿತಿ ಮತ್ತು ಪ್ರಸಾರ ಖಾತೆ ಏನು ಮಾಡುತ್ತಿದೆ ಎಂದು ಜನರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಒಟಿಟಿಯಲ್ಲಿ ಅಶ್ಲೀಲ ಕಂಟೆಂಟ್; ಕೇಂದ್ರ ಹಾಗೂ ಒಟಿಟಿ ಪ್ಲಾಟ್​ಫಾರ್ಮ್​ಗಳಿಗೆ ಸುಪ್ರೀಂ ನೋಟಿಸ್

ಒಟಿಟಿ ಕಾರ್ಯಕ್ರಮಗಳಿಗೂ ಸೆನ್ಸಾರ್​ಶಿಪ್ ಬರಬೇಕು ಎಂದು ಮೊದಲಿನಿಂದಲೂ ಅನೇಕರು ಒತ್ತಾಯಿಸುತ್ತಿದ್ದಾರೆ. ಈಗ ‘ಹೌಸ್ ಅರೆಸ್ಟ್’ ರೀತಿಯ ಅಶ್ಲೀಲ ಕಾರ್ಯಕ್ರಮಗಳು ಹೆಚ್ಚಿರುವುದರಿಂದ ಆ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಈ ರಿಯಾಲಿಟಿ ಶೋ ವಿರುದ್ಧ ದೆಹಲಿಯಲ್ಲಿ ದೂರು ಕೂಡ ದಾಖಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.