ಏಕಕಾಲಕ್ಕೆ ಎರಡು ಒಟಿಟಿ ಪ್ಲಾಟ್​ಫಾರ್ಮ್​ಗಳಲ್ಲಿ ‘83’ ರಿಲೀಸ್​; ಇಲ್ಲಿದೆ ಬಿಡುಗಡೆ ದಿನಾಂಕ

ನೆಟ್​ಫ್ಲಿಕ್ಸ್ ಹಾಗೂ ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ನಲ್ಲಿ ಈ ಚಿತ್ರ ಬಿಡುಗಡೆ ಆಗುತ್ತಿದೆ. ನೆಟ್​ಫ್ಲಿಕ್ಸ್​ನಲ್ಲಿ ‘83’ ಚಿತ್ರದ ಹಿಂದಿ ವರ್ಷನ್​ ರಿಲೀಸ್​ ಆದರೆ, ಕನ್ನಡ, ತಮಿಳು, ಮಲಯಾಳಂ ಹಾಗೂ ತೆಲುಗು ಅವತರಣಿಕೆಯ ಚಿತ್ರ ಡಿಸ್ನಿಯಲ್ಲಿ ಬಿಡುಗಡೆ ಆಗುತ್ತಿದೆ.

ಏಕಕಾಲಕ್ಕೆ ಎರಡು ಒಟಿಟಿ ಪ್ಲಾಟ್​ಫಾರ್ಮ್​ಗಳಲ್ಲಿ ‘83’ ರಿಲೀಸ್​; ಇಲ್ಲಿದೆ ಬಿಡುಗಡೆ ದಿನಾಂಕ
ರಣವೀರ್​ ಸಿಂಗ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Feb 12, 2022 | 4:53 PM

ರಣವೀರ್​ ಸಿಂಗ್ ನಟನೆಯ ‘83’ ಚಿತ್ರ ವಿಮರ್ಶೆಯಲ್ಲಿ ಗೆದ್ದಿದೆ. 1983ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದ ಘಟನೆಯನ್ನು ತೆರೆಮೇಲೆ ಅದ್ಭುತವಾಗಿ ಕಟ್ಟಿಕೊಟ್ಟ ಖ್ಯಾತಿ ಕಬೀರ್​ ಖಾನ್​ಗೆ ಸಲ್ಲಿಕೆ ಆಗುತ್ತದೆ. ಈ ಸಿನಿಮಾ ಕಲೆಕ್ಷನ್​ 100 ಕೋಟಿ ರೂಪಾಯಿ ದಾಟಿಗೆ. ಈಗ ಚಿತ್ರ ಒಟಿಟಿಯಲ್ಲಿ ತೆರೆಗೆ ಬರೋಕೆ ರೆಡಿ ಆಗಿದೆ. ‘83’ ಕ್ಲಾಸಿಕ್​ ಸಿನಿಮಾ. ಮಲ್ಟಿಪ್ಲೆಕ್ಸ್​ನಲ್ಲಿ ಈ ಸಿನಿಮಾಗೆ ಭಾರೀ ಬೇಡಿಕೆ ಇತ್ತು. ಆದರೆ, ಕೊವಿಡ್​ ಕಾರಣದಿಂದ ಅನೇಕರು ಚಿತ್ರಮಂದಿರದತ್ತ ಮುಖ ಮಾಡಿರಲಿಲ್ಲ. ಈಗ, ಈ ಸಿನಿಮಾ ಒಟಿಟಿಯಲ್ಲಿ ತೆರೆಗೆ ಬರೋಕೆ ರೆಡಿ ಆಗಿದೆ. ವಿಶೇಷ ಎಂದರೆ ಎರಡು ಪ್ಲಾಟ್​ಫಾರ್ಮ್​ಗಳಲ್ಲಿ ಈ ಚಿತ್ರ ರಿಲೀಸ್​ ಆಗುತ್ತಿದೆ. ಚಿತ್ರಮಂದಿರದಲ್ಲಿ ಸಿನಿಮಾ ಮಿಸ್​ ಮಾಡಿಕೊಂಡವರು ಈ ಚಿತ್ರವನ್ನು ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದಾಗಿದೆ.

ನೆಟ್​ಫ್ಲಿಕ್ಸ್ ಹಾಗೂ ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ನಲ್ಲಿ ಈ ಚಿತ್ರ ಬಿಡುಗಡೆ ಆಗುತ್ತಿದೆ. ನೆಟ್​ಫ್ಲಿಕ್ಸ್​ನಲ್ಲಿ ‘83’ ಚಿತ್ರದ ಹಿಂದಿ ವರ್ಷನ್​ ರಿಲೀಸ್​ ಆದರೆ, ಕನ್ನಡ, ತಮಿಳು, ಮಲಯಾಳಂ ಹಾಗೂ ತೆಲುಗು ಅವತರಣಿಕೆಯ ಚಿತ್ರ ಡಿಸ್ನಿಯಲ್ಲಿ ಬಿಡುಗಡೆ ಆಗುತ್ತಿದೆ. ಈ ಮೊದಲು ‘ತಲೈವಿ’ ಸಿನಿಮಾದ ಹಿಂದಿ ವರ್ಷನ್​ ನೆಟ್​ಫ್ಲಿಕ್ಸ್​ನಲ್ಲಿ ರಿಲೀಸ್ ಆಗಿದ್ದರೆ, ಉಳಿದ ಭಾಷೆಯ ಅವತರಣಿಕೆ ಅಮೇಜಾನ್​ ಪ್ರೈಮ್​ ವಿಡಿಯೋದಲ್ಲಿ ರಿಲೀಸ್​ ಆಗಿತ್ತು.

ಕಮಲ್​ ಹಾಸನ್​ ರಾಜ್​ಕಮಲ್​ ಫಿಲ್ಮ್ಸ್​​ ಇಂಟರ್​ನ್ಯಾಷನಲ್​ ಮತ್ತು ಅಕ್ಕಿನೇನಿ ನಾಗಾರ್ಜುನ ಅವರ ಅನ್ನಪೂರ್ಣ ಸ್ಟುಡಿಯೋ, ರಿಲಾಯನ್ಸ್​ ಎಂಟರ್​ಟೇನ್​ಮೆಂಟ್​ ಜತೆ ಕೈ ಜೋಡಿಸಿ ಅನುಕ್ರಮವಾಗಿ ತಮಿಳು ಹಾಗೂ ತೆಲುಗಿನಲ್ಲಿ ‘83’ ಚಿತ್ರವನ್ನು ರಿಲೀಸ್​ ಮಾಡಿತ್ತು. ಕನ್ನಡದಲ್ಲಿ ಕಿಚ್ಚ ಸುದೀಪ್​ ಈ ಚಿತ್ರವನ್ನು ಅರ್ಪಿಸಿದ್ದರು. ಮಲಯಾಳಂನಲ್ಲಿ ಪೃಥ್ವಿರಾಜ್​ ಫಿಲ್ಮ್ಸ್​ ಈ ಸಿನಿಮಾವನ್ನು ಬಿಡುಗಡೆ ಮಾಡಿತ್ತು. ಈಗ ಈ ಚಿತ್ರ ಒಟಿಟಿಯಲ್ಲಿ ಬರೋಕೆ ರೆಡಿ ಆಗಿದೆ. ಫೆಬ್ರವರಿ 18 ಅಥವಾ ಫೆಬ್ರವರಿ 25ರಂದು ಈ ಚಿತ್ರ ಏಕಕಾಲಕ್ಕೆ ಒಟಿಟಿಯಲ್ಲಿ ರಿಲೀಸ್​ ಆಗಲಿದೆ.

ರಣವೀರ್ ಸಿಂಗ್​ ಅವರು ತಾವು ಅದ್ಭುತ ನಟ ಎಂಬುದನ್ನು ಅನೇಕ ಬಾರಿ ಸಾಬೀತು ಮಾಡಿದ್ದಾರೆ. ‘83’ ಚಿತ್ರದಿಂದ ರಣವೀರ್​ಗೆ ಇದ್ದ ಬೇಡಿಕೆ ಹೆಚ್ಚಿದೆ. ಇದನ್ನು ಅವರೇ ಒಪ್ಪಿಕೊಂಡಿದ್ದರು. ಬಯೋಪಿಕ್ ಆಫರ್​ಗಳು ರಣವೀರ್​ ಸಿಂಗ್​ಗೆ ಹೆಚ್ಚುತ್ತಿದೆ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದರು.

‘ನಾನು ಐದು ನಿರ್ಮಾಪಕರ ಜತೆ ಚರ್ಚೆಯಲ್ಲಿದ್ದೇನೆ. ಇವೆಲ್ಲವೂ ಬಯೋಪಿಕ್​. ಇದರಲ್ಲಿ ಮೂರು ಕ್ರೀಡಾಪಟುಗಳ ಬಯೋಪಿಕ್​ ಹಾಗೂ ಉಳಿದ ಎರಡು ಇತರ ದೊಡ್ಡ ವ್ಯಕ್ತಿಗಳ ಬಯೋಪಿಕ್​. ಆ ಬಗ್ಗೆ ನಾನು ಈಗಲೇ ಏನನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ’ ಎಂದಿದ್ದಾರೆ ಅವರು. ‘ಎಲ್ಲಾ ಸ್ಕ್ರಿಪ್ಟ್​ಗಳು ಈಗತಾನೇ ಆರಂಭವಾಗಿದೆ. ಇದರಲ್ಲಿ ಒಂದು ಸ್ಕ್ರಿಪ್ಟ್ ಅದ್ಭುತವಾಗಿಗಿದೆ. ಈ ಬಗ್ಗೆ ಶೀಘ್ರವೇ ಘೋಷಣೆ ಆಗಲಿದೆ’ ಎಂದು ರಣವೀರ್​ ಸಿಂಗ್​ ಹೇಳಿದ್ದರು.

ಇದನ್ನೂ ಓದಿ: ಏರಲೇ ಇಲ್ಲ ರಣವೀರ್​ ಸಿಂಗ್​ ನಟನೆಯ ‘83’ ಸಿನಿಮಾ ಕಲೆಕ್ಷನ್​; ಇದಕ್ಕೆ ಕಾರಣಗಳೇನು?

‘ಇದು ರಣವೀರ್​ ಸಿಂಗ್​ ಡ್ರೆಸ್​’; ಬಟ್ಟೆ ವಿಚಾರದಲ್ಲಿ ಟ್ರೋಲ್​ ಆದ ದೀಪಿಕಾ ಪಡುಕೋಣೆ

Published On - 4:50 pm, Sat, 12 February 22