
ಬಾಲಿವುಡ್‌ನ ಅತ್ಯಂತ ಜನಪ್ರಿಯ ಹಾಗೂ ವಿವಾದಾತ್ಮಕ ಸೆಲೆಬ್ರಿಟಿ ಟಾಕ್ ಶೋ ‘ಕಾಫಿ ವಿತ್ ಕರಣ್’ನ ಕೊನೆಯ ಸೀಸನ್ ಪ್ರಸಾರಕ್ಕೆ ಸಜ್ಜಾಗಿದೆ. ಬಾಲಿವುಡ್‌ನ ಖ್ಯಾತ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಹಲವು ವರ್ಷಗಳ ಹಿಂದೆ ಪ್ರಾರಂಭಿಸಿದ್ದ ಈ ಟಾಕ್ ಶೋನ ಎಂಟು ಸೀಸನ್ ಈ ವರೆಗೆ ಪ್ರಸಾರ ಆಗಿದ್ದು, ಇದೀಗ ಒಂಬತ್ತನೇ ಸೀಸನ್ ಪ್ರಸಾರ ಆಗಲಿದೆ. ಇದು ‘ಕಾಫಿ ವಿತ್ ಕರಣ್’ನ ಕೊನೆಯ ಸೀಸನ್ ಆಗಿರಲಿದೆ. ಸೀಸನ್ನ ಪ್ರೋಮೊ ಈ ಹಿಂದೆ ರಿಲೀಸ್ ಆಗಿತ್ತು. ಆದರೆ ಅತಿಥಿಗಳು ಯಾರೆಂದು ರಿವೀಲ್ ಮಾಡಿರಲಿಲ್ಲ. ಆದರೆ ಈಗ ಸಲ್ಮಾನ್ ಖಾನ್ ಅವರ ಜೊತೆಗೆ ಕರಣ್ ಜೋಹರ್ ಸಹ ಇರುವ ಪ್ರೋಮೊ ಅನ್ನು ರಿಲೀಸ್ ಮಾಡಲಾಗಿದೆ.
ಸಲ್ಮಾನ್ ಖಾನ್, ‘ಕಾಫಿ ವಿತ್ ಕರಣ್’ ಪ್ರೋಮೊನಲ್ಲಿ ಕರಣ್ ಜೋಹರ್ ಜೊತೆಗೆ ಕಾಣಿಸಿಕೊಂಡಿದ್ದು, ‘ಈ ಶೋನಲ್ಲಿ ನಾನು ಬರುತ್ತಿದ್ದೇನೆ, ಎಲ್ಲರೂ ನೋಡಿ, ಇದು ಕೊನೆಯ ಸೀಸನ್, ಆ ನಂತರ ಈ ಶೋ ಎಲ್ಲಿ ಹೋಗುತ್ತದೆಯೋ ಗೊತ್ತಿಲ್ಲ’ ಎಂದಿದ್ದಾರೆ. ಸಲ್ಮಾನ್ ಖಾನ್ ಜೊತೆಗೆ ಕರಣ್ ಜೋಹರ್ ಸಹ ಇದ್ದು, ಅವರೂ ಸಹ ‘ಹೌದು, ಇದು ಕೊನೆಯ ಸೀಸನ್, ಆಮೇಲೆ ಏನಾಗುತ್ತದೆಯೋ ಗೊತ್ತಿಲ್ಲ’ ಎಂದಿದ್ದಾರೆ. ಅದಕ್ಕೆ ಸಲ್ಮಾನ್ ಖಾನ್, ‘ಆಲ್ಡೆರಿ ಹೋಗಿದೆ ಬಿಡಿ’ ಎಂದು ತಮಾಷೆ ಮಾಡಿದ್ದಾರೆ. ಸಲ್ಮಾನ್ ಖಾನ್ ಅವರು ಕಪ್ಪು ಬಣ್ಣದ ಶರ್ಟ್, ಕಪ್ಪು ಬಣ್ಣದ ಪ್ಯಾಂಟು ಧರಿಸಿ, ಬಲು ಫಿಟ್ ಆಗಿ ಕಾಣಿಸಿಕೊಂಡಿದ್ದಾರೆ.
‘ಜಿಯೋ ಹಾಟ್‌ಸ್ಟಾರ್’ ಒಟಿಟಿ ವೇದಿಕೆಯಲ್ಲಿ ಅಕ್ಟೋಬರ್ 14ರಿಂದ ಈ ಹೊಸ ಹಾಗೂ ಅಂತಿಮ ಸೀಸನ್ ಪ್ರಸಾರವಾಗಲಿದೆ. ಕರಣ್ ಜೋಹರ್ ಅವರ ಈ ಜನಪ್ರಿಯ ಕಾರ್ಯಕ್ರಮದ ಕೊನೆಯ ಸೀಸನ್ ಆಗಿರುವುದರಿಂದ, ಬಾಲಿವುಡ್‌ನ ಹಲವು ದಿಗ್ಗಜ ಮತ್ತು ಸ್ಟಾರ್ ನಟ-ನಟಿಯರು ಈ ಸೀಸನ್‌ನಲ್ಲಿ ಅತಿಥಿಗಳಾಗಿ ಭಾಗವಹಿಸಿ ತಮ್ಮ ವೈಯಕ್ತಿಕ ಹಾಗೂ ವೃತ್ತಿಜೀವನದ ರಹಸ್ಯಗಳನ್ನು ಹಂಚಿಕೊಳ್ಳಲಿದ್ದಾರೆ. ಕೊನೆಯ ಸೀಸನ್ನಿನ ಮೊದಲ ಎಪಿಸೋಡಿನಲ್ಲಿ ಸಲ್ಮಾನ್ ಖಾನ್ ಅವರು ಅತಿಥಿ ಆಗಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ:ಬಾಲಿವುಡ್‌ನಲ್ಲಿ ಹೊಸ ಕಾಂಬಿನೇಷನ್ ಧಮಾಕ; ಮೊದಲ ಬಾರಿಗೆ ಜೊತೆಯಾಗಲಿದ್ದಾರೆ ಪ್ರಿಯಾಂಕಾ-ಸೈಫ್
ಸಲ್ಮಾನ್ ಖಾನ್ ಜೊತೆಗೆ ಬಾಲಿವುಡ್‌ನ ಇತ್ತೀಚಿನ ಯಶಸ್ವಿ ತಾರೆಯರು ಮತ್ತು ಸಿನಿತಾರೆಯರ ದಂಡು ಈ ಕೊನೆಯ ಸೀಸನ್‌ನಲ್ಲಿ ವಿಶೇಷ ಅತಿಥಿಗಳಾಗಿ (Guests) ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಈಗ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಜಂಟಿಯಾಗಿ ಈ ಶೋನಲ್ಲಿ ಈಗಾಗಲೇ ಭಾಗಿ ಆಗಿದ್ದಾರೆ. ಆಲಿಯಾ ಭಟ್, ಶರ್ವರಿ ವಾಘ್, ಜಾನ್ಹವಿ ಕಪೂರ, ಅನನ್ಯಾ ಪಾಂಡೆ, ಆಲಿಯಾ ಎಫ್, ಶಾಹಿದ್ ಕಪೂರ್, ಸಂದೀಪ್ ರೆಡ್ಡಿ ವಂಗಾ ಇನ್ನೂ ಹಲವರು ಈ ಸೀಸನ್ನಿನಲ್ಲಿ ಅತಿಥಿಗಳಾಗಿ ಭಾಗಿ ಆಗಲಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ