‘ಸಿಟಾಡೆಲ್: ಹನಿ ಬನಿ’ ಟ್ರೇಲರ್​ನಲ್ಲಿ ಸಮಂತಾ, ವರುಣ್ ಧವನ್ ಆ್ಯಕ್ಷನ್ ಅಬ್ಬರ

ನವೆಂಬರ್​ 7ರಂದು ‘ಸಿಟಾಡೆಲ್: ಹನಿ ಬನಿ’ ವೆಬ್ ಸಿರೀಸ್ ಬಿಡುಗಡೆ ಆಗಲಿದೆ. ‘ಅಮೇಜಾನ್ ಪ್ರೈಂ ವಿಡಿಯೋ’ ಒಟಿಟಿ ಮೂಲಕ ಇದರ ಸ್ಟ್ರೀಮಿಂಗ್ ಆಗಲಿದೆ. ಸಮಂತಾ ರುತ್ ಪ್ರಭು, ವರುಣ್ ಧವನ್ ಅವರು ಜೋಡಿಯಾಗಿ ಇದರಲ್ಲಿ ನಟಿಸಿದ್ದಾರೆ. ಟ್ರೇಲರ್​ ನೋಡಿದ ಬಳಿಕ ಅಭಿಮಾನಿಗಳ ನಿರೀಕ್ಷೆ ಇನ್ನಷ್ಟು ಜಾಸ್ತಿ ಆಗಿದೆ. ರಾಜ್ ಮತ್ತು ಡಿಕೆ ಅವರು ಈ ಸಿರೀಸ್​ಗೆ ನಿರ್ದೇಶನ ಮಾಡಿದ್ದಾರೆ.

‘ಸಿಟಾಡೆಲ್: ಹನಿ ಬನಿ’ ಟ್ರೇಲರ್​ನಲ್ಲಿ ಸಮಂತಾ, ವರುಣ್ ಧವನ್ ಆ್ಯಕ್ಷನ್ ಅಬ್ಬರ
ವರುಣ್ ಧವನ್, ಸಮಂತಾ
Follow us
ಮದನ್​ ಕುಮಾರ್​
|

Updated on: Oct 15, 2024 | 7:37 PM

ಒಟಿಟಿ ಪ್ರೇಕ್ಷಕರು ಬಹಳ ದಿನಗಳಿಂದ ‘ಸಿಟಾಡೆಲ್: ಹನಿ ಬನಿ’ ವೆಬ್ ಸಿರೀಸ್​ಗಾಗಿ ಕಾಯುತ್ತಿದ್ದಾರೆ. ಸಮಂತಾ ರುತ್ ಪ್ರಭು, ವರುಣ್​ ಧವನ್​ ಮುಖ್ಯ ಭೂಮಿಕೆ ನಿಭಾಯಿಸಿರುವ ಈ ವೆಬ್​ ಸಿರೀಸ್​ ಬಗ್ಗೆ ಸಾಕಷ್ಟು ಹೈಪ್​ ಸೃಷ್ಟಿ ಆಗಿದೆ. ಆ ಹೈಪ್​ ಹೆಚ್ಚು ಮಾಡುವ ರೀತಿಯಲ್ಲಿ ಈಗ ಟ್ರೇಲರ್​ ಬಿಡುಗಡೆ ಆಗಿದೆ. ಈ ಟ್ರೇಲರ್​ನಲ್ಲಿ ಅಭಿಮಾನಿಗಳು ಸಮಂತಾ ಅವರ ಆ್ಯಕ್ಷನ್​ ನೋಡಿ ಫಿದಾ ಆಗಿದ್ದಾರೆ. ವರುಣ್ ಧವನ್ ಮತ್ತು ಸಮಂತಾ ರುತ್ ಪ್ರಭು ಅವರ ಕಾಂಬಿನೇಷನ್​ ನೋಡಲು ಫ್ಯಾನ್ಸ್​ ಕಾಯುತ್ತಿದ್ದಾರೆ.

‘ದಿ ಫ್ಯಾಮಿಲಿ ಮ್ಯಾನ್​’ ಖ್ಯಾತಿಯ ರಾಜ್ ಮತ್ತು ಡಿಕೆ ಅವರು ‘ಸಿಟಾಡೆಲ್: ಹನಿ ಬನಿ’ ವೆಬ್ ಸಿರೀಸ್​ಗೆ ಆ್ಯಕ್ಷನ್-ಕಟ್​ ಹೇಳಿದ್ದಾರೆ. ಈ ವೆಬ್ ಸಿರೀಸ್​ ಮೂಲಕ ವರುಣ್ ಧವನ್​ ಅವರು ಒಟಿಟಿ ಲೋಕಕ್ಕೆ ಕಾಲಿಡುತ್ತಿದ್ದಾರೆ. ಈಗಾಗಲೇ ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್ ಸಿರೀಸ್​ನಲ್ಲಿ ಸಖತ್ ಮಿಂಚಿದ್ದ ಸಮಂತಾ ಅವರು ಈಗ ‘ಸಿಟಾಡೆಲ್: ಹನಿ ಬನಿ’ ವೆಬ್ ಸರಣಿ ಮೂಲಕ ಧೂಳೆಬ್ಬಿಸಲು ಸಜ್ಜಾಗಿದ್ದಾರೆ.

ಅದ್ದೂರಿ ಬಜೆಟ್​ನಲ್ಲಿ ‘ಸಿಟಾಡೆಲ್: ಹನಿ ಬನಿ’ ವೆಬ್ ಸಿರೀಸ್​ ಮೂಡಿಬಂದಿದೆ. ‘ಅಮೇಜಾನ್ ಪ್ರೈಂ ವಿಡಿಯೋ’ ಮೂಲಕ ನವೆಂಬರ್​ 7ರಂದು ಇದು ಪ್ರಸಾರ ಆರಂಭಿಸಲಿದೆ. ಈಗಾಗಲೇ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮುಂಬೈನಲ್ಲಿ ಅದ್ದೂರಿಯಾಗಿ ಟ್ರೇಲರ್​ ಲಾಂಚ್​ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಸಮಂತಾ, ವರುಣ್​ ಧವನ್, ರಾಜ್-ಡಿಕೆ ಮುಂತಾದವರು ಭಾಗಿ ಆಗಿದ್ದರು.

ಇದನ್ನೂ ಓದಿ: ಸಮಂತಾ, ನಾಗಾರ್ಜುನ ಬಗ್ಗೆ ಅಶ್ಲೀಲ ಹೇಳಿಕೆ ನೀಡಿ ವಿವಾದ ಎಬ್ಬಿಸಿದ ಸಚಿವೆ ಕೊಂಡ ಸುರೇಖಾ

ಈ ವೆಬ್ ಸರಣಿಯಲ್ಲಿ ಸಮಂತಾ ಅವರು ಹನಿ ಎಂಬ ಪಾತ್ರ ಮಾಡಿದ್ದರೆ, ವರುಣ್ ಧವನ್ ಅವರು ಬನಿ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇಬ್ಬರೂ ಕೂಡ ಗೂಢಚಾರಿಗಳ ಪಾತ್ರ ಮಾಡಿದ್ದಾರೆ. ಕೆ.ಕೆ. ಮೆನನ್, ಸಿಕಂದರ್ ಖೇರ್, ಸಕೀಬ್ ಸಲೀಮ್ ಮುಂತಾದವರು ಕೂಡ ‘ಸಿಟಾಡೆಲ್: ಹನಿ ಬನಿ’ ಪಾತ್ರವರ್ಗದಲ್ಲಿ ಇದ್ದಾರೆ. ಸಮಂತಾ ಅವರು ಅನಾರೋಗ್ಯದ ನಡುವೆಯೂ ತುಂಬಾ ಕಷ್ಟಪಟ್ಟು ಅಭಿನಯಿಸಿದ ವೆಬ್ ಸಿರೀಸ್ ಇದು. ಹಾಗಾಗಿ ಅವರ ಅಭಿಮಾನಿಗಳಿಗೆ ಇದು ತುಂಬ ಸ್ಪೆಷಲ್ ಎನಿಸುತ್ತಿದೆ. ಹಲವು ಭಾಷೆಗಳಿಗೆ ಡಬ್ ಆಗಿ ಈ ಸಿರೀಸ್​ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.