‘ಶೋ ನಂತರವೂ ನಾವು ಕನೆಕ್ಟ್ ಆಗುತ್ತೇವೆ’; ಶಮಿತಾ ಬಗ್ಗೆ ರಾಕೇಶ್ ಅಚ್ಚರಿಯ ಹೇಳಿಕೆ
ಎಲ್ಲಾ ಸ್ಪರ್ಧಿಗಳ ಬಗ್ಗೆ ತಮ್ಮತಮ್ಮ ಅಭಿಪ್ರಾಯ ಹೇಳಿಕೊಳ್ಳುವ ಅವಕಾಶವನ್ನು ಬಿಗ್ ಬಾಸ್ ನೀಡಿದ್ದರು. ಈ ವೇಳೆ ರಾಕೇಶ್ ಅವರು ಶಮಿತಾ ಬಗ್ಗೆ ಮಾತನಾಡೋಕೆ ಆರಂಭಿಸಿದರು.
ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಹಾಗೂ ರಾಕೇಶ್ ಬಾಪಟ್ ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಕನೆಕ್ಟ್ ಆಗುತ್ತಿದ್ದಾರೆ. ಅವರ ನಡುವೆ ಏನೋ ನಡೆಯುತ್ತಿದೆ ಎನ್ನುವ ಗುಮಾನಿ ಅಭಿಮಾನಿಗಳಲ್ಲಿದೆ. ಹೀಗಿರುವಾಗಲೇ ಅವರು ಬಿಗ್ ಬಾಸ್ ಮನೆಯಲ್ಲಿ ನಾನಾ ರೀತಿಯ ಹೇಳಿಕೆ ನೀಡಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸುತ್ತಿದ್ದಾರೆ. ಶೋ ನಂತರವೂ ನಾವು ಕನೆಕ್ಟ್ ಆಗುತ್ತೇವೆ ಎಂದು ಹೇಳುವ ಮೂಲಕ ರಾಕೇಶ್ ಅಚ್ಚರಿ ಮೂಡಿಸಿದ್ದಾರೆ.
ಎಲ್ಲಾ ಸ್ಪರ್ಧಿಗಳ ಬಗ್ಗೆ ತಮ್ಮತಮ್ಮ ಅಭಿಪ್ರಾಯ ಹೇಳಿಕೊಳ್ಳುವ ಅವಕಾಶವನ್ನು ಬಿಗ್ ಬಾಸ್ ನೀಡಿದ್ದರು. ಈ ವೇಳೆ ರಾಕೇಶ್ ಅವರು ಶಮಿತಾ ಬಗ್ಗೆ ಮಾತನಾಡೋಕೆ ಆರಂಭಿಸಿದರು. ಅವರು ಮಾತನಾಡುತ್ತಾ ಭಾವುಕರಾಗಿದ್ದು ವೀಕ್ಷಕರ ಗಮನಕ್ಕೆ ಬಂದಿದೆ. ಅವರ ನಡುವೆ ಹುಟ್ಟಿರುವ ಸಂಬಂಧ ಎಂಥದ್ದು ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.
‘ಶಮಿತಾ ಮನಸ್ಸು ಶುದ್ಧವಾಗಿದೆ. ನಾನು ಅವಳನ್ನು ನಿಜವಾಗಲೂ ಇಷ್ಟಪಡುತ್ತೇನೆ. ಅವಳು ಅದ್ಭುತ ವ್ಯಕ್ತಿ. ಶೋ ಮುಗಿದ ನಂತರವೂ ನಾವು ಕನೆಕ್ಟ್ ಆಗುತ್ತೇವೆ ಎಂದು ನನಗೆ ಅನಿಸುತ್ತದೆ. ನನಗೆ ಯಾರದ್ದಾದರೂ ಜೊತೆಗೆ ಸಂಬಂಧ ಬೆಳೆಸುವುದು ಎಂದರೆ ಭಯ. ಆದರೆ, ನಾನು ಅವಳಿಗೆ ಸಿಕ್ಕಾಪಟ್ಟೆ ಕನೆಕ್ಟ್ ಆಗುತ್ತೇನೆ’ ಎಂದು ಖುಷಿ ವ್ಯಕ್ತಪಡಿಸಿದರು.
ದಿವ್ಯಾ ಅಗರ್ವಾಲ್ ಜೊತೆ ರಾಕೇಶ್ ಮಾತನಾಡುವುದನ್ನು ಶಮಿತಾ ತಡೆಯುತ್ತಿದ್ದಾರೆ. ಇದು ರಾಕೇಶ್ಗೆ ಇಷ್ಟವಾಗಲಿಲ್ಲ. ಈ ವಿಚಾರವಾಗಿ ಶಮಿತಾ ಜತೆ ಮಾತನಾಡಿದ ರಾಕೇಶ್, ‘ದಿವ್ಯಾ ಎಂದರೆ ನನಗೆ ಇಷ್ಟವಿಲ್ಲ. ಅವಳು ನನಗೆ ಮುಖ್ಯಳಲ್ಲ. ಆದರೆ ಒಂದೇ ಮನೆಯಲ್ಲಿರುವಾಗ ಅವಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ’ ಎಂದಿದ್ದಾರೆ. ‘ನಾನು ಮೊದಲ ದಿನದಿಂದಲೂ ನಿನ್ನ ಜತೆ ನಡೆದುಕೊಂಡಿದ್ದ ರೀತಿ ನಕಲಿ ಅಲ್ಲ. ನನ್ನ ಕೈಗೆ, ಕುತ್ತಿಗೆಗೆ ಕಿಸ್ ಮಾಡೋಕೆ ಅವಕಾಶ ಕೊಟ್ಟೆ. ಇದಕ್ಕೆ ಕಾರಣ ನಾನು ನಿನ್ನನ್ನು ಇಷ್ಟಪಡುತ್ತಿದ್ದೇನೆ’ ಎಂದು ಶಮಿತಾ ಒಪ್ಪಿಕೊಂಡರು.