ಬಿಗ್​ ಬಾಸ್​ ಸ್ಪರ್ಧಿಯ ಲಿಪ್​ಲಾಕ್​ ವಿಡಿಯೋ ವೈರಲ್! ಪೂರ್ತಿ ಎಪಿಸೋಡ್​ ಪ್ರಸಾರ ಯಾವಾಗ?

ಒಂದು ಚಿಕ್ಕ ಟೀಸರ್​ ಈಗ ಇಂಟರ್​ನೆಟ್​ನಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಇದರಲ್ಲಿ ಸೋನಿಯಾ ಮತ್ತು ಸಿದ್ಧಾರ್ಥ್​ ಶುಕ್ಲಾ ಲಿಪ್​ಲಾಕ್​ ಮಾಡಿರುವುದು ಗಮನ ಸೆಳೆಯುತ್ತಿದೆ.

  • TV9 Web Team
  • Published On - 12:17 PM, 9 Apr 2021
ಬಿಗ್​ ಬಾಸ್​ ಸ್ಪರ್ಧಿಯ ಲಿಪ್​ಲಾಕ್​ ವಿಡಿಯೋ ವೈರಲ್! ಪೂರ್ತಿ ಎಪಿಸೋಡ್​ ಪ್ರಸಾರ ಯಾವಾಗ?
ಬ್ರೋಕನ್​ ಬಟ್​ ಬ್ಯೂಟಿಫುಲ್​ ವೆಬ್​ ಸರಣಿಯ ದೃಶ್ಯ

ಬಿಗ್​ ಬಾಸ್​ ಸ್ಪರ್ಧಿಗಳ ಮೇಲೆ ಜನರ ಸದಾ ಒಂದು ಕಣ್ಣಿಟ್ಟಿರುತ್ತಾರೆ. ಅವರು ಏನೇ ಮಾಡಿದರು ವೀಕ್ಷಕರು ಕುತೂಹಲದಿಂದ ಗಮನಿಸುತ್ತಾರೆ. ಹಾಗಾಗಿ ಬಿಗ್​ ಬಾಸ್​ ಮಂದಿಯ ಚಲನಚಲನಗಳು ಆನ್​ಲೈನ್​ನಲ್ಲಿ ಬಹಳ ಬೇಗ ಗಮನ ಸೆಳೆಯುತ್ತವೆ. ಈಗ ಮಾಜಿ ಬಿಗ್​ ಬಾಸ್​ ಸ್ಪರ್ಧಿಯೊಬ್ಬರ ಲಿಪ್​ ಲಾಕ್​ ವಿಡಿಯೋ ವೈರಲ್​ ಆಗಿದೆ. ಅದನ್ನು ಕಂಡು ನೆಟ್ಟಿಗರು ಬಗೆಬಗೆಯಲ್ಲಿ ಕಾಮೆಂಟ್​ ಮಾಡುತ್ತಿದ್ದಾರೆ. ಅಷ್ಟಕ್ಕೂ ಹೀಗೆ ಲಿಪ್​ ಲಾಕ್​ ಮಾಡಿ ಹೈಲೈಟ್​ ಆಗಿರುವುದು ಯಾರು? ಸಿದ್ಧಾರ್ಥ್​ ಶುಕ್ಲಾ!

ಹಿಂದಿ ಬಿಗ್​ ಬಾಸ್​ ಸೀಸನ್​ 13ನೇ ಸೀಸನ್​ನಲ್ಲಿ ಸಿದ್ಧಾರ್ಥ್​ ಶುಕ್ಲಾ ಸ್ಪರ್ಧಿಸಿದ್ದರು. ಕೊನೇ ವಾರದವರಗೂ ಹಣಾಹಣಿ ನಡೆಸಿದ್ದ ಅವರು ಆ ಸೀಸನ್​ನಲ್ಲಿ ವಿನ್ನರ್​ ಪಟ್ಟ ಗಿಟ್ಟಿಸಿಕೊಂಡರು. ಬಿಗ್​ ಬಾಸ್​ಗೆ ಕಾಲಿಟ್ಟಾಗಿನಿಂದ ಸಿದ್ಧಾರ್ಥ್​ ಜನಪ್ರಿಯತೆ ಹೆಚ್ಚಾಗಿತ್ತು. ಈಗ ಅದನ್ನೂ ಮೀರಿಸುವ ರೀತಿಯಲ್ಲಿ ಅವರು ಡಿಜಿಟಲ್​ ದುನಿಯಾಗೆ ಕಾಲಿಟ್ಟಿದ್ದಾರೆ. ಅಂದರೆ, ಮೊದಲ ಬಾರಿಗೆ ಅವರು ವೆಬ್​ ಸಿರೀಸ್​ನಲ್ಲಿ ನಟಿಸಿದ್ದು, ಅದರ ಬಿಡುಗಡೆಗೂ ಮುನ್ನವೇ ಭಾರಿ ಕುಹೂಹಲ ಹುಟ್ಟುಹಾಕಿದೆ.

ನಿರ್ಮಾಪಕಿ ಏಕ್ತಾ ಕಪೂರ್​ ಅವರ ‘ಆಲ್ಟ್​ ಬಾಲಾಜಿ’ ಓಟಿಟಿ ಪ್ಲಾಟ್​ಫಾರ್ಮ್​ನಲ್ಲಿ ‘ಬ್ರೋಕನ್​ ಬಟ್​ ಬ್ಯೂಟಿಫುಲ್​’ ವೆಬ್​ ಸಿರೀಸ್ ತುಂಬ ಫೇಮಸ್​. ಈಗಾಗಲೇ ಎರಡು ಸೀಸನ್​ಗಳ ಮೂಲಕ ಪ್ರೇಕ್ಷಕರನ್ನು ಮನರಂಜಿಸಿರುವ ಈ ವೆಬ್​ ಸಿರೀಸ್​ನ ಮೂರನೇ ಸರಣಿಯಲ್ಲಿ ಸಿದ್ಧಾರ್ಥ್​ ಶುಕ್ಲಾ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ಸೋನಿಯಾ ರಾಥಿ ಅಭಿನಯಿಸಿದ್ದಾರೆ. ಈ ವೆಬ್​ ಸಿರೀಸ್​ನ ಒಂದು ಚಿಕ್ಕ ಟೀಸರ್​ ಈಗ ಇಂಟರ್​ನೆಟ್​ನಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಇದರಲ್ಲಿ ಸೋನಿಯಾ ಮತ್ತು ಸಿದ್ಧಾರ್ಥ್​ ಶುಕ್ಲಾ ಲಿಪ್​ಲಾಕ್​ ಮಾಡಿರುವುದು ಗಮನ ಸೆಳೆಯುತ್ತಿದೆ.

ಹಿಂದಿ ಧಾರಾವಾಹಿಗಳ ಮೂಲಕ ಸಿದ್ಧಾರ್ಥ್​ ಶುಕ್ಲಾ ತಮ್ಮದೇ ಆದಂತಹ ಅಭಿಮಾನಿ ವರ್ಗವನ್ನು ಸಂಪಾದಿಸಿಕೊಂಡಿದ್ದಾರೆ. ಈಗ ಅವರು ವೆಬ್​ ಸಿರೀಸ್​ಗಳ ಮೂಲಕವೂ ವೀಕ್ಷಕರಿಗೆ ಮನರಂಜನೆ ನೀಡಲು ಬರುತ್ತಿದ್ದಾರೆ. ಈಗಾಗಲೇ ‘ಬ್ರೋಕನ್​ ಬಟ್​ ಬ್ಯೂಟಿಫುಲ್​ 3’ ಶೂಟಿಂಗ್​ ಮುಗಿದಿದೆ. ಸದ್ಯ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ಅತೀ ಶೀಘ್ರದಲ್ಲೇ ವೀಕ್ಷಣೆಗೆ ಲಭ್ಯವಾಗಲಿದೆ. ಆಲ್​ ಬಾಲಾಜಿ ಮತ್ತು ಜೀ 5 ಓಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಪ್ರಸಾರ ಆರಂಭಿಸಲಿದೆ. ಅಧಿಕೃತ ದಿನಾಂಕದ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.

ಸದ್ಯ ಹರಿದಾಡುತ್ತಿರುವ ಚಿಕ್ಕ ವಿಡಿಯೋ ತುಣುಕು ನೋಡಿದ ಅಭಿಮಾನಿಗಳು ಸಖತ್​ ಎಗ್ಸೈಟ್​ ಆಗಿದ್ದಾರೆ. ಪೂರ್ತಿ ಎಪಿಸೋಡ್​ ನೋಡಲು ತಾವು ಉತ್ಸುಕರಾಗಿರುವುದಾಗಿ ಸೋಶಿಯಲ್​ ಮೀಡಿಯಾದಲ್ಲಿ ಕಾಮೆಂಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: ದಿವ್ಯಾ ಉರುಡುಗ-ಅರವಿಂದ್​ ಪ್ರೀತಿಯ ಉತ್ಕಟತೆ ನೋಡಿ ಮನೆಯವರೇ ಕಂಗಾಲು; ಅಂಥದ್ದೇನಾಯ್ತು?

ನನ್ನನ್ನು ಮದುವೆ ಆಗಲ್ವ?; ಮಂಜುಗೆ ಕಣ್ಣಲ್ಲಿ ಕಣ್ಣಿಟ್ಟು ಕೇಳಿದ ದಿವ್ಯಾ