Sonu Srinivas Gowda: ‘ರಾತ್ರಿ ಮಲಗುವಾಗ ಬೆಡ್​ ಹತ್ರ ಅವ್ಳು ಇಲ್ಲ ಅಂತ ಮಿಸ್​ ಮಾಡಿಕೊಳ್ತೀನಿ’: ಸೋನು ಗೌಡ ಹೇಳಿದ್ದು ಯಾರ ಬಗ್ಗೆ?

BBK | Sonu Srinivas Gowda: ‘ಮನೆ ಖಾಲಿ ಖಾಲಿ ಕಾಣಿಸುತ್ತಿದೆಯೇ’ ಎಂದು ಕಿಚ್ಚ ಸುದೀಪ್​ ಪ್ರಶ್ನೆ ಕೇಳಿದರು. ಅದಕ್ಕೆ ಮನೆಯ ಪ್ರತಿಯೊಬ್ಬರೂ ಬೇರೆ ಬೇರೆ ಉತ್ತರ ನೀಡಿದರು.

Sonu Srinivas Gowda: ‘ರಾತ್ರಿ ಮಲಗುವಾಗ ಬೆಡ್​ ಹತ್ರ ಅವ್ಳು ಇಲ್ಲ ಅಂತ ಮಿಸ್​ ಮಾಡಿಕೊಳ್ತೀನಿ’: ಸೋನು ಗೌಡ ಹೇಳಿದ್ದು ಯಾರ ಬಗ್ಗೆ?
ಸೋನು ಶ್ರೀನಿವಾಸ್ ಗೌಡ
Edited By:

Updated on: Sep 04, 2022 | 9:25 PM

ಹಲವು ಟ್ವಿಸ್ಟ್​ಗಳು ‘ಬಿಗ್​ ಬಾಸ್ ಕನ್ನಡ ಒಟಿಟಿ’​ (Bigg Boss OTT Kannada) ಆಟದಲ್ಲಿ ಎದುರಾಗುತ್ತವೆ. ಯಾರು ಯಾವಾಗ ಎಲಿಮಿನೇಟ್​ (Bigg Boss Elimination) ಆಗುತ್ತಾರೆ ಎಂಬುದು ಮೊದಲೇ ಗೊತ್ತಾಗುವುದಿಲ್ಲ. ಒಬ್ಬರು ಎಲಿಮಿನೇಟ್​ ಆದಾಗ ಅವರ ಜೊತೆ ಆಪ್ತವಾಗಿ ಇದ್ದವರಿಗೆ ಬೇಸರ ಆಗುವುದು ಸಹಜ. ಅದೇ ವಿಚಾರ ಈ ವಾರದ ‘ಸೂಪರ್​ ಸಂಡೇ ವಿಥ್​ ಸುದೀಪ’ ಎಪಿಸೋಡ್​ನಲ್ಲಿ ಚರ್ಚೆ ಆಗಿದೆ. ಕಿಚ್ಚ ಸುದೀಪ್​ ಅವರು ಈ ಕುರಿತು ಪ್ರಶ್ನೆ ಕೇಳಿದ್ದಾರೆ. ಎಲ್ಲ ಸ್ಪರ್ಧಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಶನಿವಾರ (ಸೆ.3) ಡಬಲ್​ ಎಲಿಮಿನೇಷನ್​ ಆಯಿತು. ಅಕ್ಷತಾ ಕುಕ್ಕಿ (Akshata Kuki) ಮತ್ತು ಚೈತ್ರಾ ಹಳ್ಳಿಕೇರಿ ಅವರು ಔಟ್​ ಆದರು. ಅವರ ಎಲಿಮಿನೇಷನ್​ ನಂತರ ಮನೆಯ ವಾತಾವರಣ ಹೇಗಿದೆ ಎಂಬ ಬಗ್ಗೆ ಭಾನುವಾರ (ಸೆ.4) ಮಾತುಕತೆ ಆಗಿದೆ.

‘ಮನೆ ಖಾಲಿ ಖಾಲಿ ಕಾಣಿಸುತ್ತಿದೆಯೇ’ ಎಂದು ಸುದೀಪ್​ ಪ್ರಶ್ನೆ ಕೇಳಿದರು. ಅದಕ್ಕೆ ಮನೆಯ ಪ್ರತಿಯೊಬ್ಬರೂ ಬೇರೆ ಬೇರೆ ಉತ್ತರ ನೀಡಿದರು. ಅಕ್ಷತಾ ಕುಕ್ಕಿ ಅವರು ಔಟ್​ ಆಗಿದ್ದು ಸೋನು ಗೌಡ ಅವರಿಗೆ ಬೇಸರ ಮೂಡಿಸಿದೆ. ‘ರಾತ್ರಿ ಮಲಗುವಾಗ ಬೆಡ್​ ಹತ್ರ ಅವಳು ಇಲ್ಲ ಅಂತ ಮಿಸ್​ ಮಾಡಿಕೊಳ್ತೀನಿ’ ಎಂದು ಸೋನು ಹೇಳಿದ್ದಾರೆ. ಸೋನು ಮತ್ತು ಅಕ್ಷತಾ ಕುಕ್ಕಿ ನಡುವೆ ಸ್ನೇಹ ಬೆಳೆದಿತ್ತು.

ಅಕ್ಷತಾ ಕುಕ್ಕಿ ಎಲಿಮಿನೇಟ್​ ಆಗುವುದಕ್ಕೂ ಮುನ್ನ ಸೋನು ಗೌಡ ಅವರಿಗೆ ಕನಸು ಬಿದ್ದಿತ್ತು. ‘ಅಕ್ಷತಾಳನ್ನು ಸಮಾಧಾನ ಮಾಡಲು ನಾನು ಕೂಡ ಮನೆಯಿಂದ ಹೊರಗೆ ಹೋದೆ. ಆಗ ನಮ್ಮ ಅಮ್ಮ ನನಗೆ ಹೊಡೆಯುತ್ತಿದ್ದರು. ಆ ರೀತಿ ಕನಸು ಬಿದ್ದಿತ್ತು’ ಎಂದು ಸೋನು ವಿವರಿಸಿದ್ದಾರೆ. ಇಂಥ ಹಲವು ವಿಚಾರಗಳಿಂದ ಅವರು ಹೈಲೈಟ್​ ಆಗುತ್ತಿದ್ದಾರೆ.

ಇದನ್ನೂ ಓದಿ
Sonu Srinivas Gowda: ‘ಬಿಗ್ ಬಾಸ್’ ಮನೆಯಲ್ಲಿ ಕಳಪೆ ಆಟ ತೋರಿದ ಸೋನು ಶ್ರೀನಿವಾಸ್ ಗೌಡಗೆ ಶಿಕ್ಷೆ
‘ಬಿಗ್ ಬಾಸ್​ಗೆ ಬಂದಿದ್ದು ಆಟ ಆಡೋಕೆ, ಶೋಕಿ ಮಾಡೋಕೆ’: ಸೋನು ಶ್ರೀನಿವಾಸ್ ಗೌಡ
Sonu Srinivas Gowda: ಮೂಡ್ ಇಲ್ಲ ಅಂದ್ರೆ ಸೋನು ಶ್ರೀನಿವಾಸ್​ ಗೌಡ 3 ದಿನ ಸ್ನಾನ ಮಾಡಲ್ಲ; ಎಲ್ಲರ ಎದುರು ಸತ್ಯ ಬಯಲು
Sonu Srinivas Gowda: ಸೋನು ಶ್ರೀನಿವಾಸ್​ ಗೌಡ ಫೋನ್​ ನಂಬರ್​ ಏನು? ಅದ್ರಲ್ಲೂ ಚಾಲಕಿತನ ತೋರಿದ ರೀಲ್ಸ್​ ಬೆಡಗಿ

ಕಣ್ಣೀರು ಹಾಕಿದ ಜಯಶ್ರೀ ಆರಾಧ್ಯ:

ಚೈತ್ರಾ ಹಳ್ಳಿಕೇರಿ ಅವರು ಎಲಿಮಿನೇಟ್​ ಆಗಿದ್ದು ಜಯಶ್ರೀ ಆರಾಧ್ಯ ಅವರಿಗೆ ತೀವ್ರ ನೋವು ಉಂಟು ಮಾಡಿದೆ. ಶನಿವಾರ ರಾತ್ರಿ ಜಯಶ್ರೀ ಎದೆ ಬಡಿದುಕೊಂಡು ಅತ್ತಿದ್ದಾರೆ. ‘ನನಗೆ ಸಹಿಸಿಕೊಳ್ಳೋಕೆ ಆಗ್ತಾ ಇಲ್ಲ’ ಎಂದು ಕಣ್ಣೀರು ಹಾಕಿದ್ದಾರೆ. ‘ನಗುನಗುತ್ತಾ ಜೀವನ ಎದುರಿಸಬಹುದು ಅನ್ನೋದು ನಿಮ್ಮಿಂದ ಕಲಿತೆ’ ಎಂದು ಜಯಶ್ರೀ ಹೇಳಿದ್ದಾರೆ.

ಐದನೇ ವಾರಕ್ಕೆ ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಶೋ ಕಾಲಿಟ್ಟಿದೆ. 9 ಜನರ ನಡುವೆ ಸ್ಪರ್ಧೆ ಜೋರಾಗಿದೆ. ನಂದಿನಿ, ಜಶ್ವಂತ್​, ಸಾನ್ಯಾ ಐಯ್ಯರ್​, ಸೋಮಣ್ಣ ಮಾಚಿಮಾಡ, ಆರ್ಯವರ್ಧನ್​ ಗುರೂಜಿ, ರಾಕೇಶ್​ ಅಡಿಗ, ಜಯಶ್ರೀ ಆರಾಧ್ಯ, ಸೋನು ಗೌಡ, ರೂಪೇಶ್​ ಶೆಟ್ಟಿ ನಡುವೆ ಪೈಪೋಟಿ ಮುಂದುವರಿದಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.