ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರು ಬಿಗ್ ಬಾಸ್ನಲ್ಲಿ ಹೈಲೈಟ್ ಆಗುತ್ತಿದ್ದಾರೆ. ಇದರ ಜತೆಗೆ ಅವರು ಕೆಲ ನೆಗೆಟಿವ್ ವಿಚಾರಕ್ಕೂ ಟ್ರೋಲ್ ಆಗುತ್ತಿದ್ದಾರೆ. ವಾರಾಂತ್ಯದ ವೇಳೆ ಸುದೀಪ್ ಅವರಿಂದ ಅನೇಕ ಬಾರಿ ಸೋನು ಶ್ರೀನಿವಾಸ್ ಗೌಡ ಬೈಸಿಕೊಂಡಿದ್ದಾರೆ. ಆದರೂ ಅವರು ತಮ್ಮ ಹಳೆಯ ವರ್ತನೆಯನ್ನು ಮುಂದುವರಿಸಿದ್ದಾರೆ. ಥೂ.. ಎಂದು ಬೈದುಕೊಂಡು ಓಡಾಡುತ್ತಿದ್ದಾರೆ. ಈ ಬಗ್ಗೆ ರಾಕೇಶ್ (Rakesh Adiga) ಅವರು ಸೋನುಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಸೋನು ಶ್ರೀನಿವಾಸ್ ಗೌಡ ಅವರಿಗೆ ಕಳಪೆ ಪಟ್ಟ ನೀಡಿದ್ದರು ರಾಕೇಶ್. ಸೋನುಗೆ ಒಳ್ಳೆಯದಾಗಲಿ ಅನ್ನೋದು ರಾಕೇಶ್ ಉದ್ದೇಶ ಆಗಿತ್ತು. ಆದರೆ, ಇದನ್ನು ಅವರು ಬೇರೆ ರೀತಿಯಲ್ಲಿ ಅರ್ಥೈಸಿಕೊಂಡರು. ‘ನಮ್ಮ ಜತೆಯೇ ಇದ್ದುಕೊಂಡು ನಮಗೆ ಮೋಸ ಮಾಡುತ್ತಾರೆ. ಇಷ್ಟೆಲ್ಲ ಕ್ಲೋಸ್ ಇದ್ದವರೇ ಕಳಪೆ ಪಟ್ಟ ನೀಡುತ್ತಾರೆ ಥೂ’ ಎಂದು ಜೈಲಿನಲ್ಲಿ ಕುಳಿತುಕೊಂಡು ಸೋನು ಶ್ರೀನಿವಾಸ್ ಗೌಡ ಬೈದಿದ್ದರು. ಇದನ್ನು ಸುದೀಪ್ ವೀಕೆಂಡ್ನಲ್ಲಿ ಚರ್ಚೆ ಮಾಡಿದ್ದರು.
‘ರಾಕೇಶ್ ನಿಮಗೆ ಒಳ್ಳೆಯದಾಗಲಿ ಎಂದು ಆ ರೀತಿ ಮಾಡಿದರು. ರಾಕೇಶ್ ರೀತಿಯ ಗೆಳೆಯ ಯಾರಿಗೂ ಸಿಗಲ್ಲ. ಹಾಗಿದ್ದರೂ ಕೂಡ ಅವರಿಗೆ ಥೂ ಎಂಬ ಬೈಗುಳ’ ಎಂದು ಸೋನುಗೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದರು. ಆದರೂ ಸೋನು ತಮ್ಮ ನಡವಳಿಕೆಯನ್ನು ಬದಲಾಯಿಸಿಕೊಂಡಿಲ್ಲ. ಮತ್ತದೇ ಚಾಳಿ ಮುಂದುವರಿಸಿದ್ದಾರೆ.
ಇದನ್ನೂ ಓದಿ: ರಾಕೇಶ್ ಅಡಿಗ ಜತೆ ಕಬ್ಬಡಿ ಆಡೋಕೆ ಇಳಿದ ಸೋನು ಶ್ರೀನಿವಾಸ್ ಗೌಡ; ಇಲ್ಲಿದೆ ವಿಡಿಯೋ
ಸೆಪ್ಟೆಂಬರ್ 8ರ ಎಪಿಸೋಡ್ನಲ್ಲಿ ರಾಕೇಶ್ ಹಾಗೂ ಸೋನು ಜಗಳ ಆಡುತ್ತಿದ್ದರು. ಈ ವೇಳೆ ರಾಕೇಶ್ಗೆ ಥೂ ಎಂದು ಬೈದಿದ್ದಾರೆ ಸೋನು. ಈ ಮಾತನ್ನು ಕೇಳಿ ರಾಕೇಶ್ ಸಿಟ್ಟಾಗಿದ್ದಾರೆ. ಅಷ್ಟೇ ಅಲ್ಲ, ‘ಸುದೀಪ್ ಸರ್ ಕಳೆದ ವಾರ ಬೈದರೂ ನಿನ್ನ ನಡವಳಿಕೆ ಹಾಗೇ ಇದೆ. ಮತ್ತೆ ಬೈಸಿಕೊಳ್ಳಬೇಕು ಅಂತ ಆಸೆಯೇ’ ಎಂದು ಪ್ರಶ್ನೆ ಮಾಡಿದ್ದಾರೆ. ‘ನಾನು ಬಯ್ಯುವಾಗ ಥೂ ಎಂದು ಹೇಳಲೇ ಇಲ್ಲ’ ಎಂಬ ಮಾತನ್ನು ಸೋನು ಹೇಳಿದ್ದಾರೆ.
ಕಳೆದ ವಾರ ಸೋನು ಶ್ರೀನಿವಾಸ್ ಗೌಡ ಎಲಿಮಿನೇಷನ್ನಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಈ ವಾರವೂ ಅವರು ನಾಮಿನೇಟ್ ಆಗಿದ್ದಾರೆ. ಮನೆಯಿಂದ ಹೊರ ಹೋದರೆ ಅವರು ಫಿನಾಲೆ ವೀಕ್ ಮಿಸ್ ಮಾಡಿಕೊಳ್ಳಲಿದ್ದಾರೆ. ಸದ್ಯ ಮನೆಯಲ್ಲಿ 9 ಸ್ಪರ್ಧಿಗಳು ಇದ್ದಾರೆ.