‘ನಾನು ಏಳು ವರ್ಷ ಮದುವೆ ಆಗಲ್ಲ, ಇಂಡಸ್ಟ್ರೀಲಿ ಬೆಳೆಯಬೇಕು’; ಸೋನು ಶ್ರೀನಿವಾಸ್ ಗೌಡ

| Updated By: ರಾಜೇಶ್ ದುಗ್ಗುಮನೆ

Updated on: Aug 18, 2022 | 6:30 AM

ರಾಕೇಶ್ ಅಡಿಗ ‘ಬಿಗ್ ಬಾಸ್ ಒಟಿಟಿ’ ಸೇರಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅವರು ಎಲ್ಲರ ಜತೆ ಫ್ಲರ್ಟ್​ ಮಾಡುತ್ತಾ ಇರುತ್ತಾರೆ. ಸೋನು ಗೌಡ ಜತೆ ಅವರು ಕ್ಲೋಸ್ ಆಗಿದ್ದಾರೆ. ಇಬ್ಬರೂ ಸಮಯ ಸಿಕ್ಕಾಗ ಮಾತನಾಡುತ್ತಾ ಇರುತ್ತಾರೆ.

‘ನಾನು ಏಳು ವರ್ಷ ಮದುವೆ ಆಗಲ್ಲ, ಇಂಡಸ್ಟ್ರೀಲಿ ಬೆಳೆಯಬೇಕು’; ಸೋನು ಶ್ರೀನಿವಾಸ್ ಗೌಡ
ಸೋನು ಶ್ರೀನಿವಾಸ್ ಗೌಡ
Follow us on

ಸೋನು ಶ್ರೀನಿವಾಸ್ ​ಗೌಡ (Sonu Srinivas Gowda) ಅವರು ಬಿಗ್ ಬಾಸ್ ಮನೆಯಲ್ಲಿ ಸಖತ್ ಹೈಲೈಟ್ ಆಗುತ್ತಿದ್ದಾರೆ. ಅವರು ಕೆಲ ವಿಚಾರಕ್ಕೆ ಈಗಲೂ ಟ್ರೋಲ್ ಆಗುತ್ತಿದ್ದಾರೆ. ಅವರು ಸಣ್ಣ ಮಕ್ಕಳಂತೆ ಆಡುತ್ತಾರೆ ಎಂಬುದು ಕೆಲವರು ಆರೋಪ. ಇನ್ನೂ ಕೆಲವರಿಂದ ಅವರಿಗೆ ಬೆಂಬಲ ಸಿಗುತ್ತಿದೆ. ಈಗ ಸೋನು ಅವರು ಮದುವೆ ವಿಚಾರ ಮಾತನಾಡಿದ್ದಾರೆ. ಮುಂದಿನ ಆರೇಳು ವರ್ಷ ಮದುವೆ ಆಗುವುದಿಲ್ಲ ಎಂಬುದನ್ನು ಸೋನು ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ (Bigg Boss) ಸ್ಪಷ್ಟ ಪಡಿಸಿದ್ದಾರೆ. ಈ ವಿಚಾರ ಕೇಳಿ ಸ್ಫೂರ್ತಿ ಗೌಡ ಅವರು ನಕ್ಕಿದ್ದಾರೆ.

ರಾಕೇಶ್ ಅಡಿಗ ‘ಬಿಗ್ ಬಾಸ್ ಒಟಿಟಿ’ ಸೇರಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅವರು ಎಲ್ಲರ ಜತೆ ಫ್ಲರ್ಟ್​ ಮಾಡುತ್ತಾ ಇರುತ್ತಾರೆ. ಸೋನು ಗೌಡ ಜತೆ ಅವರು ಕ್ಲೋಸ್ ಆಗಿದ್ದಾರೆ. ಇಬ್ಬರೂ ಸಮಯ ಸಿಕ್ಕಾಗ ಮಾತನಾಡುತ್ತಾ ಇರುತ್ತಾರೆ. ಇಬ್ಬರ ನಡುವೆ ಏನೋ ಇದೆ ಎಂಬ ಅನುಮಾನ ವೀಕ್ಷಕರಲ್ಲಿದೆ. ‘ನನಗೆ ನಿನ್ನ ಮೇಲೆ ಫೀಲಿಂಗ್ಸ್​’ ಇದೆ ಎಂದು ರಾಕೇಶ್​ಗೆ ಸೋನು ನೇರವಾಗಿ ಹೇಳಿದ್ದೂ ಇದೆ. ಈಗ ಈ ವಿಚಾರ ಮತ್ತೆ ಚರ್ಚೆಗೆ ಬಂದಿದೆ.

‘ನಿನಗೆ ರಾಕೇಶ್ ಮೇಲೆ ಪ್ರೀತಿ ಇದೆಯಾ’ ಎಂದು ಸೋನುಗೆ ಸ್ಫೂರ್ತಿ ಪ್ರಶ್ನೆ ಮಾಡಿದರು. ಇದಕ್ಕೆ ಸೋನು ನೇರವಾಗಿ ಉತ್ತರಿಸಿದರು. ‘ರಾಕೇಶ್ ಒಳ್ಳೆಯ ಗೆಳೆಯ. ಹಾಗಂತ ನಾನು ಅವನ ಜತೆ ಟೈಮ್​ಪಾಸ್ ಮಾಡುತ್ತಿಲ್ಲ. ನನಗೆ ಒಬ್ಬ ಫ್ರೆಂಡ್ ಇದ್ದಾನೆ. ಅವನ ರೀತಿಯೇ ರಾಕೇಶ್​ ಕಾಣುತ್ತಿದ್ದಾನೆ. ಹೀಗಾಗಿ ಅವನ ಜತೆ ಕ್ಲೋಸ್ ಆಗಿದ್ದೀನಿ. ನಾನು ಇಷ್ಟು ಬೇಗ ಮದುವೆ ಆಗಲ್ಲ. ಇನ್ನೂ ಏಳು ವರ್ಷ ವಿವಾಹ ಆಗಲ್ಲ. ನಾನು ಇಂಡಸ್ಟ್ರೀಲಿ ಬೆಳೆಯಬೇಕು’ ಎಂದರು ಸೋನು.

ಇದನ್ನೂ ಓದಿ
‘ನಾನು ಸಖತ್ ಆಗಿ ಕಬಡ್ಡಿ ಆಡ್ತೀನಿ’ ಎಂದು ಬಿಗ್ ಬಾಸ್ ಮನೆಯಲ್ಲಿ ಗಾಯ ಮಾಡಿಕೊಂಡ ಸೋನು ಶ್ರೀನಿವಾಸ್ ಗೌಡ
ಗರ್ಲ್​​ಫ್ರೆಂಡ್ ವಿಚಾರಕ್ಕೆ ಬಂದ ಸೋನು ಗೌಡ ವಿರುದ್ಧ ಸೇಡು ತೀರಿಸಿಕೊಂಡ ಜಶ್ವಂತ್
‘ಪ್ಲೀಸ್ ದಯವಿಟ್ಟು ಬಿಟ್ಟುಬಿಡಿ’; ಮನೆಗೆ ಬಂದ ಅತಿಥಿ ಕಂಡು ಕಿರುಚಾಡಿದ ಸಾನ್ಯಾ ಅಯ್ಯರ್
‘ಕಾಫಿ ನಾಡು ಚಂದು ಬಿಗ್ ಬಾಸ್‌ಗೆ ಹೋಗಬೇಕು’ ಅಭಿಯಾನ ಶುರು; ಸ್ವತಃ ಬೆಂಬಲ ನೀಡಿದ ವೈರಲ್ ಸಿಂಗರ್!

ಸೋನುಗೆ ಹೀರೋಯಿನ್ ಆಗಬೇಕು ಎಂಬ ಕನಸಿದೆ. ಈ ಮೊದಲು ಶಾರ್ಟ್​ಮೂವಿಗಳಲ್ಲಿ ಅವರು ನಟಿಸಿದ್ದರು. ಬಿಗ್ ಬಾಸ್ ವೇದಿಕೆ ಏರಿದಾಗಲೂ ನಾನು ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕು ಎಂಬುದನ್ನು ಅವರು ಒತ್ತಿ ಹೇಳಿದ್ದರು. ಬಿಗ್ ಬಾಸ್​ನಿಂದ ಒಂದಷ್ಟು ಜನಪ್ರಿಯತೆ ಸಿಕ್ಕರೆ ಅದರಿಂದ ಒಂದಷ್ಟು ಆಫರ್​ಗಳು ಬರಬಹುದು ಎಂಬುದು ಅವರ ನಂಬಿಕೆ.

ಇದನ್ನೂ ಓದಿ: ‘ಲೂಸಾ ನೀನು?’; ಸೋನು ಶ್ರೀನಿವಾಸ್​ ಗೌಡ ಅವತಾರಕ್ಕೆ ಉರಿದು ಬಿದ್ದ ಸಾನ್ಯಾ ಅಯ್ಯರ್

ಈ ಮೊದಲು ಬಿಗ್ ಬಾಸ್ ಮನೆಗೆ ಬಂದ ಅನೇಕರಿಗೆ ಮೈಲೇಜ್​ ಸಿಕ್ಕಿದೆ. ದೊಡ್ಮನೆಯಿಂದ ಹೊರ ಬಂದ ನಂತರದಲ್ಲಿ ಸಿನಿಮಾದಲ್ಲಿ ನಟಿಸುವ ಅವಕಾಶವೂ ಸಿಕ್ಕಿದೆ. ಸೋನು ಗೌಡ ಕೂಡ ಇದೇ ಆಲೋಚನೆಯಲ್ಲಿದ್ದಾರೆ. ಅವರು ಎಷ್ಟು ದಿನ ಬಿಗ್ ಬಾಸ್​ನಲ್ಲಿ ಇರುತ್ತಾರೆ, ಯಾವ ರೀತಿಯಲ್ಲಿ ಪರ್ಫಾರ್ಮೆನ್ಸ್ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.