ಟಾಟಾ ಕುಟುಂಬದ ಕುರಿತು ಬರಲಿದೆ ಬಯೋಪಿಕ್​; ಸಿಕ್ತು ಬ್ರೇಕಿಂಗ್ ನ್ಯೂಸ್

ಟಾಟಾ ಕುಟುಂಬದ ಕುರಿತು ಬರಲಿದೆ ಬಯೋಪಿಕ್​; ಸಿಕ್ತು ಬ್ರೇಕಿಂಗ್ ನ್ಯೂಸ್
ರತನ್ ಟಾಟಾ

ಟಾಟಾ ಕುಟುಂಬ ಉದ್ಯಮ ಕ್ಷೇತ್ರದಲ್ಲಿ ಮಾಡಿದ ಸಾಧನೆ ತುಂಬಾನೇ ದೊಡ್ಡದು. ದುಡಿದ ಹಣದಲ್ಲಿ ಸಾಕಷ್ಟು ಮೊತ್ತವನ್ನು ಈ ಕುಟುಂಬ ಸಾಮಾಜಿಕ ಕೆಲಸಕ್ಕೆ ಮೀಸಲಿಟ್ಟಿದೆ. ಈ ಮೂಲಕ ಅನೇಕರಿಗೆ ಮಾದರಿ ಆಗಿದೆ.

TV9kannada Web Team

| Edited By: Rajesh Duggumane

May 24, 2022 | 4:17 PM

ಸದ್ಯ ಬಯೋಪಿಕ್ (Biopic) ಟ್ರೆಂಡ್ ಜೋರಾಗಿದೆ. ಸಾಧನೆ ಮಾಡಿ ಇತಿಹಾಸ ಪುಟ ಸೇರಿದವರ ಕುರಿತು ಬಯೋಪಿಕ್ ಮಾಡಲಾಗುತ್ತಿದೆ. ಇದರಿಂದ ನಿರ್ಮಾಪಕರ ಜೇಬು ತುಂಬುತ್ತಿದೆ. ‘ಸಂಜು’ (Sanju Movie) ಸೇರಿದಂತೆ ಅನೇಕ ಬಯೋಪಿಕ್​ಗಳು ಹಿಟ್ ಆಗಿವೆ. ಈಗ ನಿರ್ಮಾಣ ಸಂಸ್ಥೆಗಳಾದ ಟೀ-ಸಿರೀಸ್ ಫಿಲ್ಮ್ಸ್​ ಹಾಗೂ ಆಲ್ಮ್​​ಲೈಟ್​ ಮೋಷನ್​ ಪಿಕ್ಚರ್ಸ್​ ಜಂಟಿಯಾಗಿ ಉದ್ಯಮಿ ರತನ್ ಟಾಟಾ ಹಾಗೂ ಅವರ ಕುಟುಂಬದವರ ಕಥೆ ಹೇಳಲು ಹೊರಟಿದೆ. ಈ ಬಗ್ಗೆ ಟೀ-ಸಿರೀಸ್ (T-Series) ಕಡೆಯಿಂದ ಬ್ರೇಕಿಂಗ್ ನ್ಯೂಸ್ ಸಿಕ್ಕಿದೆ.

ಟಾಟಾ ಕುಟುಂಬ ಉದ್ಯಮ ಕ್ಷೇತ್ರದಲ್ಲಿ ಮಾಡಿದ ಸಾಧನೆ ತುಂಬಾನೇ ದೊಡ್ಡದು. ದುಡಿದ ಹಣದಲ್ಲಿ ಸಾಕಷ್ಟು ಮೊತ್ತವನ್ನು ಈ ಕುಟುಂಬ ಸಾಮಾಜಿಕ ಕೆಲಸಕ್ಕೆ ಮೀಸಲಿಟ್ಟಿದೆ. ಈ ಮೂಲಕ ಅನೇಕರಿಗೆ ಮಾದರಿ ಆಗಿದೆ. ಪತ್ರಕರ್ತ ಗಿರೀಶ್ ಕುಬೇರ್ ಅವರು ‘ದಿ ಟಾಟಾಸ್​: ಹವ್ ಎ ಫ್ಯಾಮಿಲಿ ಬಿಲ್ಟ್​ ಎ ಬಿಸ್ನೆಸ್ ಆ್ಯಂಡ್ ನೇಷನ್​’ ಪುಸ್ತಕ ಬರೆದಿದ್ದಾರೆ. ಈ ಪುಸ್ತಕ ಆಧರಿಸಿ ಸಿನಿಮಾ ಮಾಡಲು ಟೀ-ಸಿರೀಸ್ ಫಿಲ್ಮ್ಸ್​ ಹಾಗೂ ಆಲ್ಮ್​​ಲೈಟ್​ ಮೋಷನ್​ ಪಿಕ್ಚರ್ಸ್ ಹಕ್ಕುಗಳನ್ನು ಪಡೆದಿದೆ.

ಈ ಬಗ್ಗೆ ಟೀ-ಸಿರೀಸ್ ಘೋಷಣೆ ಮಾಡಿದೆ. ‘ಮೂರು ತಲೆಮಾರುಗಳ ಕಾಲ ದೇಶವನ್ನು ಕಟ್ಟಿ ಬೆಳೆಸುವಲ್ಲಿ ಟಾಟಾ ಫ್ಯಾಮಿಲಿ ಸಹಕಾರಿಯಾಗಿದೆ. ಈ ಕುಟುಂಬದ ಸಿನಿಮಾ ಮಾಡುವ ಹಕ್ಕನ್ನು ನಾವು ಪಡೆದಿದ್ದೇವೆ’ ಎಂದು ಬರೆದುಕೊಳ್ಳಲಾಗಿದೆ.

ಇದನ್ನೂ ಓದಿ: ಒಟಿಟಿಯಲ್ಲೂ ದಾಖಲೆ ಬರೆದ ‘ದಿ ಕಾಶ್ಮೀರ್ ಫೈಲ್ಸ್​’ ಸಿನಿಮಾ; ಒಂದು ವಾರಕ್ಕೆ ಆದ ವೀಕ್ಷಣೆ ಎಷ್ಟು?

ಹರ್ಷದ್ ಮೆಹ್ತಾ ಸೇರಿ ಅನೇಕರ ಜೀವನ ಕಥೆ ವೆಬ್​ ಸಿರೀಸ್​ ರೀತಿಯಲ್ಲಿ ಮೂಡಿ ಬಂದಿದೆ. ಇದು ದೊಡ್ಡ ಮಟ್ಟದಲ್ಲಿ ಯಶಸ್ಸು ಕೂಡ ಪಡೆಯಿತು. ಈಗ ಟಾಟಾ ಫ್ಯಾಮಿಲಿಯ ಕಥೆಯನ್ನು ತುಂಬಾನೇ ವಿಸ್ತ್ರತವಾಗಿ ಹೇಳಬೇಕಾಗಿದ್ದರಿಂದ ವೆಬ್ ಸರಣಿ ರೂಪದಲ್ಲಿ ಇದು ಮೂಡಿ ಬರುವುದು ಬಹುತೇಕ ಖಚಿತವಾಗಿದೆ. ಕೆಲ ಒಟಿಟಿ ಪ್ಲಾಟ್​ಫಾರ್ಮ್​ಗಳು ಟಾಟಾ ಕುಟುಂಬದ ಬಗ್ಗೆ ಸಿನಿಮಾ ಮಾಡಲು ಆಸಕ್ತಿ ತೋರಿಸಿವೆ ಎಂದು ಈ ಮೊದಲು ವರದಿ ಆಗಿತ್ತು.

ಮೂರು ಸೀಸನ್​ನಲ್ಲಿ ಟಾಟಾ ಫ್ಯಾಮಿಲಿ ಕಥೆ:

‘ನಮ್ಮ ಸಮುದಾಯದ ನಿರ್ಮಾಣಕ್ಕೆ ಟಾಟಾ ಕುಟುಂಬವು ಹೇಗೆ ಕೊಡುಗೆ ನೀಡಿದೆ ಎಂಬುದರ ಕುರಿತು ಬೆಳಕು ಚೆಲ್ಲುವ ಪ್ರಯತ್ನ ಇದಾಗಿದೆ. ಟಾಟಾ ಕುಟುಂಬ ವ್ಯಾಪಾರ ಕ್ಷೇತ್ರದಲ್ಲಿ ಸಾಮ್ರಾಜ್ಯ ವಿಸ್ತರಿಸಿಕೊಳ್ಳುವಲ್ಲಿ ಮಾತ್ರ ಪ್ರಯತ್ನ ನಡೆಸಿಲ್ಲ. ರಾಷ್ಟ್ರ ನಿರ್ಮಾಣದಲ್ಲೂ ಅವರ ಕೊಡುಗೆ ಇದೆ. ಈ ಕುರಿತೂ ಬೆಳಕು ಚೆಲ್ಲಲಾಗುತ್ತದೆ. ರತನ್​ ಟಾಟಾ ಕುರಿತು ಮಾತ್ರವಲ್ಲದೆ, ಇಡೀ ಕುಟುಂಬದ ಬಗ್ಗೆ ಇಲ್ಲಿ ಹೇಳಲಾಗುತ್ತಿದೆ’ ಎಂದು ಆಲ್ಮ್​​ಲೈಟ್​ ಮೋಷನ್​ ಪಿಕ್ಚರ್ಸ್​ಗೆ ಸಂಬಂಧಿಸಿದವರು ಮಾಹಿತಿ ನೀಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada