ಹಾಲಿವುಡ್ ಗೆ ಹೊರಟ ದಕ್ಷಿಣ ಭಾರತದ ನಟಿ, ಸ್ಟಾರ್ ಗಳೊಟ್ಟಿಗೆ ನಟನೆ
ಬಾಲಿವುಡ್ ಹಾಗೂ ದಕ್ಷಿಣ ಭಾರತ ಚಿತ್ರರಂಗ ಎರಡರಲ್ಲೂ ಮಿಂಚಿರುವ ನಟಿ ಟಬು ಇದೀಗ ಹಾಲಿವುಡ್ ಗೆ ಹೊರಟಿದ್ದಾರೆ. ಎಮ್ಮಾ ವಾಟ್ಸನ್ ಸೇರಿದಂತೆ ಕೆಲವು ದೊಡ್ಡ ಹಾಲಿವುಡ್ ನಟ-ನಟಿಯರು ನಟಿಸುತ್ತಿರುವ ವೆಬ್ ಸರಣಿಯಲ್ಲಿ ಟಬು ನಟಿಸಲಿದ್ದಾರೆ.
ಭಾರತದ ನಟ-ನಟಿಯರು ಹಾಲಿವುಡ್ ಅವಕಾಶ ಗಿಟ್ಟಿಸಿಕೊಳ್ಳುವುದು ಇತ್ತೀಚೆಗೆ ಸಾಮಾನ್ಯ ಎಂಬಂತಾಗಿದೆ. ದೀಪಿಕಾ ಪಡುಕೋಣೆ, ಆಲಿಯಾ ಭಟ್, ಡಿಂಪಲ್ ಕಪಾಡಿಯಾ, ಶೋಭಿತಾ ದುಲಿಪಾಡ ಇನ್ನೂ ಕೆಲವು ನಟಿಯರು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇರ್ಫಾನ್ ಖಾನ್, ಧನುಶ್, ನಾಸಿರುದ್ದೀನ್ ಶಾ, ಅನಿಲ್ ಕಪೂರ್ ಇನ್ನೂ ಹಲವು ನಟರು ಸಹ ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ತೆಲುಗು, ತಮಿಳು ಚಿತ್ರರಂಗ ಮಾತ್ರವಲ್ಲದೆ ಬಾಲಿವುಡ್ ನಲ್ಲೂ ಮಿಂಚಿರುವ ದಕ್ಷಿಣ ಭಾರತದ ಜನಪ್ರಿಯ ನಟಿಯೊಬ್ಬರು ಹಾಲಿವುಡ್ ಗೆ ಹೊರಟಿದ್ದಾರೆ. ಅಲ್ಲಿನ ಸ್ಟಾರ್ ನಟ-ನಟಿಯರೊಟ್ಟಿಗೆ ತೆರೆ ಹಂಚಿಕೊಳ್ಳಲಿದ್ದಾರೆ.
ಬಾಲಿವುಡ್ ಹಾಗೂ ದಕ್ಷಿಣ ಭಾರತ ಚಿತ್ರರಂಗ ಎರಡರಲ್ಲೂ ಮಿಂಚಿರುವ ನಟಿ ಟಬು ಇದೀಗ ಹಾಲಿವುಡ್ ಗೆ ಹೊರಟಿದ್ದಾರೆ. ಎಮ್ಮಾ ವಾಟ್ಸನ್ ಸೇರಿದಂತೆ ಕೆಲವು ದೊಡ್ಡ ಹಾಲಿವುಡ್ ನಟ-ನಟಿಯರು ನಟಿಸುತ್ತಿರುವ ವೆಬ್ ಸರಣಿಯಲ್ಲಿ ಟಬು ನಟಿಸಲಿದ್ದಾರೆ. ವೆಬ್ ಸರಣಿಯ ಚಿತ್ರೀಕರಣ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಭಾರತದ ಹೊರಗಿನ ಚಿತ್ರರಂಗಗಳಲ್ಲಿ ನಟಿಸುವುದು ಟಬು ಅವರಿಗೆ ಹೊಸದೇನೂ ಅಲ್ಲ. ಆಸ್ಕರ್ ವಿಜೇತ ‘ಲೈಫ್ ಆಫ್ ಪೈ’ ಸಿನಿಮಾನಲ್ಲಿ ಟಬು ನಟಿಸಿದ್ದರು. ಭಾರತದ ಕತೆಯಿದ್ದ, ಭಾರತೀಯರೇ ನಟಿಸಿದ್ದ ಸಿನಿಮಾ ಅದಾಗಿತ್ತು. ಆ ಸಿನಿಮಾನಲ್ಲಿ ನಾಯಕನ ತಾಯಿಯ ಪಾತ್ರದಲ್ಲಿ ಟಬು ಮಿಂಚಿದ್ದರು.
ಇದನ್ನೂ ಓದಿ:ಮೂರು ಪ್ರೇಮ ಪ್ರಕರಣ, ಆದರೂ ಟಬು ಮದುವೆ ಆಗಲಿಲ್ಲ; ಇದಕ್ಕೆಲ್ಲ ಅಜಯ್ ದೇವಗನ್ ಕಾರಣ ಎಂದಿದ್ದ ನಟಿ
ಟಬು ಈಗ ನಟಿಸುತ್ತಿರುವಿದು ‘ಡ್ಯೂನ್’ ವೆಬ್ ಸರಣಿಯಲ್ಲಿ. ಇದೇ ಹೆಸರಿನ ಎರಡು ಸಿನಿಮಾಗಳು ಈಗಾಗಲೇ ಬಿಡುಗಡೆ ಆಗಿವೆ. ಎರಡೂ ಸಹ ಸೂಪರ್ ಹಿಟ್ ಆಗಿವೆ. ಬೇರೆ ಗ್ರಹವೊಂದರಲ್ಲಿ ನಡೆಯುವ ಕತೆಯನ್ನು ಈ ವೆಬ್ ಸರಣಿ ಒಳಗೊಂಡಿದೆ. ‘ಡ್ಯೂನ್’ ಹೆಸರಿನ ದೀರ್ಘ ಕಾದಂಬರಿಯನ್ನು ಆಧರಿಸಿದ ವೆಬ್ ಸರಣಿ ಇದಾಗಿರಲಿದೆ. ವೆಬ್ ಸಡಣಿಯಲ್ಲಿ ಸಿಸ್ಟರ್ ಫ್ರಾಂಕೆಸ್ಕಾ ಹೆಸರಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಪಾತ್ರ ಬಹಳ ಗಟ್ಟಿ ಪಾತ್ರವಾಗಿದ್ದು, ಕಥೆಯ ಅತ್ಯಂತ ಪ್ರಮುಖ ಪಾತ್ರಗಳಲ್ಲಿ ಒಂದು ಎನ್ನಲಾಗುತ್ತಿದೆ. ಸಾಮ್ರಾಜ್ಯದ ಮೇಲೆ ಅತೀವೋಹ ಹೋಂದಿರುವ ಪಾತ್ರ ಇದಾಗಿದ್ದು, ಸಾಮ್ರಾಜ್ಯವನ್ನು ಪಡೆದೇ ತೀರುವ ಬಯಕೆಯಲ್ಲಿದೆ. ಕತೆಯ ಹಲವು ಅಂಶಗಳು ಈ ಪಾತ್ರದ ಸುತ್ತ ತಿರುಗುತ್ತವೆ ಎನ್ನಲಾಗಿದೆ.
ಟಬು ಇತ್ತೀಚೆಗಷ್ಟೆ ‘ಕ್ರೀವ್’ ಹೆಸರಿನ ಹಿಂದಿ ಸಿನಿಮಾನಲ್ಲಿ ನಟಿಸಿದ್ದರು. ಆ ಸಿನಿಮಾನಲ್ಲಿ ಟಬು ಜೊತೆಗೆ ಕರೀನಾ ಕಪೂರ್ ಹಾಗೂ ಕೃತಿ ಸನೋನ್ ಸಹ ನಟಿಸಿದ್ದರು. ಆ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿದೆ. ಟಬು ಪ್ರಸ್ತುತ ‘ಔರೋ ಮೆ ಕಹಾ ಧಮ್ ಥಾ?’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಹಿಂದಿಯ ವೆಬ್ ಸರಣಿಯೊಂದರಲ್ಲಿಯೂ ಸಹ ಟಬು ನಟನೆ ಮಾಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ