AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾರ ಒಟಿಟಿಗೆ ಬಂದಿವೆ ಸೂಪರ್ ಹಿಟ್ ಸಿನಿಮಾಗಳು ಪಟ್ಟಿ ಇಲ್ಲಿದೆ

This week OTT release: ಈ ವಾರ ಚಿತ್ರಮಂದಿರದಲ್ಲಿ ‘ಧುರಂಧರ್ 2’ ಅಬ್ಬರ ಜೋರಾಗಿದೆ. ಜೊತೆಗೆ ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಸಹ ಇದೆ. ಇದೇ ವಾರ ಒಟಿಟಿಯಲ್ಲಿಯೂ ಸಹ ಕೆಲವು ಒಳ್ಳೆಯ ಸಿನಿಮಾಗಳು ಬಂದಿವೆ. ವಿಶೇಷವಾಗಿ ಕನ್ನಡದ ಕೆಲವು ಸಿನಿಮಾಗಳು ಸಹ ಈ ವಾರ ಒಟಿಟಿಗೆ ಬಂದಿವೆ. ಯಾವುವವು? ಇಲ್ಲಿದೆ ನೋಡಿ ಪಟ್ಟಿ...

ಮಂಜುನಾಥ ಸಿ.
|

Updated on: Mar 21, 2026 | 6:45 PM

Share
ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಭಾರಿ ಪ್ರಶಂಸೆ ಗಳಿಸಿದ್ದ ‘ವಲವಾರ’ ಸಿನಿಮಾ ಇದೀಗ ಒಟಿಟಿಗೆ ಬಂದಿದೆ. ಇಬ್ಬರು ಮಕ್ಕಳು ಮತ್ತು ಹಸುವಿನ ಸುತ್ತ ನಡೆಯುವ ಈ ಕತೆ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿತ್ತು. ಇದೀಗ ಈ ಸಿನಿಮಾವನ್ನು ಸನ್​​ನೆಕ್ಸ್ಟ್​​ನಲ್ಲಿ ವೀಕ್ಷಿಸಬಹುದು.

1 / 6
ಅರ್ಜುನ್ ಸರ್ಜಾ ನಿರ್ದೇಶಿಸಿ, ಅವರ ಪುತ್ರಿ ಐಶ್ವರ್ಯಾ ನಾಯಕಿಯಾಗಿ, ಉಪೇಂದ್ರ ಅವರ ಅಣ್ಣನ ಪುತ್ರ ನಿರಂಜನ್ ನಾಯಕನಾಗಿ ನಟಿಸಿರುವ ‘ಸೀತಾಪಯಣ’ ಸಿನಿಮಾ ಇದೇ ವಾರ ಒಟಿಟಿಗೆ ಬಂದಿದೆ. ಸನ್​​ನೆಕ್ಸ್ಟ್​​ನಲ್ಲಿ ಸಿನಿಮಾ ವೀಕ್ಷಣೆ ಮಾಡಬಹುದಾಗಿದೆ.

2 / 6
‘ಪೀಕಿ ಬ್ಲೈಂಡರ್ಸ್’ ಜನಪ್ರಿಯ ವೆಬ್ ಸರಣಿ ಆಸ್ಕರ್ ವಿಜೇತ ಕಿಲಿಯನ್ ಮರ್ಫಿ ನಟಿಸಿರುವ ಈ ವೆಬ್ ಸರಣಿಯನ್ನು ಇದೀಗ ಸಿನಿಮಾ ಮಾಡಲಾಗಿದ್ದು, ಸಿನಿಮಾಕ್ಕೆ ‘ಪೀಕಿ ಬ್ಲೈಂಡರ್ಸ್: ದಿ ಇಮ್ಮಾರ್ಟಲ್ ಮ್ಯಾನ್’ ಎಂದು ಹೆಸರಿಡಲಾಗಿದೆ. ಸಿನಿಮಾ ನೆಟ್​​ಫ್ಲಿಕ್ಸ್​​ನಲ್ಲಿ ವೀಕ್ಷಣೆಗೆ ಲಭ್ಯವಿದೆ.

3 / 6
ಸನ್ನಿ ಡಿಯೋಲ್, ವರುಣ್ ಧವನ್, ದಿಲ್ಜೀತ್ ದೊಸ್ಸಾಂಜ್ ಇನ್ನೂ ಕೆಲವು ಸ್ಟಾರ್ ನಟರು ನಟಿಸಿರುವ ‘ಬಾರ್ಡರ್ 2’ ಸಿನಿಮಾ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿತ್ತು. ಈ ಸಿನಿಮಾ 1971ರ ಇಂಡೊ-ಪಾಕಿಸ್ತಾನ ಯುದ್ಧದ ಕುರಿತಾದ ಕತೆಯನ್ನು ಒಳಗೊಂಡಿದೆ. ಇದೀಗ ಸಿನಿಮಾ ನೆಟ್​​ಫ್ಲಿಕ್ಸ್ಟ್​​ನಲ್ಲಿ ಬಿಡುಗಡೆ ಆಗಿದೆ.

4 / 6
ಕೊಲೆಗಳ ತನಿಖೆ ನಡೆಸಲು ಹೋದ ಯುವಕನಿಗೆ ಚಿತ್ರ ವಿಚಿತ್ರಗಳು ಎದುರಾಗುತ್ತದೆ. ಸುರ ಮತ್ತು ಅಸುರರ ಕತೆಯನ್ನು ಒಳಗೊಂಡ ತೆಲುಗು ಸಿನಿಮಾ ‘ಜಟಾಧರ’ ಜೀ5 ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಸಿನಿಮಾನಲ್ಲಿ ಸುಧೀರ್ ಬಾಬು ಮತ್ತು ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹ ನಟಿಸಿದ್ದಾರೆ.

5 / 6
ದುನಿಯಾ ವಿಜಯ್, ರಚಿತಾ ರಾಮ್, ರಾಜ್ ಬಿ ಶೆಟ್ಟಿ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಜಡೇಶ್ ಹಂಪಿ ನಿರ್ದೇಶನ ಮಾಡಿರುವ ‘ಲ್ಯಾಂಡ್​​ಲಾರ್ಡ್’ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಸಿನಿಮಾವನ್ನು ಜೀ5 ನಲ್ಲಿ ವೀಕ್ಷಿಸಬಹುದಾಗಿದೆ.

6 / 6
Follow Us