ಜೀ5 ಆ್ಯನಿವರ್ಸರಿ; 72 ಗಂಟೆ ಉಚಿತ ಸಿನಿಮಾ ವೀಕ್ಷಣೆಗೆ ಇಲ್ಲಿದೆ ಅವಕಾಶ

ಒಟಿಟಿ ಪ್ಲಾಟ್​ಫಾರ್ಮ್​ ರೇಸ್​ನಲ್ಲಿ ಜೀ5 ಕೂಡ ಮುಂದಿದೆ. ಸಾಕಷ್ಟು ಕನ್ನಡ ಸಿನಿಮಾಗಳು ಇದರಲ್ಲಿ ಲಭ್ಯವಿದೆ. ಕೇವಲ ಸಿನಿಮಾ ಮಾತ್ರವಲ್ಲದೆ ಹಲವು ವೆಬ್ ಸೀರೀಸ್​ಗಳನ್ನು ಪ್ರೇಕ್ಷಕರ ಮುಂದೆ ಇಡುತ್ತಿದೆ. ಈಗ ಜೀ5 ಒಟಿಟಿ ಈಗ ಬಂಪರ್ ಆಫರ್ ಒಂದನ್ನು ನೀಡಿದೆ.

ಜೀ5 ಆ್ಯನಿವರ್ಸರಿ; 72 ಗಂಟೆ ಉಚಿತ ಸಿನಿಮಾ ವೀಕ್ಷಣೆಗೆ ಇಲ್ಲಿದೆ ಅವಕಾಶ
ಜೀ 5
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Feb 11, 2022 | 5:06 PM

ಒಟಿಟಿ ವ್ಯಾಪ್ತಿ (OTT Platform) ಹಿರಿದಾಗುತ್ತಿದೆ. ಎಲ್ಲಾ ಒಟಿಟಿ ಪ್ಲಾಟ್​ಫಾರ್ಮ್​ಗಳ ನಡುವೆ ದೊಡ್ಡ ಪೈಪೋಟಿ ಇದೆ. ಸ್ಟಾರ್​ ನಟರ ಸಿನಿಮಾಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ದೊಡ್ಡ ಮಟ್ಟದಲ್ಲಿ ಸ್ಪರ್ಧೆ ಏರ್ಪಡುತ್ತಿದೆ. ಇನ್ನು, ವೀಕ್ಷಕರನ್ನು ಸೆಳೆಯಲು ಈ ಪ್ಲಾಟ್​ಫಾರ್ಮ್​ಗಳು ಹಲವು ಆಫರ್​ಗಳನ್ನು ನೀಡುತ್ತಾ ಬಂದಿವೆ. ಈಗ ಜೀ5  (Zee5) ಕಡೆಯಿಂದ ಬಂಪರ್ ಆಫರ್​ ಒಂದು ಸಿಕ್ಕಿದೆ. ನಾಲ್ಕನೇ ವರ್ಷದ ಆ್ಯನಿವರ್ಸರಿ ಹಿನ್ನೆಲೆಯೆಲ್ಲಿ ಉಚಿತವಾಗಿ ಸಿನಿಮಾ ನೋಡುವ ಆಫರ್ ನೀಡಲಾಗಿದೆ. ಇದನ್ನು ಕೇಳಿ ಸಿನಿಪ್ರಿಯರು ಸಖತ್​ ಖುಷಿಪಟ್ಟಿದ್ದಾರೆ. ಹಾಗಾದರೆ, ಯಾವೆಲ್ಲ ಚಿತ್ರಗಳನ್ನು ಫ್ರೀ ಆಗಿ ನೋಡಬಹುದು? ಯಾವೆಲ್ಲ ವೆಬ್​ ಸೀರಿಸ್​ಗಳು ಉಚಿತ ವೀಕ್ಷಣೆಗೆ ಲಭ್ಯವಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಒಟಿಟಿ ಪ್ಲಾಟ್​ಫಾರ್ಮ್​ ರೇಸ್​ನಲ್ಲಿ ಜೀ5 ಕೂಡ ಮುಂದಿದೆ. ಸಾಕಷ್ಟು ಕನ್ನಡ ಸಿನಿಮಾಗಳು ಇದರಲ್ಲಿ ಲಭ್ಯವಿದೆ. ಕೇವಲ ಸಿನಿಮಾ ಮಾತ್ರವಲ್ಲದೆ ಹಲವು ವೆಬ್ ಸೀರೀಸ್​ಗಳನ್ನು ಪ್ರೇಕ್ಷಕರ ಮುಂದೆ ಇಡುತ್ತಿದೆ. ಈಗ ಜೀ5 ಒಟಿಟಿ ಈಗ ಬಂಪರ್ ಆಫರ್ ಒಂದನ್ನು ನೀಡಿದೆ. ಇದನ್ನು ಕೇಳಿ ಸಿನಿಪ್ರಿಯರು ಸಖತ್​ ಖುಷಿಪಟ್ಟಿದ್ದಾರೆ. ಕನ್ನಡದ ಕೆಲವು ಸಿನಿಮಾಗಳನ್ನು ಕೂಡ ನೀವು ಉಚಿತವಾಗಿ ನೋಡಬಹುದಾಗಿದೆ.

ಜೀ5 ಒಟಿಟಿ ವೇದಿಕೆ ಶುರುವಾಗಿ ಫೆ.14ಕ್ಕೆ ನಾಲ್ಕು ವರ್ಷಗಳಾಗುತ್ತವೆ. ನಾಲ್ಕನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ವೀಕ್ಷಕರಿಗೆ ಆಫರ್​ ನೀಡಲಾಗುತ್ತಿದೆ. ಹೀಗಾಗಿ ಫೆ.12 ರಿಂದ 14ರವರೆಗೆ ಜೀ5ನಲ್ಲಿ ಉಚಿತವಾಗಿ ಹಲವು ಸಿನಿಮಾ ನೋಡುವ ಅವಕಾಶ ಇದೆ. ಹಣ ಪಾವತಿಸದೆ, ಯಾವುದೇ ಸಬ್​​​ಸ್ಕ್ರಿಪ್ಶನ್​ ಇಲ್ಲದೆ ಸುಮಾರು 72 ಗಂಟೆಗಳ ಕಾಲ ನೀವು ಜೀ5ನಲ್ಲಿ ಸಿನಿಮಾ ವೀಕ್ಷಣೆ ಮಾಡಬಹುದು. ಇದಕ್ಕಾಗಿ ಜೀ5 ಅಭಿಯಾನವನ್ನೇ ಹಮ್ಮಿಕೊಂಡಿದೆ.

ಜೀ5 ಒಟಿಟಿಯಲ್ಲಿರುವ ವಿವಿಧ ಭಾಷೆಯ 60ಕ್ಕೂ ಹೆಚ್ಚು ಸಿನಿಮಾಗಳ‌ ಜತೆಗೆ ಕೆಲ ವೆಬ್ ಸೀರೀಸ್​ಗಳನ್ನು ನೀವು ಯಾವುದೇ ಹಣ ಪಾವತಿ ಮಾಡದೆ ವೀಕ್ಷಿಸಬಹುದು. ಕನ್ನಡದ  ಚಿತ್ರಗಳಾದ ‘ಹೀರೋ’, ‘ಕಾಳಿದಾಸ ಕನ್ನಡ‌‌ ಮೇಷ್ಟ್ರು’, ‘ದಿ ವಿಲನ್’, ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಈ ಸಿನಿಮಾಗಳನ್ನು ಉಚಿತವಾಗಿ ವೀಕ್ಷಿಸಬಹುದು. ಇದರ ಜತೆಗೆ ವೆಬ್ ಸೀರೀಸ್ ಪಟ್ಟಿಯಲ್ಲಿ ‘ಕೈಲಾಸಪುರ’, ‘ಹೈ ಪ್ರಿಸ್ಟ್’ ಅನ್ನು ನೋಡಬಹುದು.

ಇದನ್ನೂ ಓದಿ: Radhe Movie: ಜೀ5ನಲ್ಲಿ ರಾಧೆ ಹವಾ; ಸಲ್ಮಾನ್ ಖಾನ್​ ಅಬ್ಬರಕ್ಕೆ ಸರ್ವರ್ ಕ್ರ್ಯಾಶ್

ಜೀ5 ಒಟಿಟಿಗೆ ‘ಗರುಡ ಗಮನ ವೃಷಭ ವಾಹನ’; ಕನ್ನಡ ಚಿತ್ರಗಳಿಗೆ ಹೆಚ್ಚುತ್ತಿದೆ ಆನ್​ಲೈನ್​ ಮನ್ನಣೆ